
‘ಮೂಲವ್ಯಾಧಿ ಎಂದರೆ ಗುದದ್ವಾರದ ಒಳ ಮತ್ತು ಹೊರಗಿನ ರಕ್ತನಾಳಗಳು ಊದಿಕೊಳ್ಳುವುದು. ಪ್ರಸ್ತುತ ಭಾರತೀಯರಲ್ಲಿ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಮೂಲವ್ಯಾಧಿಯ ಪ್ರಮಾಣ ಹೆಚ್ಚಾಗುತ್ತಿದೆ. ಈ ಲೇಖನದಲ್ಲಿ ನಾವು ‘ಮೂಲವ್ಯಾಧಿಯ ವಿಧಗಳು, ಲಕ್ಷಣಗಳು, ಮೂಲವ್ಯಾಧಿಯಾಗಲು ಕಾರಣಗಳು ಮತ್ತು ಅದಕ್ಕೆ ಪರಿಹಾರ’ಗಳನ್ನು ನೋಡಲಿದ್ದೇವೆ.

೧. ಮೂಲವ್ಯಾಧಿಯ ವಿಧಗಳು
ಅ. ಗುದದ್ವಾರದ ಒಳಭಾಗದಲ್ಲಿ ಆಗುವ ಮೂಲವ್ಯಾಧಿ
ಆ. ಗುದದ್ವಾರದ ಹೊರ ಭಾಗದಲ್ಲಿ ಮೊಳಕೆ ಬರುವುದು ಗುದದ್ವಾರದ ಒಳಭಾಗದಲ್ಲಿರುವ ಮೂಲವ್ಯಾಧಿಯಿಂದ ಕೆಲವೊಮ್ಮೆ ತೊಂದರೆಯಾಗುತ್ತದೆ; ಆದರೆ ಹೊರ ಭಾಗದಲ್ಲಿ ಮೊಳಕೆ ಬಂದರೆ ಅದರಿಂದ ಹೆಚ್ಚು ತೊಂದರೆಯಾಗುತ್ತದೆ.
೨. ಮೂಲವ್ಯಾಧಿಯ ಲಕ್ಷಣಗಳು
ಅ. ಹೊರಗಿನ ಮೂಲವ್ಯಾಧಿಯಲ್ಲಿ ತುರಿಕೆ ಇರುತ್ತದೆ
ಆ. ಆ ಭಾಗದ ಚರ್ಮ ಒಣಗುತ್ತದೆ
ಇ. ಮಲವಿಸರ್ಜನೆ ಮಾಡುವಾಗ ನೋವು ಬರುತ್ತದೆ
ಈ. ಕೆಲವೊಮ್ಮೆ ಮಲವಿಸರ್ಜನೆ ಮಾಡುವಾಗ ರಕ್ತ ಬರುತ್ತದೆ
ಉ. ತೊಂದರೆ ಹೆಚ್ಚಾದರೆ ಆಸನದ ಮೇಲೆ ಅಥವಾ ಗಟ್ಟಿಯಾದ ಜಾಗದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ
೩. ಮೂಲವ್ಯಾಧಿಯ ಕಾರಣಗಳು
ಅ. ಕರುಳಿನ ಅಸ್ವಸ್ಥತೆ (ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು, ಹೊಟ್ಟೆ ತೊಳೆಸುವುದು, ಮಲಬದ್ಧತೆ, ಭೇದಿ, ಊತ, ಸೆಳೆತ ಇತ್ಯಾದಿ ಸಮಸ್ಯೆಗಳು), ಹಾಗೆಯೇ ಗುದನಾಳ ಅಥವಾ ಗುದದ್ವಾರದಲ್ಲಿ ಬಿಗಿತ
ಆ. ಮಲ ಹೊರಗೆ ಬರುವಾಗ ಅದು ಗಟ್ಟಿಯಾಗಿದ್ದರೆ, ಗುದದ್ವಾರಕ್ಕೆ ಒತ್ತಡ ಬಂದು ಮೂಲವ್ಯಾಧಿಯಾಗುತ್ತದೆ.
ಇ. ಬದಲಾದ ಆಹಾರ ಪಾನೀಯಗಳ ಅಭ್ಯಾಸಗಳು
ಈ. ಪಿಜ್ಜಾ, ಬರ್ಗರ್‌ನಂತಹ ಜಡ ಆಹಾರಗಳು ಹಾಗೆಯೇ ‘ಚೈನಿಸ್ ಆಹಾರ’ ಸೇವಿಸುವುದು
ಉ. ಮೈದಾ ಹಿಟ್ಟಿನ ಪದಾರ್ಥಗಳನ್ನು ಹೆಚ್ಚು ಸೇವಿಸುವುದು
ಊ. ಹಸಿರು ಸೊಪ್ಪು ಮತ್ತು ಹಣ್ಣುತರಕಾರಿಗಳನ್ನು ಕಡಿಮೆ ತಿನ್ನುವುದರಿಂದಲೂ ಹೊಟ್ಟೆಯ ತೊಂದರೆ ಪ್ರಾರಂಭವಾಗಿ ಮೂಲವ್ಯಾಧಿ ಬರಬಹುದು.
೪. ಮೂಲವ್ಯಾಧಿಗೆ ಪರಿಹಾರಗಳು
ಅ. ಪ್ರತಿದಿನ ಊಟದಲ್ಲಿ ೪-೫ ಸುವರ್ಣಗಡ್ಡೆಯ ತುಂಡುಗಳನ್ನು ಖಾರ-ಉಪ್ಪು ಲೇಪಿಸಿ ಅರ್ಧ ಹುರಿದು (ಹ್ಚಿಟಜಿ ಜಿಡಿಥಿ) ಚೆನ್ನಾಗಿ ಅಗಿದು ತಿನ್ನಬೇಕು.
ಆ. ಊಟದಲ್ಲಿ ಹಸಿರು ಸೊಪ್ಪು ಮತ್ತು ಹಣ್ಣುತರಕಾರಿಗಳನ್ನು ಹೆಚ್ಚು ಬಳಸಿ.
ಇ. ರಾತ್ರಿ ಊಟ ಮಾಡುವಾಗ ಒಂದು ಕತ್ತರಿಸಿದ ಈರುಳ್ಳಿ ಯನ್ನು ೧ ಬಟ್ಟಲು (ಹುಳಿ ಇಲ್ಲದ) ಮೊಸರಿನಲ್ಲಿ ಹಾಕಿ ತಿನ್ನಬೇಕು. ಹೀಗೆ ೧೧ ದಿನಗಳ ಕಾಲ ಮಾಡಬೇಕು. ಅನಂತರ ೫ ದಿನ ನಿಲ್ಲಿಸಿ ಮತ್ತೆ ೧೧ ದಿನಗಳ ಕಾಲ ಈ ಪ್ರಯೋಗವನ್ನು ಮಾಡಬೇಕು. ತೊಂದರೆ ಕಡಿಮೆಯಾದ ನಂತರ ಈ ಚಿಕಿತ್ಸೆಯನ್ನು ನಿಲ್ಲಿಸಿ.
ಈ. ದಿನವಿಡಿ ಸಾಕಷ್ಟು ನೀರು ಕುಡಿಯಬೇಕು
ಉ. ರಾತ್ರಿ ತ್ರಿಫಲಾ ಚೂರ್ಣವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ತೆಗೆದುಕೊಳ್ಳಬೇಕು ಮತ್ತು ಅದರೊಂದಿಗೆ ಒಂದು ಚಮಚ ಹಸುವಿನ ತುಪ್ಪವನ್ನು ತೆಗೆದುಕೊಳ್ಳಬೇಕು. ಚೂರ್ಣದ ಪ್ರಮಾಣ ಮುಂದಿನಂತೆ ಕ್ರಮೇಣ ಕಡಿಮೆ ಮಾಡುತ್ತಾ ಹೋಗಬೇಕು. ಮೊದಲ ತಿಂಗಳಲ್ಲಿ ಒಂದು ಚಮಚ (೫ ಗ್ರಾಂ), ಎರಡನೇ ತಿಂಗಳಲ್ಲಿ ಮುಕ್ಕಾಲು ಚಮಚ (೪ ಗ್ರಾಂ), ಮೂರನೇ ತಿಂಗಳಲ್ಲಿ ಅರ್ಧ ಚಮಚ (೩ ಗ್ರಾಂ), ನಾಲ್ಕನೇ ತಿಂಗಳಲ್ಲಿ ಕಾಲು ಚಮಚ (೨ ಗ್ರಾಂ) ಹೀಗೆ ಚೂರ್ಣದ ಪ್ರಮಾಣವನ್ನು ಕಡಿಮೆ ಮಾಡುತ್ತಾ ಹೋಗಿ ನಂತರ ಚೂರ್ಣ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು.’
– ಡಾ. ದೀಪಕ ಜೋಶಿ, ನಿಸರ್ಗೋಪಚಾರ ತಜ್ಞರು (ಬ್ಯಾಚುಲರ್ ಆಫ್ ನ್ಯಾಚುರೋಪತಿ ಯಾಂಡ್ ಯೋಗಿಕ್ ಸೈನ್ಸ್), ದೇವದ, ಪನವೇಲ. (೧೮.೨.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು