ಯುಗಾನುಸಾರ ಹೆಚ್ಚುತ್ತಿರುವ ದುಷ್ಪ್ರವೃತ್ತಿಗಳ ಪ್ರಮಾಣ ಮತ್ತು ಅವುಗಳ ನಿಯಂತ್ರಣಕ್ಕೆ ಶ್ರೀಕೃಷ್ಣನು ಹೇಳಿದ ಪರಿಹಾರ !

೧. ಯುಗಾನುಸಾರ ದುರ್ಜನರ ಪ್ರಮಾಣ

‘ಕೃತಯುಗದಲ್ಲಿ ಎಲ್ಲರೂ ಸಜ್ಜನರಾಗಿದ್ದರು. ಕೃತಯುಗದಲ್ಲಿ ಅಪರೂಪಕ್ಕೆ ರಾಕ್ಷಸರ ಕಥೆಗಳು ಕಂಡು ಬರುತ್ತವೆ. ತ್ರೇತಾಯುಗದ ಅಂತ್ಯದಲ್ಲಿ ರಾಮಾವತಾರವಾಯಿತು. ಮರ್ಯಾದಾ ಪುರುಷೋತ್ತಮ ಶ್ರೀರಾಮನು ಜಗತ್ತಿನ ಎಲ್ಲ ಆದರ್ಶಗಳಿರುವ ಓರ್ವ ಮಹಾಮಾನವನಾಗಿದ್ದನು; ಆದರೆ ತ್ರೇತಾಯುಗದಲ್ಲಿ ಏಕಮುಖಿ ರಾಮನು ದಶಮುಖಿ ರಾವಣನೊಂದಿಗೆ ಹೋರಾಡ ಬೇಕಾಯಿತು, ಅಂದರೆ ಸಜ್ಜನ-ದುರ್ಜನರ ಪ್ರಮಾಣ ಒಂದಕ್ಕೆ ಹತ್ತಾಯಿತು. ಮುಂದೆ ದ್ವಾಪರಯುಗ ಬಂದಾಗ, ೫ ಪಾಂಡವರಿಗೆ ೧೦೦ ಕೌರವರು ವೈರಿಗಳಾದರು, ಅಂದರೆ ದುರ್ಜನರ ಪ್ರಮಾಣ ಐದಕ್ಕೆ ನೂರು, ಎಂದರೆ ಒಂದಕ್ಕೆ ೨೦ ಆಯಿತು. ಇಂದಿನ ಕಲಿಯುಗದಲ್ಲಿ ‘ಒಂದಕ್ಕೆ ನೂರು ಇರಬಹುದು’, ಎಂದು ಅನಿಸುತ್ತದೆ.

ಭಾರತಾಚಾರ್ಯ ಪ್ರಾ. ಸು.ಗ. ಶೆವಡೆ

೨. ಶ್ರೀಕೃಷ್ಣನು ಪಾಂಡವರಿಗೆ ನೀಡಿದ ‘ದುಷ್ಟರೊಂದಿಗೆ ದುಷ್ಟನಾಗಿಯೇ ವರ್ತಿಸು !’ ಎಂಬ ಉಪದೇಶದ ಮೂಲಮಂತ್ರ

ದ್ವಾಪರಯುಗದ ದುಷ್ಟ ಕೌರವರಂತಹ, ಕುಟಿಲ ಸಂಚುಕೋರರ ಎದುರಿಗೆ ಸುಶೀಲ ಮತ್ತು ಸರಳಮಾರ್ಗಿ ಪಾಂಡವರು ಹೋರಾಡಬೇಕಾಗಿತ್ತು. ಶ್ರೀಕೃಷ್ಣನು ಅವರೊಂದಿಗೆ ಹೋರಾಡಬೇಕಾಗಿರಲಿಲ್ಲ, ಆದರೆ ಪಾಂಡವರು ಹೋರಾಡಬೇಕಾಗಿತ್ತು ಮತ್ತು ಶ್ರೀಕೃಷ್ಣನು ಅವರ ಗುರುವಾಗಿದ್ದನು. ‘ದುಷ್ಟರೊಂದಿಗೆ ದುಷ್ಟರಾಗಿಯೇ ವರ್ತಿಸು !’, ಇದೇ ಶ್ರೀಕೃಷ್ಣನ ಉಪದೇಶದ ಮೂಲಮಂತ್ರವಾಗಿತ್ತು.

೩. ಮುಂದಿನ ಯುಗದ ಜನರಿಗೆ ಆದರ್ಶವಾಗಿರುವ ಅವತಾರಗಳು

ಶ್ರೀರಾಮನು ತ್ರೇತಾಯುಗದ ಕೊನೆಗೆ ಬಂದನು. ಆದುದರಿಂದ ಅನಂತರದ ದ್ವಾಪರಯುಗದ ಜನರ ಮುಂದೆ ಅವನ ಆದರ್ಶವಿತ್ತು. ಶ್ರೀಕೃಷ್ಣನು ದ್ವಾಪರಯುಗದ ಕೊನೆಗೆ ಬಂದನು; ಆದುದರಿಂದ ಅವನ ಆದರ್ಶವು ಕಲಿಯುಗದ ಜನರಿಗಾಗಿ ಇದೆ.

