
‘ರಾಜಕಾರಣ’ ಶಬ್ದವನ್ನು ಉಚ್ಚರಿಸಿದ ಕೂಡಲೇ ಕೆಲವರು ಅದನ್ನು ಬೇರೆಯೆ ದೃಷ್ಟಿ ಯಿಂದ ನೋಡುತ್ತಾರೆ, ಅಂದರೆ ನಮಗೂ ಅದಕ್ಕೂ ಏನೂ ಸಂಬಂಧವಿಲ್ಲ ಎಂಬಂತೆ ನೋಡುತ್ತಾರೆ. ನೀವು ರಾಜಕಾರಣದಿಂದ ದೂರವಿರುತ್ತೀರಿ; ಆದರೆ ‘ರಾಜಕಾರಣ’ವು ನಿಮ್ಮ ಜೀವನದ ಪ್ರತಿಯೊಂದು ಅಂಗವನ್ನು ವ್ಯಾಪಿಸುವ ಅವಿಭಾಜ್ಯ ಘಟಕವಾಗಿದೆ, ಇದನ್ನು ಗಮನದಲ್ಲಿಡಬೇಕು. ರಾಜಕಾರಣ ಈ ಶಬ್ದವನ್ನು ವ್ಯಂಗ್ಯಾರ್ಥದಲ್ಲಿ ತೆಗೆದುಕೊಳ್ಳಲಾಗುತ್ತದೆ; ಏಕೆಂದರೆ ಅದು ಕಳಂಕಿತವಾಗಿದೆ. ‘ಆಡಳಿತವನ್ನು ಮಾಡುವವರು ರಾಜ್ಯಭಾರವನ್ನು ಮಾಡುವುದು’, ಎಂಬ ಅರ್ಥದಲ್ಲಿ ರಾಜ್ಯಕಾರಣದ ಅರ್ಥವಾಗುತ್ತದೆ.
೧. ಆದರ್ಶ ರಾಜ್ಯ
ರಾಜನನ್ನು ವಿಷ್ಣುವಿನ ಅಂಶವೆಂದು ತಿಳಿಯಲಾಗುತ್ತದೆ. ವಿಷ್ಣು ಎಂದರೆ ಧರ್ಮ. ‘ಧರ್ಮಾಚರಣಿ ರಾಜ ಪ್ರಜೆಗಳ ಹಿತಕ್ಕಾಗಿ ಧರ್ಮಾಧಿಷ್ಠಿತ ರಾಜ್ಯಭಾರ ಮಾಡಿದಾಗ ಅದು ಆದರ್ಶ ರಾಜ್ಯವಾಗುತ್ತದೆ !’ ರಾಜ ಅಥವಾ ಆಡಳಿತದವರು ರಾಜ್ಯವನ್ನು ನಡೆಸುತ್ತಾರೆ, ಅಂದರೆ ಪ್ರಜೆಗಳಿಂದ ತೆರಿಗೆ ವಸೂಲು ಮಾಡುತ್ತಾರೆ ಹಾಗೂ ಅದರಲ್ಲಿ ಪ್ರಜೆಗಳಿಗೆ ಸುರಕ್ಷೆ ಹಾಗೂ ಸೌಲಭ್ಯಗಳನ್ನು ನೀಡುತ್ತಾರೆ. ಅದರಲ್ಲಿ ಮಹತ್ವದ ವಿಷಯವೆಂದರೆ, ರಾಷ್ಟ್ರವನ್ನು ಬಾಹ್ಯ ಶತ್ರುಗಳಿಂದ ರಕ್ಷಣೆ ಮಾಡುವುದು ಹಾಗೂ ರಾಜ್ಯದ ಆಂತರಿಕ ಶತ್ರುಗಳು, ಕಳ್ಳರು, ದರೋಡೆಕೋರರು, ಅತ್ಯಾಚಾರಿ ಇತ್ಯಾದಿ ಸಮಾಜಕಂಟಕರಿಂದ ಪ್ರಜೆಗಳ ರಕ್ಷಣೆ ಮಾಡುವುದು. ಇದರಲ್ಲಿ ಪ್ರಜೆಗಳ ಪ್ರಾಣವನ್ನು ರಕ್ಷಣೆ ಮಾಡುವುದರೊಂದಿಗೆ ರಾಷ್ಟ್ರ ಮತ್ತು ಪ್ರಜೆಗಳ ಸಾಧನಸಂಪತ್ತು, ಅಂದರೆ ಮನೆ, ಭೂಮಿ, ಹಣ, ಇತ್ಯಾದಿಗಳ ರಕ್ಷಣೆ ಮಾಡುವುದು; ಇದರ ಜೊತೆಗೆ ಪ್ರಜೆಗಳಿಗೆ ಸಾರ್ವಜನಿಕ ಸೌಲಭ್ಯಗಳನ್ನು ಪೂರೈಸುವುದು, ಉದಾ. ರಸ್ತೆ, ವಿದ್ಯುತ್, ನೀರು, ಆರೋಗ್ಯ, ಶಿಕ್ಷಣ ಇತ್ಯಾದಿ.
೨. ಈಗಿನ ಅಸ್ತವ್ಯಸ್ಥವಾಗಿರುವ ವ್ಯವಸ್ಥೆ

ರಾಜಕಾರಣದ ೨ ಪದ್ಧತಿಗಳಲ್ಲಿ ಒಂದು ಜನಹಿತಕಾರಿ ಪಿತೃವಾತ್ಸಲ್ಯಯುಕ್ತ ರಾಜ್ಯಪದ್ಧತಿ ಹಾಗೂ ಇನ್ನೊಂದು ಪ್ರಜಾಪ್ರಭುತ್ವ ! ಪ್ರಸ್ತುತ ಪ್ರಜಾಪ್ರಭುತ್ವ ರಾಜ್ಯಪದ್ಧತಿಯಲ್ಲಿ ಪ್ರಜೆಗಳನ್ನೇ ರಾಜನೆಂದು ತಿಳಿಯಲಾಗುತ್ತದೆ; ಆದರೆ ನಿಜವಾಗಿ ನೋಡಿದರೆ ಪ್ರಜೆಗಳು ರಾಜ್ಯವನ್ನು ನಡೆಸಲಾರರು. ಪ್ರಜೆಗಳು ಆರಿಸಿ ಕಳುಹಿಸಿದ ಜನಪ್ರತಿನಿಧಿಗಳು ರಾಜ್ಯವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ಇದರಲ್ಲಿ ಒಂದು ವಿಷಯವೆಂದರೆ, ಒಮ್ಮೆ ಮತದಾನ ಮಾಡಿದ ನಂತರ ರಾಜ್ಯ ನಡೆಸುವ ಪೂರ್ಣ ಅಧಿಕಾರವನ್ನು ಜನರು ೫ ವರ್ಷಗಳ ವರೆಗೆ ಜನಪ್ರತಿನಿಧಿಗಳಿಗೆ ಕೊಡುತ್ತಾರೆ. ಅನಂತರ ಜನರಿಗೆ ಜನಪ್ರತಿನಿಧಿಗಳ ಮೇಲೆ ಯಾವುದೇ ಅಂಕುಶ ಇಲ್ಲದಿರುವುದರಿಂದ ಅವರು ಹೇಗೆ ರಾಜ್ಯವನ್ನು ಆಳುತ್ತಾರೆ, ಎಂಬುದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ನೋಡುತ್ತಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ಅವ್ಯವಸ್ಥೆ, ಭ್ರಷ್ಟಾಚಾರ, ದುರವಸ್ಥೆ ಅನುಭವಿಸಲು ಸಿಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯು ಸ್ವರಾಜ್ಯವನ್ನು ನೀಡುವುದಲ್ಲ, ಎಂಬುದು ಪದೇ ಪದೇ ಸಿದ್ಧವಾಗಿದೆ. ನಾವು ಅದನ್ನು ಅನುಭವಿಸುತ್ತಲೂ ಇದ್ದೇವೆ.
೩. ರಾಜಧರ್ಮವನ್ನು ಪಾಲಿಸುವ ರಾಜನು ಬೇಕು !
ಇದರ ಒಂದು ಮಹತ್ವದ ಕಾರಣವೆಂದರೆ, ರಾಜನಲ್ಲಿ ರಾಜ್ಯ ನಡೆಸುವ ಅರ್ಹತೆ ಇರಬೇಕು. ಮುಖ್ಯವೆಂದರೆ, ಅವನಿಗೆ ರಾಜಧರ್ಮವನ್ನು ಪಾಲಿಸಲು ಬರಬೇಕು. ಪ್ರಜೆಗಳನ್ನು, ರಾಷ್ಟ್ರ ಹಾಗೂ ರಾಷ್ಟ್ರೀಯ ಸಂಪತ್ತನ್ನು ರಕ್ಷಣೆ ಮಾಡಲು ಬೇಕಾಗುವ ಧೈರ್ಯ, ಶೌರ್ಯ ರಾಜನಲ್ಲಿರಬೇಕು; ಅಂದರೆ ರಾಜನು ಕ್ಷತ್ರಿಯ, ಜಿತೇಂದ್ರೀಯ ಹಾಗೂ ಧರ್ಮಾಚರಣಿ ಆಗಿರಬೇಕು, ಹೀಗಿದ್ದರೆ ಮಾತ್ರ ಅವನು ಸ್ವರಾಜ್ಯವನ್ನು ಕೊಡ ಬಹುದು. ಅವನ ರಾಜ್ಯದಲ್ಲಿ ಪ್ರಜೆಗಳು ಸುಖ-ಸಮಾಧಾನದಿಂದ ನಿರ್ಭಯವಾಗಿ ಜೀವಿಸಬಹುದು. ಧರ್ಮಾಚರಣೆ ಮಾಡ ಬಹುದು. ಆನಂದಪ್ರಾಪ್ತಿಗಾಗಿ ಸಾಧನೆ ಮಾಡಬಹುದು. ರಾಜ್ಯ ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಮಹತ್ವದ ಘಟಕವನ್ನು ಸಂಪೂರ್ಣ ದುರ್ಲಕ್ಷಿಸಲಾಗಿದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಜನರು ರಾಜ್ಯ ನಡೆಸಲಿಕ್ಕಿರುವುದಲ್ಲ, ರಾಜ್ಯವನ್ನು ಉಪಭೋಗಿಸಲು ಇರುತ್ತಾರೆ. ರಾಜ್ಯಭಾರವು ಜನರು ಸಾಮೂಹಿಕವಾಗಿ ನಡೆಸುವ ವಿಷಯವಲ್ಲ; ಏಕೆಂದರೆ, ರಾಜ್ಯಭಾರಕ್ಕೆ ಆವಶ್ಯಕ ಗುಣನಡತೆ ಪ್ರತಿಯೊಬ್ಬ ನಾಗರಿಕನಲ್ಲಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
೪. ಸಮಾಜದಲ್ಲಿನ ಎಲ್ಲ ಘಟಕಗಳ ಮತಗಳ ಮೌಲ್ಯ ಸಮಾನವೆಂದು ಹೇಳುವುದು ತಪ್ಪಾಗುತ್ತದೆ !
ಪ್ರಜಾಪ್ರಭುತ್ವದಲ್ಲಿ ಎಲ್ಲ ಪ್ರಜೆಗಳಿಗೆ ಸಮಾನ ಮತದಾನದ ಅಧಿಕಾರವನ್ನು ನೀಡಲಾಗಿದೆ ಹಾಗೂ ಈ ಅಂಶ ರಾಜ್ಯ ನಡೆಸುವ ವಿಷಯದಲ್ಲಿ ಅನೈಸರ್ಗಿಕವಾಗಿದೆ, ಅಂದರೆ ಸಾಮಾನ್ಯ ವ್ಯಸನಿ ವ್ಯಕ್ತಿ, ಕಾರ್ಮಿಕ, ಕೂಲಿ ಮಾಡುವವ, ಅವಿದ್ಯಾವಂತ, ವಿದ್ಯಾವಂತ, ಆಧುನಿಕ ವೈದ್ಯ, ಪ್ರಾಧ್ಯಾಪಕ, ವಕೀಲ, ಅಭಿಯಂತ, ಇವರೆಲ್ಲರ ಮತಗಳ ಮೌಲ್ಯ ಸಮಾನವಾಗಿದೆ. ಸಮಾಜದಲ್ಲಿನ ಬಹುಸಂಖ್ಯಾತ ಘಟಕ ಹಣ, ಮಾಂಸ, ಮದ್ಯ, ಇತ್ಯಾದಿ ಮೋಹಕ್ಕೆ ಬಲಿಯಾಗಿ ಯಾರಿಗೆ ಮತದಾನ ಮಾಡುತ್ತಾನೊ, ಅವನು ಶಾಸಕನೆಂದು ಆರಿಸಿ ಬರುತ್ತಾನೆ. ವಿದ್ಯಾವಂತರು, ಬುದ್ಧಿವಂತರು, ವಿಚಾರವಾದಿಗಳು ಎಷ್ಟೇ ಪ್ರಯತ್ನಿಸಿದರೂ ಯೋಗ್ಯ ಶಾಸಕರು ಆರಿಸಿ ಬರುವುದು ಅಸಾಧ್ಯವಾಗಿದೆ. ಸಮಾಜದಲ್ಲಿ ವಿದ್ಯಾವಂತರು, ವಿಚಾರವಾದಿಗಳು (ಚಿಂತಕರು), ರಾಷ್ಟ್ರದ ವಿಚಾರ ಮಾಡುವ ವ್ಯಕ್ತಿಗಳ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುವುದರಿಂದ ಅವರ ಮತದ ಮೌಲ್ಯ ಸಾಮಾನ್ಯ ವ್ಯಕ್ತಿಯ ಮತದಷ್ಟೆ ಇರುವುದರಿಂದ ರಾಷ್ಟ್ರಪ್ರೇಮಿ, ಧರ್ಮನಿಷ್ಠ ಯೋಗ್ಯ ಶಾಸಕರು ಆರಿಸಿ ಬರುವ ಸಂಭವ ಕಡಿಮೆಯಿರುತ್ತದೆ !
೫. ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆ ಅನಿವಾರ್ಯ !
ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಹೆಚ್ಚು ಹಣ ಹೂಡುವ ಕ್ಷಮತೆಯುಳ್ಳ ವ್ಯಕ್ತಿಯ ಕೈಗೆ ಅಧಿಕಾರದ ಚುಕ್ಕಾಣಿ ಹೋಗುತ್ತದೆ. ಇಂತಹ ವ್ಯಕ್ತಿ ಆರಿಸಿ ಬಂದನಂತರ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಖರ್ಚು ಮಾಡಿದ ಹಣ, ಕಾರ್ಯಕರ್ತರಿಗಾಗಿ ಮಾಡಿದ ಖರ್ಚು, ಗೆದ್ದು ಬರಬೇಕೆಂದು ವಿವಿಧ ರೀತಿಯಲ್ಲಿ ಮಾಡಿದ ಎಲ್ಲ ಖರ್ಚುಗಳನ್ನು ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚು ಹಣ ಗಳಿಸಲು ಅಧಿಕಾರದ ಅವಧಿಯಲ್ಲಿ ಪ್ರಯತ್ನಿಸುತ್ತಾನೆ. ಇದರಲ್ಲಿ ದೇಶವನ್ನು ಕೊಳ್ಳೆ ಹೊಡೆಯಲಾಗುತ್ತದೆ. ದೇಶದ ಪ್ರಗತಿ ಹಾಗೂ ಭದ್ರತೆಯ ಕಡೆಗೆ ದುರ್ಲಕ್ಷ ಮಾಡುವುದರಿಂದ ದೇಶ ದುರ್ಬಲವಾಗುತ್ತದೆ. ಇಂತಹ ನಿರರ್ಥಕ ಪ್ರಜಾಪ್ರಭುತ್ವವು ಜನಹಿತಕಾರಿಯಾಗಿದೆಯೆ ? ಎಂಬುದನ್ನು ಈಗ ವಿಚಾರ ಮಾಡುವ ಕಾಲ ಬಂದಿದೆ. ‘ಭಾರತ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ’ ಎಂದು ನಾವು ಹೇಳುತ್ತೇವೆ. ‘ಕಳೆದ ೭೭ ವರ್ಷಗಳಲ್ಲಿ ಈ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಭಾರತ ಜಗತ್ತಿನ ಅತೀ ಹೆಚ್ಚು ಸಮೃದ್ಧ, ಸುಖೀ, ಸುರಕ್ಷಿತ ಹಾಗೂ ಬಲಶಾಲಿ ದೇಶವಾಗಿರಬೇಕಿತ್ತು, ಹಾಗೆ ಆದರೆ ಮಾತ್ರ ಈ ವ್ಯವಸ್ಥೆ ಯಶಸ್ವಿಯಾಗಿದೆ’, ಎಂದು ಹೇಳಬಹುದಾಗಿತ್ತು; ಆದರೆ ವಾಸ್ತವ ಹಾಗಿಲ್ಲ. ತದ್ವಿರುದ್ಧ ಸಂಪೂರ್ಣ ವ್ಯವಸ್ಥೆ ಹದಗೆಟ್ಟಿರುವುದರಿಂದ ಅದನ್ನು ಬದಲಾಯಿಸುವುದು ಅತ್ಯಂತ ಆವಶ್ಯಕವಾಗಿದೆ; ಆದ್ದರಿಂದಲೇ ಸ್ವರಾಜ್ಯ ಸ್ಥಾಪನೆಗಾಗಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಗೆ ಬೇರೆ ಪರ್ಯಾಯವಿಲ್ಲ.
೬. ಹಿಂದೂಗಳು ಸಂಘಟಿತರಾಗದಿರುವುದರ ಪರಿಣಾಮ

‘ಜನರಿಗೆ ಅವರವರ ಯೋಗ್ಯತೆಗನುಸಾರ ಶಾಸಕರು ಸಿಗುತ್ತಾರೆ’, ಎಂದು ಬ್ರಿಟನ್‌ನ ಪ್ರಧಾನಮಂತ್ರಿ ವಿನ್ಸ್ಟನ್ ಚರ್ಚಿಲ್ ಹೇಳಿದ್ದರು. ಜನರಿಗೆ ಇಂತಹ ಸ್ಥಿತಿ ಬರಲು ಮುಖ್ಯ ಕಾರಣ, ಜನರಿಗೆ ನೀಡಿರುವ ಪ್ರಜಾಪ್ರಭುತ್ವದ ಅಧಿಕಾರವನ್ನು ಅವರು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳದಿರುವುದು. ಈ ವ್ಯವಸ್ಥೆಯ ಜವಾಬ್ದಾರಿಯನ್ನು ಅಲ್ಲಗಳೆದು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ; ಆದ್ದರಿಂದಲೇ ಪ್ರತಿಯೊಬ್ಬ ಹಿಂದೂ ರಾಜಕಾರಣದಿಂದ ದೂರ ಸರಿಯುವುದು ದೊಡ್ಡ ತಪ್ಪಾಗುತ್ತದೆ. ನಾವು ಎಷ್ಟೇ ಹೇಳಿದರೂ ರಾಜಕಾರಣದಿಂದ ನಮಗೆ ಸ್ವತಂತ್ರ ಹಾಗೂ ವಿಭಕ್ತರಾಗಿರಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಿಂದಾಗಿ ಅದು ನಮ್ಮ ಜೀವನದ ಅವಿಭಾಜ್ಯ ಘಟಕವಾಗಿದೆ. ರಾಜಕಾರಣದಿಂದ ದೂರ ಸರಿದು ವಿಭಕ್ತರಾಗಿರುವುದೆಂದರೆ ನಿದ್ರಾವಸ್ಥೆ ಅಥವಾ ‘ನಾನು ಮತ್ತು ನನ್ನ ಕುಟುಂಬ ಎಂಬ ಆಘಾತಕಾರಿ ವೃತ್ತಿಯಲ್ಲಿರುವುದು; ಇದನ್ನೇ ಅಧಿಕಾರಲೋಲುಪ, ಸ್ವಾರ್ಥಿ ರಾಜಕಾರಣಿಗಳು ದುರುಪಯೋಗಿಸಿಕೊಳ್ಳುತ್ತಿದ್ದಾರೆ. ಕಳೆದ ೭೭ ವರ್ಷಗಳಿಂದ ನಾವು ಹಿಂದೂಗಳು ಸಂಘಟಿತರಾಗದಿರುವುದರಿಂದ ನಮಗೆ ಹಾನಿಯಾಗುತ್ತಿದೆ. ರಾಷ್ಟ್ರ ಮತ್ತು ಧರ್ಮದ ಕುರಿತು ನಾವು ಜಾಗರೂಕರಾಗಿಲ್ಲದ ಕಾರಣ ಅದೆಷ್ಟೊ, ಭಯಾನಕ ಕಾನೂನುಗಳನ್ನು ಮಾಡಿ ನಮ್ಮ ಮೇಲೆ ಹೇರಲಾಯಿತು, ಅದರಲ್ಲಿ ೪೨ ನೇ ಸಂವಿಧಾನ ಸುಧಾರಣೆಯಿಂದ ಭಾರತವನ್ನು ‘ಜಾತ್ಯತೀತ ರಾಷ್ಟ್ರವೆಂದು ಘೋಷಣೆ ಮಾಡುವುದು, ಹಿಂದೂಗಳಿಗೆ ಶಾಲೆಗಳಲ್ಲಿ ಧರ್ಮಗ್ರಂಥಗಳ ಶಿಕ್ಷಣ ಪಡೆಯಲು ಅನುಮತಿ ಇಲ್ಲದಿರುವುದು, ‘ಮುಸ್ಲಿಮ್ ಪರ್ಸನಲ್ ಲಾವನ್ನು ಶಾಶ್ವತವಾಗಿಡುವುದು, ಅಲ್ಪಸಂಖ್ಯಾತ ಆಯೋಗ ಕಾನೂನು ೧೯೯೧, ಪೂಜೆ ಮತ್ತು ಧಾರ್ಮಿಕ ಸ್ಥಳ ಮಸೂದೆ ೧೯೯೨, ವಕ್ಫ್ ಮಸೂದೆ ೧೯೯೫ ಮತ್ತು ಇಂತಹ ಅನೇಕ ಕಾನೂನುಗಳ ಸಮಾವೇಶವಿದೆ.
– ಶ್ರೀ. ಗೋವಿಂದ ಭಾರದ್ವಾಜ, ರತ್ನಾಗಿರಿ (೨೪.೪.೨೦೨೫)
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ರಾಜ್ಯದಲ್ಲಿ ಮುಸಲ್ಮಾನರಿಗೆ 5 ಸಚಿವ ಸ್ಥಾನ ನೀಡದಿದ್ದರೆ ನಮ್ಮ ಶಕ್ತಿಯನ್ನು ತೋರಿಸುತ್ತೇವೆ !
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!