ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ: 17 ವರ್ಷಗಳ ನಂತರ 7 ಆರೋಪಿಗಳ ನಿರಪರಾಧಿ ಎಂದು ಬಿಡುಗಡೆ!

ಮುಂಬಯಿ, ಜುಲೈ 31 (ವಾರ್ತಾ.) – ಮುಂಬಯಿ ಸೆಷನ್ಸ್ ನ್ಯಾಯಾಲಯದ ವಿಶೇಷ ಎನ್‌ಐಎ ನ್ಯಾಯಾಲಯವು ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಎಲ್ಲಾ 7 ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದೆ. ನ್ಯಾಯಾಲಯದ ಈ ತೀರ್ಪಿನಿಂದ, ಹಿಂದುತ್ವನಿಷ್ಠ ಕಾರ್ಯಕರ್ತರನ್ನು ಅನಾವಶ್ಯಕವಾಗಿ ಸಿಲುಕಿಸಿ ‘ಕೇಸರಿ ಭಯೋತ್ಪಾದನೆ’ಯ ಕೆಂಬುತವನ್ನು ಸೃಷ್ಟಿಸುವ ಕಾಂಗ್ರೆಸ್‌ನ ಷಡ್ಯಂತ್ರದ ಬಣ್ಣ ಬಯಲಾಗಿದೆ. ಹಿಂದುತ್ವನಿಷ್ಠರನ್ನು ಅಪರಾಧಿಗಳೆಂದು ಸಾಬೀತುಪಡಿಸಲು ತನಿಖಾ ದಳಗಳು ಸುಳ್ಳು ಪುರಾವೆಗಳನ್ನು ಸಲ್ಲಿಸಿದ್ದವು. ಸಾಧ್ವಿ ಪ್ರಜ್ಞಾ ಸಿಂಗ್ ಸಹಿತ ಲೆಫ್ಟಿನೆಂಟ್ ಕರ್ನಲ್ ಪ್ರಸಾದ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ), ಶಂಕರಾಚಾರ್ಯ ಸ್ವಾಮಿ ಅಮೃತಾನಂದ ದೇವತೀರ್ಥ, ಅಜಯ ರಾಹಿರ್ಕರ್, ಸಮೀರ ಕುಲಕರ್ಣಿ ಮತ್ತು ಸುಧಾಕರ ಚತುರ್ವೇದಿ ಈ 7 ಜನರು ನಿರಪರಾಧಿಗಳಾಗಿ ಬಿಡುಗಡೆಗೊಂಡಿದ್ದಾರೆ. ವಿಳಂಬವಾಗಿ ನ್ಯಾಯ ದೊರೆತರೂ, ಎಲ್ಲಾ ಆರೋಪಿಗಳು ತಮ್ಮ ನಿರಪರಾಧಿತನ ಸಾಬೀತಾದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ತೀರ್ಪಿನಲ್ಲಿನ ಪ್ರಮುಖ ಅಂಶಗಳು!
1. ಸುಧಾಕರ್ ಚತುರ್ವೇದಿ ಅವರ ಮನೆಯಲ್ಲಿ ‘ಆರ್‌ಡಿಎಕ್ಸ್’ ಇಟ್ಟು ಅವರನ್ನು ಸಿಕ್ಕಿಹಾಕಿಕೊಳ್ಳುವ ಷಡ್ಯಂತ್ರವನ್ನು ರೂಪಿಸಲಾಗಿತ್ತು.
2. ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಕಾಶ್ಮೀರದಿಂದ ಆರ್‌ಡಿಎಕ್ಸ್ ತಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ತನಿಖಾ ಸಂಸ್ಥೆಗಳು ಸಲ್ಲಿಸಲು ಸಾಧ್ಯವಾಗಲಿಲ್ಲ.
3. ಬಾಂಬ್ ಸ್ಫೋಟದ ಸ್ಥಳದಲ್ಲಿ ಬಳಸಲಾದ ದ್ವಿಚಕ್ರ ವಾಹನವು ಸಾಧ್ವಿ ಪ್ರಜ್ಞಾ ಸಿಂಗ್ ಅವರದ್ದಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳನ್ನು ತನಿಖಾ ಸಂಸ್ಥೆಗಳು ಸಲ್ಲಿಸಲು ಸಾಧ್ಯವಾಗಲಿಲ್ಲ. ಕೇವಲ ವಾಹನದ ಸಂಖ್ಯೆ ಮಾತ್ರ ಇದ್ದರೆ ಸಾಲದು, ದ್ವಿಚಕ್ರ ವಾಹನದ ಚಾಸಿಸ್ (ಎಂಜಿನ್ ಭಾಗ) ಸಂಖ್ಯೆ ಪತ್ತೆಯಾಗಿಲ್ಲ.
4. ಬಾಂಬ್ ಸ್ಫೋಟವನ್ನು ನಡೆಸಲು ರೆಕಿ (ಪಿತೂರಿಗಾಗಿ ನಡೆಸಿದ ಪರಿಶೀಲನೆ) ನಡೆಸಲಾಗಿದೆ ಅಥವಾ ಆರೋಪಿಗಳು ಸಭೆಗಳನ್ನು ನಡೆಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
5. ಎಲ್ಲಾ ಆರೋಪಿಗಳ ಮೇಲೆ ವಿಧಿಸಲಾದ ‘ಅನ್‌ಲಾಫುಲ್ ಆಕ್ಟಿವಿಟೀಸ್ ಪ್ರಿವೆನ್ಷನ್ ಆಕ್ಟ್’ (ಅಕ್ರಮ ಕೃತ್ಯಗಳ ತಡೆ ಕಾಯ್ದೆ) ಅಂದರೆ ‘ಯುಎಪಿಎ’ ಕಾಯ್ದೆ ತಪ್ಪಾಗಿದೆ.
6. ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಇವರು ‘ಅಭಿನವ್ ಭಾರತ್’ ಸಂಸ್ಥೆಯ ಹಣವನ್ನು ಸ್ಫೋಟಕ್ಕಾಗಿ ಬಳಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
7. ತನಿಖಾ ದಳವು ಪಂಚನಾಮಾವನ್ನು ಸರಿಯಾಗಿ ನಡೆಸಿಲ್ಲ. ಕೇವಲ ಸಂಶಯದ ಆಧಾರದ ಮೇಲೆ ಆರೋಪಿಗಳಿಗೆ ಶಿಕ್ಷೆ ನೀಡಲಾಗುವುದಿಲ್ಲ.
‘ಮೀಡಿಯಾ ಟ್ರಯಲ್’ ಮೂಲಕ ಕಾಂಗ್ರೆಸ್ ಕೇಸರಿ ಭಯೋತ್ಪಾದನೆಯ ‘ನಕಲಿ ನಿರೂಪಣೆ’ಯನ್ನು ಸೃಷ್ಟಿಸಿತು!

ಮಾಲೇಗಾಂವ್ ಬಾಂಬ್ ಸ್ಫೋಟದ ನಂತರ ಮುಂದಿನ ಕೆಲವು ವರ್ಷಗಳ ಕಾಲ ರಾಹುಲ್ ಗಾಂಧಿ, ಪಿ. ಚಿದಂಬರಂ, ಸುಶೀಲ್ ಕುಮಾರ್ ಶಿಂಧೆ, ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ಮೈತ್ರಿಕೂಟದ ಅನೇಕ ನಾಯಕರು ಉದ್ದೇಶಪೂರ್ವಕವಾಗಿ ‘ಕೇಸರಿ ಭಯೋತ್ಪಾದನೆ’ ಎಂದು ಉಲ್ಲೇಖಿಸಿದರು. ನ್ಯಾಯಾಲಯವು ತೀರ್ಪು ನೀಡುವ ಮೊದಲೇ, ಮತ್ತು ತನಿಖಾ ದಳಗಳು ಯಾವುದೇ ದೃಢವಾದ ಪುರಾವೆಗಳಿಲ್ಲದೆ ಇದ್ದರೂ, ಮಾಧ್ಯಮಗಳು ಮಾಲೇಗಾಂವ್ ಪ್ರಕರಣದ ಆರೋಪಿಗಳ ವಿರುದ್ಧ ಸುಳ್ಳು ಕಥೆಗಳನ್ನು ಸೃಷ್ಟಿಸಿದವು.
ಹೀಗೆ ತೀರ್ಪು ಹೊರಬಿದ್ದಿತು!

ಮುಂಬಯಿ ಸೆಷನ್ಸ್ ನ್ಯಾಯಾಲಯದ ‘ಎನ್‌ಐಎ’ ವಿಶೇಷ ನ್ಯಾಯಾಲಯದಲ್ಲಿ ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭವಾಯಿತು. ಈ ವೇಳೆ ಎಲ್ಲಾ ಏಳು ಆರೋಪಿಗಳು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು. ನ್ಯಾಯಾಲಯದ ಕೋಣೆ ಮತ್ತು ಹೊರಗಿನ ಗ್ಯಾಲರಿ ವಕೀಲರು, ಪತ್ರಕರ್ತರು ಮತ್ತು ಪೊಲೀಸರಿಂದ ತುಂಬಿ ತುಳುಕುತ್ತಿತ್ತು. ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಪ್ರತ್ಯೇಕವಾಗಿ ಮತ್ತು ಉಳಿದ 6 ಪುರುಷ ಆರೋಪಿಗಳನ್ನು ಪ್ರತ್ಯೇಕವಾಗಿ ಕೂರಿಸಲಾಗಿತ್ತು. ನ್ಯಾಯಾಧೀಶ ಎ.ಕೆ. ಕೋಲಾಟಿ ಅವರು 30 ನಿಮಿಷಗಳ ಕಾಲ ತೀರ್ಪನ್ನು ಓದಿದರು. ‘ತೀರ್ಪು ಹೇಗಿರಲಿದೆ?’ ಎಂಬ ಕುತೂಹಲದಿಂದ ನ್ಯಾಯಾಲಯದಲ್ಲಿ ಗಂಭೀರ ನಿಶ್ಯಬ್ಧವಿತ್ತು. ನ್ಯಾಯಾಧೀಶರು ಆರೋಪಿಗಳನ್ನು ನಿರಪರಾಧಿಗಳೆಂದು ಘೋಷಿಸಿದ ನಂತರ ನ್ಯಾಯಾಲಯದಲ್ಲಿ ಉತ್ಸಾಹದ ವಾತಾವರಣ ಹರಡಿತು. ಆರೋಪಿಗಳ ವಕೀಲರಾದ ಜಯಪ್ರಕಾಶ್ ಮಿಶ್ರಾ, ಹಾಗೂ ಸಾಧ್ವಿ ಪ್ರಜ್ಞಾ ಸಿಂಗ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ), ಶ್ರೀ ಸಮೀರ್ ಕುಲಕರ್ಣಿ ಅವರು ತೀರ್ಪಿನ ನಂತರ ತಮ್ಮ ಭಾವನೆಗಳನ್ನು ನ್ಯಾಯಾಧೀಶರ ಮುಂದೆ ವ್ಯಕ್ತಪಡಿಸಿದರು.
ಇಂದಿನ ತೀರ್ಪಿನಿಂದ ಕೇಸರಿ ಭಯೋತ್ಪಾದನೆ ಎಂದು ಹೇಳುವವರಿಗೆ ಕಪಾಳಮೋಕ್ಷವಾಗಿದೆ ! – ಏಕನಾಥ ಶಿಂಧೆ, ಉಪಮುಖ್ಯಮಂತ್ರಿ

ನಾನು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ವಿಳಂಬವಾದರೂ ನ್ಯಾಯ ಸಿಕ್ಕಿತು. ಭಯೋತ್ಪಾದನೆಗೆ ಯಾವುದೇ ಬಣ್ಣವಿರುವುದಿಲ್ಲ; ಆದರೆ ಕಾಂಗ್ರೆಸ್-ರಾಷ್ಟ್ರವಾದಿ ಕಾಂಗ್ರೆಸ್ ಆಡಳಿತದಲ್ಲಿ ಮತ್ತು ಮಾಲೇಗಾಂವ್ ಬಾಂಬ್ ಸ್ಫೋಟದ ನಂತರ ಅದಕ್ಕೆ ಬಣ್ಣ ನೀಡಲಾಯಿತು. ಇದರ ರಾಜಕೀಯ ಮಾಡಲಾಯಿತು. ಇಂದಿನ ತೀರ್ಪಿನಿಂದ ಕೇಸರಿ ಭಯೋತ್ಪಾದನೆ ಎಂದು ಹೇಳುವವರಿಗೆ ಕಪಾಳಮೋಕ್ಷ ಸಿಕ್ಕಿದೆ. ಇಂದಿನ ತೀರ್ಪಿನಿಂದ ಹಿಂದೂಗಳು ಎಂದಿಗೂ ದೇಶವಿರೋಧಿ ಚಟುವಟಿಕೆಗಳನ್ನು ಮಾಡುವುದಿಲ್ಲ ಎಂದು ಸಾಬೀತಾಗಿದೆ. ನ್ಯಾಯವ್ಯವಸ್ಥೆಯ ಮೇಲೆ ನಮಗೆ ನಂಬಿಕೆ ಇದೆ.
ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣ ಎಂದರೇನು?

ಸೆಪ್ಟೆಂಬರ್ 29, 2008 ರಂದು ಮಾಲೇಗಾಂವ್‌ನ ಒಂದು ಮಸೀದಿಯ ಬಳಿ ಬಾಂಬ್ ಸ್ಫೋಟ ಸಂಭವಿಸಿತು. ಈ ಪ್ರಕರಣದಲ್ಲಿ ಭಯೋತ್ಪಾದನಾ ನಿಗ್ರಹ ದಳವು 12 ಜನರನ್ನು ಬಂಧಿಸಿತ್ತು. 2011ರಲ್ಲಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾಯಿಸಲಾಯಿತು. ಈ ದಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 2 ಜನರನ್ನು ಬಂಧಿಸಿತು. ಹೀಗೆ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಟ್ಟು 14 ಆರೋಪಿಗಳನ್ನು ಬಂಧಿಸಲಾಯಿತು. ಸಾಧ್ವಿ ಪ್ರಜ್ಞಾ ಸಿಂಗ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ (ನಿವೃತ್ತ), ಸುಧಾಕರ್ ಚತುರ್ವೇದಿ, ಸಮೀರ್ ಕುಲಕರ್ಣಿ, ಅಜಯ್ ರಾಹಿರ್ಕರ್, ರಾಕೇಶ್ ಧವಾಡೆ, ಶಿವನಾರಾಯಣ ಕಲಾಸಂಗ್ರಾ, ಜಗದೀಶ್ ಮ್ಹಾತ್ರೆ, ಶಂಕರಾಚಾರ್ಯ ಸ್ವಾಮಿ ಅಮೃತಾನಂದ ದೇವತೀರ್ಥ, ಶ್ಯಾಮ್ ಸಾಹು, ಪ್ರವೀಣ್ ತಕಲಕಿ, ಲೋಕೇಶ್ ಶರ್ಮಾ ಅವರನ್ನು ಬಂಧಿಸಲಾಯಿತು. ರಾಮ್‌ಜಿ ಕಲಾಸಂಗ್ರಾ ಮತ್ತು ಸಂದೀಪ್ ಡಾಂಗೇ ಅವರನ್ನು ಪರಾರಿಯಾದವರು ಎಂದು ಘೋಷಿಸಲಾಯಿತು. ಬಂಧಿತ 14 ಆರೋಪಿಗಳ ಪೈಕಿ ರಾಕೇಶ್ ಧವಾಡೆ, ಶಿವನಾರಾಯಣ ಕಲಾಸಂಗ್ರಾ, ಜಗದೀಶ್ ಮ್ಹಾತ್ರೆ, ಶಂಕರಾಚಾರ್ಯ ಸ್ವಾಮಿ ಅಮೃತಾನಂದ ದೇವತೀರ್ಥ, ಶ್ಯಾಮ್ ಸಾಹು, ಪ್ರವೀಣ್ ತಕಲಕಿ, ಲೋಕೇಶ್ ಶರ್ಮಾ ವಿರುದ್ಧ ಪ್ರಾಥಮಿಕ ಪುರಾವೆಗಳು ಇಲ್ಲದ ಕಾರಣ 2017ರಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ಇತರ ಆರೋಪಿಗಳನ್ನು ಸಹ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ಪ್ರಕರಣವು 5 ವಿಶೇಷ ನ್ಯಾಯಾಲಯಗಳಲ್ಲಿ 17 ವರ್ಷಗಳ ಕಾಲ ನಡೆಯಿತು.
ಸಂಪಾದಕೀಯ ನಿಲುವು
|
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath