
‘ವಟಸಾವಿತ್ರಿವ್ರತದ ನಿಮಿತ್ತ ವಟವೃಕ್ಷದ ಬಗ್ಗೆ ಸಾಕಷ್ಟು ಮಾಹಿತಿ ಓದಲು ಸಿಗುತ್ತಿತ್ತು. ಅದರಲ್ಲಿ ಆಲದ ಮರದ ಬಗ್ಗೆ ಒಂದು ಅದ್ಭುತ ವಿಧ ತಿಳಿದು ಬಂತು. ‘ಕೃಷ್ಣಆಲ’ ! ಎಂದು ಮೊದಲ ಬಾರಿ ಓದಿದಾಗ, ಯಾವ ರೀತಿ ಕಪ್ಪು ತುಳಸಿಗೆ ‘ಕೃಷ್ಣ ತುಳಸಿ’ ಅನ್ನುತ್ತಾರೆ, ಅದೇ ರೀತಿ ಈ ಆಲದ ಮರದ ಎಲೆಗಳು ಕಪ್ಪಾಗಿರಬಹುದು, ಆದ್ದರಿಂದ ಇದಕ್ಕೆ ‘ಕೃಷ್ಣಆಲ’ ಎನ್ನುತ್ತಿರಬಹುದು’ ಹೀಗೆ ಅನಿಸಿತು. ತದನಂತರ ಈ ವೃಕ್ಷದ ಎಲೆಗಳು ತೊಟ್ಟಿನ ಕಡೆಯ ಭಾಗದಿಂದ ಒಳಗೆ ತಿರುಗಿ ದೊನ್ನೆಯ ಆಕಾರದಂತೆ ಇರುತ್ತವೆ, ಎಲೆಗಳು ಹೀಗಿರುವುದರ ಹಿಂದೆ ಶ್ರೀಕೃಷ್ಣನ ಕುರಿತಾದ ಒಂದು ಪೌರಾಣಿಕ ಕಥೆ ಇದೆ’ ಎಂದು ತಿಳಿಯಿತು. ಆದ್ದರಿಂದ ಈ ಮರಕ್ಕೆ ‘ಕೃಷ್ಣಆಲ’ ಎಂಬ ಹೆಸರು ಬಂತು. ‘ಭಾರತೀಯ ಸಂಸ್ಕೃತಿ ಕೋಶ’ದಲ್ಲಿ ಮುಂದಿನ ಕಥೆ ಓದಲು ಸಿಕ್ಕಿತು.
ಒಮ್ಮೆ ಗೋಪಾಲಕೃಷ್ಣನು ಹಸುಗಳನ್ನು ಮೇಯಿಸಲು ಕಾಡಿಗೆ ಹೋದಾಗ ಕೆಲವು ಗೋಪಿಯರು ಬೆಣ್ಣೆ ತೆಗೆದುಕೊಂಡು ಅಲ್ಲಿಗೆ ಹೋದರು. ಅವರು ಕೃಷ್ಣನಿಗೆ ಆ ಬೆಣ್ಣೆಯನ್ನು ಕೊಟ್ಟರು. ಕೃಷ್ಣನು ಎಲ್ಲಾ ಗೋಪಗೋಪಿಯರಿಗೆ ಆ ಬೆಣ್ಣೆಯನ್ನು ಹಂಚಿದನು. ಬೆಣ್ಣೆ ಹಂಚುವುದಕ್ಕಾಗಿ ಅವನು ಹತ್ತಿರ ಇರುವ ಆಲದ ಮರದ ಎಲೆಗಳನ್ನು ಹರಿದು ಸ್ವಲ್ಪ ಮಡಚಿ ಅವುಗಳಿಗೆ ದೊನ್ನೆಯ ಆಕಾರ ಕೊಟ್ಟನು. ಅಂದಿನಿಂದ ಆಲದ ಮರದ ಎಲೆಗಳು ದೊನ್ನೆಯ ಆಕಾರ ಪಡೆದವು. ಮುಂದೆ ಆ ಮರದ ಬೀಜದಿಂದ ಹುಟ್ಟಿದ ಆಲದ ಮರಕ್ಕೆ ಅದೇ ರೀತಿಯ ಎಲೆಗಳು ಬರತೊಡಗಿದವು, ಆದ್ದರಿಂದ ಆ ಆಲದ ಮರಕ್ಕೆ ‘ಕೃಷ್ಣಆಲ’ ಎನ್ನುತ್ತಾರೆ.
ಕೆಲವು ವನಸ್ಪತಿ-ಅಭ್ಯಾಸಕರಿಂದ ಮತ್ತು ಜಾಲತಾಣದ ಮೂಲಕ, ಮುಂಬೈಯ ಜೀಜಾಮಾತಾ ಉದ್ಯಾನದಲ್ಲಿ ಮತ್ತು ಪುಣೆಯ ‘ಎಂಪ್ರೆಸ್ ಗಾರ್ಡನಲ್ಲಿ’ ಈ ತರಹದ ಮರ ಇದೆ ಎಂಬ ಮಾಹಿತಿ ದೊರಕಿತು. ವಿಶೇಷವಾಗಿ ಬಂಗಾಲ ಪ್ರಾಂತದಲ್ಲಿ ಈ ಮರ ಕಂಡುಬರುತ್ತದೆ. ಈ ಮರದ ಶಾಸ್ತ್ರೀಯ ಹೆಸರು ‘Ficus Krishnae’, ಎಂದು ಇದೆ. ಈ ಹಿಂದೆ ಇದು ಆಲದ ಮರದ್ದೇ (Ficus Benghalensis) ಒಂದು ಉಪತಳಿ ಎಂದು ಪರಿಗಣಿಸಲಾಗುತ್ತಿತ್ತು. ಈ ಮರದ ಎಲೆಗಳಷ್ಟೇ ಅಲ್ಲ ಮರದ ಬೆಳವಣಿಗೆ, ಬೇರುಗಳ ರಚನೆ, ಕೊಂಬೆರೆಂಬೆಗಳು ಎಲ್ಲದರಲ್ಲೂ ಅಲ್ಪ, ಸ್ವಲ್ಪ ವ್ಯತ್ಯಾಸ ಇರುವುದರಿಂದ ಇತ್ತೀಚಿಗೆ ಇದನ್ನು ಒಂದು ಸ್ವತಂತ್ರ ತಳಿ ಎಂದು ಪರಿಗಣಿಸಲಾಗುತ್ತಿದೆ. ಈ ಮರಕ್ಕೆ ‘ಬೆಣ್ಣೆಬಟ್ಟಲು’ ಎಂಬ ಸುಂದರ ಹೆಸರು ಸಹ ಇದೆ.
(ಸೌಜನ್ಯ : ಜಾಲತಾಣ)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು