ಸಹಾರನಪುರ (ಉತ್ತರಪ್ರದೇಶ): ಪೊಲೀಸ್ ಠಾಣೆಗೆ ಬಂದ ಗೋಹತ್ಯೆ ಮಾಡಿದ ೪೭ ಮುಸಲ್ಮಾನ್ ಆರೋಪಿಗಳು !

ಸಹಾರನಪುರ (ಉತ್ತರಪ್ರದೇಶ) – ಗೋಹತ್ಯೆಯ ಅಪರಾಧಗಳಲ್ಲಿ ಈ ಹಿಂದೆ ಶಂಕಿತರಾಗಿದ್ದ ೪೭ ಮುಸಲ್ಮಾನ್ ಆರೋಪಿಗಳು ಸ್ವತಃ ಪೊಲೀಸ್ ಠಾಣೆಗೆ ತಲುಪಿದರು ಮತ್ತು ಭವಿಷ್ಯದಲ್ಲಿ ಅಪರಾಧ ಜಗತ್ತಿನಿಂದ ಸಂಪೂರ್ಣವಾಗಿ ದೂರವಿರುವುದಾಗಿ ಭರವಸೆ ನೀಡಿದರು. ಯಾರ ಮೇಲೆ ಗ್ಯಾಂಗ್ ಸ್ಟರ್ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆಯೋ, ಅಂತಹ ಆರೋಪಿಗಳು ಕೂಡ ಪೋಲೀಸ್ ಠಾಣೆಗೆ ಬಂದು ಶರಣಾದರು. ಪೊಲೀಸ್ ಠಾಣೆಗೆ ತಲುಪಿದ ಈ ಎಲ್ಲಾ ಜನರ ಕೈಯಲ್ಲಿ ಸಂದೇಶ ಬರೆದಿರುವ ಫಲಕಗಳಿದ್ದವು. ಈ ಫಲಕಗಳ ಮೇಲೆ ಕಾನೂನನ್ನು ಗೌರವಿಸುವುದು, ಅಪರಾಧದಿಂದ ದೂರವಿರುವುದು ಮತ್ತು ಪ್ರಾಮಾಣಿಕವಾಗಿ ಜೀವನ ನಡೆಸುವುದು ಎಂದು ಬರೆಯಲಾಗಿತ್ತು.
ಈ ಆರೋಪಿಗಳು ಠಾಣೆಯ ಆವರಣದಲ್ಲಿ ಪೊಲೀಸ್ ಅಧಿಕಾರಿಗಳ ಎದುರು ಪ್ರಮಾಣ ವಚನ ಸ್ವೀಕರಿಸಿ, ‘ಇನ್ನು ಮುಂದೆ ನಾವು ಗೋಹತ್ಯೆ ಅಥವಾ ಇತರ ಯಾವುದೇ ಕಾನೂನುಬಾಹಿರ ಕೆಲಸಗಳಲ್ಲಿ ಭಾಗಿಯಾಗುವುದಿಲ್ಲ. ಇಂದಿನಿಂದ ನಾವು ಕೂಲಿ ಕೆಲಸ ಮಾಡಿ ಕುಟುಂಬದ ಜೀವನೋಪಾಯ ನಡೆಸುತ್ತೇವೆ ಮತ್ತು ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ಜೀವನ ನಡೆಸುತ್ತೇವೆ’ ಎಂದು ಮಾತುಕೊಟ್ಟರು.
ಮತ್ತೆ ಅಪರಾಧ ಮಾಡಿದರೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರ ಎಚ್ಚರಿಕೆ!
ಪೊಲೀಸ್ ಅಧಿಕಾರಿಗಳು ಆರೋಪಿಗಳಿಗೆ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ನೀಡಿದರು, ಭವಿಷ್ಯದಲ್ಲಿ ಮತ್ತೆ ಗೋಹತ್ಯೆ ಅಥವಾ ಇತರ ಯಾವುದೇ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ನಿಮ್ಮ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧದಿಂದ ದೂರವಿರುವ ಈ ಭರವಸೆಯು ಕೇವಲ ಔಪಚಾರಿಕವಾಗಿರಬಾರದು, ಪ್ರತ್ಯಕ್ಷ ಮತ್ತು ಸ್ವಂತ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಒಂದು ವೇಳೆ ನಿಮ್ಮ ಸುತ್ತ-ಮುತ್ತ ಯಾರಾದರೂ ಗೋಹತ್ಯೆ ಅಥವಾ ಇತರ ಅಪರಾಧದಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅದರ ಮಾಹಿತಿಯನ್ನು ತಕ್ಷಣ ಪೊಲೀಸರಿಗೆ ನೀಡಬೇಕು, ಇದರಿಂದ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