
೧. ಉತ್ಥಾನಪಾದಾಸನ : ಶಾಂತವಾಗಿ ಮಲಗಿ ದೇಹದ ಎಲ್ಲಾ ಸ್ನಾಯುಗಳನ್ನು ಸಡಿಲಗೊಳಿಸಬೇಕು. ಅಂಗಾತ ಮಲಗಿ, ನಿಧಾನವಾಗಿ ಎರಡೂ ಕಾಲುಗಳನ್ನು (ಕಾಲಿನ ಬೆರಳುಗಳನ್ನು ಮೇಲಿನ ದಿಕ್ಕಿಗೆ ಚೆನ್ನಾಗಿ ನೇರವಿರಿಸಿ) ನಿಮಗೆ ಎಷ್ಟು ಸಮಯ ಸುಲಭವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆಯೋ ಅಷ್ಟು ಸಮಯದ ವರೆಗೆ ನಿಧಾನವಾಗಿ ಮೇಲಕ್ಕೆ ಎತ್ತಿ ಹಿಡಿಯಿರಿ. ನಂತರ ನಿಧಾನವಾಗಿ ಕೆಳಗೆ ತಂದು ನೆಲದ ಮೇಲೆ ಇಡಬೇಕು ಮತ್ತು ನಿಧಾನವಾಗಿ ಉಸಿರಾಡಬೇಕು. ಮೊದಲ ಬಾರಿಗೆ ೩೦ ಡಿಗ್ರಿಯ ವರೆಗೆ, ಎರಡನೇ ಬಾರಿಗೆ ೪೫ ಡಿಗ್ರಿಯ ವರೆಗೆ ಮತ್ತು ಮೂರನೇ ಬಾರಿಗೆ ೬೦ ಡಿಗ್ರಿಯ ವರೆಗೆ ಕಾಲುಗಳನ್ನು ಮೇಲಕ್ಕೆ ಎತ್ತಬೇಕು. (ಚಿತ್ರ ನೋಡಿರಿ)

೨. ಧನುರಾಸನ : ಬೋರಲಾಗಿ (ಹೊಟ್ಟೆಯ ಮೇಲೆ) ಮಲಗಿ ಎರಡೂ ಕೈಗಳನ್ನು ಬೆನ್ನಿನ ಕಡೆಗೆ ತಂದು ಎರಡೂ ಕಾಲುಗಳನ್ನು ಹಿಡಿದುಕೊಳ್ಳಬೇಕು ಮತ್ತು ದೇಹವನ್ನು ಧನಸ್ಸಿನಂತೆ (ಬಿಲ್ಲು) ಬಗ್ಗಿಸಬೇಕು. ಕೆಲವೊಮ್ಮೆ ಈ ಆಸನವನ್ನು ವಜ್ರಾಸನದಂತೆ ಹಿಮ್ಮಡಿಗಳ ಮೇಲೆ ಕುಳಿತುಕೊಂಡು ಹಿಂದೆ ಬಾಗಿ ಸಹ ಮಾಡಬಹುದು. (ಚಿತ್ರ ನೋಡಿರಿ)
೩. ನಾಭ್ಯಾಸನ : ಈ ಆಸನವು ನಾಭಿಯನ್ನು ಸಮತೋಲನಗೊಳಿಸಲು ಮತ್ತು ಅದನ್ನು ಊರ್ಜಾಮಯ(ಶಕ್ತಿಯುತ)ಗೊಳಿಸಲು ಪ್ರಭಾವಿ ಆಗಿರುತ್ತದೆ. ಈ ಆಸನದಲ್ಲಿ ಬೋರಲಾಗಿ ಮಲಗಿ, ದೇಹವನ್ನು ನೇರವಾಗಿಟ್ಟುಕೊಂಡು ಎರಡೂ ಕೈಗಳನ್ನು ತಲೆಯ ಮುಂದೆ ಚಾಚಿ ಎರಡೂ ಕೈಗಳನ್ನು ಎಷ್ಟು ಸಾಧ್ಯವಿದೆ ಅಷ್ಟು ಅಗಲ ಮಾಡಬೇಕು. ಎರಡೂ ಕಾಲುಗಳನ್ನು ಸಹ ಎರಡು ಕೈಗಳ ಅಗಲದಷ್ಟು ಅಗಲ ಮಾಡಬೇಕು. ನಂತರ ಪೂರಕ (ಉಸಿರನ್ನು ಒಳಗೆ ತೆಗೆದುಕೊಳ್ಳುವುದು) ಮಾಡಿ ಕೇವಲ ನಾಭಿಯ (ಹೊಟ್ಟೆಯ) ಮೇಲೆ ಇಡೀ ದೇಹವನ್ನು ಮೇಲೆತ್ತಬೇಕು. ಕೈ ಮತ್ತು ಕಾಲುಗಳನ್ನು ಒಂದು ಅಥವಾ ಒಂದೂವರೆ ಕೈ ಅಳತೆಯಷ್ಟು ಎತ್ತರಕ್ಕೆ ಎತ್ತಬೇಕು. ತಲೆ ಮತ್ತು ಎದೆಯನ್ನು ಮೇಲೆ ಎತ್ತಿ ಹಿಡಿಯಬೇಕು. ಉಸಿರನ್ನು ಬಿಡುವಾಗ ಕೈ ಮತ್ತು ಕಾಲುಗಳನ್ನು ನೆಲದ ಮೇಲೆ ಇಡಬೇಕು.
೩ ಅ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೊಂಟವನ್ನು ನೇರವಾಗಿಟ್ಟು ಕಾಲುಗಳನ್ನು ಚಾಚಿ ನೆಲದ ಮೇಲೆ ಕುಳಿತುಕೊಳ್ಳಬೇಕು. ಮೊದಲು ಬಲಗಾಲನ್ನು ಮಡಚಿ ಎಡತೊಡೆಯ ಮೊಣಕಾಲಿನ ಬಳಿ (ಮೇಲೆ) ಇಟ್ಟು, ಬಲಗೈಯಿಂದ ಬಲ ಮೊಣಕಾಲನ್ನು ಕೆಳಗೆ ಒತ್ತಲು ಪ್ರಯತ್ನಿಸಬೇಕು. ಹೀಗೆ ೫ ಬಾರಿ ಎಷ್ಟು ಸಹಿಸಲು ಸಾಧ್ಯವೋ ಅಷ್ಟು ಒತ್ತಡವನ್ನು ನೀಡಬೇಕು. ಇದೇ ರೀತಿ ಎಡಗಾಲನ್ನು ಮಡಚಿ ಇದೇ ಕ್ರಿಯೆಯನ್ನು ಮಾಡಬೇಕು, ಅಂದರೆ ನಾಭಿ ಸಮತೋಲನಕ್ಕೆ ಬರುತ್ತದೆ.
೩ ಆ. ನೇರವಾಗಿ ಮತ್ತು ಗಟ್ಟಿಯಾಗಿ (ಮೈಯನ್ನು ಸೆಟಿಸಿ) ಮಲಗಿಕೊಳ್ಳಿ. ತಲೆಯ ಕೆಳಗೆ ದಿಂಬನ್ನು ಇಟ್ಟುಕೊಳ್ಳಬೇಡಿ. ಕಾಲುಗಳನ್ನು ಮೇಲೆತ್ತಿ ೯೦ ಡಿಗ್ರಿ ಕೋನದಲ್ಲಿ ಇಟ್ಟುಕೊಳ್ಳಿರಿ. ನಂತರ ತಲೆಯನ್ನು ನೆಲದಿಂದ ಎತ್ತದೆಯೇ ಎರಡೂ ಕಾಲುಗಳನ್ನು ನೇರವಾಗಿಟ್ಟುಕೊಂಡು ನಿಧಾನವಾಗಿ ಕೆಳಗೆ ತನ್ನಿರಿ. ಬೆಳಗ್ಗೆ ೫ ಅಥವಾ ೬ ಬಾರಿ ಈ ಕ್ರಿಯೆಯನ್ನು ಮಾಡಿದ ಮೇಲೆ ನಾಭಿ ಸಮತೋಲನಗೊಳ್ಳುತ್ತದೆ.
೩ ಇ. ನೆಲದ ಮೇಲೆ ನೇರವಾಗಿ ಮಲಗಿ ಉಸಿರನ್ನು ಹೊರಗೆ ಹಾಕಬೇಕು (ಶ್ವಾಸವನ್ನು ಹೊರಗೆ ಬಿಡಬೇಕು), ಮತ್ತೆ ಉಸಿರನ್ನು ತೆಗೆದುಕೊಳ್ಳುವ ಮೊದಲು ಹೊಟ್ಟೆಯನ್ನು ಉಬ್ಬಿಸಿರಿ. ಸಾಧ್ಯವಾದಷ್ಟು ಸಮಯ ಈ ಸ್ಥಿತಿಯಲ್ಲಿ ಇರಬೇಕು. ಅಂದಾಜು ೪ ರಿಂದ ೫ ಬಾರಿ ಈ ಕ್ರಿಯೆಯನ್ನು ಮಾಡುವುದರಿಂದ ನಾಭಿ ಆರೋಗ್ಯವಂತವಾಗುತ್ತದೆ. ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು !
ಗರ್ಭಿಣಿಯರು, ಹಾಗೆಯೇ ಕ್ಯಾನ್ಸರ್, ಅಪೆಂಡಿಕ್ಸ್, ಅಲ್ಸರ್ ಇತ್ಯಾದಿ ಕಾಯಿಲೆಗಳಿರುವ ರೋಗಿಗಳ ನಾಭಿಯನ್ನು ಸಮತೋಲನಕ್ಕೆ ತರುವಾಗ ನೇರವಾಗಿ ಹೊಟ್ಟೆಯನ್ನು ಕೈಯಿಂದ ಒತ್ತಿ ಮಾಡಬಾರದು.
– ಶ್ರೀ. ಅಕಲೇಶ ಜೈನ್ (ಆಧಾರ : ಮರಾಠಿ ಮಾಸಿಕ ‘ಯೋಗ ಸಂದೇಶ)
ನಿಧನ ವಾರ್ತೆ
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