ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)ವನ್ನು ನಡೆಸುವ ಪೀಳಿಗೆ ! ಕು. ಶ್ರೀಕೃಷ್ಣ ಲಕ್ಷ್ಮಣ ಕದಮ ಈ ಪೀಳಿಗೆಯವನು !

೧. ‘ಕು. ಶ್ರೀಕೃಷ್ಣನು ಶಾಂತನಾಗಿದ್ದು ಮತ್ತು ಅವನಲ್ಲಿ ತುಂಬ ಪ್ರೇಮಭಾವವಿದೆ.
೨. ಅವನಿಗೆ ಯಾವುದಾದರೂ ವಸ್ತು ಬೇಕಿದ್ದರೆ ಅವನು ನಮಗೆ ಕೇಳಿಯೇ ಆ ವಸ್ತುವನ್ನು ತೆಗೆದುಕೊಳ್ಳುತ್ತಾನೆ.
೩. ಅವನು ಪ್ರತಿಯೊಂದು ಕೃತಿಯನ್ನು ಮನಃಪೂರ್ವಕವಾಗಿ ಮಾಡುತ್ತಾನೆ.
೪. ಅವನು ಯಾವುದಾದರೊಂದು ಕೃತಿಯನ್ನು ಮಾಡುತ್ತಿದ್ದರೂ, ಅವನ ಗಮನ ಎಲ್ಲ ಕಡೆಗೆ ಇರುತ್ತದೆ.
೫. ಅವನು ತಿಲಕವನ್ನು ಹಚ್ಚಿಕೊಂಡೇ ಶಾಲೆಗೆ ಹೋಗುತ್ತಾನೆ. ಅವನು ಯಾವಾಗಲೂ ನನಗೆ ತಿಲಕವನ್ನು ಹಚ್ಚಲು ಹೇಳುತ್ತಾನೆ.
೬. ಶ್ರೀಕೃಷ್ಣನಿಗೆ ಸಾತ್ತ್ವಿಕ ಊಟ ಇಷ್ಟವಾಗುತ್ತದೆ.

೭. ಸಾಧನೆಯ ಆಸಕ್ತಿ
ಅ. ಅವನು ಪ್ರತಿದಿನ ಪೂಜೆಯನ್ನು ಮಾಡುತ್ತಾನೆ ಮತ್ತು ದೇವರಿಗೆ ನಮಸ್ಕಾರ ಮಾಡಿ ಸಾತ್ತ್ವಿಕ ಊದುಬತ್ತಿಯನ್ನು ಹಚ್ಚುತ್ತಾನೆ.
ಆ. ಅವನು ಅತ್ತರ ಮತ್ತು ಕರ್ಪೂರದ ಉಪಾಯ
ವನ್ನು ಮಾಡುತ್ತಾನೆ ಮತ್ತು ಆಗಾಗ ನಾಮಜಪ ಮಾಡುತ್ತಾನೆ.
ಇ. ಅವನು ಪ್ರತಿ ಗುರುವಾರ ಸತ್ಸಂಗವನ್ನು ಶಾಂತವಾಗಿ ಕೇಳುತ್ತಾನೆ.
ಈ. ಅವನು ಅಧ್ಯಯನ ಮಾಡುವ ಮೊದಲು ನಾಮಜಪ ಮತ್ತು ಪ್ರಾರ್ಥನೆ ಮಾಡುತ್ತಾನೆ.
೮. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬಗೆಗಿನ ಭಾವ
ಅ. ಅವನು ನನಗೆ ಯಾವಾಗಲೂ, ”ನಾವು ಡಾಕ್ಟರಬಾಬಾರವರ ಬಳಿ (ಪರಾತ್ಪರ ಗುರು ಡಾ. ಆಠವಲೆಯವರ ಬಳಿ) ಹೋಗೋಣ” ಎಂದು ಹೇಳುತ್ತಾನೆ. ಅವನು ನನ್ನ ಜೊತೆಗೆ ಸೇವೆ ಮಾಡಲು ಬಂದಾಗ ಎಲ್ಲರಿಗೂ, ”ನನ್ನ ಡಾಕ್ಟರಬಾಬಾರವರು ರಾಮನಾಥಿ ಆಶ್ರಮದಲ್ಲಿ ಇದ್ದಾರೆ. ನಾನು ರಾಮನಾಥಿಗೆ ಹೋಗಲಿದ್ದೇನೆ,” ಎಂದು ಹೇಳುತ್ತಾನೆ.
ಆ. ಪರಾತ್ಪರ ಗುರುದೇವರ ಬ್ರಹ್ಮೋತ್ಸವದ ಸಮಯದಲ್ಲಿ ನಾವು ಗೋವಾಕ್ಕೆ ಹೋಗಿದ್ದೆವು. ಆಗ ಅವನು ಸತತವಾಗಿ, ”ಡಾಕ್ಟರಬಾಬಾ ಯಾವಾಗ ಬರುತ್ತಾರೆ ?”, ”ಡಾಕ್ಟರಬಾಬಾ ಯಾವಾಗ ಬರುತ್ತಾರೆ ?” ಎಂದು ಕೇಳುತ್ತಿದ್ದನು. ಪರಾತ್ಪರ ಗುರುದೇವರು ಮೈದಾನದಲ್ಲಿ ಆಗಮಿಸಿದ ನಂತರ ಶ್ರೀಕೃಷ್ಣನ ಭಾವಜಾಗೃತವಾಯಿತು.
ಇ. ನಾವು ಗೋವಾದಿಂದ ಮನೆಗೆ ಬಂದ ನಂತರ ಅವನು ಎಲ್ಲರಿಗೂ, ”ನಾನು ಡಾಕ್ಟರಬಾಬಾ ರವರನ್ನು ನೋಡಿ ಬಂದೆನು. ಡಾಕ್ಟರಬಾಬಾ ನನ್ನವರು,” ಎಂದು ಹೇಳುತ್ತಿದ್ದನು.
– ಶ್ರೀ. ಲಕ್ಷ್ಮಣ ಕದಮ (ಕು. ಶ್ರೀಕೃಷ್ಣನ ತಂದೆ), ಖಾನಾಪುರ, ಬೆಳಗಾವಿ. (೨.೬.೨೦೨೩)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು