ಭಾರತೀಯ ಸಂಸ್ಕೃತಿ ಮತ್ತು ಇತಿಹಾಸದ ಧ್ವಜವಾಹಕ ಸ್ಟ್ರಿಂಗ್ ರಿವೀಲ್ಸ್” ನ ಶ್ರೀ. ವಿನೋದ ಕುಮಾರ್

ಭಾರತೀಯ ಪರಂಪರೆ, ಇತಿಹಾಸ ಮತ್ತು ಸಂಸ್ಕೃತಿಯ ವೈಭವವನ್ನು ಆಧುನಿಕ ಮಾಧ್ಯಮದ ಮೂಲಕ ಜನಸಾಮಾನ್ಯರಿಗೆ ತಲುಪಿಸುವ ಒಂದು ಸಧಾರ್ಥ ಪ್ರಯತ್ನವೆಂದರೆ “ಸ್ಟ್ರಿಂಗ್ ರಿವೀಲ್ಸ್”. ಈ ಚಾನೆಲ್‌ನ ಹಿಂದಿನ ಸಶಕ್ತ ವ್ಯಕ್ತಿತ್ವವೇ ಶ್ರೀ. ವಿನೋದ್ ಕುಮಾರ್. ಅವರು ಈ ಚಾನಲ್‌ನ ಸಂಸ್ಥಾಪಕರಾಗಿ, ಭಾರತೀಯ ಧರ್ಮ, ತತ್ವ, ಇತಿಹಾಸ ಮತ್ತು ರಾಜಕೀಯ ಕುರಿತಂತೆ ಆಳವಾದ ಸಂಶೋಧನೆಗಳನ್ನು ಆಧರಿಸಿ ನಿಖರವಾದ ಮಾಹಿತಿಯನ್ನು ಜನತೆಗೆ ನೀಡುತ್ತಿದ್ದಾರೆ.


ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ವೃತ್ತಿಜೀವನ ಮತ್ತು ವಿದ್ಯಾಭ್ಯಾಸ

ವಿನೋದ್ ಕುಮಾರ್ ಅವರು ತಮ್ಮ ವೃತ್ತಿಜೀವನವನ್ನು ವಿಎಫ್‌ಎಕ್ಸ್, ಅನಿಮೇಶನ್ ಮತ್ತು ವಿಡಿಯೋ ಸಂಪಾದನೆಯ ಕ್ಷೇತ್ರದಲ್ಲಿ ಆರಂಭಿಸಿದರು. ಈ ತಾಂತ್ರಿಕ ಹಿನ್ನಲೆ ಅವರ ವಿಡಿಯೋಗಳ ದೃಷ್ಟಿಕೋನ, ಗ್ರಾಫಿಕ್ಸ್ ಮತ್ತು ಆವಿಷ್ಕಾರಗಳಲ್ಲಿ ಸ್ಪಷ್ಟವಾಗಿ ಮೂಡಿಬರುತ್ತದೆ. ಅವರು ತಮ್ಮ ತಾಂತ್ರಿಕ ವಿದ್ಯಾಭ್ಯಾಸವನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NIT), ವಾರಂಗಲ್ ನಲ್ಲಿ ಪೂರೈಸಿದ್ದಾರೆ.


“ಸ್ಟ್ರಿಂಗ್ ರಿವೀಲ್ಸ್” ಚಾನೆಲ್ – ಧರ್ಮ ಮತ್ತು ಸಂಸ್ಕೃತಿಯ ಸೇತುಬಂಧ

 

“ಸ್ಟ್ರಿಂಗ್ ರಿವೀಲ್ಸ್” ಯೂಟ್ಯೂಬ್ ಚಾನೆಲ್‌ ಒಂದು ವಿಶಿಷ್ಟ ವೇದಿಕೆಯಾಗಿದ್ದು, ಇಲ್ಲಿ ಅವರು ಹಿಂದೂ ಧರ್ಮ, ಪೌರಾಣಿಕ ಕಥೆಗಳು, ವಾಸ್ತವ ಇತಿಹಾಸ ಮತ್ತು ಭಾರತೀಯ ತತ್ತ್ವಶಾಸ್ತ್ರದ ಕುರಿತು ಆಧಾರಿತ, ವಿಶ್ಲೇಷಣಾತ್ಮಕ ವಿಡಿಯೋಗಳನ್ನು ಪ್ರಕಟಿಸುತ್ತಾರೆ. ಇದರ ಮೂಲಕ ಅವರು ಜ್ಞಾನಾರ್ಥಿಗಳು, ಸಂಶೋಧಕರು ಮತ್ತು ಸಾಮಾನ್ಯ ವೀಕ್ಷಕರನ್ನು ಒಂದೇ ವೇದಿಕೆಯಲ್ಲಿ ತರಲು ಅವಿರತ ಕಾರ್ಯ ಮಾಡುತ್ತಿದ್ದಾರೆ.

ಇದೆನ್ನೂ ಓದಿ →

BBC ಆನ್ ಟ್ರಯಲ್: ‘ಬಿಬಿಸಿ’ಯ ಮುಖವಾಡ ಕಳಚುವ ‘ಬಿಬಿಸಿ ಆನ್ ಟ್ರಯಲ್’ ಸಾಕ್ಷ್ಯಚಿತ್ರ ಪ್ರಸಾರ!

ಪ್ರಖರ ಹಿಂದುತ್ವನಿಷ್ಠ ಯೂಟ್ಯೂಬ್ ಚಾನೆಲ್ ‘ಸ್ಟ್ರಿಂಗ್ ರಿವೀಲ್ಸ್’ ಮೇಲೆ ಅನ್ಯಾಯದ ನಿಷೇಧ!

ಚಾನೆಲ್‌ನ ಹೆಸರಿನಂತೆಯೇ, ಅದು ಯಾವುದೇ ಘಟನೆಯ ಹಿಂದಿನ ಷಡ್ಯಂತ್ರದ ‘ಎಳೆಯನ್ನು ಬಿಚ್ಚಿ’ ವೀಡಿಯೊಗಳ ಮೂಲಕ ಜಗತ್ತಿಗೆ ತರುತ್ತದೆ. ಭಾರತದಲ್ಲಿ ನಡೆಯುವ ಪ್ರಮುಖ ಘಟನೆಗಳ ಹಿಂದೆ ಭಾರತ ವಿರೋಧಿ ಶಕ್ತಿಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ಕುರಿತು ಸಂಪೂರ್ಣ ವಸ್ತುನಿಷ್ಠ ಮಾಹಿತಿಯನ್ನು ಒದಗಿಸಲಾಗುತ್ತದೆ. ಇದರಲ್ಲಿ ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದ ರೈತರ ಆಂದೋಲನವಿರಲಿ, ಕರ್ನಾಟಕದ ಹಿಜಾಬ್ ವಿರೋಧಿ ಆಂದೋಲನವಿರಲಿ, ಅಥವಾ ಮಣಿಪುರ ಮತ್ತು ನೂಹ್ (ಹರಿಯಾಣ)ದಲ್ಲಿ ನಡೆದ ಹಿಂಸಾಚಾರವಿರಲಿ, ಈ ಎಲ್ಲಾ ಘಟನೆಗಳ ಹಿಂದಿನ ಅಂತರರಾಷ್ಟ್ರೀಯ ರಾಜಕೀಯ, ಜಾತ್ಯತೀತ ಶಕ್ತಿಗಳ ಭಾಗವಹಿಸುವಿಕೆ, ಹಿಂದೂಗಳ ಮೇಲಿನ ಅರಿಷ್ಟ ಇತ್ಯಾದಿ ವಿಷಯಗಳನ್ನು ಪ್ರಖರವಾಗಿ ಮತ್ತು ಸ್ಪಷ್ಟವಾಗಿ ಮಂಡಿಸಲಾಗಿದೆ. ಈ ಚಾನೆಲ್ ಮೂಲಕ ಈಶ್ವರನ ಅಧಿಷ್ಠಾನದೊಂದಿಗೆ ಕಾರ್ಯನಿರ್ವಹಿಸುವ ಸೂತ್ರದ ಬಗ್ಗೆಯೂ ಕಾಲಕಾಲಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ.

2. ‘ಸ್ಟ್ರಿಂಗ್ ರಿವೀಲ್ಸ್ ಚಾನೆಲ್’ ಎಂದರೆ ಧರ್ಮ ಮತ್ತು ಸಂಸ್ಕೃತಿಯನ್ನು ಜೋಡಿಸುವ ಕೊಂಡಿ

‘ಸ್ಟ್ರಿಂಗ್ ರಿವೀಲ್ಸ್’ ಯುಟ್ಯೂಬ್ ಚಾನೆಲ್ ಒಂದು ಅನನ್ಯ ವೇದಿಕೆಯಾಗಿದೆ. ಇಲ್ಲಿ ಶ್ರೀ. ವಿನೋದ ಕುಮಾರ್ ಅವರು ಹಿಂದೂ ಧರ್ಮ, ಪುರಾಣಗಳು, ನಿಜವಾದ ಇತಿಹಾಸ ಮತ್ತು ಭಾರತೀಯ ತತ್ತ್ವಶಾಸ್ತ್ರದ ಆಧಾರದ ಮೇಲೆ ವಿಶ್ಲೇಷಣಾತ್ಮಕ ವೀಡಿಯೊಗಳನ್ನು ಪ್ರಸ್ತುತಪಡಿ ಈ ಮೂಲಕ ಅವರು ಜ್ಞಾನದ ಹುಡುಕಾಟದಲ್ಲಿರುವ ಸಂಶೋಧಕರು ಮತ್ತು ಸಾಮಾನ್ಯ ಪ್ರೇಕ್ಷಕರನ್ನು ಒಂದೇ ವೇದಿಕೆಯಲ್ಲಿ ತರುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

‘ವರ್ಲ್ಡ್ ಹಿಂದೂ ಕಾಂಗ್ರೆಸ್’ನಲ್ಲಿ ಮಾತನಾಡುತ್ತಾ…

M Vinodh Kumar at Hindu Media Conference, WHC 2023 Bangkok

(ಸೌಜನ್ಯ: ವರ್ಲ್ಡ್ ಹಿಂದೂ ಕಾಂಗ್ರೆಸ್)

ಅವರು ವೀಡಿಯೊಗಳಿಗಾಗಿ ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆ ಆಳವಾದ ಸಂಶೋಧನೆ ಮಾಡುತ್ತಾರೆ. ಸಂಕೀರ್ಣ ವಿಷಯಗಳನ್ನು ಸರಳ ಮತ್ತು ಸ್ಪಷ್ಟ ರೀತಿಯಲ್ಲಿ ಮಂಡಿಸುವ ಸಾಮರ್ಥ್ಯ ಅವರಿಗೆ ಇದೆ. ಇದರಿಂದಾಗಿ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮ ರಕ್ಷಣೆಗಾಗಿ ಒಂದು ಧ್ವನಿಯಾಗಿದ್ದಾರೆ.

‘ಸ್ಟ್ರಿಂಗ್ ರಿವೀಲ್ಸ್’ ಮೇಲೆ ಯೂಟ್ಯೂಬ್ ನಿಷೇಧ !

 

ಹಿಂದೂ ಮತ್ತು ಭಾರತ ವಿರೋಧಿ ಶಕ್ತಿಗಳ ಷಡ್ಯಂತ್ರಗಳನ್ನು ಉದಾಹರಣೆಗಳೊಂದಿಗೆ ಬಯಲು ಮಾಡಲು ಪ್ರಸಿದ್ಧವಾಗಿರುವ ‘ಸ್ಟ್ರಿಂಗ್ ರಿವೀಲ್ಸ್’ ಯುಟ್ಯೂಬ್ ಚಾನೆಲ್ ಮೇಲೆ ಯೂಟ್ಯೂಬ್ ನಿಷೇಧ ಹೇರಿದೆ. ಇದಕ್ಕೆ ಕಾರಣ ನೀಡುತ್ತಾ, ಯೂಟ್ಯೂಬ್ “ಈ ಚಾನೆಲ್ ತಮ್ಮ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸಿದೆ” ಎಂದು ಹೇಳಿದೆ. ಯೂಟ್ಯೂಬ್ ಈ ಮೊದಲು ಯಾವುದೇ ಆಕ್ಷೇಪಾರ್ಹ ವೀಡಿಯೊದ ವಿರುದ್ಧ ಅವರಿಗೆ ಈ ರೀತಿಯ ಎಚ್ಚರಿಕೆ ನೀಡಿರಲಿಲ್ಲ; ನೇರವಾಗಿ ಅವರ ಮೇಲೆ ನಿರ್ಬಂಧ ಹೇರುವ ಅನ್ಯಾಯದ ಕ್ರಮ ಕೈಗೊಂಡಿದೆ. ಈ ಕುರಿತು ‘ಸ್ಟ್ರಿಂಗ್ ರಿವೀಲ್ಸ್’ “ಯೂಟ್ಯೂಬ್ ಯಾರನ್ನೋ ಸಂತೋಷಪಡಿಸಲು ಈ ಕ್ರಮ ಕೈಗೊಂಡಿದೆ. ನಾವು ನಿಮ್ಮ ವಿರುದ್ಧ ಬಹಳ ದೂರದವರೆಗೆ ಹೋರಾಡಬಲ್ಲೆವು ಎಂಬುದನ್ನು ನೀವು ಮರೆಯಬೇಡಿ, ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಯೂಟ್ಯೂಬ್ ಒಂದೇ ಮಾಧ್ಯಮವಲ್ಲ ಎಂಬುದನ್ನು ಸಹ ನೆನಪಿನಲ್ಲಿಡಿ!” ಎಂದು ಹೇಳಿದೆ.

