ಮಹರ್ಷಿಗಳ ಆಜ್ಞೆಯಂತೆ ಕಾರ್ತಿಕೇಯನ ದರ್ಶನಕ್ಕಾಗಿ ‘ಸಂಡೂರ’ಗೆ ಹೋದಾಗ ಶ್ರೀಚಿತ್‌ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಅರಿವಾದ ಅಂಶಗಳು ಮತ್ತು ಬಂದಿರುವ ಅನುಭೂತಿಗಳು !

ಕೆಂಪು ಮಣ್ಣು ಮತ್ತು ಕಾರ್ತಿಕೇಯನ ಬಿಳಿ ಭಸ್ಮದ ಬೆಟ್ಟದ ಮೇಲೆ (ಎಡದಿಂದ) ಶ್ರೀ. ಸ್ನೇಹಲ ರಾವೂತ, ಶ್ರೀ. ಸತ್ಯಕಾಮ ಕಣಗಲೆಕರ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಶ್ರೀ. ವಿನಾಯಕ ಶಾನಭಾಗ ಮತ್ತು ದಾರಿಹೋಕ

‘೩೦.೧.೨೦೨೧ ರಂದು ಶನಿವಾರವಿತ್ತು. ನಾವು (ನಾನು ಮತ್ತು ನನ್ನ ಜೊತೆಗೆ ಪ್ರವಾಸದಲ್ಲಿದ್ದ ೪ ಜನ ಸಾಧಕರು) ಅಂಜನಾದ್ರಿ ಬೆಟ್ಟದ ಮೇಲಿರುವ ಹನುಮಂತನ ಜನ್ಮಸ್ಥಾನಕ್ಕೆ ಅವನ ದರ್ಶನ ಪಡೆಯಲು ಹೊರಟೆವು. ನಾವು ಅಂಜನಾದ್ರಿಯ ಬೆಟ್ಟದ ಕೆಳಗಡೆ ತಲುಪಿದಾಗ ಅಲ್ಲಿ ತುಂಬ ಜನಸಂದಣಿಯಿತ್ತು. ಈ ಜನಸಂದಣಿ ನೋಡಿ ನಾವು ಅಲ್ಲಿಂದ ಹಿಂದಿರುಗಿದೆವು ಹಾಗೂ ಮರುದಿನ ಬೆಳಗ್ಗೆ ಬೇಗನೆ ಹೋಗುವುದೆಂದು ನಿರ್ಧರಿಸಿದೆವು. ಅಂಜನಾದ್ರಿಗೆ ಹೋಗಲು ೬೦೦ ಮೆಟ್ಟಿಲುಗಳಿದ್ದು ಅವುಗಳನ್ನು ಹತ್ತಲು ಸ್ವಲ್ಪ ತೊಂದರೆ ಆಗುತ್ತದೆ; ಆದ್ದರಿಂದ ನಾವು ನನಗಾಗಿ ಡೋಲಿ (ಟಿಪ್ಪಣಿ) ಮಾಡುವುದೆಂದು ನಿರ್ಧರಿಸಿದೆವು. (ಟಿಪ್ಪಣಿ – ಬೆಟ್ಟ ಹತ್ತಲು ಸಾಧ್ಯವಾಗದ ಅಥವಾ ವೃದ್ಧರನ್ನು ಮೇಲೆ ಕರೆದೊಯ್ಯಲು ಉಪಯೋಗಿಸುವ ಸಾಧನ. ಈ ಡೋಲಿಯಲ್ಲಿ ಕೂರಿಸಿ ಅವರನ್ನು ಬೆಟ್ಟದ ಮೇಲೆ ಒಯ್ಯಲಾಗುತ್ತದೆ’. – ಸಂಕಲನಕಾರರು)

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

೧. ಅನಿರೀಕ್ಷಿತವಾಗಿ ಆರಂಭವಾದ ತೊಂದರೆ !