೪. ಧರ್ಮಪ್ರಧಾನ ನಾಯಕನೇ ರಾಷ್ಟ್ರಕ್ಕೆ ಸನ್ಮಾರ್ಗದರ್ಶಕನಾಗುತ್ತಾನೆ !

ಮೋಕ್ಷಪ್ರಧಾನ ನಾಯಕನು ರಾಜಕಾರಣದಲ್ಲಿ ವ್ಯಾವಹಾರಿಕ ಚಾತುರ್ಯದ ಕೊರತೆಯಿಂದ ನಿಷ್ಪ್ರಯೋಜಕನಾಗುತ್ತಾನೆ. ಕಾಮ ಪ್ರಧಾನ ನಾಯಕನು ರಾಜಕಾರಣಕ್ಕೆ ತಗಲಿದ ಕೀಟವಾಗಿದ್ದಾನೆ. ಅರ್ಥಪ್ರಧಾನ ನಾಯಕರು ಕಾಡುಮೃಗಗಳಂತೆ ಸಮಾಜವನ್ನು ಕಚ್ಚಿತಿನ್ನುತ್ತಾರೆ. ಶ್ರೀಕೃಷ್ಣ ಚರಿತ್ರೆಯಲ್ಲಿನ ಬಾಲಲೀಲೆಗಳು ‘ಶ್ರೀಮದ್ಭಾಗವತ’ ಈ ಗ್ರಂಥದಲ್ಲಿವೆ, ಅದು ಅಧ್ಯಾತ್ಮದ ಭಕ್ತಿಪ್ರಧಾನ ಗ್ರಂಥವಾಗಿದೆ. ಅದರಲ್ಲಿನ ಶ್ರೀಕೃಷ್ಣಲೀಲೆಗಳು ರೂಪಾತ್ಮಕವಾಗಿದೆ. ಅವುಗಳ ಅರ್ಥವು ಶಬ್ದಾರ್ಥಗಳ ಆಚೆಗಿನದಾಗಿದೆ. ಮಹಾಭಾರತದಲ್ಲಿ ಭಗವಾನ ಶ್ರೀಕೃಷ್ಣನು ರಾಜಕೀಯ ನಾಯಕನಾಗಿದ್ದನು. ಅವನು ಧರ್ಮಪ್ರಧಾನ ರಾಜನೀತಿ ಕುಶಲನಾಗಿದ್ದಾನೆ. ಧರ್ಮಪ್ರಧಾನ ನಾಯಕನೇ ರಾಷ್ಟ್ರಕ್ಕೆ ಸನ್ಮಾರ್ಗದರ್ಶಕನಾಗುತ್ತಾನೆ.

೫. ವಿಶ್ವವಂದಿತವೆಂದು ಪರಿಗಣಿಸಲ್ಪಟ್ಟ ಶ್ರೀಮದ್ಭಗವದ್ಗೀತೆ

ಮಹಾಭಾರತ ಯುದ್ಧದ ಆರಂಭದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಶ್ರೀಮದ್ಭಗವದ್ಗೀತೆ ರೂಪಿ ಉಪದೇಶವು ವಿಶ್ವವಂದಿತ ಎಂದು ಪರಿಗಣಿಸಲ್ಪಟ್ಟಿದೆ. ಧರ್ಮದ ಅಂಗೋಪಾಂಗಗಳು, ವಿವಿಧ ಯೋಗಗಳು ಮತ್ತು ಆದರ್ಶ ಮಾನವನ ಆದರ್ಶ ಆಚಾರಸಂಹಿತೆಯನ್ನೇ ಈ ಗ್ರಂಥದಲ್ಲಿ ಹೇಳಲಾಗಿದೆ. ರಾಮ-ಕೃಷ್ಣರು ಭಾರತೀಯ ಜೀವನವನ್ನು ಅಸಾಧಾರಣ ಎತ್ತರಕ್ಕೆ ಕೊಂಡೊಯ್ದರು. ಅವರ ಆದರ್ಶ ಎಲ್ಲರಿಗೂ ಹಿತವನ್ನೇ ಉಂಟುಮಾಡಲಿದೆ. ಯಾವುದೇ ಕಾಲದಲ್ಲಿ ಈ ಅಲೌಕಿಕ ಪುರುಷರ ಚರಿತ್ರೆಗಳು ಮತ್ತು ರಾಮಾಯಣ-ಮಹಾಭಾರತ ಈ ಗ್ರಂಥಗಳು ಪ್ರತಿಯೊಬ್ಬರನ್ನು ಮಹಾನ ವ್ಯಕ್ತಿಗಳನ್ನಾಗಿಸುತ್ತವೆ’

– ಶೆವಡೆಯವರ ಅಮೇರಿಕಾದ ಪ್ರವಚನಗಳು (ಮ್ಯಸ್ಯಸೌಗಾ, ಔಟ್ಯಾರಯೋ, ಕೆನಡಾ, ೯.೯.೧೯೮೦)