40 ವರ್ಷಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಗೋಮಾತೆಯರನ್ನು ರಕ್ಷಿಸಿದ ಪಂಜಾಬ ಗೋರಕ್ಷಕ ದಳದ ರಾಷ್ಟ್ರೀಯ ಅಧ್ಯಕ್ಷರಾದ ಸತೀಶ ಕುಮಾರ !

ನವೆಂಬರ್ 7, 1966 ರಂದು ಗೋಹತ್ಯೆಯನ್ನು ವಿರೋಧಿಸಿ ಆಂದೋಲನ ನಡೆಸುತ್ತಿದ್ದ ಸಾಧು-ಸಂತರ ಮೇಲೆ ಇಂದಿರಾ ಗಾಂಧಿಯವರು ಗುಂಡು ಹಾರಿಸಿ ನೂರಾರು ಸಾಧು-ಸಂತರನ್ನು ಕೊಂದರು. ಇದರ ನಂತರವೂ ಭಾರತದಾದ್ಯಂತ ಬಹಿರಂಗವಾಗಿ ಕಸಾಯಿಖಾನೆಗಳಲ್ಲಿ ಗೋವುಗಳ ಹತ್ಯೆ ಮುಂದುವರೆದಿದೆ. ಗೋವಿಗೆ ಮಾತೆಯ ಸ್ಥಾನವನ್ನು ನೀಡಲಾಗಿರುವ ಇದೆ ಹಿಂದೂ ಸಂಸ್ಕೃತಿಯಿರುವ ಭಾರತದಲ್ಲೇ ಪ್ರತಿದಿನ ಲಕ್ಷಾಂತರ ಗೋವುಗಳ ಹತ್ಯೆಯಾಗುವುದನ್ನು ನೋಡಬೇಕಾಗಿದೆ. ಆದರೆ ಇಂತಹ ಪರಿಸ್ಥಿತಿಯಲ್ಲೂ ಈ ದೇಶದಲ್ಲಿ ನೂರಾರು ಗೋರಕ್ಷಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಗೋವುಗಳ ಪ್ರಾಣ ಉಳಿಸಲು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಅವರಲ್ಲಿ ಪಂಜಾಬಿನ ಗೋರಕ್ಷಕ ದಳದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಸತೀಶ ಕುಮಾರ ಕೂಡ ಒಬ್ಬರು. ಅವರು ತಮ್ಮ ಸಹಕಾರಿಗಳೊಂದಿಗೆ ಕಳೆದ 40 ವರ್ಷಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಗೋವುಗಳನ್ನು ಕಟುಕರಿಂದ ರಕ್ಷಿಸಿದ್ದಾರೆ. ಗೋರಕ್ಷಣೆಗಾಗಿ ಹೋರಾಡುವಾಗ ಅವರಿಗೆ ಅನೇಕ ತೊಂದರೆಗಳನ್ನು ಎದುರಿಸಬೇಕಾಯಿತು. ಅವರ ಮೇಲೆ ಅನೇಕ ದಾಳಿಗಳು ನಡೆದವು. ಅವುಗಳಲ್ಲಿ ಅವರು ಹಾಗೂ ಅವರ ಸಹಕಾರಿಗಳು ಹಲವು ಬಾರಿ ಗಾಯಗೊಂಡರು, ಕೆಲವರು ಪ್ರಾಣವನ್ನೂ ಕಳೆದುಕೊಂಡರು. ಈ ಕಾರ್ಯವನ್ನು ಮಾಡುವಾಗ ಗೋರಕ್ಷಕ ಶ್ರೀ. ಸತೀಶರವರ ಮೇಲೆ ಪೊಲೀಸರು 25 ಕ್ಕೂ ಹೆಚ್ಚು ಅಪರಾಧಗಳನ್ನು ದಾಖಲಿಸಿದರು, ಮತ್ತು ಅವರನ್ನು ಜೈಲಿಗೂ ಕಳುಹಿಸಲಾಯಿತು; ಆದರೆ ಅವರು ಹಿಂಜರಿಯಲಿಲ್ಲ. `ಕಟುಕರಿಂದ ಗೋವುಗಳನ್ನು ರಕ್ಷಿಸುವುದು ಮತ್ತು ರಕ್ಷಿಸುವಾಗ ಸಾವನ್ನಪ್ಪುವುದು’ ಇದೇ ಅವರ ಜೀವನದ ಅಂತಿಮ ಗುರಿಯಾಗಿದೆ. `ಭಾರತದಲ್ಲಿ ಗೋಹತ್ಯಾನಿಷೇಧ ಜಾರಿಗೆ ಬರುವ ಮೊದಲು ಅವರು ಮರಣ ಹೊಂದಿದರೆ, ಅವರ ದೇಹದ ಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸದೆ ಗೋಹತ್ಯಾ ನಿಷೇಧವಾಗುವವರೆಗೂ ಗೋಶಾಲೆಯಲ್ಲಿಯೇ ಇಡಬೇಕು’ ಎಂಬ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

ವಿಶೇಷ ಮಾಲಿಕೆ


ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ಬಾಲ್ಯದಿಂದಲೇ ಗೋವುಗಳ ಮೇಲೆ ಪ್ರೀತಿ

ಸಂತ ಬಾಬಾ ಸರ್ವನದಾಸಜಿ ಮಹಾರಾಜರು

ಶ್ರೀ. ಸತೀಶ ಕುಮಾರ ಅವರಿಗೆ ಬಾಲ್ಯದಿಂದಲೇ ಗೋವುಗಳ ಮೇಲೆ ಪ್ರೀತಿಯಿದೆ. ಅವರು ಗೋವನ್ನು ತಮ್ಮ ತಾಯಿಯೆಂದು ಪರಿಗಣಿಸುತ್ತಾರೆ. ಅವರಿಗೆ ಸಂತ ಬಾಬಾ ಸರ್ವನದಾಸಜಿ ಮಹಾರಾಜರಿಂದ ಸ್ಫೂರ್ತಿ ದೊರಕಿತು. ಅವರು ತಮ್ಮ ಇಡೀ ಜೀವನವನ್ನು ಗೋವುಗಳಿಗಾಗಿ ಸಮರ್ಪಿಸಿದ್ದರು. ಭಾರತದ ಎಲ್ಲಾ ಗೋವುಗಳನ್ನು ಕಟುಕರ ಕೈಯಿಂದ ರಕ್ಷಿಸುವ ಜವಾಬ್ದಾರಿಯನ್ನು ಸಂತ ಬಾಬಾ ಸರ್ವನದಾಸಜಿ ಮಹಾರಾಜರು ಶ್ರೀ. ಸತೀಶ ಕುಮಾರ ಅವರಿಗೆ ನೀಡಿದ್ದಾರೆ. ಶ್ರೀ. ಕುಮಾರರ ಬಳಿ ಗೋರಕ್ಷಕರ ಜಾಲ(ನೆಟ್ವರ್ಕ್)ವಿದೆ. ಅವರ ಮಾಹಿತಿಯ ಆಧಾರದಲ್ಲಿ ಅವರು ಗೋರಕ್ಷಣಾ ಕಾರ್ಯಾಚರಣೆಗಳನ್ನು ಯಶಸ್ವಿಗೊಳಿಸುತ್ತಾರೆ. ಗೋರಕ್ಷಣೆ ಮಾಡುವಾಗ ಅವರು ಅನೇಕ ಧೈರ್ಯಶಾಲಿ ಹೆಜ್ಜೆಗಳನ್ನು ಇಟ್ಟಿದ್ದಾರೆ. ಇದರಿಂದಾಗಿ ಅವರನ್ನು ಹಲವು ಬಾರಿ ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿತ್ತು.

2. ಜೈಲಿನಲ್ಲಿದ್ದು ಸಾಧನೆ ಮತ್ತು ಗ್ರಂಥಗಳ ಬರವಣಿಗೆ

ಆಗಸ್ಟ್ 24, 2016 ರಂದು ಗೋರಕ್ಷಣೆಯ ಒಂದು ಪ್ರಕರಣದಲ್ಲಿ ಶ್ರೀ. ಸತೀಶ ಕುಮಾರರವರನ್ನು ಬಂಧಿಸಲಾಯಿತು ಮತ್ತು ಅವರು 3 ವರ್ಷಗಳ ಕಾಲ ಜೈಲಿನಲ್ಲಿ ಇರಬೇಕಾಯಿತು. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಅವರ ಬಂಧನವಾಗಿತ್ತು. ಆಗ `ಭಗವಾನ ಶ್ರೀಕೃಷ್ಣ ಕೂಡ ಜೈಲಿನಲ್ಲಿಯೇ ಪ್ರಕಟಗೊಂಡಿದ್ದನು. ಹಾಗಾಗಿ ಭಗವಾನ ಶ್ರೀಕೃಷ್ಣನನ್ನು ಭೇಟಿಯಾಗಲು ಹೋಗುತ್ತಿದ್ದೇನೆ’ ಎಂಬುದು ಅವರ ಭಾವವಾಗಿತ್ತು. ಜೈಲಿನಲ್ಲಿ ದೊರೆತ ಏಕಾಂತವನ್ನು ಅವರು ಆಧ್ಯಾತ್ಮಿಕ ಸಾಧನೆಗಾಗಿ ಬಳಸಿಕೊಂಡರು. ಜೈಲಿನಲ್ಲಿ ಅವರು ಧ್ಯಾನ, ಧಾರಣೆ ಮತ್ತು ಭಗವಂತನ ನಾಮಸ್ಮರಣೆ ಮಾಡಿದರು. ಜೈಲಿನಲ್ಲಿ ಅವರು ಇತಿಹಾಸ, ವೇದ ಮತ್ತು ಶಾಸ್ತ್ರಗಳನ್ನು ಅಧ್ಯಯನ ಮಾಡಿದರು, ಜೊತೆಗೆ 5 ಗ್ರಂಥಗಳನ್ನು ಬರೆದರು ಮತ್ತು ಗೋಮಾತೆಯ ಮೇಲೆ 1 ಸಾವಿರಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದರು.

(ಚಿತ್ರದ ಮೇಲೆ ಕ್ಲಿಕ್ ಮಾಡಿರಿ)

3. ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನಗಳಲ್ಲಿ ಸಹಭಾಗ

ಗೋರಕ್ಷಕ ಶ್ರೀ. ಸತೀಶ ಕುಮಾರರವರು ಗೋವಾದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸುತ್ತಿರುವ `ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ’ಗಳಲ್ಲಿ ಭಾಗವಹಿಸುತ್ತಾರೆ. ಅವರು ಸಮಿತಿಯ ಬಗ್ಗೆ ಮಾತುಗಳನ್ನಾಡುತ್ತ, `ಕಳೆದ ಕೆಲವು ವರ್ಷಗಳಿಂದ ಹಿಂದೂ ಜನಜಾಗೃತಿ ಸಮಿತಿಯು ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸುತ್ತಿದೆ. ಗೋವಾದ ನೆಲದಲ್ಲಿ ನಡೆಯುವ ‘ಹಿಂದೂ ರಾಷ್ಟ್ರ ಅಧಿವೇಶನದಿಂದ’ ಹಿಂದೂ ರಾಷ್ಟ್ರದ ಬೇಡಿಕೆ ಪ್ರಾರಂಭವಾಗಿತ್ತು. ಈಗ ಅದನ್ನು ದೇಶಾದ್ಯಂತ ಮಾಡಲಾಗುತ್ತಿದೆ’ ಎಂದು ಗೌರವೋದ್ಗಾರ ತೆಗೆದರು.

`ಜಾಗತಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಅವರು ವ್ಯಕ್ತಪಡಿಸಿದ ವಿಚಾರಗಳು’

`ಗೋವುಗಳ ಕಳ್ಳಸಾಗಾಣಿಕೆಯು ಭಯೋತ್ಪಾದನೆಗೆ ಸಂಬಂಧಿಸಿದೆ !’ – ಶ್ರೀ. ಸತೀಶ ಕುಮಾರ

4. ಪ್ರಯಾಗರಾಜನಲ್ಲಿ ಕುಂಭಮೇಳದಲ್ಲಿ ಸನಾತನ ಪ್ರದರ್ಶನ ಮಳಿಗೆಗೆ ಭೇಟಿ

ಗೋರಕ್ಷಕ ಶ್ರೀ. ಸತೀಶ ಕುಮಾರರವರು ಪ್ರಯಾಗರಾಜನ ಮಹಾಕುಂಭಮೇಳದ ಸಮಯದಲ್ಲಿ ಸನಾತನ ಸಂಸ್ಥೆಯ ಸೆಕ್ಟರ್ 9 ರಲ್ಲಿನ ಪ್ರದರ್ಶನ ಮಳಿಗೆಗೆ ಭೇಟಿ ನೀಡಿದರು. ಈ ಸಮಯದಲ್ಲಿ ಅವರು `ಹಿಂದೂ ರಾಷ್ಟ್ರವಾದ ನಂತರ ದೇಶದಲ್ಲಿ ಗೋಹತ್ಯೆ ಖಂಡಿತವಾಗಿಯೂ ನಿಲ್ಲುತ್ತದೆ’ ಎಂದು ಹೇಳಿದರು.

5. `ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಸಹಭಾಗ

ಮೇ 17 ರಿಂದ 19, 2025 ರವರೆಗೆ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಅವರು ಭಾಗವಹಿಸಿದ್ದರು. ಈ ಸಮಯದಲ್ಲಿ ಅವರು ನೆರೆದಿದ್ದ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು.

ಶ್ರೀ. ಸತೀಶ ಕುಮಾರರವರ ಜ್ವಲಂತ ವಿಚಾರಗಳು!


* ಯಾವ ಭೂಮಿಯಲ್ಲಿ ಗೋವಿನ ಹತ್ಯೆಯಾಗುತ್ತದೆಯೋ, ಆ ಭೂಮಿಯೂ ವಿಭಜನೆಯಾಗುತ್ತದೆ. ಆದ್ದರಿಂದ ನಮಗೆ ಅಖಂಡ ಭಾರತ ಬೇಕಾದರೆ ಹಾಗೂ ಮುಂದಿನ ವಿಭಜನೆಯನ್ನು ತಡೆಯಬೇಕಾದರೆ ಗೋಹತ್ಯೆಯನ್ನು ತಡೆಯುವುದು ಅವಶ್ಯಕವಾಗಿದೆ.

* ಯುದ್ಧದ ಹೊರತು ಏನೂ ಸಿಗುವುದಿಲ್ಲ. ಪಾಂಡವರಿಗೆ ಕೇವಲ 5 ಊರುಗಳಿಗಾಗಿ ಯುದ್ಧ ಮಾಡಬೇಕಾಯಿತು. ನಮಗೆ `ಹಿಂದೂ ರಾಷ್ಟ್ರ’ ಬೇಕಿದೆ. ಆದುದರಿಂದ ಹೋರಾಡಲೇ ಬೇಕು. ಸಾವು ಪ್ರತಿಯೊಬ್ಬರಿಗೂ ಬರಲಿಕ್ಕಿದೆ. ಆದುದರಿಂದ ಧರ್ಮದ ಕಾರ್ಯ ಮಾಡಬೇಕಾದರೆ ಭಯವನ್ನು ಬಿಟ್ಟು ಬಿಡಬೇಕಾಗುತ್ತದೆ.

Punjab News : ಈದ್ ನ ಕುರ್ಬಾನಿಯ ಬಗ್ಗೆ ಗೋರಕ್ಷಾ ದಳದ ರಾಷ್ಟ್ರೀಯ ಪ್ರಧಾನರಾದ ಸತೀಶ ಕುಮಾರ

(ಸೌಜನ್ಯ : PunjabKesari.Com)

* ಕಳೆದ 63 ವರ್ಷಗಳಲ್ಲಿ ಭಾರತದಲ್ಲಿ ಅಂದಾಜು 75 ಕೋಟಿ ಗೋವುಗಳ ಹತ್ಯೆ ಮಾಡಲಾಯಿತು. ಭಾರತ ಸರಕಾರ ಮತ್ತು ರಾಜ್ಯ ಸರಕಾರದ ನಿಯಂತ್ರಣದಲ್ಲಿ 30 ಸಾವಿರಕ್ಕೂ ಹೆಚ್ಚಿನ ಪ್ರಾಣಿವಧೆ ಗ್ರಹಗಳನ್ನು ನಡೆಸಲಾಗುತ್ತಿದೆ. ಇವುಗಳ ಮೇಲೆ ತಕ್ಷಣ ನಿರ್ಬಂಧ ಹೇರಬೇಕು.

ಭೇಟಿ ನೀಡಿ – Gau Raksha Dal : ಫೆಸಬುಕ ಲಿಂಕ್ : https://www.facebook.com/profile.php?id=100069492798663

6. ದೇಶದಲ್ಲಿ ಮೊಟ್ಟಮೊದಲಿಗೆ ಹಿಂದೂ ರಾಷ್ಟ್ರದ ಬೇಡಿಕೆಯನ್ನಿಡುವ ಸನಾತನ ಸಂಸ್ಥೆ ! – ಸತೀಶ ಕುಮಾರ

ನನಗೆ ಕಳೆದ 14 ವರ್ಷಗಳಿಂದ ಸನಾತನ ಸಂಸ್ಥೆಯ ಪರಿಚಯವಿದೆ. ಯಾರ ಮನಸ್ಸಿನಲ್ಲಿಯೂ ಹಿಂದೂ ರಾಷ್ಟ್ರದ ಬಗ್ಗೆ ವಿಚಾರವೂ ಇಲ್ಲದಿರುವಾಗ ಭಾರತದಲ್ಲಿ ಹಿಂದೂ ರಾಷ್ಟ್ರದ ಬೇಡಿಕೆಯನ್ನಿಡುವವರಲ್ಲಿ ಸನಾತನ ಸಂಸ್ಥೆಯು ಅಗ್ರಗಣ್ಯವಾಗಿದೆ. ಈಗ ಅದರ ಈ ಬೇಡಿಕೆಯು ಪ್ರತಿಯೊಬ್ಬ ಸನಾತನಿ ಹಿಂದೂವಿನ ಬಾಯಲ್ಲಿದೆ. ಪ್ರತಿಯೊಬ್ಬ ಜಾಗರೂಕ ಹಿಂದುವಿಗೆ `ಹಿಂದೂ ರಾಷ್ಟ್ರ’ ಬೇಕು ಎಂದು ಅನಿಸುತ್ತದೆ.