ರಾಷ್ಟ್ರೋತ್ಥಾನದ ಜವಾಬ್ದಾರಿ ಮತ್ತೆ ಹೊರಬೇಕಾಗಿದೆ !

ಇತರ ದೇಶಗಳು ಎಷ್ಟೇ ಆರ್ಥಿಕ, ವೈಜ್ಞಾನಿಕ, ಭೌತಿಕ ಪ್ರಗತಿಯನ್ನು ಸಾಧಿಸಿದ್ದರೂ, ಆತ್ಮಶಾಂತಿಗಾಗಿ ಜಗತ್ತಿನಲ್ಲಿ ಭಾರತ ಬಿಟ್ಟರೆ ಬೇರೆ ಆಯ್ಕೆಯಿಲ್ಲ. ವಿಶ್ವದಲ್ಲಿ ಭಾರತವೇ ಆತ್ಮಶಾಂತಿಯ ಏಕೈಕ ತಾಣವಾಗಿದೆ. ಇದಕ್ಕೆ ಕಾರಣ ಭಾರತದ ‘ಆಧ್ಯಾತ್ಮಿಕತೆಯಾಗಿದೆ’ ! ಅದಕ್ಕಾಗಿಯೇ ಭಾರತವನ್ನು ವಿಶ್ವದ ‘ಆಧ್ಯಾತ್ಮಿಕ ಗುರು’ ಎಂದು ಕರೆಯಲಾಗುತ್ತದೆ ಮತ್ತು ಇದರ ಮೂಲ ಗುರು-ಶಿಷ್ಯ ಪರಂಪರೆಯಲ್ಲಿದೆ. ಸದ್ಯದ ಸ್ಥಿತಿಯಲ್ಲಿ ಭಾರತ ಸೇರಿದಂತೆ ಎಲ್ಲಾ ದೇಶಗಳು ಹಿಂಸಾಚಾರ, ಅತ್ಯಾಚಾರ, ಭ್ರμಟ್Áಚಾರ, ಪರಿಸರ ಹಾನಿ, ಮಾಲಿನ್ಯ ಮುಂತಾದ ಸಮಸ್ಯೆಗಳಿಂದ ಬಳಲುತ್ತಿವೆ. ಇದರಿಂದ ಹೊರಬರಲು ಶಾಶ್ವತ ಮಾರ್ಗ ಗುರು-ಶಿಷ್ಯ ಪರಂಪರೆಯಲ್ಲಿದೆ. ಇದಕ್ಕೆ ಕಾರಣ ಭಾರತೀಯ ಶಿಕ್ಷಣದ ಉದ್ದೇಶ ‘ಹಣ ಸಂಪಾದನೆ’ ಎಂದಿಗೂ ಆಗಿರಲಿಲ್ಲ. ಭಾರತೀಯ ಶಿಕ್ಷಣವು ಜ್ಞಾನಾರ್ಜನೆ ಆಧಾರಿತವಾಗಿತ್ತು. ಸ್ವಾಮಿ ಸ್ವರೂಪಾನಂದರು ಹೇಳುತ್ತಾರೆ, ‘ಸೂರ್ಯನಂತೆ ತೇಜಸ್ಸನ್ನು ನೀಡುವಂತಹ, ಅಜ್ಞಾನವನ್ನು ನಾಶಪಡಿಸುವಂತಹ, ಶಾಶ್ವತ ಸುಖವನ್ನು ನೀಡುವಂತಹ ವಿದ್ಯೆಯನ್ನು ಇಲ್ಲಿ ಪಡೆಯೋಣ.’ ಪಾಶ್ಚಿಮಾತ್ಯರು ಭೌತಿಕವಾಗಿ ಎಷ್ಟೇ ಪ್ರಗತಿ ಸಾಧಿಸಿದ್ದರೂ, ಅದರಿಂದ ಗಳಿಸಿದ ಹಣವನ್ನು ತಮ್ಮ ಭೌತಿಕ ಸುಖಕ್ಕಾಗಿ ಮಾತ್ರ ಖರ್ಚು ಮಾಡಲು ಸೀಮಿತರಾಗಿದ್ದಾರೆ; ಆದರೆ ಭಾರತೀಯ ಜ್ಞಾನವು ಭೌತಿಕ ಸುಖದ ಆಚೆಗಿನ ಆತ್ಮಜ್ಞಾನಕ್ಕೆ ಕರೆದೊಯ್ಯುತ್ತದೆ. ಜೀವನದಲ್ಲಿನ ಏಳುಬೀಳುಗಳು ಕರ್ಮದಿಂದ ಉಂಟಾಗುತ್ತವೆ ಮತ್ತು ಅದರಿಂದ ಹೊರಬರಲು ಕ್ರಿಯಮಾಣವನ್ನು ಬಳಸಬೇಕಾಗುತ್ತದೆ ಮತ್ತು ಈ ಆತ್ಮಜ್ಞಾನವು ಸಾಧನೆಯ ಮೂಲಕ ದೊರೆಯುತ್ತದೆ ಎಂಬ ಬೋಧನೆಯನ್ನು ಕೇವಲ ಭಾರತೀಯ ಸಂಸ್ಕ್ರತಿಯು ನೀಡುತ್ತದೆ. ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳ ಶೇಕಡಾವಾರು ಪ್ರಮಾಣಕ್ಕೆ ಮಹತ್ವ ನೀಡಿದರೆ, ಭಾರತೀಯ ಸಂಸ್ಕೃತಿಯು ಸಂಸ್ಕಾರಗಳಿಗೆ ಮಹತ್ವ ನೀಡುತ್ತದೆ. ಶೇಕಡಾ ನೂರರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿ ವ್ಯಸನಿಯಾಗಿದ್ದರೆ, ಹಿರಿಯರನ್ನು ಗೌರವಿಸದಿದ್ದರೆ, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಂದ ಏನು ಪ್ರಯೋಜನ ? ಭಾರತದಲ್ಲಿ ಈ ಜ್ಞಾನವು ಪ್ರಾಚೀನ ಕಾಲದಿಂದ ಗುರುಗಳಿಂದ ಶಿಷ್ಯರಿಗೆ ಲಭಿಸುತ್ತಿತ್ತು. ಭಾರತೀಯ ಪುರುμÀರಲ್ಲಿನ ತೇಜಸ್ಸು, ಸಾಮರ್ಥ್ಯ, ಕ್ಷಾತ್ರವೃತ್ತಿ ಮತ್ತು ಮಹಿಳೆಯರ ಘನತೆ, ಶೀಲ, ಪಾತಿವ್ರತ್ಯ ಮತ್ತು ರಾಷ್ಟ್ರದ ಶೌರ್ಯ, ವೈಭವ, ಸಮೃದ್ಧಿ ಮತ್ತು ವೈವಿಧ್ಯತೆಯಲ್ಲಿ ಏಕತೆ, ಇವೆಲ್ಲವೂ ಈ ಜ್ಞಾನದ ಅಡಿಪಾಯದಲ್ಲಿ ನಿಂತಿವೆ. ಗುರುಗಳಿಂದ ಶಿಷ್ಯನಿಗೆ, ಅಂದರೆ ಮುಂದಿನ ಪೀಳಿಗೆಗೆ ಹರಡುತ್ತಿದ್ದ ಈ ಜ್ಞಾನದ ಪರಂಪರೆಯನ್ನು ಭಾರತದ ಮೇಲೆ ಆಕ್ರಮಣ ಮಾಡಿದ ತುರ್ಕರು, ಮುಸಲ್ಮಾನರು, ಪೋರ್ಚುಗೀಸರು, ಆಂಗ್ಲರು ತುಂಡರಿಸಿದರು. ಇದರಿಂದ ಭಾರತಕ್ಕೆ ಅಷ್ಟೇ ಅಲ್ಲ, ಜಗತ್ತಿಗೂ ನೈತಿಕ ಹಾನಿಯಾಯಿತು. ಆದ್ದರಿಂದ ಭಾರತಕ್ಕೆ ಪುನರ್‌ ವೈಭವವನ್ನು ತಂದುಕೊಡಲು ಮತ್ತು ಜಗತ್ತಿನ ಅವನತಿಯನ್ನು ತಡೆಯಲು ಗುರು-ಶಿಷ್ಯ ಪರಂಪರೆಯ ಪುನರುಜ್ಜೀವನ ಅನಿವಾರ್ಯವಾಗಿದೆ.

ತಮ್ಮ ಧರ್ಮವನ್ನು ಬೆಳೆಸಲು ಬಂದವರು ಭಾರತೀಯ ಸಂಸ್ಕೃತಿಯನ್ನು ಹೇಗೆ ಅಳವಡಿಸಿಕೊಳ್ಳುತ್ತಾರೆ ?

ಮೊಘಲರಾಗಲಿ ಅಥವಾ ಆಂಗ್ಲರಾಗಲಿ, ಅವರಿಗೆ ತಮ್ಮ ಸಾಮ್ರಾಜ್ಯ ವಿಸ್ತರಣೆಯ ಧಾರ್ಮಿಕ ಪ್ರಾಬಲ್ಯವನ್ನು ಸ್ಥಾಪಿಸುವುದಾಗಿತ್ತು. ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಈ ಲೂಟಿಕೋರರು ಭಾರತದ ಜ್ಞಾನವನ್ನು ಪಡೆದಿದ್ದರೆ, ಯುರೋಪ್‌ ಮತ್ತು ಇಸ್ಲಾಮಿಕ್‌ ರಾಷ್ಟ್ರಗಳು ಸಹ ಸಮೃದ್ಧವಾಗುತ್ತಿದ್ದವು; ಆದರೆ ಅವರ ಉದ್ದೇಶ ಮತಾಂಧತೆಯಾಗಿತ್ತು. ಅಂತಹ ಮತಾಂಧರ ಧರ್ಮವನ್ನು ಸಮೃದ್ಧ ಭಾರತ ಏಕೆ ಪೋಷಿಸಬೇಕು ಅಥವಾ ಕಾಪಾಡಬೇಕು ? ಆದರೆ ಸ್ವತಂತ್ರ ಭಾರತದಲ್ಲಿ ‘ಸರ್ವಧರ್ಮಸಮಭಾವ’ ಎಂಬ ಸುಂದರ ಹೆಸರಿನಲ್ಲಿ ಆಕ್ರಮಣಕಾರರ ಧರ್ಮದ ಪುನರ್ವಸತಿ ನಡೆದಿದೆ. ಪ್ರಸ್ತುತ ಪುನರ್ವಸತಿಗೊಂಡವರೇ ಮೂಲ ನಿವಾಸಿಗಳಾದ ಹಿಂದೂಗಳ ತಲೆಯ ಮೇಲೆ ಕುಳಿತಿದ್ದಾರೆ. ಕ್ರೈಸ್ತರಾಗಲಿ ಅಥವಾ ಮುಸಲ್ಮಾನರಾಗಲಿ ಭಾರತದ ಮೇಲೆ ದಾಳಿ ಮಾಡುವಾಗಲೂ ಭಾರತೀಯ ಜ್ಞಾನವನ್ನು ಅಳವಡಿಸಿ ಕೊಳ್ಳದವರು, ಈಗಲಾದರೂ ಭಾರತೀಯ ಜ್ಞಾನವನ್ನು ಏಕೆ ಅಳವಡಿಸಿಕೊಳ್ಳುತ್ತಾರೆ ? ಇದೊಂದು ಪ್ರಶ್ನೆಯೇ ಆಗಿದೆ. ‘ನಾವು ಭಾರತೀಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಬಂದಿಲ್ಲ, ಬದಲಿಗೆ ಧರ್ಮಪ್ರಸಾರಕ್ಕಾಗಿ ಬಂದಿದ್ದೇವೆ’ ಎಂಬ ಸ್ಪಷ್ಟತೆ ಕ್ರೈಸ್ತ ಮಿಶನರಿಗಳಲ್ಲಿಯೂ ಇದೆ ಮತ್ತು ಮುಸಲ್ಮಾನ ಮತಾಂಧರಲ್ಲಿಯೂ ಇದೆ. ಸರ್ವಧರ್ಮಸಮಭಾವದ ಜಾಲದಲ್ಲಿ ಸಿಲುಕಿದ ಹಿಂದೂಗಳು ಮಾತ್ರ ಈ ಜನರು ಪ್ರಜಾಪ್ರಭುತ್ವವನ್ನು ಗೌರವಿಸುತ್ತಾರೆ ಎಂಬ ಭ್ರಮೆಯ ಕಲ್ಪನೆಯಲ್ಲಿದ್ದಾರೆ. ಕಾಂಗ್ರೆಸ್‌ ಸಂವಿಧಾನವನ್ನು ತನಗೆ ಬೇಕಾದಂತೆ ತಿರುಚಿ ಹಿಂದೂಗಳ ಸಾಂಸ್ಕೃತಿಕ ಹನನ ಮಾಡಿದೆ. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸುವ ಜವಾಬ್ದಾರಿ ಗುರು ಮತ್ತು ಶಿಷ್ಯರ ಮೇಲಿದೆ.

ರಾಷ್ಟ್ರೋತ್ಥಾನದ ಕಾರ್ಯ ಮಾಡುವ ಪರಂಪರೆ !

ಅನೇಕ ಬಾರಿ ಗುರು-ಶಿಷ್ಯ ಪರಂಪರೆಯನ್ನು ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದ ನೋಡಲಾಗುತ್ತದೆ; ಆದರೆ ವಾಸ್ತವದಲ್ಲಿ ಹಾಗಲ್ಲ. ಗುರು-ಶಿಷ್ಯ ಪರಂಪರೆಯು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವೃತ್ತಿಪರ ಮುಂತಾದ ಸಮಾಜದ ಎಲ್ಲಾ ವರ್ಗಗಳ ಮೇಲೆ ಪ್ರಭಾವ ಬೀರುತ್ತದೆ. ಸಮರ್ಥ ಗುರುಗಳು ತಮ್ಮಂತೆಯೇ ಶಿಷ್ಯರನ್ನು ರೂಪಿಸುತ್ತಾರೆ ಮತ್ತು ಅಂತಹ ಶಿಷ್ಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪ್ರಭಾವ ಬೀರುತ್ತಾರೆ. ರಾಜನಾಗುವ ಶಿಷ್ಯ ಆದರ್ಶ ರಾಜ್ಯಭಾರ ಮಾಡುತ್ತಾನೆ. ವ್ಯಾಪಾರಿ ಶಿಷ್ಯ ಆದರ್ಶ ವ್ಯಾಪಾರ ಮಾಡುತ್ತಾನೆ. ಪೌರೋಹಿತ್ಯ ಮಾಡುವ ಶಿಷ್ಯ ಯಜಮಾನನ ಹಿತವನ್ನು ಗಮನದಲ್ಲಿಟ್ಟುಕೊಂಡು ವಿಧಿಗಳನ್ನು ಮಾಡುತ್ತಾನೆ. ಅಂದರೆ ಗುರುಕುಲದಿಂದ ಹೊರಬರುವ ಶಿಷ್ಯರು ಆದರ್ಶ ಸಮಾಜ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಕೊಡುಗೆ ನೀಡುತ್ತಾರೆ. ಇದರಲ್ಲಿಯೇ ಭಾರತದ ಸಮೃದ್ಧಿ ಅಡಗಿದೆ. ಗುರು-ಶಿಷ್ಯ ಪರಂಪರೆಯೇ ರಾಷ್ಟ್ರದ ಏಳಿಗೆಗೆ ಕಾರಣವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಪ್ರಸ್ತುತ ರಾಷ್ಟ್ರದ ನಿರ್ಮಾಣಕ್ಕಾಗಿ ಗುರು-ಶಿಷ್ಯ ಪರಂಪರೆಯ ಅವಶ್ಯಕತೆಯಿದೆ. ಮಧ್ಯಂತರ ಕಾಲಾವಧಿಯಲ್ಲಿ ಈ ಪರಂಪರೆ ಕುಸಿಯಿತು. ಅದಕ್ಕಾಗಿಯೇ ಆಂಗ್ಲರು ಮತ್ತು ಮೊಘಲರು ಭಾರತಕ್ಕೆ ಬಂದಾಗ, ಇಲ್ಲಿನ ಆಡಳಿತಗಾರರು ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಒಗ್ಗಟ್ಟಿನಿಂದ ಹೋರಾಡಲಿಲ್ಲ. ಇಂದಿಗೂ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಹಿಂದೂಗಳು ಸಂಘಟಿತರಾಗಿಲ್ಲ. ಮಹಾಭಾರತ ಯುದ್ಧವು ಪಾಂಡವರಿಗೆ ಸಾಮ್ರಾಜ್ಯವನ್ನು ದೊರಕಿಸಿಕೊಡಲು ಇರಲಿಲ್ಲ, ಬದಲಿಗೆ ಅಧರ್ಮಿ ಕೌರವರನ್ನು ನಾಶ ಮಾಡುವ ಸಲುವಾಗಿ ಆಗಿತ್ತು. ಇದಕ್ಕಾಗಿಯೇ ಒಬ್ಬ ಗುರುಗಳು ಶಿಷ್ಯನಿಗೆ ಭಗವದ್ಗೀತೆಯ ಜ್ಞಾನವನ್ನು ನೀಡಿದರು. ಇದು ಹಿಂದೂಗಳ ಸರ್ವೋತ್ತಮ ಧರ್ಮಗ್ರಂಥವಾಗಿದೆ ಎಂಬುದನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು. ನಂದರಾಜನ ದಬ್ಬಾಳಿಕೆಯ ಆಡಳಿತವನ್ನು ಮುರಿಯಲು ವೇದಾಧ್ಯಯನ ಮಾಡಿದ ಚಾಣಕ್ಯರು ಚಂದ್ರಗುಪ್ತನನ್ನು ರೂಪಿಸಿದರು. ಮೊಘಲರು ತಾಯಿ-ಸಹೋದರಿಯರ ಮಾನಕ್ಕೆ ಕೈ ಹಾಕಿದಾಗ, ಅದನ್ನು ಪ್ರತಿರೋಧಿಸಲು ಕತ್ತಿ ಹಿಡಿದ ಛತ್ರಪತಿ ಶಿವಾಜಿ ಮಹಾರಾಜರಿಗೆ ಬಲ ನೀಡಲು ಸಮರ್ಥ ರಾಮದಾಸ ಸ್ವಾಮಿಗಳು ಬಲೋಪಾಸಕ ಯುವಕರನ್ನು ರೂಪಿಸಿದರು. ಇಂದಿಗೂ ರಾಷ್ಟ್ರ ಮತ್ತು ಧರ್ಮದ ರಕ್ಷಣೆಗಾಗಿ ಅಂತಹ ಗುರು-ಶಿಷ್ಯರ ಅವಶ್ಯಕತೆಯಿದೆ.

ಹಿಂದೂ ಧರ್ಮದಲ್ಲಿ ಈಶ್ವರಪ್ರಾಪ್ತಿಗಾಗಿ ವಿವಿಧ ಆಧ್ಯಾತ್ಮಿಕ ಮಾರ್ಗಗಳಿಂದ ಸಾಧನೆ ಮಾಡುವ ನೂರಾರು ಸಂಪ್ರದಾಯ ಗಳಿವೆ. ಈಶ್ವರಪ್ರಾಪ್ತಿಯ ಉದ್ದೇಶದಿಂದ ಈ ಎಲ್ಲಾ ಸಂಪ್ರದಾಯ ಗಳ ಉಪಾಸನೆ ನಡೆಯುತ್ತದೆ; ಆದರೆ ಧರ್ಮ ಉಳಿದರೆ, ರಾಷ್ಟ್ರ ಉಳಿಯುತ್ತದೆ ಮತ್ತು ರಾಷ್ಟ್ರ ಉಳಿದರೆ, ನಮ್ಮ ಸಂಸ್ಕೃತಿ ಉಳಿಯುತ್ತದೆ ಎಂಬುದನ್ನು ಎಲ್ಲಾ ಸಂಪ್ರದಾಯಗಳು ಅರ್ಥ ಮಾಡಿಕೊಂಡು ಪ್ರಸ್ತುತ ಧರ್ಮರಕ್ಷಣೆಯ ಕಾರ್ಯಕ್ಕೆ ಕೊಡುಗೆ ನೀಡುವ ಅವಶ್ಯಕತೆಯಿದೆ. ರಾಷ್ಟ್ರೋತ್ಥಾನದ ಕಾರ್ಯವನ್ನು ಮತ್ತೊಮ್ಮೆ ಗುರು-ಶಿಷ್ಯ ಪರಂಪರೆಯು ಹೊರಬೇಕಾಗಿದೆ