ಉಜೈನಿ: ಶ್ರೀ ಮಹಾಕಾಳೇಶ್ವರ ದೇವಸ್ಥಾನದ ಚರಾಸ್ತಿ-ಸ್ಥಿರಾಸ್ತಿಗಳ ವಿವರ ಘೋಷಣೆ.

ಉಜೈನಿ (ಮಧ್ಯಪ್ರದೇಶ) – ೧೨ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಇಲ್ಲಿನ ಶ್ರೀ ಮಹಾಕಾಳೇಶ್ವರ ದೇವಸ್ಥಾನದ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಸವಿಸ್ತಾರವಾದ ವಿವರಗಳನ್ನು ಮೊದಲ ಬಾರಿಗೆ ಸಾರ್ವಜನಿಕಗೊಳಿಸಲಾಗಿದೆ. ಇಲ್ಲಿಯವರೆಗೆ ದೇವಸ್ಥಾನದ ಸಮಿತಿಯು ಕೇವಲ ನಗದು ಮತ್ತು ಆನ್‌ಲೈನ್ ದೇಣಿಗೆಗಳ ಮಾಹಿತಿ ಮಾತ್ರ ಹಂಚಿಕೊಳ್ಳುತ್ತಿತ್ತು; ಆದರೆ ಈ ಬಾರಿ ದೇವಸ್ಥಾನದ ಒಟ್ಟು ಆರ್ಥಿಕ ಆಸ್ತಿ, ಬ್ಯಾಂಕುಗಳಲ್ಲಿನ ನಿಶ್ಚಿತ ಠೇವಣಿ, ಜಮೀನು ಹಾಗೂ ಚಿನ್ನ – ಬೆಳ್ಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು ಮುನ್ನೆಲೆಗೆ ಬಂದಿವೆ.
Sri Mahakaleshwar Temple Assets Declared: ₹472 Crore in FDs & ₹300 Crore in gold/silver.
While billions pour into Hindu temples, none of it goes toward protecting the Dharma, education, or community welfare.
Meanwhile, money received by mosques, madrasas, and churches is used… pic.twitter.com/PvLDopRZxf
— Sanatan Prabhat (@SanatanPrabhat) July 12, 2026
ದೇವಸ್ಥಾನದ ಸಮಿತಿ ನೀಡಿದ ಮಾಹಿತಿಯ ಪ್ರಕಾರ, ವಿವಿಧ ಬ್ಯಾಂಕುಗಳಲ್ಲಿ ₹೪೭೨ ಕೋಟಿ ರೂಪಾಯಿಗಳ ನಿಶ್ಚಿತ ಠೇವಣಿ (ಫಿಕ್ಸ್ಡ್ ಡೆಪಾಸಿಟ್), ₹೧೬ ಕೋಟಿ ರೂಪಾಯಿ ನಗದು ಮತ್ತು ಸುಮಾರು ೯೦ ಎಕರೆ ಭೂಮಿ ಇದೆ. ಹಾಗೆಯೇ, ಅನೇಕ ವರ್ಷಗಳಿಂದ ಭಕ್ತರು ಅರ್ಪಿಸಿದ ಚಿನ್ನ ಮತ್ತು ಬೆಳ್ಳಿ ಒಡವೆಗಳ ಅಂದಾಜು ಮೌಲ್ಯ ₹೩೦೦ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಆದರೆ, ಭದ್ರತೆಯ ಕಾರಣಗಳನ್ನು ಹೇಳಿ ಚಿನ್ನ ಮತ್ತು ಬೆಳ್ಳಿಯ ಸಂಪೂರ್ಣ ಅಧಿಕೃತ ವಿವರಗಳನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ.
೧೧ ಅಕ್ಟೋಬರ್ ೨೦೨೨ ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ‘ಶ್ರೀ ಮಹಾಕಾಲ ಲೋಕ’ ಲೋಕಾರ್ಪಣೆಗೊಂಡ ನಂತರ, ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಅಭೂತಪೂರ್ವ ಹೆಚ್ಚಳವಾಗಿದೆ. ಈ ಹಿಂದೆ ಪ್ರತಿದಿನ ೪೦ ರಿಂದ ೫೦ ಸಾವಿರ ಭಕ್ತರು ದರ್ಶನಕ್ಕೆ ಬರುತ್ತಿದ್ದಲ್ಲಿ, ಈಗ ಈ ಸಂಖ್ಯೆ ಹೆಚ್ಚಾಗಿ ಪ್ರತಿದಿನ ಒಂದೂವರೆಯಿಂದ ಎರಡು ಲಕ್ಷಕ್ಕೆ ತಲುಪಿದೆ. ಆರ್ಥಿಕ ವರ್ಷ ೨೦೨೫-೨೬ ರಲ್ಲಿ ದೇವಸ್ಥಾನಕ್ಕೆ ₹೧೪೨ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ದೇಣಿಗೆ ಹರಿದುಬಂದಿದೆ.
ನೌಕರರ ವೇತನ, ಭದ್ರತೆ, ಸ್ವಚ್ಛತೆ, ನಿರ್ವಹಣೆ, ನಿರ್ಮಾಣ ಕಾರ್ಯ, ಅನ್ನದಾಸೋಹ , ಗೋಶಾಲೆ, ಮಹಾಕಾಳೇಶ್ವರ ವೈದಿಕ ಸಂಶೋಧನಾ ಸಂಸ್ಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಬ್ಬ-ಹರಿದಿನಗಳ ವ್ಯವಸ್ಥೆಗಾಗಿ ಪ್ರತಿವರ್ಷ ₹೧೩೫ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !