ಅಣುಬಾಂಬ್ ದಾಳಿಯಾದರೆ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳುವಿರಿ ?

ಪಾಕಿಸ್ತಾನದಂತಹ ಶತ್ರು ದೇಶ ಭಾರತಕ್ಕೆ ಅಣುಬಾಂಬ್ ದಾಳಿಯ ಬೆದರಿಕೆಯನ್ನು ಹಾಕುತ್ತಿದೆ. ಒಂದು ವೇಳೆ ನಿಜಕ್ಕೂ ಇಂತಹ ದಾಳಿ ಸಂಭವಿಸಿದರೆ, ಸಾಮಾನ್ಯ ನಾಗರಿಕರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದರ ಕುರಿತು ಕೆಲವು ಸೂಚನೆಗಳನ್ನು ಇಲ್ಲಿ ನೀಡಲಾಗಿದೆ.

ತಮಗಾಗಿ ಸಿದ್ಧವಾಗಿಡಬೇಕಾದ ಸುರಕ್ಷತಾ ಕಿಟ್ !

೧. ಡಬ್ಬಿಯಲ್ಲಿ ಸೀಲ್ ಮಾಡಿದ ಆಹಾರ ಪದಾರ್ಥಗಳು (ಲೋಹದ ಡಬ್ಬಿಗಳಲ್ಲಿ ವಿಕಿರಣದ ಅಪಾಯ ಕಡಿಮೆ ಇರುತ್ತದೆ.)

೨. ರೇಡಿಯೋ ಸೆಟ್ (ಟ್ರಾನ್ಸಿಸ್ಟರ್ ರೇಡಿಯೋ)

೩. ಬ್ಯಾಟರಿ (ಬ್ಯಾಟರಿ ಸೆಲ್)

೪. ಪ್ರಥಮೋಪಚಾರದ ವೈದ್ಯಕೀಯ ಕಿಟ್

೫. ಅಗತ್ಯವಿರುವ ನಗದು ಹಣ (ಕ್ಯಾಶ್)

೬. ಬೆಂಕಿಪೊಟ್ಟಣ ಮತ್ತು ಮೇಣದಬತ್ತಿಗಳು

೭. ವಿಕಿರಣ ನಿರೋಧಕ ಕಪ್ಪು ಫಿಲ್ಮನಿಂದ ಮುಚ್ಚಿದ ಪ್ಲಾಸ್ಟಿಕ್ ನೀರಿನ ಬಾಟಲ್

೮. ಅಗತ್ಯವಿರುವಷ್ಟು ಬಟ್ಟೆಗಳು

೯. ಓದಲು ಪುಸ್ತಕಗಳು

೧೦. ಸಿದ್ಧ ತಾಪಮಾನದ ಒಲೆ

ಡಾ. ರೂಪಾಲಿ ಭಾಟಕರ

ಬಾಂಬ್ ಸ್ಫೋಟವಾದರೆ ಏನು ಮಾಡಬೇಕು ?

೧. ಕಿಟಕಿಗಳಿಲ್ಲದ ಮನೆ, ಅಂಗಡಿ, ಗೋಡೌನ್, ದೇವಸ್ಥಾನ ಇತ್ಯಾದಿಗಳಲ್ಲಿ ಆಶ್ರಯ ಪಡೆಯಲು ಪ್ರಯತ್ನಿಸಬೇಕು. ನೆಲಮಾಳಿಗೆಗೆ ಹೋಗಲು ಪ್ರಯತ್ನಿಸಿರಿ.

೨. ಸ್ಫೋಟವಾದ ಸ್ಥಳದಲ್ಲಿ ಎಂದಿಗೂ ಹವಾನಿಯಂತ್ರಣ ಯಂತ್ರವನ್ನು (ಎ.ಸಿ.) ಉಪಯೋಗಿಸಬಾರದು. ಇದರಿಂದ ವಿಕಿರಣದ ಅಪಾಯ ಹೆಚ್ಚಾಗುತ್ತದೆ. ಫ್ಯಾನ್ ಅಥವಾ ಕೂಲರ್ ಬಳಸಬಹುದು, ಏಕೆಂದರೆ ಅವು ಹೊರಗಿನ ಗಾಳಿಯನ್ನು ಹೀರಿಕೊಳ್ಳುವುದಿಲ್ಲ.

೩. ಇತರ ವಿದ್ಯುತ್ ಉಪಕರಣಗಳನ್ನು ಉಪಯೋಗಿಸಬಾರದು.

೪. ಬಯಲು ಪ್ರದೇಶದಲ್ಲಿ ಸ್ಫೋಟವಾದರೆ, ಅದೇ ಜಾಗದಲ್ಲಿ ಮಲಗಿರಿ ಮತ್ತು ಬಟ್ಟೆಯಿಂದ ಅಥವಾ ಮಾಸ್ಕ್‌ನಿಂದ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ. ದೇಹವನ್ನು ಸಾಧ್ಯವಾದಷ್ಟು ಮುಚ್ಚಿಕೊಳ್ಳಲು ಪ್ರಯತ್ನಿಸಿ.

೫. ಸ್ಫೋಟದ ಕಡೆಗೆ ಎಂದಿಗೂ ನೋಡಬಾರದು. ಅದರ ವಿಕಿರಣದಿಂದ ನೀವು ಕುರುಡರಾಗಬಹುದು.

೬. ಮನೆಯ ಹೊರಗೆ ವಿಕಿರಣದ ಸಂಪರ್ಕದಲ್ಲಿ ಬಂದರೆ, ಮನೆಗೆ ತಲುಪಿದ ತಕ್ಷಣ ಧರಿಸಿದ ಬಟ್ಟೆಗಳನ್ನು ತೆಗೆಯಿರಿ. ಅವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಗಟ್ಟಿಯಾಗಿ ಗಂಟು ಹಾಕಿರಿ. ಇದರಿಂದ ವಿಕಿರಣಗಳ ಪರಿಣಾಮವನ್ನು ಶೇ. ೯೦ ರಷ್ಟು ಕಡಿಮೆ ಮಾಡಬಹುದು. ಮಾನವರು ಅಥವಾ ಪ್ರಾಣಿಗಳು ಪ್ರವೇಶಿಸದ ಸುರಕ್ಷಿತ ಸ್ಥಳದಲ್ಲಿ ಆ ಚೀಲವನ್ನು ಇಡಿರಿ.

೭. ಸಾಕಷ್ಟು ಸಾಬೂನು ಬಳಸಿ ಬೇಗನೆ ಸ್ನಾನ ಮಾಡಬೇಕು. ಆದರೆ ದೇಹದ ಮೇಲೆ ಸಾಬೂನನ್ನು ಉಜ್ಜಬೇಡಿರಿ. ಕೇವಲ ಎರಡು ಬಾರಿ ಹಚ್ಚಿ ದೇಹವನ್ನು ತೊಳೆದುಕೊಳ್ಳಿರಿ. ಕೂದಲನ್ನು ಕೇವಲ ಶಾಂಪೂವಿನಿಂದ ತೊಳೆಯಿರಿ. ಕಂಡಿಷನರ್ ಅನ್ನು ಎಂದಿಗೂ ಬಳಸಬೇಡಿ. ಏಕೆಂದರೆ ವಿಕಿರಣ ಕಣಗಳು ಅದರ ಮೇಲೆ ಅಂಟಿಕೊಳ್ಳಬಹುದು.

೮. ಸೀನು ಬಂದರೆ ಮೂಗಿನಿಂದ ನಿಧಾನವಾಗಿ ಸೀನಬೇಕು.

೯. ಕಣ್ಣಿನ ರೆಪ್ಪೆಗಳನ್ನು ಸ್ವಚ್ಛಗೊಳಿಸಿರಿ.

೧೦. ಅಣುಬಾಂಬ್ ದಾಳಿಯ ಸಮಯದಲ್ಲಿ ಮೊಬೈಲ್ ಫೋನ್ ಬಳಸುವುದರಿಂದ ಅಪಾಯ ಉಂಟಾಗಬಹುದು, ಏಕೆಂದರೆ ಸ್ಫೋಟದಿಂದ ‘ಎಲೆಕ್ಟ್ರೋಮ್ಯಾಗ್ನೆಟಿಕ್ ಪಲ್ಸ್’ನಿಂದ ಹಾನಿಯಾಗುವ ಸಾಧ್ಯತೆ ಇದೆ. ‘ಎಲೆಕ್ಟ್ರೋಮ್ಯಾಗ್ನೆಟಿಕ್ ಪಲ್ಸ್’ ಮೊಬೈಲ್ ಫೋನ್‌ನ ಸರ್ಕ್ಯೂಟಿಗೆ ಅಡ್ಡಿಯಾಗಬಹುದು ಅಥವಾ ಹಾನಿ ಮಾಡಬಹುದು, ಇದರಿಂದ ಅದು ನಿರುಪಯುಕ್ತವಾಗಬಹುದು. ಅಥವಾ ಸ್ಫೋಟದ ಸಮಯದಲ್ಲಿ ಹಾಳಾದರೆ ಅದು ಬಹುತೇಕ ಹಾನಿಕರವಾಗಬಹುದು. ಅಲ್ಲದೇ ಸ್ಫೋಟವಾದ ಬಳಿಕ ಸ್ವತಃ ತಮಗೆ ಮತ್ತು ಅನಂತರದ ಪರಿಣಾಮದಿಂದ ಮಾನವನ ಆರೋಗ್ಯ ಮತ್ತು ಸುರಕ್ಷತೆಗಾಗಿ ದೊಡ್ಡ ಅಪಾಯ ನಿರ್ಮಾಣವಾಗುತ್ತದೆ.

ವಿಕಿರಣದ ಸಂಸರ್ಗದಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬೇಕು ?

೧. ಸ್ಫೋಟವಾದ ನಂತರ ಕನಿಷ್ಠ ೨೪ ಗಂಟೆಗಳ ಕಾಲ ಮನೆಯೊಳಗೆ ಇರಬೇಕು, ನೆಲಮಾಳಿಗೆಯಲ್ಲಿ ಕುಳಿತುಕೊಳ್ಳಿ. ಎಂದಿಗೂ ಎತ್ತರದ ಮಹಡಿಗಳಿಗೆ ಹೋಗಬೇಡಿ.

೨. ದಪ್ಪ ಕಾಂಕ್ರೀಟ್ ಗೋಡೆ, ಇಟ್ಟಿಗೆಗಳು ಅಥವಾ ಮಣ್ಣಿನ ದಿಬ್ಬಗಳ ಹಿಂದೆ ಉಳಿದು, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಇವೆಲ್ಲವೂ ವಿಕಿರಣವನ್ನು ಕಡಿಮೆ ಮಾಡಬಹುದು. ಮೊಬೈಲ್ ಟವರ್‌ಗಳಿಂದ ಬರುವ ವಿಕಿರಣವನ್ನು ತಡೆಯಲು ಮನೆಯ ಕಿಟಕಿಗಳಿಗೆ ವಿಕಿರಣ ನಿರೋಧಕ ಫಿಲ್ಮ್ (ಪದರ) ಅಳವಡಿಸಬಹುದು.

೩. ಸ್ಫೋಟದ ಮೊದಲ ೨ ನಿಮಿಷಗಳು ಅತ್ಯಂತ ಅಪಾಯಕಾರಿ ಯಾಗಿರುತ್ತವೆ. ಸಾಮಾನ್ಯವಾಗಿ ಮೊದಲ ೨೪ ಗಂಟೆಗಳು ಬಹಳ ಮುಖ್ಯವಾಗಿರುತ್ತವೆ. ದೂರದರ್ಶನ, ಸುದ್ದಿವಾಹಿನಿಗಳು, ಆಕಾಶವಾಣಿಗಳಲ್ಲಿ ಸೇನಾಧಿಕಾರಿಗಳು ಅಥವಾ ಇತರ ಅಧಿಕಾರಿಗಳು ನೀಡುವ ಮಾಹಿತಿಯನ್ನು ಎಚ್ಚರಿಕೆಯಿಂದ ಕೇಳಿಕೊಳ್ಳಿ. ಸಾಮಾನ್ಯವಾಗಿ ೨ ವಾರಗಳ ನಂತರ ಕೇವಲ ಶೇ. ೧ ರಷ್ಟು ವಿಕಿರಣ ಮಾತ್ರ ಉಳಿದಿರುತ್ತದೆ.

– ಡಾ. ರೂಪಾಲಿ ಭಾಟಕರ, ಫೋಂಡಾ, ಗೋವಾ