ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ಭಾಗ ೨೦

‘ಸುಲಭವಾಗಿ ಹೇಳುವುದಾದರೆ, ‘ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ಮತ್ತು ಯಾವುದೇ ಆಯಾಸ ಅಥವಾ ನೋವಿಲ್ಲದೆ ಮಾಡಲು ಸಾಧ್ಯವಾಗುವುದನ್ನು’ ‘ಸ್ನಾಯುಗಳ ಆರೋಗ್ಯ ಉತ್ತಮವಾಗಿರುವುದು’ ಎಂದು ಹೇಳಬಹುದು. ಈ ಚಟುವಟಿಕೆಗಳನ್ನು ಮಾಡಲು ಸ್ನಾಯು ಗಳಲ್ಲಿ ‘ಶಕ್ತಿ, ಮೃದುತ್ವ ಮತ್ತು ಸಹನಶಕ್ತಿ’ ಈ ಮೂರು ಅಂಶ ಗಳು ಸಾಕಷ್ಟು ಪ್ರಮಾಣದಲ್ಲಿ ಇರುವುದು ಆವಶ್ಯಕವಾಗಿರುತ್ತದೆ. ಅವುಗಳ ಸ್ಥಿತಿಯಿಂದ ನಾವು ಸ್ನಾಯುಗಳ ಆರೋಗ್ಯವನ್ನು ಅಂದಾಜಿಸಬಹುದು.
೧. ಸ್ನಾಯುಗಳ ಶಕ್ತಿ (Muscle Strength)
‘ನಾವು ಒಂದು ವಸ್ತುವನ್ನು ಎಷ್ಟು ದೂರ ಎಸೆಯಬಹುದು ? ಅಥವಾ ಎಷ್ಟು ಭಾರವಾದ ವಸ್ತುವನ್ನು ಎತ್ತಬಹುದು ?’ ಇದು ಸ್ನಾಯುಗಳ ಶಕ್ತಿಯ ಮಾನದಂಡವಾಗಿದೆ. ಬಲಿಷ್ಠ ಸ್ನಾಯು ಗಳಿಂದ ಭಾರವಾದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ; ಏಕೆಂದರೆ ಅದರಿಂದ ಕೀಲುಗಳು ಮತ್ತು ಮೂಳೆಗಳಿಗೆ ಉತ್ತಮ ಆಧಾರ ಸಿಗುತ್ತದೆ. ಅದರ ಪರಿಣಾಮವಾಗಿ ದೇಹಕ್ಕೆ ಸ್ಥಿರತೆ ಮತ್ತು ಉತ್ತಮ ಭಂಗಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿ ಗಾಯಗಳನ್ನು ತಪ್ಪಿಸಬಹುದು.
೨. ಸ್ನಾಯುಗಳ ಮೃದುತ್ವ (Flexibility)
‘ನಾವು ಎಲ್ಲಾ ಕೀಲುಗಳ ಚಲನೆಯನ್ನು ಪೂರ್ಣ ಗೊಳಿಸಬಹುದೇ ?’ ಎಂಬುದು ಸ್ನಾಯುಗಳ ಮೃದುತ್ವವನ್ನು ಅವಲಂಬಿಸಿರುತ್ತದೆ. ಸಾಮಾನ್ಯ ಉದಾಹರಣೆಯನ್ನು ನೋಡಬೇಕಾದರೆ, ನಮ್ಮ ಭುಜದ ಹಿಂದಿರುವ ವಸ್ತುವನ್ನು ನೋಡಲು ನಾವು ಕೇವಲ ಕುತ್ತಿಗೆಯನ್ನು ತಿರುಗಿಸುತ್ತಿದ್ದರೆ, ಕುತ್ತಿಗೆಯ ಸ್ನಾಯುಗಳು ಮೃದುವಾಗಿವೆ ಎಂದರ್ಥ. ಒಂದು ವೇಳೆ ನಾವು ಕುತ್ತಿಗೆಯ ಜೊತೆಗೆ ಭುಜಗಳನ್ನೂ ಸ್ವಲ್ಪ ತಿರುಗಿಸಬೇಕಾಗಿದ್ದರೆ, ಕುತ್ತಿಗೆಯ ಸ್ನಾಯುಗಳ ಮೃದುತ್ವ ಕಡಿಮೆ ಯಾಗಿದೆ ಎಂದರ್ಥ. ಮೃದುತ್ವದಿಂದ ಒಟ್ಟಾರೆ ಚಲನಶೀಲತೆ (mobility) ಸುಧಾರಿಸುತ್ತದೆ ಮತ್ತು ಕೀಲುಗಳ ಚಲನೆ ಸುಲಭವಾಗಿ ಆಗಿ ಗಾಯದ ಅಪಾಯ ಕಡಿಮೆಯಾಗುತ್ತದೆ ಹಾಗೂ ದೇಹದ ಭಂಗಿ (posture) ಮತ್ತು ಜೋಡಣೆ (alignment) ಸಹ ಸರಿಯಾದ ಸ್ಥಿತಿಯಲ್ಲಿ ಇರುತ್ತದೆ. ಮೃದುವಾದ ಸ್ನಾಯು ಗಳು ಆರೋಗ್ಯಕರ ದೇಹದ ಪ್ರಮಾಣ, ಆದರೆ ‘ಮೃದುತ್ವ ಕಡಿಮೆ ಯಾಗುವುದು’ ಎಂದರೆ ರೋಗದ ಹೊಸ್ತಿಲಲ್ಲಿ ಇರುವಂತಿದೆ.
೩. ಸ್ನಾಯುಗಳ ಸಹಿಷ್ಣುತೆ (Stamina/ Endurance)
ಸ್ನಾಯುಗಳ ಸಹಿಷ್ಣುತೆ ಎಂದರೆ ಸ್ನಾಯುಗಳು ದಣಿಯದೆ ದೀರ್ಘಕಾಲದ ವರೆಗೆ ಕೆಲಸ ಮಾಡುವ ಸಾಮರ್ಥ್ಯ. ‘ಸ್ನಾಯುಗಳು ನಿರಂತರವಾಗಿ ಎಷ್ಟು ಸಮಯ ಕೆಲಸ ಮಾಡಬಹುದು ? ಅಥವಾ ಎಷ್ಟು ಸಮಯ ಕೆಲಸ ಮಾಡಿದ ನಂತರ ಸ್ನಾಯುಗಳು ದಣಿಯುತ್ತವೆ/ನೋವಾಗ ತೊಡಗುತ್ತದೆ ?’ ಎಂಬುದು ಸ್ನಾಯುಗಳ ಸಹಿಷ್ಣುತೆಯ (stamina) ಮಾನದಂಡವಾಗಿದೆ. ‘ನಾವು ದಿನವಿಡೀ ಎಷ್ಟು ಸಮಯ ಒಂದೇ ಸ್ಥಿತಿಯಲ್ಲಿರಬಹುದು ಅಥವಾ ಒಂದೇ ರೀತಿಯ ಚಲನೆಯ ಕೆಲಸಗಳನ್ನು ಮಾಡ ಬಹುದು ?’ ಎಂಬುದು ಇದನ್ನು ಅವಲಂಬಿಸಿರುತ್ತದೆ.
– ಸೌ. ಅಕ್ಷತಾ ರೂಪೇಶ ರೆಡಕರ, ಭೌತಚಿಕಿತ್ಸಕ (ಫಿಜಿಯೋಥೆರಪಿಸ್ಟ್), ಫೋಂಡಾ, ಗೋವಾ. (೩೦.೯.೨೦೨೪)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು