ಪಾಕಿಸ್ತಾನದಿಂದ ಜಾಗತಿಕ ಸಮುದಾಯಕ್ಕೆ ಆಗ್ರಹ

ಇಸ್ಲಾಮಾಬಾದ್ (ಪಾಕಿಸ್ತಾನ) – ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಪ್ರಕಾರ ಬಗೆಹರಿಸುವ ಪ್ರಯತ್ನಗಳಿಗೆ ಬೆಂಬಲ ನೀಡಬೇಕೆಂದು ಪಾಕಿಸ್ತಾನದ ಅಧ್ಯಕ್ಷರು ಮತ್ತು ಪ್ರಧಾನಿ ಜಾಗತಿಕ ಸಮುದಾಯವನ್ನು ಆಗ್ರಹಿಸಿದ್ದಾರೆ. ಭಾರತದ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ಪಾಕಿಸ್ತಾನವು ಪ್ರತಿ ವರ್ಷ ೧೩ ಜುಲೈ ದಿನದಂದು ತಥಾಕಥಿತ ‘ಕಾಶ್ಮೀರ ಹುತಾತ್ಮರ ದಿನ’ವನ್ನು ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಶಹಬಾಜ್ ಷರೀಫ್ ಮತ್ತು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ನೀಡಿದ ಸಂದೇಶದಲ್ಲಿ ಮೇಲಿನ ಬೇಡಿಕೆಯನ್ನು ಮಂಡಿಸಿದ್ದಾರೆ.
೧. ಪ್ರಧಾನಿ ಷರೀಫ್ ಅವರು ಮಾತನಾಡಿ, ಪಾಕಿಸ್ತಾನ ಸರಕಾರವು ಜಮ್ಮು-ಕಾಶ್ಮೀರದ ಜನತೆಗೆ ಅಚಲವಾದ ರಾಜಕೀಯ, ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು ಘೋಷಿಸುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ಉಲ್ಲೇಖಿಸಿರುವಂತೆ, ತಮ್ಮ ಆತ್ಮನಿರ್ಣಯದ ಅವಿಭಾಜ್ಯ ಹಕ್ಕನ್ನು ಪಡೆಯಲು ಕಾಶ್ಮೀರಿ ಜನತೆ ನಡೆಸುತ್ತಿರುವ ನ್ಯಾಯಯುತ ಹೋರಾಟದಲ್ಲಿ ನಾವು ಸಂಪೂರ್ಣ ಒಗ್ಗಟ್ಟಿನಿಂದ ಅವರ ಬೆಂಬಲಕ್ಕೆ ನಿಂತಿದ್ದೇವೆ” ಎಂದು ಹೇಳಿದ್ದಾರೆ.
೨. ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮಾತನಾಡಿ, ೯ ಲಕ್ಷ ಭಾರತೀಯ ಸಶಸ್ತ್ರ ಪಡೆಗಳು ಕಾಶ್ಮೀರದ ಮೇಲೆ ನಿಯಂತ್ರಣವನ್ನು ಮುಂದುವರೆಸುತ್ತಾ ಕಾಶ್ಮೀರಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ, ಎಂದು ಹೇಳಿದ್ದಾರೆ.
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
ಲಾರೆನ್ಸ್ ಬಿಷ್ಣೋಯಿ ಹಸ್ತಾಂತರಕ್ಕೆ ಅಮೆರಿಕ ಒತ್ತಾಯ? : US Seeks Lawrence Bishnoi
ಜರ್ಮನಿಯಲ್ಲಿ ಡ್ರಗ್ಸ್-ಲೈಂಗಿಕ ಶೋಷಣೆ ಜಾಲ ಬಯಲು : Germany Exploitation Gang