7. ಪ.ಪೂ. ಭಕ್ತರಾಜ ಮಹಾರಾಜರ ಪ್ರಥಮ ದರ್ಶನ !
7 ಅ. ಪ.ಪೂ. ಅಣ್ಣಾ ಅವರು ಪ.ಪೂ. ಭಕ್ತರಾಜ ಮಹಾರಾಜರಿಗೆ ಡಾಕ್ಟರರನ್ನು ಪರಿಚಯಿಸುವಾಗ `ಇವರು ಆಧ್ಯಾತ್ಮದ ಬಗ್ಗೆ ಒಂದು ಪುಸ್ತಕ ಬರೆದಿದ್ದಾರೆ’ ಎಂದು ಹೇಳಿದರು ಮತ್ತು ಮಹಾರಾಜರು `ನಾವು ಅವರಿಂದ ಕಲಿಯಬೇಕಾಗುವುದು’ ಎಂದು ಹೇಳಿದರು : ಮರುದಿನ ನಾವು ಓಂಕಾರೇಶ್ವರಕ್ಕೆ ಹೋದೆವು. ರಾತ್ರಿ ಹಿಂದಿರುಗಿದ ನಂತರ ಪ.ಪೂ. ಅಣ್ಣಾ ಅವರು, `ನಾಳೆ ಇನ್ನೊಬ್ಬ ಸತ್ಪುರುಷರ ದರ್ಶನ ಮಾಡಬೇಕು’ ಎಂದರು. ಮರುದಿನ ನಾವು `ರಾಜೇಂದ್ರನಗರ’ ಹತ್ತಿರದ ಒಂದು ಆಶ್ರಮಕ್ಕೆ ಹೋದೆವು. `23 ಜುಲೈ 1987 ರಂದು ನಮ್ಮ ಜೀವನದ ಅತ್ಯುತ್ತಮ ದಿನವಾಗಲಿದೆ’ ಎಂಬ ಕಲ್ಪನೆ ನಮಗೆ ಇರಲಿಲ್ಲ. ದಿಂಡಿ ದ್ವಾರದಿಂದ ಒಳಗೆ ಪ್ರವೇಶಿಸಿದ ನಂತರ ಪ.ಪೂ. ಅಣ್ಣಾ ಅವರ ಸಹೋದರ ಯಾರನ್ನೋ, `ಮಹಾರಾಜರು ಎಲ್ಲಿದ್ದಾರೆ ?’ ಎಂದು ಕೇಳಿದರು. ಆಗ ಅವರು ನಮ್ಮನ್ನು ಒಂದು ಚಿಕ್ಕ ಮನೆಯ ಕಡೆಗೆ ಕರೆದುಕೊಂಡು ಹೋದರು. ಅಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಮೊದಲ ದರ್ಶನವಾಯಿತು. ಪ.ಪೂ. ಅಣ್ಣಾ ಕರಂದಿಕರ ಮತ್ತು ಪ.ಪೂ. ಭಕ್ತರಾಜ ಮಹಾರಾಜರಿಗೆ ಪರಿಚಯವಿದ್ದ ಕಾರಣ ಅವರನ್ನು ನೋಡಿ ಮಹಾರಾಜರಿಗೆ ಬಹಳ ಸಂತೋಷ ವಾಯಿತು. ಪ.ಪೂ. ಕರಂದಿಕರ ಅವರು ನಮ್ಮನ್ನು ಪರಿಚಯಿಸಿದರು. ನಾವೆಲ್ಲರೂ ಅವರಿಗೆ ನಮಸ್ಕರಿಸಿದೆವು. ಪ.ಪೂ. ಕರಂದಿಕರ ಅವರು ಡಾಕ್ಟರ ಆಠವಲೆ ಅವರು ಅಧ್ಯಾತ್ಮದ ಬಗ್ಗೆ ಪುಸ್ತಕ ಬರೆದಿದ್ದಾರೆ ಎಂದು ಹೇಳಿದರು. ಆಗ ಮಹಾರಾಜರು, “ಹೌದಾ, ಹಾಗಾದರೆ ನಾವು ಅವರಿಗೆ ಏನು ಹೇಳುವುದು ? ಅವರಿಂದಲೇ ನಾವು ಕಲಿಯಬೇಕು’’ ಎಂದರು. ಆಗ `ನಮ್ಮ ಮುಂದೆ ಮಾನವರೂಪದಲ್ಲಿ ಮೂರ್ತಿಮಂತ ಅಧ್ಯಾತ್ಮವೇ ನಿಂತಿದೆ’ ಎಂದು ಅಜ್ಞಾನಿಗಳಾದ ನಮಗೆಲ್ಲಿ ಗೊತ್ತಿತ್ತು !

7 ಆ. ಮರುದಿನ ಉಜ್ಜೈನಿಗೆ ಹೋಗಿ ಬರುವುದು ಮತ್ತು ಮೂರನೇ ದಿನ ಬೆಳಗ್ಗೆ ಪ.ಪೂ. ರಾಮಾನಂದ ಮಹಾರಾಜರು ಜಿಲೇಬಿ ಬುಟ್ಟಿಯನ್ನು ಹಿಡಿದುಕೊಂಡು ವಿಶ್ರಾಂತಿಗೃಹಕ್ಕೆ ಬರುವುದು : ಮರುದಿನ ಬೆಳಗ್ಗೆ ಉಜ್ಜೈನಿಯಲ್ಲಿ ಮಹಾಕಾಳೇಶ್ವರನ ದರ್ಶನಕ್ಕೆ ಹೋಗಲು ನಿರ್ಧರಿಸಲಾಯಿತು. ಅದರಂತೆ ನಾವು ದರ್ಶನ ಮಾಡಿ ಬಂದೆವು. ಮೂರನೇ ದಿನ ಬೆಳಗ್ಗೆ ವಿಶ್ರಾಂತಿಗೃಹದ ಕೋಣೆಯ ಬಾಗಿಲು ತಟ್ಟಿದ ಸದ್ದು ಕೇಳಿಸಿತು; ಆದ್ದರಿಂದ ನಾನು ಬಾಗಿಲು ತೆರೆದೆನು, ಆಗ ಪ.ಪೂ. ರಾಮಾನಂದ ಮಹಾರಾಜರು ಕೈಯಲ್ಲಿ ಬುಟ್ಟಿಯನ್ನು ಹಿಡಿದುಕೊಂಡು ನಿಂತಿದ್ದರು. ನಾನು ಅವರನ್ನು ಒಳಗೆ ಕರೆದೆನು. ಅವರು, “ಪ.ಪೂ. ಭಕ್ತರಾಜ ಮಹಾರಾಜರು ಜಿಲೇಬಿ ಕಳುಹಿಸಿದ್ದಾರೆ, ಹಾಗೆಯೇ ಮತ್ತೆ ಭೇಟಿಯಾಗಲು ಕರೆದಿದ್ದಾರೆ’’ ಎಂದರು. ನಾನು ಆ ವಿಷಯವನ್ನು ಪ.ಪೂ. ಅಣ್ಣಾ ಕರಂದಿಕರ ಅವರಿಗೆ ತಿಳಿಸಿದೆನು.
7 ಇ. ಶ್ರೀ. ಕಮಲಾಕರ ದೇಸಾಯಿಯವರಿಗೆ ಪ.ಪೂ. ಧಾಂಡೇಶಾಸ್ತ್ರಿಗಳಿಂದ ಗುರುಮಂತ್ರ ಸಿಗುವುದು : ಮರುದಿನ ಬೆಳಗ್ಗೆ ನಾವು ಮತ್ತೆ ಪ.ಪೂ. ಧಾಂಡೇಶಾಸ್ತ್ರಿಗಳ ಬಳಿಗೆ ಹೋದೆವು. ಆಗಲೂ ಅವರು ತಮ್ಮ ಶಿಷ್ಯನ ಮನೆಗೆ ಹೋಗಿದ್ದರು; ಆದ್ದರಿಂದ ನಾವೂ ಶಿಷ್ಯನ ಮನೆಗೆ ಹೋದೆವು. ಪ.ಪೂ. ಅಣ್ಣಾ ಅವರು ಶ್ರೀ. ಕಮಲಾಕರ ದೇಸಾಯಿ ಅವರಿಗೆ ತೆಂಗಿನಕಾಯಿ ಮತ್ತು ದಕ್ಷಿಣೆ ತೆಗೆದುಕೊಂಡು ಮೇಲೆ ಹೋಗಿ ಪ.ಪೂ. ಧಾಂಡೇಶಾಸ್ತ್ರಿಗಳಿಗೆ `ನಮ್ಮನ್ನು ನಿಮ್ಮ ಚರಣಗಳಲ್ಲಿ ತೆಗೆದುಕೊಳ್ಳಿರಿ’ ಎಂದು ವಿನಂತಿಸಲು ಹೇಳಿದರು. ಅದರಂತೆ ಅವರು ಅವರ ಬಳಿಗೆ ಹೋದರು. ಆಗ ನಾವು ಕೆಳಗೆ ನಿಂತಿದ್ದೆವು. ಸ್ವಲ್ಪ ಸಮಯದ ನಂತರ ಪ.ಪೂ. ಅಣ್ಣಾ ಅವರು, “ಕೆಲಸವಾಯಿತು’’ ಎಂದರು. ಅಷ್ಟರಲ್ಲಿ ಮೇಲಿನಿಂದ ಕರೆ ಬಂತು ಮತ್ತು ಎಲ್ಲರನ್ನೂ ಮೇಲೆ ಕರೆದರು. ಶ್ರೀ. ಕಮಲಾಕರ ದೇಸಾಯಿ ಅವರಿಗೆ ಪ.ಪೂ. ಧಾಂಡೇಶಾಸ್ತ್ರಿ ಗಳಿಂದ ಗುರುಮಂತ್ರ ದೊರೆಕಿತ್ತು. ಸ್ವಲ್ಪ ಸಮಯ ಅಲ್ಲಿ ಚರ್ಚೆ ಮಾಡಿ ನಾವು ವಿಶ್ರಾಂತಿಗೃಹಕ್ಕೆ ಹಿಂತಿರುಗಿದೆವು – ಡಾ. (ಸೌ.) ಕುಂದಾ ಜಯಂತ ಆಠವಲೆ (23.4.2025)
| ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿರಿ – https://sanatanprabhat.org/kannada/147811.html |

ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !