ಜಗದ್ಗುರು ಭಗವಾನ ಶ್ರೀಕೃಷ್ಣನ ವೈಶಿಷ್ಟ್ಯಗಳು !

ಶ್ರೀಕೃಷ್ಣನ ದೇಹದ ವೈಶಿಷ್ಟ್ಯಗಳು

ದೇಹಕ್ಕೆ ಸುಗಂಧ ಬರುವುದು : ಶ್ರೀಕೃಷ್ಣನ ಬಣ್ಣ ಮೇಘಶ್ಯಾಮಲವಾಗಿತ್ತು. ಅವನ ದೇಹದಿಂದ ಒಂದು ರೀತಿಯ ಮೋಹಕ ಗಂಧ ಹೊರಸೂಸುತ್ತಿತ್ತು. ಆದುದರಿಂದ ರಹಸ್ಯ ಅಭಿಯಾನದ ಸಮಯದಲ್ಲಿ ಉದಾ. ಜರಾಸಂಧನ ಆಕ್ರಮಣದ ಸಮಯದಲ್ಲಿ ಶ್ರೀಕೃಷ್ಣನಿಗೆ ಈ ಗಂಧವನ್ನು ಅಡಗಿಸಲು ಪ್ರಯತ್ನ ಮಾಡಬೇಕಾಯಿತು. ದ್ರೌಪದಿಯಲ್ಲಿಯೂ ಈ ವೈಶಿಷ್ಟ್ಯವಿತ್ತು. ಅವಳು ಅಜ್ಞಾನವಾಸದಲ್ಲಿ ಸೈರಂಧ್ರೀಯ ಕಾರ್ಯವನ್ನು ಆರಿಸಿಕೊಂಡಳು. ಇದರಿಂದ ಚಂದನ, ಉಟಣೆ, ಅತ್ತರ ಇತ್ಯಾದಿಗಳಲ್ಲಿ ಅವಳ ಶರೀರದಿಂದ ಹೊರಸೂಸುವ ಗಂಧವು ಅಡಗಿಹೋಗುತ್ತಿತ್ತು.

ಮೃದುತ್ವ (ಫ್ಲೆಕ್ಸಿಬಿಲಿಟಿ) : ಶ್ರೀಕೃಷ್ಣನ ಸ್ನಾಯುವು (ಮಾಂಸ ಖಂಡ) ಮೃದುವಾಗಿತ್ತು; ಆದರೆ ಯುದ್ಧದ ಸಮಯದಲ್ಲಿ ಅದು ಸಡಿಲಗೊಂಡು ಪ್ರಸರಣವಾಗುತ್ತಿತ್ತು. ಇದರಿಂದ ಸಾಮಾನ್ಯವಾಗಿ ಹೆಣ್ಣುಮಕ್ಕಳಂತೆ ಕಂಡು ಬರುವ ಅವನ ಲಾವಣ್ಯಮಯ ಶರೀರ ಯುದ್ಧದ ಸಮಯದಲ್ಲಿ ಅತಿಶಯ ಕಠೋರವಾಗಿ ಕಂಡು ಬರುತ್ತಿತ್ತು. ಈ ದೃಷ್ಟಿಯಿಂದ ಕರ್ಣ, ದ್ರೌಪದಿ ಮತ್ತು ಶ್ರೀಕೃಷ್ಣ ಇವರ ಶರೀರ ‘ಮ್ಯೂಟೆಂಟ್’ (ಅತೀಂದ್ರಿಯ) ಆಗಿತ್ತು.

ಶಿಕ್ಷಣ ಮತ್ತು ಸಾಧನೆ : ಶ್ರೀಕೃಷ್ಣನು ಔಪಚಾರಿಕ ಶಿಕ್ಷಣವನ್ನು ಕೆಲವೇ ತಿಂಗಳೊಳಗೆ ಪೂರ್ಣಗೊಳಿಸಿದನು. ‘ಘೋರ ಅಂಗಿರಸ ಎಂದರೆ ನೇಮಿನಾಥರ ಬಳಿ ಶ್ರೀಕೃಷ್ಣನು ಸಾಧನೆಯನ್ನು ಮಾಡಿದ್ದನು’, ಎಂದು ತಿಳಿಯಲಾಗುತ್ತದೆ. ಆಧುನಿಕ ‘ಮಾರ್ಶಲ್‌ ಆರ್ಟ್‌’ ಈ ವಿಧದ ಜನಕ ‘ಅನುಶ್ರುತಿ’ಗನುಸಾರ ಶ್ರೀಕೃಷ್ಣನು ‘ಮಾರ್ಶಲ್‌ ಆರ್ಟ್‌’ನ ವಿಕಾಸವನ್ನು ಬ್ರಜ ಕ್ಷೇತ್ರದ ವನಗಳಲ್ಲಿ ಮಾಡಿದ್ದನು. ದಾಂಡಿಯಾ ರಾಸ ಇದು ಅದರದ್ದೇ ರೂಪವಾಗಿದೆ. ಶ್ರೀಕೃಷ್ಣನಿಗೆ ‘ಕಲಾರಿಪಾಯಟ್ಟು’ವಿನ (ಕೇರಳದ ಒಂದು ಪ್ರಾಚೀನ ಯುದ್ಧವಿದ್ಯೆ) ಮೊದಲ ಆಚಾರ್ಯನೆಂದು ತಿಳಿಯಲಾಗುತ್ತದೆ. ಆದುದರಿಂದ ‘ನಾರಾಯಣಿ ಸೇನೆ’ಯು ಭಾರತದಲ್ಲಿನ ಎಲ್ಲಕ್ಕಿಂತ ಘೋರ ಸಂಹಾರಕ ಸೇನೆಯಾಗಿತ್ತು.

(ಆಧಾರ : ಜಾಲತಾಣ)