3. ಸಾಮಾಜಿಕ ಮಾಧ್ಯಮ ಮತ್ತು ಜನಪ್ರಿಯತೆ

ವಿನೋದ್ ಕುಮಾರ್ ಅವರು ತಮ್ಮ ಚಾನೆಲ್ ಹೊರತಾಗಿ, ಟ್ವಿಟರ್, ಇನ್‌ಸ್ಟಾಗ್ರಾಂ ಹಾಗೂ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಸಹ ಕ್ರಿಯಾಶೀಲರಾಗಿದ್ದಾರೆ. ಅವರು ಭಾರತಕ್ಕೆ ಬಂದಿರುವ ಆಂತರಿಕ ಹಾಗೂ ಬಾಹ್ಯ ಸವಾಲುಗಳ ಕುರಿತು ಧೈರ್ಯವಂತಿಕೆ ಹಾಗೂ ನಿಷ್ಠೆಯಿಂದ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.


‘ಬಿಬಿಸಿ’ಯ ಹಿಂದೂ ದ್ವೇಷವನ್ನು ಬಹಿರಂಗಪಡಿಸಲು ‘ಗ್ಲೋಬಲ್ ಹಿಂದೂ ಫೆಡರೇಷನ್’ ಮತ್ತು ‘ಸ್ಟ್ರಿಂಗ್ ರಿವೀಲ್ಸ್’ ನಿಂದ ಕಿರುಚಿತ್ರ ಪ್ರಸಾರ!


‘ಬಿಬಿಸಿ’, ಅಂದರೆ ‘ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್’ ಸುದ್ದಿವಾಹಿನಿಯು ಹಿಂದೂ ದ್ವೇಷದಿಂದ ಕೂಡಿದ್ದು, ಭಾರತ ಮತ್ತು ಹಿಂದೂಗಳ ಬಗ್ಗೆ ಸುಳ್ಳು ಕಥೆಗಳನ್ನು ಪ್ರಸಾರ ಮಾಡಲು ಕುಖ್ಯಾತವಾಗಿದೆ.

Who Controls the World? | BBC on Trial – Full Documentary

(ಸೌಜನ್ಯ – Prachyam)

ಅಂತಹ ಬಿಬಿಸಿ ವಿರುದ್ಧ ಇದೇ ಮೊದಲ ಬಾರಿಗೆ, ಅತ್ಯಂತ ಅಧ್ಯಯನಪೂರ್ಣವಾದ ‘ಡಾಕ್ಯುಮೆಂಟರಿ’ (ಕಿರುಚಿತ್ರ) ಅಕ್ಟೋಬರ್ 25, 2024 ರಂದು ಪ್ರಸಾರ ಮಾಡಲಾಯಿತು. ಈ ಡಾಕ್ಯುಮೆಂಟರಿಯನ್ನು ‘ಗ್ಲೋಬಲ್ ಹಿಂದೂ ಫೆಡರೇಷನ್’ ಮತ್ತು ‘ಸ್ಟ್ರಿಂಗ್ ರಿವೀಲ್ಸ್’ ಎಂಬ ಹಿಂದೂಪರ ಸಂಘಟನೆಗಳು ಜಂಟಿಯಾಗಿ ನಿರ್ಮಿಸಿವೆ.

ಶ್ರೀ ವಿನೋದ್ ಕುಮಾರ್ ಅವರ ಈ ಕಾರ್ಯ ಇಂದಿನ ಪೀಳಿಗೆಗೆ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಅರಿವು ಮೂಡಿಸುತ್ತಿದೆ. ಅವರು ವಿಡಿಯೋ ತಂತ್ರಜ್ಞಾನ ಹಾಗೂ ಸಂಶೋಧನಾ ದಕ್ಷತೆಯ ಸಮನ್ವಯದ ಮೂಲಕ ಧರ್ಮ ಮತ್ತು ದೇಶಭಕ್ತಿಯ ಚಿಂತನೆಗೆ ನವ ದಿಕ್ಕು ನೀಡುತ್ತಿದ್ದಾರೆ. ಇವರು ಸಮಾಜದ ಧರ್ಮ, ಸಂಸ್ಕೃತಿಯ ರಕ್ಷಣೆಯ ಪಥದರ್ಶಕರಂತೆ ಕಾರ್ಯ ಮಾಡುತ್ತಿದ್ದಾರೆ.

ಹಿಂದುದ್ವೇಷಿ ಸುದ್ದಿ ವಾಹಿನಿಗಳು, ವೆಬ್‌ಸೈಟ್‌ಗಳು ಮತ್ತು ಪಕ್ಷಗಳ ಪಿತೂರಿಗಳನ್ನು ಬಹಿರಂಗಪಡಿಸಿದ ಶ್ರೀ ವಿನೋದ್ ಕುಮಾರ್