ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಪ್ರಬುದ್ಧ ವಿಜ್ಞಾನಿ ಹಾಗೂ ಲೇಖಕ ಸಂದೀಪ್ ಬಾಲಕೃಷ್ಣ

ಸಂದೀಪ್ ಬಾಲಕೃಷ್ಣ ಅವರು ಭಾರತೀಯ ಇತಿಹಾಸ, ಸಂಸ್ಕೃತಿ ಹಾಗೂ ಸಾಹಿತ್ಯದ ಕ್ಷೇತ್ರದಲ್ಲಿ ಗಣನೀಯ ಸ್ಥಾನವನ್ನು ಪಡೆದಿರುವ ಪ್ರಮುಖ ವಿದ್ವಾಂಸರಾಗಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡದ ಮೂಲಕ ಅವರು ಹಿಂದೂ ನಾಗರಿಕತೆಯ ಆಳವಾದ ಅಧ್ಯಯನವನ್ನು ಸಾಮಾಜಿಕ ಮಾಧ್ಯಮ ಹಾಗೂ ಪಠ್ಯರೂಪಗಳಲ್ಲಿ ವಿಸ್ತರಿಸುತ್ತಿದ್ದಾರೆ. ಅವರ ಬರವಣಿಗೆಯು ತತ್ವಶಾಸ್ತ್ರ, ರಾಜಕೀಯ, ಸಂಸ್ಕೃತಿ ಹಾಗೂ ಇತಿಹಾಸದ ವಿಚಾರಗಳಲ್ಲಿ ವಿಶ್ಲೇಷಣಾತ್ಮಕ ದೃಷ್ಟಿಕೋಣವನ್ನು ನೀಡುತ್ತದೆ.

ಸಂದೀಪ್ ಬಾಲಕೃಷ್ಣ

ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು

1. ಪರಿಚಯ ಮತ್ತು ವೃತ್ತಿ ಪಯಣ

ಅ. ಸಂದೀಪ್ ಬಾಲಕೃಷ್ಣ ಅವರು The Dharma Dispatch ಎಂಬ ಆನ್‌ಲೈನ್ ಜರ್ನಲ್‌ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಈ ವೇದಿಕೆ ಹಿಂದೂ ನಾಗರಿಕತೆ, ತಾತ್ವಿಕ ವಿಚಾರಗಳು, ಧಾರ್ಮಿಕ ಪರಂಪರೆಗಳು ಮತ್ತು ಇತಿಹಾಸದ ಆಳವಾದ ಲೇಖನಗಳಿಗೆ ವೇದಿಕೆಯಾಗಿವೆ.

ಆ. ಇವರು Prekshaa Journal ನ ಸಹಸಂಪಾದಕರಾಗಿದ್ದು, ಇಲ್ಲಿ ಇತಿಹಾಸ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತಾದ ಅವರ ಲೇಖನಗಳು ನಿರಂತರವಾಗಿ ಪ್ರಕಟವಾಗುತ್ತಿವೆ.

ಇ. ಅವರ ಲೇಖನಗಳು ದೇಶದ ಪ್ರಮುಖ ಆಂಗ್ಲ ಮಾಧ್ಯಮಗಳಾದ Open Magazine ಹಾಗೂ IndiaFacts ನಂತಹ ವೇದಿಕೆಗಳಲ್ಲಿಯೂ ಗಮನ ಸೆಳೆದಿವೆ. ಪ್ರಬುದ್ಧ ಲೇಖಕನಾಗಿ, ಅವರು ಶ್ರೋತೃ ಮತ್ತು ಓದುಗ ಸಮುದಾಯವನ್ನು ಹಿಂದೂ ದರ್ಶನ ಹಾಗೂ ಇತಿಹಾಸದ ಜ್ಞಾನದಿಂದ ಸ್ಫೂರ್ತಿಗೊಳಿಸುತ್ತಿದ್ದಾರೆ.

ಮಹಾಕಾಲ್ ಕಾರಿಡಾರ್‌ನ ಮಹತ್ವವನ್ನು ವಿವರಿಸುವ ಕುರಿತು ಶ್ರೀ ಸಂದೀಪ್ ಬಾಲಕೃಷ್ಣ ಅವರು ಮಾಡಿದ ವಿಶ್ಲೇಷಣೆಯ ಪ್ರಾತಿನಿಧಿಕ ಚಿತ್ರ.

2. ಪ್ರಮುಖ ಕೃತಿಗಳು

ಸಂದೀಪ್ ಬಾಲಕೃಷ್ಣ ಅವರ ಸಾಹಿತ್ಯ ಸಂಪತ್ತು ಇತಿಹಾಸವನ್ನು ಅಧುನಿಕ ದೃಷ್ಟಿಕೋನದಿಂದ ವಿಶ್ಲೇಷಿಸುವಂತೆ ರೂಪುಗೊಂಡಿದೆ. ಅವರ ಪ್ರಮುಖ ಕೃತಿಗಳಲ್ಲಿ :

  • Tipu Sultan: The Tyrant of Mysore – ಟಿಪ್ಪು ಸುಲ್ತಾನನ ವಾಸ್ತವ ಚರಿತ್ರೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಕೃತಿ.
  • Invaders and Infidels: From Sindh to Delhi – ಆಕ್ರಮಣಕಾರರು ಮತ್ತು ವಿದ್ವೇಷದ ಇತಿಹಾಸ.
  • The Madurai Sultanate: A Concise History – ತಮಿಳುನಾಡಿನ ಇತಿಹಾಸದಲ್ಲಿ ಕಡಿಮೆ ಗಮನಿಸಲಾದ ಮದುರೈ ಸುಲ್ತಾನತ್ತಿನ ಉಲ್ಲೇಖ.
  • Seventy Years of Secularism – ಭಾರತ ಸಂವಿಧಾನದಲ್ಲಿ ಜಾರಿಯಿರುವ ಜಾತ್ಯಾತೀತವಾದ (ಸೆಕ್ಯುಲರಿಸಂ)ದ ವಿಮರ್ಶಾತ್ಮಕ ಚಿತ್ರಣ.
  • 10 Lessons from Hindu History in 10 Episodes – ಇತಿಹಾಸದ 10 ಅಧ್ಯಾಯಗಳಲ್ಲಿ ಹತ್ತು ಪಾಠಗಳು.
  • Stories From Inscriptions – ಶಾಸನಗಳಲ್ಲಿ ಸ್ಮೃತವಾಗಿರುವ ಜೀವಂತ ಕಥೆಗಳು.

ಅಲ್ಲದೆ, ಅವರು ಡಾ. ಎಸ್. ಎಲ್. ಭೈರಪ್ಪ ಅವರ ಪ್ರಸಿದ್ಧ ಕನ್ನಡ ಕಾದಂಬರಿ `ಆವರಣ`ವನ್ನು ಇಂಗ್ಲಿಷ್‌ಗೆ Aavarana : The Veil ಎಂಬ ಹೆಸರಿನಲ್ಲಿ ಅನುವಾದಿಸುವ ಮೂಲಕ ಅಗಾಧ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ.

ಸನಾತನ ಧರ್ಮದ ಮೇಲಿನ ಜಿಹಾದಿ ದಾಳಿಗಳ ಕುರಿತು ಶ್ರೀ ಸಂದೀಪ್ ಬಾಲಕೃಷ್ಣ ಅವರು ಮಾಡಿದ ವಿಶ್ಲೇಷಣೆಯ ಪ್ರಾತಿನಿಧಿಕ ಚಿತ್ರ.

3. ಗೌರವಗಳು ಮತ್ತು ಪ್ರಶಸ್ತಿಗಳು

ಅವರಿಗೆ ಭಾರತೀಯ ತತ್ವಶಾಸ್ತ್ರ ಸಂಶೋಧನಾ ಮಂಡಳಿ (ICPR) ಯ ಫೆಲೋ ಹುದ್ದೆ ದೊರೆತಿದೆ. ಈ ಪೋಷಕ ಸ್ಥಾನವು ಭಾರತೀಯ ತತ್ವಶಾಸ್ತ್ರ ಮತ್ತು ಇತಿಹಾಸದ ಪೋಷಣೆಯಲ್ಲಿನ ಅವರ ಪಾತ್ರಕ್ಕೆ ಗೌರವ ಸೂಚಿಸುತ್ತದೆ.

4. ಮಾಧ್ಯಮಗಳಲ್ಲಿ ಕೊಡುಗೆ

ಅವರ ಲೇಖನಗಳು ದೇಶಾದ್ಯಂತದ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸಾಮಾಜಿಕ ತತ್ವಶಾಸ್ತ್ರ ಮತ್ತು ಸಂಸ್ಕೃತಿಯ ಕುರಿತಾದ ಅಭಿಪ್ರಾಯದ ಅಭಿವ್ಯಕ್ತಿಗೆ ಸಹಾಯವಾಗಿದೆ. ಅವರು ಪ್ರಚಲಿತ ಸಮಸ್ಯೆಗಳಿಗೆ ಪೌರಾಣಿಕ ದೃಷ್ಠಿಕೋನಗಳಿಂದ ಉತ್ತರಿಸುವ ವಿಶಿಷ್ಟ ಶೈಲಿಯನ್ನು ಹೊಂದಿದ್ದಾರೆ.

5. ಭಾರತೀಯ ಪರಂಪರೆಯನ್ನು ಪರಿಚಯಿಸುವ ಶ್ರೀ. ಸಂದೀಪ್ ಬಾಲಕೃಷ್ಣ!

ಸಂದೀಪ್ ಬಾಲಕೃಷ್ಣ ಅವರು ಅತಿ ಮುಖ್ಯವಾದ ಅರ್ಥಶಾಸ್ತ್ರ, ತತ್ವಶಾಸ್ತ್ರ ಮತ್ತು ಇತಿಹಾಸದ ತಜ್ಞರಾಗಿದ್ದಾರೆ. ಇಂದಿನ ಪೀಳಿಗೆಗೆ ಭಾರತೀಯ ಪರಂಪರೆಯ ನಿಜವಾದ ತತ್ವಗಳನ್ನು ಪರಿಚಯಿಸುವಲ್ಲಿ ಅವರು ಭೂಮಿಕೆಯನ್ನು ನಿರ್ವಹಿಸುತ್ತಿದ್ದಾರೆ. ಅವರ ಬರವಣಿಗೆಗಳ ಪ್ರಭಾವವು ಜಾಗತಿಕ ಓದುಗರನ್ನು ಚಿಂತನೆಗೆ ಪ್ರೆರೇಪಿಸುವಂತಹದ್ದಾಗಿದೆ.

ಹಿಂದುತ್ವದ ಯೋಧರು ಈ ಸರಣಿಯಲ್ಲಿ ಪ್ರಕಟವಾಗುವ ಗಣ್ಯರ ಮಾಹಿತಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ!