ಇತ್ತೀಚೆಗೆ ತೌಹಿತ ಜಮಾತ್ನ ಒಬ್ಬ ಮತಾಂಧನು ತಮಿಳುನಾಡಿನ ಥಲ್ಲಾಕುಲಮ್ ಮತ್ತು ಮಧುರೈನಲ್ಲಿ ಅನುಮತಿರಹಿತ ಪ್ರತಿಭಟನಾ ಮೆರವಣಿಗೆಗಳನ್ನು ಆಯೋಜಿಸಿದ್ದನು. ಇದರಲ್ಲಿ ಆ ಮತಾಂಧನು ಎಲ್ಲಕ್ಕಿಂತ ಮೊದಲು ನ್ಯಾಯವ್ಯವಸ್ಥೆಯನ್ನು ಟೀಕಿಸಿದನು. ಅಲ್ಲದೇ ಭಯೋತ್ಪಾದಕ ಮಹಮ್ಮದ ಅಫ್ಜಲ್‌ನನ್ನು ಗಲ್ಲಿಗೇರಿಸಿದ, ರಾಮಜನ್ಮಭೂಮಿಯ ತೀರ್ಪು ನೀಡಿದ ಹಾಗೂ ಹಿಜಾಬ್ ಕುರಿತ ತೀರ್ಪು ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಮತ್ತು ಆ ತೀರ್ಪನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಕೀಳು ಮಟ್ಟದಲ್ಲಿ ಟೀಕಿಸಿದನು. ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಗೋರಖನಾಥ ಪೀಠದ ಮಹಂತರಾದ ಯೋಗಿ ಆದಿತ್ಯನಾಥರ ಉಡುಪನ್ನೂ ಟೀಕಿಸಿದನು.
೧. ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಿಂದ ಅಪರಾಧ ದಾಖಲು
ಈ ಸಭೆಯಲ್ಲಿ ಕುತಂತ್ರಿ ಮತಾಂಧನು ಕ್ರೈಸ್ತ ಮತ್ತು ಹಿಂದೂ ಗಳನ್ನೂ ಟೀಕಿಸಿದನು; ಆದರೆ ಉದ್ದೇಶಪೂರ್ವಕವಾಗಿ ಸಿಕ್ಖ್ ಬಾಂಧವರನ್ನು ಹಿಂದೂಗಳಿಂದ ಬೇರ್ಪಡಿಸಲು ಪ್ರಯತ್ನಿಸಿದನು. ಅವನು ಏನು ಹೇಳುತ್ತಾನೆಂದರೆ, ಸಿಕ್ಖ್ ಧರ್ಮೀಯರು ತಲೆಗೆ ಪೇಟ ಕಟ್ಟುತ್ತಾರೆ ಹಾಗೂ ಅದೇ ರೀತಿಯ ಬಟ್ಟೆಯನ್ನು ಮುಸಲ್ಮಾನ ಮಹಿಳೆಯರು ತಮ್ಮ ತಲೆಯ ಮೇಲೆ ಹಿಜಾಬ್ ಎಂದು ಬಳಸುತ್ತಾರೆ ಮತ್ತು ಅದಕ್ಕಾಗಿಯೇ ಅವರೆಲ್ಲರೂ ಒಂದೇ ಅಥವಾ ಅವರಲ್ಲಿ ಸಾಮ್ಯತೆ ಇದೆ. ಸ್ವಲ್ಪದರಲ್ಲಿ ಹೇಳುವುದಾದರೆ, ಸಿಕ್ಖ್‌ರನ್ನು ಹಿಂದೂಗಳಿಂದ ಬೇರ್ಪಡಿಸಿ, ತಮ್ಮ ಸ್ವಾರ್ಥ ಸಾಧನೆಗಾಗಿ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸ ಲಾಗುತ್ತಿದೆ. ಅರ್ಜಿದಾರ ಮತಾಂಧನು ತನ್ನ ಪ್ರಚೋದನಕಾರಿ ಭಾಷಣದಲ್ಲಿ ದೇಶ, ಹಿಂದೂ, ನ್ಯಾಯಾಂಗದ ವಿರುದ್ಧ ಟೀಕೆ ಮತ್ತು ದ್ವೇಷವನ್ನು ವ್ಯಕ್ತಪಡಿಸಿದ್ದನು. ಈ ಮತಾಂಧನು ದೊಡ್ಡ ಪ್ರಮಾಣದ ಹಿಂಸಾಚಾರ ಮತ್ತು ಗಲಭೆಗಳು ಸಂಭವಿಸುವ ರೀತಿಯಲ್ಲಿ ಭಾಷಣವನ್ನು ಮಾಡಿದ್ದರಿಂದ ಒಟ್ಟು ೩ ಕಡೆ ಅಪರಾಧಗಳು ದಾಖಲಾಗಿವೆ. ತಮಿಳುನಾಡಿನ ಥಲ್ಲಾಕುಲಂ ಮತ್ತು ಆದಿರಾಮಪಟ್ಟಣಂ ತಂಜಾವೂರು ಇಲ್ಲಿ ಎರಡು ಅಪರಾಧಗಳು ಹಾಗೂ ಮೂರನೇ ಅಪರಾಧ ಬೆಂಗಳೂರಿನಲ್ಲಿ ದಾಖಲಾಗಿದೆ.

೨. ಅಪರಾಧ ರದ್ದತಿಗೆ ನಿರಾಕರಿಸಿ, ಮತಾಂಧನಿಗೆ ಛೀಮಾರಿ ಹಾಕಿದ ಸರ್ವೋಚ್ಚ ನ್ಯಾಯಾಲಯ !
೩ ಕಡೆ ಅಪರಾಧ ದಾಖಲಾದ ಕಾರಣ ಜಿಹಾದಿ ವ್ಯಕ್ತಿಯು ನೇರವಾಗಿ ಕಲಂ ೩೨ ರ ಅಡಿಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದನು. ಅದರಲ್ಲಿ ಮುಖ್ಯವಾಗಿ ‘ಎಲ್ಲಾ ಪ್ರಕರಣಗಳನ್ನು ತಮಿಳುನಾಡಿಗೆ ವರ್ಗಾಯಿಸಬೇಕು, ಮೊದಲ ಪ್ರಕರಣ ದಾಖಲಾದ ನಂತರದ ಎರಡೂ ಪ್ರಕರಣ ಗಳನ್ನು ರದ್ದುಗೊಳಿಸಬೇಕು ಎಂದು ಕೋರಿದ್ದನು; ಆದರೆ ಸರ್ವೋಚ್ಚ ನ್ಯಾಯಾಲಯವು ಮತಾಂಧನು ನೀಡಿರುವ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು; ಏಕೆಂದರೆ ಈ ಮತಾಂಧ ವ್ಯಕ್ತಿಯು ಸಂಸತ್ತಿನ ಮೇಲೆ ದಾಳಿ ಮಾಡಿದ ಮಹಮ್ಮದ್ ಅಫ್ಜಲ್‌ನನ್ನು ಹೊಗಳುತ್ತಾನೆ, ಅದರೊಂದಿಗೆ ಅವನಿಗೆ ಗಲ್ಲುಶಿಕ್ಷೆಯ ಆದೇಶ ನೀಡಿದ ಮತ್ತು ಇತರ ಪ್ರಕರಣಗಳ ನ್ಯಾಯಮೂರ್ತಿಗಳು ಹಾಗೂ ನ್ಯಾಯಾಂಗದ ಬಗ್ಗೆ ಆ ಮತಾಂಧನು ಕೀಳು ಮಟ್ಟದಲ್ಲಿ ಟೀಕಿಸಿದ್ದಾನೆ. ಈ ಕಾರಣದಿಂದ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ‘ಇಂತಹ ವ್ಯಕ್ತಿಯ ವಿರುದ್ಧದ ಪ್ರಕರಣಗಳನ್ನು ರದ್ದು ಗೊಳಿಸಲು ನಾವು ಸಿದ್ಧರಿಲ್ಲ; ಆದರೆ ಮೂರೂ ಪ್ರಕರಣಗಳನ್ನು ಥಲ್ಲಾಕುಲಂ ಮತ್ತು ಮಧುರೈಗೆ ವರ್ಗಾಯಿಸ ಬೇಕು ಮತ್ತು ಅದರ ವಿಚಾರಣೆಯನ್ನು ಒಟ್ಟಿಗೆ ನಡೆಸಬೇಕು ಎಂದು ಹೇಳಿತು. ಸರ್ವೋಚ್ಚ ನ್ಯಾಯಾಲಯವು ಮತಾಂಧನ ಒಂದು ಮನವಿಯನ್ನು ಮಾತ್ರ ಪುರಸ್ಕರಿಸಿತು.
೩. ಸರ್ವೋಚ್ಚ ನ್ಯಾಯಾಲಯವು ಮತಾಂಧನಿಗೆ ದಂಡ ವಿಧಿಸುವುದು ಅಪೇಕ್ಷಿತವಿತ್ತು !
ಇದರಿಂದ ಒಂದು ತೀರ್ಮಾನ ಗಮನಕ್ಕೆ ಬರುತ್ತದೆ ಮತ್ತು ಅದನ್ನು ನಾವು ಪ್ರತಿ ಬಾರಿಯೂ ಅನುಭವಿಸುತ್ತೇವೆ, ಪ್ರಜಾಪ್ರಭುತ್ವವು ಅಂಗೀಕರಿಸಿದ ನಾಲ್ಕೂ ಸ್ತಂಭಗಳು ಮತಾಂಧರ ಪರವಾಗಿಯೇ ಕೃತಿ ಮಾಡಿ ಅವರನ್ನು ಹೊಗಳುತ್ತವೆ; ಇತರ ಸಮಯದಲ್ಲಿ ಈ ಮತಾಂಧರು ನ್ಯಾಯಾಂಗ, ಸಂಸತ್ತು, ಶಾಸಕಾಂಗ, ಪತ್ರಿಕೋದ್ಯಮದ ವಿರುದ್ಧ ನಿರಂತರವಾಗಿ ವಿಷ ಕಾರುತ್ತಾರೆ. ನಿಜ ಹೇಳಬೇಕೆಂದರೆ, ಸರ್ವೋಚ್ಚ ನ್ಯಾಯಾಲಯವು ತನ್ನ ಮೇಲಾದ ಟೀಕೆಗಳಿಗಾಗಿ ಮತಾಂಧನ ಅರ್ಜಿಯನ್ನು ತಿರಸ್ಕರಿಸಬೇಕಾಗಿತ್ತು ಮತ್ತು ಅವನಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಬೇಕಾಗಿತ್ತು, ಆಗ ಅಂತಹ ವ್ಯಕ್ತಿಗಳ ಅನಿಯಂತ್ರಿತ ಹೇಳಿಕೆಗಳಿಗೆ ತನ್ನಿಂತಾನೆ ಕಡಿವಾಣ ಬೀಳುತ್ತಿತ್ತ್ತು. ಶ್ರೀಕೃಷ್ಣಾರ್ಪಣಮಸ್ತು |
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ, ಉಚ್ಚ ನ್ಯಾಯಾಲಯ (೫.೫.೨೦೨೫)
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
|| ಶ್ರೀ ರಾಜಮಾತಂಗಿ ಮಹಾಯಾಗ ||