ಜಗನ್ನಾಥಭಕ್ತ ಕರ್ಮಾಬಾಯಿ !

ಕರ್ಮಾಬಾಯಿಯವರ ತಂದೆ- ತಾಯಿಯವರು ದೇವರಿಗೆ ನೈವೇದ್ಯ ತೋರಿಸಿಯೇ ಭೋಜನ ಮಾಡುತ್ತಿದ್ದರು. ಒಮ್ಮೆ ಅವರಿಗೆ ತೀರ್ಥಯಾತ್ರೆಗೆ ಹೋಗಬೇಕಾಗಿದ್ದರಿಂದ ಅವರು ತಮ್ಮ ಮಗಳಿಗೆ ‘ದೇವರಿಗೆ ನೈವೇದ್ಯ ತೋರಿಸದೆ ಭೋಜನ ಮಾಡಬಾರದು’ ಎಂದರು. ಕರ್ಮಾ ಬಾಯಿ ಖಿಚಡಿಯನ್ನು ತಯಾರಿಸಿ ದೇವರ ಹತ್ತಿರ ಇಟ್ಟು ಮುಗ್ಧಭಾವದಿಂದ ದೇವರಿಗೆ ‘ನೀನು ಭೋಜನ ಮಾಡುವವರೆಗೆ ನಾನು ಮಾಡುವುದಿಲ್ಲ’ ಎಂದು ಆರ್ತತೆಯಿಂದ ಹೇಳಿದಳು. ಕೆಲವು ಸಮಯದ ನಂತರ ದೇವರು ನೈವೇದ್ಯ ಸೇವಿಸಿದನು. ಅನಂತರ ಪ್ರತಿದಿನವೂ ದೇವರು ಬಂದು ನೈವೇದ್ಯ ಸೇವಿಸುತ್ತಿದ್ದನು. ಕರ್ಮಾಬಾಯಿಯ ತಂದೆ-ತಾಯಿ ಬಂದಾಗ ಅವಳು ಇದರ ಬಗ್ಗೆ ಅವರಿಗೆ ಹೇಳಿದಳು, ಆಗ ಅವರಿಗೆ ಆಶ್ಚರ್ಯವಾಯಿತು ‘ಮಗಳ ಕೈಯಿಂದ ನೈವೇದ್ಯ ಸೇವಿಸಲು ದೇವರು ಮನೆಗೇ ಬರುತ್ತಿದ್ದಾನೆ’ ಎಂಬ ವಿಷಯದಲ್ಲಿ ತುಂಬಾ ಕೃತಜ್ಞತೆ ಅನಿಸಿತು. ಕರ್ಮಾಬಾಯಿಯ ಈ ಸೇವೆ ಅವಳು ದೊಡ್ಡವಳಾಗುವವರೆಗೆ ಮುಂದುವರೆಯಿತು. ಅವಳು ಜಗನ್ನಾಥ ಪುರಿಗೆ ಸ್ಥಳಾಂತರಗೊಂಡ ನಂತರ ಒಮ್ಮೆ ಅವಳಲ್ಲಿ ಒಬ್ಬ ಸಾಧು ಮಹಾರಾಜರು ಬಂದರು. ಅವರು ಕರ್ಮಾಬಾಯಿಗೆ, ”ದೇವರಿಗಾಗಿ ಪೂರ್ಣ ಶುಚಿರ್ಭೂತರಾಗಿ ಮತ್ತು ಸ್ನಾನ ಮಾಡಿ ನೈವೇದ್ಯ ತಯಾರಿಸಬೇಕು’’ ಎಂದರು. ಆಗ ಕರ್ಮಾಬಾಯಿ ಹಾಗೆ ಮಾಡಲು ಪ್ರಾರಂಭಿಸಿದಳು; ಆದರೆ ಇದರಿಂದ ಖಿಚಡಿ ತಯಾರಿಸಲು ತಡವಾಗುತ್ತಿತ್ತು. ದೇವರು ಕಾಯ ಬೇಕಾಗಿತ್ತು. ಒಮ್ಮೆ ಹೀಗೆ ತಡವಾದಾಗ ದೇವರು ಆತುರದಲ್ಲಿ ಖಿಚಡಿ ತಿಂದು ದೇವಸ್ಥಾನಕ್ಕೆ ಬಂದಾಗ ಅನ್ನದ ಅಗಳುಗಳು ದೇವರ ಬಾಯಿಗೆ ಅಂಟಿತ್ತು. ಇದನ್ನು ನೋಡಿ ಪೂಜಾರಿಗೆ ಆಶ್ಚರ್ಯವಾಯಿತು. ದೇವರು ಅವರಿಗೆ ದೃಷ್ಟಾಂತ ನೀಡಿ, ‘ತಮ್ಮ ಭಕ್ತನ ಬಳಿಗೆ ಬಂದ ಒಬ್ಬ ಸಾಧುಗಳು ಆವಶ್ಯಕತೆ ಇಲ್ಲದಿದ್ದರೂ ಕರ್ಮಕಾಂಡದ ನಿಯಮಗಳನ್ನು ಪಾಲಿಸಿ ನೈವೇದ್ಯ ತಯಾರಿಸಲು ನನ್ನ ಭಕ್ತಳಿಗೆ ಹೇಳಿದ್ದರಿಂದ ನನಗೆ ಭೋಜನ ಸಿಗಲು ತಡವಾಗುತ್ತಿದೆ’ ಎಂದರು. ಪೂಜಾರಿಗಳು ಸಾಧುಗಳಿಗೆ ಇದನ್ನು ಹೇಳಿದಾಗ ಅವರಿಗೆ ತಮ್ಮ ತಪ್ಪು ತಿಳಿಯಿತು. ಅನಂತರ ಕರ್ಮಾಬಾಯಿಯವರ ದಿನಚರಿ ಮತ್ತೆ ಹಿಂದಿನಂತೆ ಮುಂದುವರೆಯಿತು. ಒಂದು ದಿನ ಅವಳು ಜಗನ್ನಾಥನಲ್ಲಿ ವಿಲೀನಳಾದಳು. ಆದಿನ ಜಗನ್ನಾಥನ ಮೂರ್ತಿಯ ಕಣ್ಣುಗಳಿಂದ ಕಣ್ಣೀರು ಹರಿಯಲು ಪ್ರಾರಂಭಿಸಿದಾಗ ಪೂಜಾರಿಯು ಆ ಬಗ್ಗೆ ಕೇಳಿದಾಗ ದೇವರು, ‘ನನ್ನ ಅಸೀಮ ಭಕ್ತ ಕರ್ಮಾಬಾಯಿ ಈಗ ಈ ಜಗತ್ತಿನಲ್ಲಿ ಇಲ್ಲ. ಇನ್ನು ನನಗೆ ಭಕ್ತಿಯಿಂದ ಖಿಚಡಿಯನ್ನು ಯಾರು ನೀಡುತ್ತಾರೆ ?’ ಎಂದನು. ಆಗಿನಿಂದ ಜಗನ್ನಾಥನಿಗೆ ಖಿಚಡಿಯ ನೈವೇದ್ಯದ ಸಂಪ್ರದಾಯ ಪ್ರಾರಂಭವಾಯಿತು, ಅದು ಇಂದಿಗೂ ಮುಂದುವರೆದಿದೆ. ಧನ್ಯಳು ಆ ಭಕ್ತ ಕರ್ಮಾಬಾಯಿ; ಆಕೆಯ ಕೈಯಿಂದ ನೈವೇದ್ಯ ಸೇವಿಸಲು ಸಾಕ್ಷಾತ್ ಜಗನ್ನಾಥನು ಬರುತ್ತಿದ್ದನು !
(ಆಧಾರ : ಸನಾತನದ ಭಕ್ತಿಸತ್ಸಂಗ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು