
೧. ಇಂದು ನೀವು ಹೇಗಿದ್ದೀರೋ, ಅದಕ್ಕೆ ನೀವೇ ಸ್ವತಃ ಜವಾಬ್ದಾರರು. ನಿಮಗೆ ಉಂಟಾಗುವ ದುಃಖ, ತೊಂದರೆ, ಮತ್ತು ಹೀನಾಯ ಸ್ಥಿತಿಗೆ ನೀವೇ ಹೊಣೆಗಾರರು. ಈ ಪ್ರಾರಬ್ಧ ದೈವಗತಿಗೋಸ್ಕರ ನೀವು ಪ್ರಾರಬ್ಧಕ್ಕೆ ದೋಷವನ್ನು ನೀಡಿ ನಿಮ್ಮ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಈ ಪ್ರಾರಬ್ಧಕ್ಕೆ ನೀವೇ ಕಾರಣರಾಗಿದ್ದೀರಿ. ಅದು ನಿಮ್ಮ ಕೃತಿಯಿಂದಲೇ ನಿರ್ಮಾಣವಾಗಿದೆ. ನೀವು ಪರಮೇಶ್ವರನನ್ನು ಜವಾಬ್ದಾರನನ್ನಾಗಿ ಅಥವಾ ದೋಷಿಯನ್ನಾಗಿ ಮಾಡಲು ಸಾಧ್ಯವಿಲ್ಲ; ಏಕೆಂದರೆ ಆತನು ಕೇವಲ ನಿಮ್ಮ ಕರ್ಮ-ಕೃತಿಗಳಿಗೆ ಅನುಗುಣವಾಗಿ ಫಲವನ್ನು ನಿರ್ಮಿಸಿ ಅದನ್ನು ಕಾರ್ಯಗತಗೊಳಿಸುವವನು ಮಾತ್ರ ಆಗಿದ್ದಾನೆ. ಅದಕ್ಕಾಗಿಯೇ ಇಂದಿನ ಪರಿಸ್ಥಿತಿಗೆ ನೀವು ಯಾರನ್ನೂ ಜವಾಬ್ದಾರರನ್ನಾಗಿ ಅಥವಾ ದೋಷಿಗಳನ್ನಾಗಿ ಮಾಡಲು ಸಾಧ್ಯವಿಲ್ಲ.
೨. ಪ್ರಾರಬ್ಧವೆಂದರೆ ಹಿಂದಿನ ಜನ್ಮದಲ್ಲಿ ನಾವು ಮಾಡಿದ ಪೂರ್ವಕರ್ಮಗಳ ಮತ್ತು ಕೃತಿಗಳ ಫಲಿತಾಂಶವಾಗಿದೆ. ನಮ್ಮ ಪೂರ್ವಜನ್ಮದಲ್ಲಿ ನಾವು ಸ್ವತಂತ್ರವಾಗಿ ಮತ್ತು ಸ್ವೇಚ್ಛೆಯಿಂದ ಮಾಡಿದ ಕೆಲಸಗಳೇ ನಮ್ಮ ಈ ಜನ್ಮದ (ಪ್ರಸ್ತುತ ಕಾಲದ) ಪ್ರಾರಬ್ಧ. ಇಂದಿನ ಕಾಲದಲ್ಲಿ ಸ್ವೇಚ್ಛೆಯಿಂದ ಮಾಡಿದ ಕೃತಿ, ಕರ್ಮಗಳಿಂದ ಮತ್ತು ನಡುವಳಿಕೆಯಿಂದ ಈ ಹಿಂದಿನ ಜನ್ಮದ ವಿಪರೀತ ಕರ್ಮಗಳ ಫಲಿತಾಂಶವನ್ನು ತೊಳೆದುಹಾಕಿ, ಭವಿಷ್ಯದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಸಸ್ಕೃತಿಗಳನ್ನು ಮತ್ತು ಸದಾಚಾರವನ್ನು ಮಾಡಿ. ಅದು ಯಾವುದಕ್ಕಾಗಿಯೇ ಇರಲಿ, ಸಮಾಧಾನ ಮತ್ತು ಆನಂದಪ್ರಾಪ್ತಿಗಾಗಿ ಇರಲಿ ಅಥವಾ ದುಃಖದ ಸ್ಥಿತಿ ಉಂಟಾಗಬಾರದು ಎಂಬ ಕಾರಣಕ್ಕಾಗಿ ಇರಲಿ, ವರ್ತಮಾನದಲ್ಲಿ ನಾವು ಸ್ಟೇಚ್ಛೆಯಿಂದ ಈ ಕೆಲಸವನ್ನು ಉದ್ದೇಶಪೂರ್ವಕವಾಗಿ ಮಾಡಬೇಕಾಗಿದೆ.
– ಶ್ರೀ. ಎಮ್.ಎಸ್.ಎಮ್. ಶರ್ಮಾ (ಸೌಜನ್ಯ : ಜಗದ್ಗುರು ಶ್ರೀ ಶ್ರೀ ಚಂದ್ರಶೇಖರ ಭಾರತಿ ಅವರ ‘ಸುವರ್ಣ ವಚನಗಳು’)
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಎಲ್ಲಾ ಕಾಯಿಲೆಗಳಿಂದ ದೂರವಿರಲು ಊಟ ಮತ್ತು ನೀರು ಕುಡಿಯುವ ನಿಯಮಗಳು !