೧ ಅ. ಅನಿರೀಕ್ಷಿತವಾಗಿ ರಾತ್ರಿ ಊಟ ಮಾಡುವಾಗ ನನಗೆ ಬಾಯಿ ತೆರೆಯಲು ಬರಲಿಲ್ಲ, ಅದು ಸ್ವಲ್ಪ ವಿಚಿತ್ರವೆನಿಸಿತು, ಅದಕ್ಕಾಗಿ ನಾಮಜಪಾದಿ ಉಪಾಯ ಮಾಡಿದಾಗ ಆರಾಮವೆನಿಸಿತು : ಆ ರಾತ್ರಿ ನನಗೆ ತುಂಬಾ ತೊಂದರೆ ಆಯಿತು. ರಾತ್ರಿ ಊಟ ಮಾಡುವಾಗ

ಅನಿರೀಕ್ಷಿತವಾಗಿ ನನಗೆ ಬಾಯಿ ತೆರೆಯಲು ಆಗÀಲಿಲ್ಲ. ನನಗೆ ನನ್ನ ಬಾಯಿಯಲ್ಲಿ ಗಂಟಾಗಿದೆಯೇ ?’, ಏಕೆಂದರೆ ನಿನ್ನೆಯಿಂದ ಬಾಯಿ ತೆರೆಯುವಾಗ ನನಗೆ ಬಲಬದಿಯ ಗಲ್ಲದ ಒಳಭಾಗದಲ್ಲಿ ತೊಂದರೆಯಾಗುತ್ತಿತ್ತು. ನಾನು ನನ್ನ ಬೆಂಗಳೂರಿನ ದಂತ ವೈದ್ಯರಿಗೆ ಕರೆ ಮಾಡಿದೆ. ಅವರು ”ಕೆಲವೊಮ್ಮೆ ದವಡೆಯ ಸ್ನಾಯು ಹಾಗೆ ಗಟ್ಟಿಯಾಗುತ್ತದೆ. ಆದ್ದರಿಂದ ಅದು ನೋವಾಗುತ್ತದೆ. ಅದರ ಮೇಲೆ ಬಿಸಿ ನೀರಿನ ಶಾಖ ಕೊಡಿ ಮತ್ತು ಬಿಸಿ ಉಪ್ಪು- ನೀರಿನಿಂದ ಬಾಯಿ ಮುಕ್ಕಳಿಸಿ. ಮೂರು ದಿನಗಳಲ್ಲಿ ಸರಿಯಾಗು ವುದು’’ ಎಂದು ಹೇಳಿದರು. ನಿಜ ಹೇಳಬೇಕೆಂದರೆ, ದವಡೆಯ ಸ್ನಾಯು ಹಾಗೆ ಗಟ್ಟಿಯಾಗಲು ಏನೂ ಕಾರಣವಿರಲಿಲ್ಲ. ನನಗೆ ಸ್ವಲ್ಪ ವಿಚಿತ್ರವೆನಿಸಿತು; ಆದ್ದರಿಂದ ನಾನು ಅದಕ್ಕೆ ನಾಮಜಪಾದಿ ಉಪಾಯ ಮಾಡಿದೆನು. ಅದರಿಂದ ನನಗೆ ಆರಾಮವೆನಿಸಿತು. ‘ಅನಿಷ್ಟ ಶಕ್ತಿಗಳು ಎಷ್ಟು ರೀತಿ ನಮ್ಮ ಕಾರ್ಯದಲ್ಲಿ ಅಡಚಣೆ ಗಳನ್ನು ತರುತ್ತವೆ ?’, ಎಂಬುದು ನನಗೆ ತಿಳಿಯಿತು ಹಾಗೂ ‘ಗುರುದೇವರು ಪ್ರತಿಯೊಂದು ಬಾರಿ ನಮ್ಮನ್ನು ಅದರಿಂದ ಹೇಗೆ ಹೊರಗೆ ತರುತ್ತಾರೆ ?’, ಎಂಬುದರ ಅನುಭವವೂ ಬಂದಿತು.

೨. ಕನಸಿನಲ್ಲಿ ಕಾರ್ತಿಕೇಯನ ದರ್ಶನವಾಗುವುದು !

೨ ಅ. ಮಹರ್ಷಿಗಳು ನಮಗೆ ‘ಸಂಡೂರಿ’ಗೆ ಹೋಗಿ ಕಾರ್ತಿಕೇಯನ ದರ್ಶನ ಪಡೆಯಲು ಹೇಳಿದ್ದರು; ಆದರೆ ನಾವು ಅದಕ್ಕೂ ಮೊದಲು ‘ಇಳಕಲ್‌’ಗೆ ಹೋಗಲು ನಿರ್ಧರಿಸಿದೆವು : ಅಂಜನಾದ್ರಿಗೆ ಹೋಗಲು ಸಾಧ್ಯವಾಗಲಿಲ್ಲ; ಆದ್ದರಿಂದ ಆ ದಿನ ಸಾಯಂಕಾಲ ನಾವು ಹಂಪಿಯ ಸಮೀಪವಿರುವ ‘ಇಳಕಲ್’ ಈ ಊರಿಗೆ ಹೋಗುವುದೆಂದು ನಿರ್ಧರಿಸಿದೆವು. ನಿಜವಾಗಿ ನೋಡಿದರೆ ನಮಗೆ ಮಹರ್ಷಿಗಳು ಹಂಪಿಯಿಂದ ೨ ಗಂಟೆಯ ಪ್ರಯಾಣವಿರುವ ‘ಸಂಡೂರು’ ಈ ಊರಿಗೆ ಕಾರ್ತಿಕೇಯನ ದರ್ಶನಕ್ಕೆ ಹೋಗಲು ಆಜ್ಞೆ ನೀಡಿದ್ದರು; ಆದರೆ ಆ ಪ್ರದೇಶ ಸ್ವಲ್ಪ ಅರಣ್ಯ ಪ್ರದೇಶದಲ್ಲಿದೆ; ಆದ್ದರಿಂದ ನಾವು ‘ಮಧ್ಯಾಹ್ನ ‘ಇಳಕಲ್‌’ಗೆ ಮತ್ತು ಮರುದಿನ ಬೆಳಗ್ಗೆ ‘ಸಂಡೂರಿ’ಗೆ ಹೋಗಲು ನಿರ್ಧರಿಸಿದೆವು.

೨ ಆ. ‘ಇಳಕಲ್‌’ಗೆ ಹೋಗುವ ಮೊದಲು ವಿಶ್ರಾಂತಿ ತೆಗೆದು ಕೊಳ್ಳಲು ನಾನು ೧೦ ನಿಮಿಷ ಮಲಗಿದ್ದೆ. ಆಗ ನನಗೆ ಕನಸಿನಲ್ಲಿ ಕಾರ್ತಿಕೇಯನ ದರ್ಶನವಾಯಿತು. ಅವನ ಬಲಗೈಯಲ್ಲಿ ‘ವೇಲ’ ಎಂಬ ಭಲ್ಲೆಯಂತಹ ಶಸ್ತ್ರವಿತ್ತು. ನನಗೆ ಅದರಿಂದ ಅಗ್ನಿಯ ಜ್ವಾಲೆ ಹೊರ ಸೂಸುವುದು ಕಾಣಿಸಿತು. ಅದನ್ನು ನೋಡಿ ನನಗೆ, ‘ಈಗ ಸ್ವತಃ ದೇವರ ಸೇನಾಪತಿ ಕಾರ್ತಿಕೇಯನೇ ಸನಾತನ ಸಂಸ್ಥೆಯ ಮೇಲೆ ಬಂದಿರುವ ಕಷ್ಟವನ್ನು ಪರಿಹರಿಸಲು ಧಾವಿಸಿ ಬಂದಿದ್ದಾನೆ’ ಎಂದು ಅನಿಸಿತು.

೩. ‘ಇಳಕಲ್’ ಊರಿನ ಭೇಟಿ !

೩ ಅ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕಾಗಿ ಸಾತ್ತ್ವಿಕ ಸೀರೆಗಳ ಮಾಹಿತಿ ಪಡೆಯಲು ಹಾಗೂ ಅದರ ಧ್ವನಿಚಿತ್ರೀಕರಣಕ್ಕಾಗಿ ‘ಇಳಕಲ್‌’ಗೆ ಹೋಗುವುದು : ಇಳಕಲ್‌ನಲ್ಲಿನ ಪಾರಂಪರಿಕ ಕೈಮಗ್ಗದ ಸೀರೆಗಳು ಪ್ರಸಿದ್ಧವಾಗಿವೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯಕ್ಕೆ ಸಾತ್ತ್ವಿಕ ಸೀರೆಗಳ ಮಾಹಿತಿ ಸಿಗಬೇಕು ಹಾಗೂ ಅದನ್ನು ಧ್ವನಿಚಿತ್ರೀಕರಿಸಲು ನಾವು ‘ಇಳಕಲ್‌’ಗೆ ಹೋದೆವು.

೩ ಆ. ‘ಇಳಕಲ್‌’ನಲ್ಲಿ ಕೈಮಗ್ಗ ಹಾಗೂ ಕೈಮಗ್ಗದಲ್ಲಿ ನೇಯುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ’ ಮತ್ತು ‘ಈ ಕಲೆಯನ್ನು ರಕ್ಷಿಸುವುದು ಆವಶ್ಯಕವಾಗಿದೆ’, ಎಂದು ಅನಿಸುವುದು : ನಾವು ‘ಇಳಕಲ್‌’ಗೆ ಹೋದಾಗ ‘ಅಲ್ಲಿ ನಮಗೆ ಕೈಮಗ್ಗಗಳು ಹೆಚ್ಚಿನಂಶ ಮುಚ್ಚಿದ್ದು ಕೈಮಗ್ಗದಲ್ಲಿ ನೇಯುವವರೂ ಕಡಿಮೆಯಾಗಿದ್ದಾರೆ, ಎಂಬುದು ತಿಳಿಯಿತು. ಈಗ ಅಲ್ಲಿ ಎಲ್ಲರೂ ‘ಪವರ್‌ಲೂಮ್’ (ವಿದ್ಯುತ್‌ನಲ್ಲಿ ನಡೆಯುವ ಮಗ್ಗ) ಉಪಯೋಗಿಸುತ್ತಾರೆ.’ ಒಂದು ಸ್ಥಳದಲ್ಲಿ ನಾವು ನಮೂನೆ ಮತ್ತು ಸಂಶೋಧನೆಗಾಗಿ ಕೈಮಗ್ಗದ ಕೆಲವು ‘ಇಳಕಲ್’ ಸೀರೆಗಳನ್ನು ಖರೀದಿಸಿದೆವು. ‘ಇನ್ನು ಮುಂದೆ ನಮಗೆ ಇಂತಹ ಪಾರಂಪರಿಕ ವಸ್ತ್ರ ಸಿಗಲಿಕ್ಕಿಲ್ಲ’, ಎಂಬುದನ್ನು ಕೇಳಿ ತುಂಬಾ ಬೇಸರವೆನಿಸಿತು. ‘ಈಗಲೇ ನಾವು ಇದರ ಜೋಪಾಸನೆ ಯಾಗಬೇಕು, ಇಲ್ಲದಿದ್ದರೆ ನಾವು ಭಾರತದ ಅತಿದೊಡ್ಡ ಸಾತ್ತ್ವಿಕ ಇಡುಗಂಟನ್ನು ಕಳೆದುಕೊಳ್ಳುವೆವು’, ಎಂದು ನಮಗೆ ಅನಿಸಿತು.

೪. ‘ಸಂಡೂರಿ’ನಲ್ಲಿ ಕಾರ್ತಿಕೇಯ ಮತ್ತು ಪಾರ್ವತಿ ಮಾತೆಯ ದರ್ಶನ !

೪ ಅ. ‘ಸಂಡೂರಿ’ನ ಕೆಂಪು ಮಣ್ಣು ಮತ್ತು ಕಾರ್ತಿಕೇಯನ ಬಿಳಿ ಭಸ್ಮದ ಬೆಟ್ಟ ! : ‘ಇಳಕಲ್‌’ನಲ್ಲಿನ ಸೇವೆ ಬೇಗನೆ ಮುಗಿದಿರುವುದರಿಂದ ನಾವು ಅಲ್ಲಿಂದ ‘ಸಂಡೂರಿ’ಗೆ ಹೋಗಲು ನಿರ್ಧರಿಸಿದೆವು. ರಾತ್ರಿಯಾಗುವ ಮೊದಲೇ ನಾವು ಅಲ್ಲಿಗೆ ತಲುಪಬೇಕಿತ್ತು. ‘ಸಂಡೂರಿ’ನಲ್ಲಿ ಕಾರ್ತಿಕೇಯನ ಬೆಟ್ಟ ತುಂಬಾ ಸಾತ್ತ್ವಿಕವಾಗಿದೆ. ಇಲ್ಲಿ ಕೆಂಪು ಮಣ್ಣಿನ ಬೆಟ್ಟವಿದೆ. ಈ ಬೆಟ್ಟವನ್ನು ಅಗೆದಾಗ ಅದರ ಒಳಗಿಂದ ನಮಗೆ ಕಾರ್ತಿಕೇಯನ ಬಿಳಿ ಭಸ್ಮ ಸಿಗುತ್ತದೆ. ಈ ಭಸ್ಮ ತುಂಬಾ ಮೃದುವಾಗಿರುತ್ತದೆ.

೪ ಆ. ಕಾರ್ತಿಕೇಯನ ಬಿಳಿ ಭಸ್ಮವೆಂದರೆ, ಆದಿಮಾಯೆ ಪಾರ್ವತಿಯ ಹಾಲಾಗಿರುವುದರಿಂದ ಅದರ ಸ್ಪರ್ಶ ಅತ್ಯಂತ ಮೃದುವಾಗಿರುವುದು : ಈ ಭಸ್ಮದ ವಿಷಯದಲ್ಲಿ ಇಲ್ಲಿ ಒಂದು ಕಥೆ ಹೇಳುತ್ತಾರೆ, ‘ಒಮ್ಮೆ ಪಾರ್ವತಿ ಕಾರ್ತಿಕೇಯನಿಗೆ, ”ನೀನು ವಿವಾಹವಾಗು. ನಾನು ನಿನಗಾಗಿ ಹುಡುಗಿಯನ್ನು ನೋಡುತ್ತೇನೆ’’ ಎಂದು ಹೇಳಿದಳು ಕಾರ್ತಿಕೇಯನಿಗೆ ವಿವಾಹವಾಗಲಿಕ್ಕಿರಲಿಲ್ಲ; ಆದ್ದರಿಂದ ಅವನು ಪಾರ್ವತಿಗೆ, ”ನನ್ನನ್ನು ವಿವಾಹಬಂಧನದಲ್ಲಿ ಸಿಲುಕಿಸಬೇಡಿ’’ ಎಂದು ಹೇಳಿದನು. ಆದರೂ ಪಾರ್ವತಿ ಅವನ ಹಿಂದೆ ಬಿದ್ದಳು; ಆದ್ದರಿಂದ ಕಾರ್ತಿಕೇಯನಿಗೆ ಕೋಪ ತಡೆಯಲಿಕ್ಕಾಗದೆ ಅವನು ಮುನಿಸಿಕೊಂಡು ‘ಸಂಡೂರಿ’ನ ಈ ಬೆಟ್ಟದ ಮೇಲೆ ಬಂದನು. ಅವನ ಹಿಂದೆಯೆ ಪಾರ್ವತಿ ಕೂಡ ಬೆಟ್ಟದ ಮೇಲೆ ಬಂದಳು. ನಮ್ಮ ಮಗ ನಮ್ಮ ಮಾತು ಕೇಳುವುದಿಲ್ಲ; ಆದ್ದರಿಂದ ಪಾರ್ವತಿ ಕೋಪದಿಂದ ಅವನಿಗೆ, ”ನಾನು ನಿನ್ನನ್ನು ಚಿಕ್ಕಂದಿನಿಂದ ಜೋಪಾನ ಮಾಡಿ ಇಷ್ಟು ದೊಡ್ಡವನನ್ನಾಗಿ ಮಾಡಿದ್ದೇನೆ. ಈಗ ನೀನು ನನ್ನ ಮಾತು ಕೇಳುವುದಿಲ್ಲ. ನಾನು ನಿನಗೆ ಕುಡಿಸಿದ ಹಾಲನ್ನು ನನಗೆ ಹಿಂತಿರುಗಿಸು’’ ಎಂದಳು. ಇದನ್ನು ಕೇಳಿ ಕಾರ್ತಿಕೇಯ ಕೋಪದಿಂದ ಅವಳ ಎಲ್ಲ ಹಾಲನ್ನು ವಾಂತಿ ಮಾಡಿದನು. ಈ ಹಾಲಿನಿಂದಲೇ ಬೆಟ್ಟ ತಯಾರಾಗಿದ್ದು ಆ ಬೆಟ್ಟಕ್ಕೆ ಕಾರ್ತಿಕೇಯನ ಭಸ್ಮದ ಬೆಟ್ಟ ಎನ್ನುತ್ತಾರೆ. ಈ ಭಸ್ಮ ಅಂದರೆ ಸಾಕ್ಷಾತ್‌ ಆದಿಮಾತೆ ಆದಿಶಕ್ತಿ ಪಾರ್ವತಿಯ ಹಾಲಾಗಿದೆ.

೪ ಇ. ‘ಇಳಕಲ್‌’ಗೆ ಹೋಗುವ ಮೊದಲು ಕನಸಿನಲ್ಲಿ ಕಾಣಿಸಿದ ಕಾರ್ತಿಕೇಯನ ಮೂರ್ತಿ ‘ಸಂಡೂರಿ’ನಲ್ಲಿನ ಕಾರ್ತಿಕೇಯನ ಮಂದಿರದ್ದಾಗಿರುವುದು : ನಾವು ಇಲ್ಲಿನ ಕಾರ್ತಿಕೇಯನ ದೇವಸ್ಥಾನಕ್ಕೆ ದರ್ಶನಕ್ಕೆ ಹೋದೆವು. ಅಲ್ಲಿಗೆ ಹೋಗುವ ಮೊದಲು ಮಧ್ಯಾಹ್ನ ನನಗೆ ಕನಸಿನಲ್ಲಿ ಕಾರ್ತಿಕೇಯನ ಇದೇ ಮೂರ್ತಿ ಕಾಣಿಸಿತ್ತು. ‘ನೀನು ಇಂದು ಬೇರೆ ಕಡೆಗೆ ಹೋಗುವ ನಿಯೋಜನೆಯಿದ್ದರೂ, ಇಂದು ನೀನು ನನ್ನ ದರ್ಶನಕ್ಕೆ ಇಲ್ಲಿಗೆ ಬರುವಿ, ಅದಕ್ಕಾಗಿಯೆ ನಾನು ನಿನಗೆ ಸ್ವಪ್ನದೃಷ್ಟಾಂತ ನೀಡಿದ್ದೇನೆ’ ಎಂದು ದೇವರು ಹೇಳುವುದು. ದೇವರ ಮನಸ್ಸಿನಲ್ಲಿ ಏನಿರುತ್ತದೆ, ಎಂಬುದು ನಮಗೆ ನಿಜವಾಗಿಯೂ ತಿಳಿಯುವುದಿಲ್ಲ.

೪ ಈ. ಕಾರ್ತಿಕೇಯ ಹಾಗೂ ಪಾರ್ವತಿ ಮಾತೆಯ ದರ್ಶನ : ಕಾರ್ತಿಕೇಯನ ಮಂದಿರದ ಸಮೀಪದಲ್ಲಿ ಪಾರ್ವತಿಯ ಮಂದಿರವೂ ಇದೆ. ಇವೆರಡೂ ಮಂದಿರಗಳನ್ನು ೮ ನೇ ಶತಮಾನದಲ್ಲಿ ಚೋಳ ರಾಜನು ನಿರ್ಮಿಸಿದ್ದು ಅತ್ಯಂತ ಸುಂದರವಾಗಿವೆ. ನಾವು ದೇವರ ದರ್ಶನ ಪಡೆದೆವು ಹಾಗೂ ಅಲ್ಲಿನ ಪವಿತ್ರ ಭಸ್ಮದ ಪ್ರಸಾದ ಪಡೆದು ಮಂದಿರದಿಂದ ಹೊರಗೆ ಬಂದೆವು.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ನಂದ್ಯಾಳ, ಆಂಧ್ರಪ್ರದೇಶ