
ಗೋವಾದಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗಿತ್ತು. ಈ ಅಧಿವೇಶನದಲ್ಲಿ ಉಪಸ್ಥಿತರಿಗೆ ಗುರುತಿನ ಚೀಟಿ ಸಮಯಕ್ಕೆ ಸಿಗದಿರುವುದು, ಮಹಾಪ್ರಸಾದಕ್ಕಾಗಿ ಬಹಳ ಸಮಯ ಸಾಲಿನಲ್ಲಿ ನಿಲ್ಲಬೇಕಾಗಿರುವುದು, ಸಾಧಕರ ಜನದಟ್ಟಣೆ ಮತ್ತು ಭದ್ರತಾ ಕಾರಣಗಳಿಂದ ವಸ್ತುಗಳು ಮತ್ತು ಆಹಾರ ಪದಾರ್ಥಗಳನ್ನು ಒಯ್ಯಲು ಸಾಧ್ಯವಾಗದಿರುವುದು, ನಿವಾಸ ವ್ಯವಸ್ಥೆಯ ಕಡೆಗೆ ಹೋಗಲು ವಾಹನ ಸಿಗದಿರುವುದು ಮುಂತಾದ ತೊಂದರೆಗಳನ್ನು ಎದುರಿಸಬೇಕಾಯಿತು. ಈ ಅನಾನುಕೂಲತೆಗಳಿಗಾಗಿ ನಾವು ಎಲ್ಲರಲ್ಲೂ ಕ್ಷಮೆಯಾಚಿಸುತ್ತೇವೆ. ಈ ಎಲ್ಲಾ ಪ್ರಸಂಗಗಳಲ್ಲಿನ ಅಡಚಣೆಗಳ ಮೂಲವನ್ನು ತಿಳಿದು ಭವಿಷ್ಯದಲ್ಲಿ ಇಂತಹ ಅಡಚಣೆ ಉಂಟಾಗದಂತೆ ನಾವು ಪ್ರಯತ್ನಿಸುತ್ತೇವೆ.
ಆಧ್ಯಾತ್ಮಿಕ ಸ್ತರದ ತೊಂದರೆಗಳನ್ನು ನಿವಾರಿಸಲು ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸುವುದು ನಿರೀಕ್ಷಿತ!

ಈ ಕುರಿತು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರನ್ನು ಕೇಳಿದಾಗ, “ಈ ಮಹೋತ್ಸವದಲ್ಲಿ 15 ಪ್ರತಿಶತ ಮಾನವ ದೋಷಗಳಿದ್ದರೆ, 85 ಪ್ರತಿಶತ ತೊಂದರೆ ಆಧ್ಯಾತ್ಮಿಕ ಸ್ತರದ್ದಾಗಿದೆ. ಸೂಕ್ಷ್ಮ ಕೆಟ್ಟ ಶಕ್ತಿಗಳೊಂದಿಗೆ ತೀವ್ರ ಯುದ್ಧ ನಡೆಯುತ್ತಿದೆ. ಹಿಂದು ರಾಷ್ಟ್ರದ ಕಾರ್ಯವನ್ನು ನಿಲ್ಲಿಸಲು ಇಂತಹ ತೊಂದರೆಗಳು ಬರುತ್ತಿವೆ. ಹಿಂದು ರಾಷ್ಟ್ರದ ಸ್ಥಾಪನೆಗೆ ಬಹಳ ದೊಡ್ಡ ಪ್ರಮಾಣದಲ್ಲಿ ಸಿದ್ಧತೆ ಮಾಡಬೇಕಾಗಿದೆ ಮತ್ತು ಸಾಧಕರು ವ್ಯಷ್ಟಿ ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸುವುದು ನಿರೀಕ್ಷಿತವಾಗಿದೆ ಎಂಬುದು ಇದರಿಂದ ತಿಳಿಯುತ್ತದೆ ಎಂದು ಅವರು ವಿವರಿಸಿದರು.”
– ಆಯೋಜನಾ ಸಮಿತಿ, ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ.
|
ಕೆಟ್ಟ ಶಕ್ತಿಗಳು: ವಾತಾವರಣದಲ್ಲಿ ಉತ್ತಮ ಮತ್ತು ಕೆಟ್ಟ ಶಕ್ತಿಗಳು ಸಕ್ರಿಯವಾಗಿರುತ್ತವೆ. ಉತ್ತಮ ಶಕ್ತಿಗಳು ಉತ್ತಮ ಕಾರ್ಯಗಳಿಗೆ ಮಾನವನಿಗೆ ಸಹಾಯ ಮಾಡುತ್ತವೆ, ಆದರೆ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ನೀಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ಉಂಟು ಮಾಡಿದ ಅನೇಕ ಕಥೆಗಳು ವೇದ-ಪುರಾಣಗಳಲ್ಲಿವೆ. ‘ಅಥರ್ವವೇದದಲ್ಲಿ ಅನೇಕ ಕಡೆ ಕೆಟ್ಟ ಶಕ್ತಿಗಳಾದ ಅಸುರರು, ರಾಕ್ಷಸರು, ಪಿಶಾಚಿಗಳು ಹಾಗೂ ಮಾಟಮಂತ್ರ, ಭಾನಮತಿ ಇವುಗಳನ್ನು ತಡೆಯಲು ಮಂತ್ರಗಳನ್ನು ನೀಡಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಗಳನ್ನು ನಿವಾರಿಸಲು ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದಾದಿ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಸೂಕ್ಷ್ಮ: ವ್ಯಕ್ತಿಯ ಸ್ಥೂಲ ಎಂದರೆ ನೇರವಾಗಿ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳು. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಆಚೆಗಿನದು ‘ಸೂಕ್ಷ್ಮ’. ಸಾಧನೆಯಲ್ಲಿ ಪ್ರಗತಿ ಮಾಡಿದ ಕೆಲವು ವ್ಯಕ್ತಿಗಳಿಗೆ ಈ ‘ಸೂಕ್ಷ್ಮ’ ಸಂವೇದನೆಗಳು ಅರಿವಾಗುತ್ತವೆ. ಈ ‘ಸೂಕ್ಷ್ಮ’ ಜ್ಞಾನದ ಕುರಿತು ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !