
ಭಾಜಪದ ಸಂಸದ ಡಾ. ನಿಶಿಕಾಂತ ದುಬೆ ಇವರು ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ಮೇಲೆ ದೋಷಾರೋಪ ಮಾಡುವಾಗ, ‘ಈ ದೇಶದಲ್ಲಿ ಧರ್ಮಯುದ್ಧವನ್ನು ಪ್ರಚೋದಿಸಲು ಯಾರಾದರೂ ಹೊಣೆಯಾಗಿದ್ದರೆ, ಅದು ಸರ್ವೋಚ್ಚ ನ್ಯಾಯಾಲಯ ಮತ್ತು ಅದರ ನ್ಯಾಯಾಧೀಶರು !’, ಎಂದಿದ್ದರು.
ಅವರ ಈ ಆರೋಪದಿಂದ ತೀವ್ರ ವಾಗ್ಯುದ್ಧ ನಡೆದಿತ್ತು ಹಾಗೂ ವಿರೋಧಿಗಳು ಅವರ ಕಿವಿ ಹಿಂಡಿಯೂ ಆಯಿತು; ಆದರೆ ಖ್ಯಾತ ವಿಜ್ಞಾನಿ, ಲೇಖಕ ಹಾಗೂ ವಾಗ್ಮಿ ಶ್ರೀ. ಆನಂದ ರಂಗನಾಥನ್ ಇವರು ಒಂದು ವಿಡಿಯೋದ ಮೂಲಕ ತಮ್ಮ ಅಭಿಪ್ರಾಯವನ್ನು ಪ್ರಸಾರ ಮಾಡಿ ಡಾ. ನಿಶಿಕಾಂತ ದುಬೆಯವರಿಗೆ ಪೂರ್ಣ ಬೆಂಬಲ ನೀಡಿದ್ದಾರೆ. ಶ್ರೀ. ಆನಂದ ರಂಗನಾಥನ್ ಇವರು ಆಂಗ್ಲ ಭಾಷೆಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ೯ ಪ್ರಶ್ನೆಗಳನ್ನು ಕೇಳಿದ್ದಾರೆ. ಅದು ಮಹತ್ವದ್ದಾಗಿರುವುದರಿಂದ ಎಲ್ಲರಿಗೂ ತಿಳಿಯಬೇಕೆಂದು ಅದನ್ನು ಕನ್ನಡಕ್ಕೆ ಅನುವಾದ ಮಾಡಿ ಅದರ ಸಾರಾಂಶವನ್ನು ಇಲ್ಲಿ ಕೊಟ್ಟಿದ್ದೇವೆ.
ಶ್ರೀ. ಆನಂದ ರಂಗನಾಥನ್ ಕೇಳಿದ ಪ್ರಶ್ನೆಗಳು
೧. ಕಾಶ್ಮೀರಿ ಹಿಂದೂಗಳ ಮೇಲಾದ ದೌರ್ಜನ್ಯದ ಅರ್ಜಿಯ ಖಟ್ಲೆಯನ್ನು ಏಕೆ ಆಲಿಸಲಿಲ್ಲ ?
ಮೋದಿ ಸರಕಾರ ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ಕಲಮ್ ೩೭೦ ಅನ್ನು ರದ್ದುಪಡಿಸಿದಾಗ ವಿಪಕ್ಷಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದವು, ಆಗ ಅದರ ವಿಚಾರಣೆಗಾಗಿ ಸರ್ವೋಚ್ಚ ನ್ಯಾಯಾಲಯ ಅವಸರ ಪಡುತ್ತಾ ವಿಶೇಷ ವಿಭಾಗೀಯ ಪೀಠವನ್ನು ರಚಿಸಿ ತಕ್ಷಣ ಆಲಿಕೆ ನಡೆಸಿತು; ಆದರೆ ಇದೇ ಸರ್ವೋಚ್ಚ ನ್ಯಾಯಾಲಯ ‘೧೯೯೦ ರಲ್ಲಿ ಕಾಶ್ಮೀರಿ ಹಿಂದೂಗಳ ಮೇಲೆ ಅಪಾರ ದೌರ್ಜನ್ಯ ನಡೆಸಿ ಅವರನ್ನು ಅಲ್ಲಿಂದ ಹೊರ ದಬ್ಬಿ ನಿರಾಶ್ರಿತರನ್ನಾಗಿ ಮಾಡಲಾಯಿತು, ಅವರ ಮನೆಮಠಗಳನ್ನು ಕಬಳಿಸಲಾಯಿತು, ಮಂದಿರಗಳನ್ನು ಧ್ವಂಸ ಮಾಡಲಾಯಿತು, ಅನೇಕರನ್ನು ಕೊಲೆ ಮಾಡಲಾಯಿತು, ನೌಕರಿಗಳನ್ನು ಕಸಿದುಕೊಳ್ಳಲಾಯಿತು, ಸ್ತ್ರೀಯರನ್ನು ಬಲಾತ್ಕರಿಸ ಲಾಯಿತು; ಅದಕ್ಕೆ ಸಂಬಂಧಿಸಿದ ಅರ್ಜಿಯ ಬಗ್ಗೆ ‘ಇದು ತುಂಬಾ ಹಳೆಯ ವಿಷಯವಾಗಿರುವುದರಿಂದ ನಾವು ಇದನ್ನು ಪುನಃ ತೆರೆಯಲು ಇಚ್ಛಿಸುವುದಿಲ್ಲ !’, ಎಂದು ಹೇಳಿ ಕೈ ಚೆಲ್ಲಿ ಕುಳಿತುಕೊಂಡಿದೆ. ಇಂತಹ ದ್ವಿಮುಖ ನಿಲುವಿನಿಂದ ಹಿಂದೂಗಳಲ್ಲಿ ಆಕ್ರೋಶ ಉಕ್ಕಿ ಬರುವಂತೆ ಮಾಡುವುದು ಧರ್ಮಯುದ್ಧವಲ್ಲದಿದ್ದರೆÉ, ಇನ್ನೇನು ?

೨. ಇನ್ನೊಂದು ಧರ್ಮಕ್ಕೆ ಅನ್ಯಾಯ ಹಾಗೂ ಬಹಿರಂಗ ಪಕ್ಷಪಾತ ಮಾಡುವ ಕಾನೂನು ಬೇಕೇ ?
ಇಂದು ವಕ್ಫ್ ಬೋರ್ಡ್‌ನ ಬಗ್ಗೆ ಕಳವಳ ವ್ಯಕ್ತಪಡಿಸುವ ಸರ್ವೋಚ್ಚ ನ್ಯಾಯಾಲಯಕ್ಕೆ ಕಳೆದ ೩೦ ವರ್ಷಗಳಲ್ಲಿ ವಕ್ಫ್ ಬೋರ್ಡ್ ಅನಧಿಕೃತವಾಗಿ ಕಬಳಿಸಿದ ಅಪಾರ ಸಂಪತ್ತು ಕಾಣಿಸಲಿಲ್ಲವೇ ಅಥವಾ ಅವರು ನಡೆಸುವ ಸಮಾಂತರ ನ್ಯಾಯವ್ಯವಸ್ಥೆ ಕಾಣಿಸಲಿಲ್ಲವೇ ? ಈ ಉದ್ಯೋಗ ನಡೆಸುವಾಗ ಅವರು ಒಂದು ರೂಪಾಯಿ ಕೂಡ ತೆರಿಗೆ ತುಂಬಿಸಲಿಲ್ಲ ಎಂಬುದೂ ಅರಿವಾಗಲಿಲ್ಲ. ಆಗ ಅವರ ಅಥವಾ ಇನ್ನಿತರ ಧರ್ಮದ ವಿಚಾರ ಮಾಡದಿರುವ ಸರ್ವೋಚ್ಚ ನ್ಯಾಯಾಲಯಕ್ಕೆ ಇಂದು ವಕ್ಫ್ ಸುಧಾರಣಾ ಕಾನೂನಿನಿಂದ ತಕ್ಷಣ ಇಸ್ಲಾಮ್ ಅಪಾಯದಲ್ಲಿದೆ ಎಂಬ ಸಾಕ್ಷಾತ್ಕಾರವಾಗಲು ಆರಂಭವಾಗಿದೆ. ಇದೇ ವಿಷಯ ನಾಳೆ ಉಲ್ಟಾ ಆದರೆ ಏನಾಗಬಹುದೆಂಬುದನ್ನು ನ್ಯಾಯಾಲಯ ವಿಚಾರ ಮಾಡಿದೆಯೇ ? ಏಕೆಂದರೆ ಈ ದೇಶದ ಜಾಮಾ ಮಸೀದಿ ಸಹಿತ ಪ್ರತಿಯೊಂದು ಮಸೀದಿಗಳು ಅಥವಾ ಗೋರಿಗಳು ಸನಾತನದ ಹಿಂದೂ ಭೂಮಿಯ ಮೇಲಿವೆ. ಒಂದು ವೇಳೆ ನಾಳೆ ತಮ್ಮ ಆಸ್ತಿಗಾಗಿ ಮುಸಲ್ಮಾನರಿಗೆ ‘ಸನಾತನ ಬೋರ್ಡ್ ಟ್ರಿಬ್ಯೂನಲ್’ನ ಮುಂದೆ ನಿಲ್ಲುವ ಪ್ರಮೇಯ ಬಂದರೆ ಅವರಿಗೆ ಹೇಗನಿಸಬಹುದು ?, ನೀವು ಇದರ ಬಗ್ಗೆ ಎಂದಾದರೂ ವಿಚಾರ ಮಾಡಿದ್ದೀರಾ ? ಆದರೆ ವಕ್ಫ್ ಕಾನೂನನ್ನು ಶಸ್ತ್ರವನ್ನಾಗಿ ಬಳಸಿ ವಕ್ಫ್ ಬೋರ್ಡ್ ಕಳೆದ ೧೦ ವರ್ಷಗಳಲ್ಲಿ ಹಿಂದೂಗಳ ೨೦ ಲಕ್ಷ ಆಸ್ತಿಗಳನ್ನು ಕಬಳಿಸಿದೆ, ಇದನ್ನು ಸರ್ವೋಚ್ಚ ನ್ಯಾಯಾಲಯ ನೇರವಾಗಿ ದುರ್ಲಕ್ಷ ಮಾಡಿದೆ. ‘ಇತರ ಧರ್ಮದವರಿಗೆ ಅನ್ಯಾಯ ಹಾಗೂ ಪಕ್ಷಪಾತ ಮಾಡುವ ಇಂತಹ ಕಾನೂನು ಕೇವಲ ಮುಸಲ್ಮಾನರಿಗೆ ಏಕೆ ಇರಬೇಕು ?’, ಎನ್ನುವ ಪ್ರಶ್ನೆ ಈ ನ್ಯಾಯಾಲಯಕ್ಕೆ ಯಾವತ್ತೂ ಉದ್ಭವಿಸಲಿಲ್ಲ. ಇದು ಕೂಡ ಧರ್ಮಯುದ್ಧವನ್ನು ಉದ್ರೇಕಿಸುವುದಿಲ್ಲದಿದ್ದರೆ ಮತ್ತಿನ್ನೇನು ?
೩. ಅಲ್ಪಸಂಖ್ಯಾತರಿಗೆ ಗೊಡ್ಡು ಸಲಾಮ್ ಮಾಡುವುದು ಹಾಗೂ ಹಿಂದೂಗಳ ಮಂದಿರಗಳ, ರೂಢಿ-ಪರಂಪರೆಗಳಿಗೆ ಸಂಬಂಧಿಸಿ ಏಕಪಕ್ಷೀಯ ಆದೇಶವು ಯೋಗ್ಯವಾಗಿದೆಯೇ ?
ಈಗ ಸರಕಾರದ ನಿಯಂತ್ರಣದಲ್ಲಿರುವ ಹಿಂದೂ ದೇವಸ್ಥಾನ ಗಳ ವಿಷಯವನ್ನು ನೋಡೋಣ. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಜಾತ್ಯತೀತದ ಹೆಸರಿನಲ್ಲಿ ಹಿಂದೂ ದೇವಾಲಯಗಳಿಂದ ಹಣ ಮತ್ತು ಭೂಮಿಯನ್ನು ಲೂಟಿ ಮಾಡಿ ಮತ್ತು ಹಿಂದೂ ತೆರಿಗೆದಾರರ ಹಣವನ್ನು ಸಂಗ್ರಹಿಸಿ ಅದರಿಂದ ಮದರಸಾ, ವಕ್ಫ್ ಬೋರ್ಡ್, ಮುಲ್ಲಾ-ಮೌಲ್ವಿಗಳ (ಇಸ್ಲಾಮಿನ ಧಾರ್ಮಿಕ ನಾಯಕರು) ವೇತನ, ಹಜ್ ಯಾತ್ರೆಗೆ ಖರ್ಚು, ಇಫ್ತಾರ ಔತಣ, ಬಡ್ಡಿರಹಿತ ಸಾಲ, ಕರ್ತಾರಪುರ ಕಾರಿಡಾರ್, ಅಲ್ಪಸಂಖ್ಯಾತರಿಗೆ ಮೀಸಲಾತಿ, ಸಂಸ್ಥೆ ಮತ್ತು ಸೌಲಭ್ಯಗಳನ್ನು ನೀಡುವುದು ಹೀಗೆ ನೂರಾರು ಪ್ರಕಾರಗಳಲ್ಲಿ ಖರ್ಚು ಮಾಡಲಾಯಿತು. ತದ್ವಿರುದ್ಧ ಅದೆಷ್ಟೊ ಸ್ಥಳಗಳಲ್ಲಿ ಕಾನೂನು ಮಾಡಿ ಅಥವಾ ಏಕಪಕ್ಷೀಯ ಆದೇಶ ನೀಡಿ ಹಿಂದೂಗಳ ಪೂಜಾರ್ಚನೆಗಳಿಗೆ ನಿರ್ಬಂಧ ಹೇರುವುದು, ಅವರ ಖಟ್ಲೆಗಳನ್ನು ವರ್ಷಗಟ್ಟಲೆ ನೆನಗುದಿಯಲ್ಲಿಡುವುದು, ಅಲ್ಪಸಂಖ್ಯಾತ ರಿಗೆ ಯಾವಾಗಲೂ ಗೊಡ್ಡುಸಲಾಮ್ ಮಾಡುವುದು ಹಾಗೂ ಹಿಂದೂಗಳ ಮನಸ್ಸನ್ನು ಕಲಕುವಂತಹ ಕೃತ್ಯಗಳನ್ನು ಮಾಡುವುದು ಧರ್ಮಯುದ್ಧವಲ್ಲದೇ ಇನ್ನೇನಿರಬಹುದು ?
೪. ಮುಸಲ್ಮಾನರ ಅಥವಾ ಕ್ರೈಸ್ತರ ಶಿಕ್ಷಣ ಸಂಸ್ಥೆ ಸಂಚಾಲಕರಿಗೆ ಕಾನೂನು ಪ್ರಕಾರ ಸಿಗುವ ಸೌಲಭ್ಯಗಳು ಯೋಗ್ಯವೇ ?
ಶಿಕ್ಷಣದ ಅಧಿಕಾರದ ವಿಷಯದಲ್ಲಿ ಅದೇ ನಡೆಯುತ್ತಿದೆ. ಹಿಂದೂಗಳು ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಶೇ. ೨೫ ರಷ್ಟು ಸ್ಥಾನ ಅಲ್ಪಸಂಖ್ಯಾತ ಮಕ್ಕಳಿಗಾಗಿ ಮೀಸಲಿಡುವ ಆದೇಶವನ್ನು ಇದೇ ಸರ್ವೋಚ್ಚ ನ್ಯಾಯಾಲಯ ನೀಡಿದೆ. ಮುಸಲ್ಮಾನ ಅಥವಾ ಕ್ರೈಸ್ತ ಸಂಚಾಲಕರಿಗೆ ಮಾತ್ರ ಇಂತಹ ಯಾವುದೇ ಬಂಧನ ಹಾಕಿಲ್ಲ. ಇದರ ಪರಿಣಾಮವೆಂದು ಹಿಂದೂಗಳ ಸಾವಿರಾರು ಶಾಲೆಗಳು ಮುಚ್ಚಲ್ಪಟ್ಟಿವೆ ಹಾಗೂ ಹಿಂದೂ ಪಾಲಕರಿಗೆ ಅವರ ಮಕ್ಕಳನ್ನು ಇತರ ಧರ್ಮೀಯರ ಶಾಲೆಗಳಿಗೆ ಕಳುಹಿಸುವಂತೆ ಮಾಡಿದೆ. ಮತಾಂತರಕ್ಕೆ ಇದು ಕೂಡ ಒಂದು ಮುಖ್ಯ ಕಾರಣವಾಗುವುದಿಲ್ಲವೇ ? ಆದರೆ ಇದರಲ್ಲಿ ಭೇದಭಾವ ಆಗಿರುವುದು ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ಬಂದಿಲ್ಲ ಹಾಗೂ ಅದಕ್ಕೆ ಅದರ ಪರಿವೆಯೂ ಇಲ್ಲ. ಇದನ್ನು ಹಿಂದೂಗಳಲ್ಲಿ ಮನಸ್ತಾಪ ನಿರ್ಮಾಣ ಮಾಡಿ ಧರ್ಮಯುದ್ಧವನ್ನು ಪ್ರಚೋದಿಸು ವುದೆಂದು ಹೇಳದೆ ಇನ್ನೇನು ಹೇಳಬೇಕು ?’
೫. ‘ಹೇಟ್ ಸ್ಪೀಚ್’ನಿಂದ (ದ್ವೇಷಯುಕ್ತ ಭಾಷಣದಿಂದ) ಹಿಂದೂಗಳಲ್ಲಿ ಸಂತಾಪ
ಅಭಿವ್ಯಕ್ತಿಸ್ವಾತಂತ್ರ್ಯದ್ದೂ ಹಾಗೆಯೇ ಆಗಿದೆ. ‘ಫ್ರೀ ಸ್ಪೀಚ್’ (ಮುಕ್ತ ಭಾಷಣ) ಹಾಗೂ ‘ಹೇಟ್ ಸ್ಪೀಚ್’ನ (ದ್ವೇಷಯುಕ್ತ ಭಾಷಣದ) ಸರ್ವೋಚ್ಚ ನ್ಯಾಯಾಲಯದ ವ್ಯಾಖ್ಯೆ ಹಿಂದೂ ಮತ್ತು ಮುಸಲ್ಮಾನರಿಗೆ ಬೇರೆ ಬೇರೆ ರೀತಿಯಲ್ಲಿ ಅನ್ವಯವಾಗುತ್ತದೆ. ಹಿಂದೂಗಳು ಮಾಡುವುದೆಲ್ಲ ‘ಹೇಟ್ ಸ್ಪೀಚ್’ ಹಾಗೂ ಬೇರೆಯವರು ಹಿಂದೂಗಳನ್ನು ಉದ್ದೇಶಿಸಿ ಮಾಡಿರುವುದೆಲ್ಲ ‘ಫ್ರೀ ಸ್ಪೀಚ್’ ಎಂದು ನ್ಯಾಯಾಲಯ ತಿಳಿದುಕೊಂಡಿದೆಯೇ ? ಇದರ ಬಗ್ಗೆ ಅದೆಷ್ಟೋ ಉದಾಹರಣೆಗಳನ್ನು ಕೊಡಬಹುದು. ನುಪೂರ್ ಶರ್ಮಾ ಇವರು ಕೇವಲ ‘ಕುರಾನ್’ ಮತ್ತು ಹದೀಸ್’ನಲ್ಲಿ ಏನು ಬರೆದಿದೆಯೋ, ಅದನ್ನು ಉಚ್ಚರಿಸಿದಾಗ ನ್ಯಾಯಾಲಯ ಅದನ್ನು ‘ಹೇಟ್ ಸ್ಪೀಚ್’ ಎಂದು ನಿರ್ಧರಿಸಿತು; ಆದರೆ ದ್ರಮುಖದ ಮುಖಂಡ ಉದಯನಿಧಿ ಸ್ಟಾಲಿನ್ ಮತ್ತು ಇನ್ನಿತರ ಕೆಲವು ರಾಜಕಾರಣಿಗಳು ‘ಸನಾತನ ಧರ್ಮವನ್ನು ಕಾಮಲೆ, ಕ್ರಿಮಿಕೀಟಗಳಿಗೆ ಹೋಲಿಸಿ ಅದನ್ನು ನಾಶಗೊಳಿಸಬೇಕೆಂಬ ಹೇಳಿಕೆಗಳನ್ನು ನೀಡಿದರು’, ಅದು ಸರ್ವೋಚ್ಚ ನ್ಯಾಯಾಲಯಕ್ಕೆ ಇದುವರೆಗೂ ‘ಹೇಟ್ ಸ್ಪೀಚ್’ ಅನಿಸಲಿಲ್ಲ. ‘ಈ ರೀತಿಯ ಅನ್ಯಾಯದಿಂದ ಹಿಂದೂಗಳ ಮನಸ್ಸಿನಲ್ಲಿ ನಿರಂತರ ಸಂತಾಪ ಉಕ್ಕಿ ಬರುವಂತಹ ನಿಲುವನ್ನು ಅಂಗೀಕರಿಸುವುದು, ಇದು ಧರ್ಮಯುದ್ಧವನ್ನು ಪ್ರಚೋದಿಸಲು ಸಹಾಯ ಮಾಡದೆ ಇನ್ನೇನು ಮಾಡುವುದು ?
೬. ಹಿಂದೂ ಧರ್ಮದ ಕರ್ಮಕಾಂಡದ ವಿಷಯದಲ್ಲಿ ನ್ಯಾಯವ್ಯವಸ್ಥೆಯ ನಿಲುವು ದ್ವಿಮುಖ ಇಲ್ಲವೇ ?
ಹಿಂದೂ ಧರ್ಮದ ಕರ್ಮಕಾಂಡವನ್ನು ಆಚರಿಸುವುದರ ಬಗ್ಗೆಯೂ ನ್ಯಾಯವ್ಯವಸ್ಥೆಯ ಪಾತ್ರ ಹಾಗೆಯೇ ಇದೆ. ವಿಜಯದಶಮಿಯಲ್ಲಿ ಕೋಣ ಅಥವಾ ಇನ್ನಿತರ ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಪಶುಬಲಿ ನೀಡುವ ೬೦೦ ವರ್ಷಗಳ ಹಿಂದಿನ ಪರಂಪರೆಯನ್ನು ಕಾನೂನು ಪ್ರಕಾರ ನಿಲ್ಲಿಸಿ ಅದೆಷ್ಟೊ ದಶಕಗಳಾದವು; ಆದರೆ ಧಾರ್ಮಿಕ ಪಶುಬಲಿಯನ್ನು ನಿಲ್ಲಿಸುವಾಗ ಎಲ್ಲ ಧರ್ಮ ಪಂಥದವರ ಪದ್ಧತಿಯನ್ನು ಏಕೆ ನಿಲ್ಲಿಸುವುದಿಲ್ಲ ?
ನೀವೆಲ್ಲ ನ್ಯಾಯಾಧೀಶರು ‘ಹಲಾಲ’ (ಇಸ್ಲಾಮ್‌ನಲ್ಲಿ ಮನ್ನಣೆ ಪಡೆದಿರುವ) ಪದ್ಧತಿಗೆ ನಿರ್ಬಂಧ ಹೇರುವ ಅಥವಾ ಈದ್‌ನಲ್ಲಿ ನಡೆಯುವ ಸಾಮೂಹಿಕ ಪಶುಬಲಿಗೆ ನಿರ್ಬಂಧ ಹೇರಲು ಪ್ರಯತ್ನಿಸುವಿರಾ ? ‘ಆಡಿನ ತಲೆಯನ್ನು ಕಾಬಾದ ಕಡೆಗೆ ತಿರುಗಿಸಿ ಅದರ ಕುತ್ತಿಗೆಯನ್ನು ಅರ್ಧ ಸೀಳಿ ಅದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುವಾಗಲೇ ಅದರ ಚರ್ಮವನ್ನು ಸುಲಿದು ಧಾರ್ಮಿಕ ಘೋಷಣೆ ನೀಡುವುದು’, ಇದಕ್ಕೆ ನಿಮ್ಮ ಅಭ್ಯಂತರವಿಲ್ಲ; ಆದರೆ ಝಟ್ಕಾದಲ್ಲಿ ಒಂದೇ ಏಟಿಗೆ ರುಂಡವನ್ನು ಹಾರಿಸಿ ಬಲಿ ಕೊಡುವ ಹಿಂದೂಗಳ ಪಶುಬಲಿ ನಿಮಗೆ ಇಷ್ಟವಿಲ್ಲ. ‘ಜನ್ಮಾಷ್ಟಮಿಯಂದು ನೀವು ೨೦ ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಮೊಸರುಕುಡಿಕೆ ಇರಬಾರದು’, ಎಂದು ಹಿಂದೂಗಳ ಮೇಲೆ ನಿರ್ಬಂಧ ಹೇರುತ್ತೀರಿ; ಆದರೆ ಮೋಹರಮ್‌ನಲ್ಲಿ ನಡೆಯುವ ಹಿಂಸಾತ್ಮಕ ಹುಚ್ಚಾಟದ ಆಚರಣೆಗೆ ನಿರ್ಬಂಧ ಹೇರಲು ಧೈರ್ಯ ಮಾಡುವಿರಾ ? ಪರಿಸರ ಮಾಲಿನ್ಯದ ದೃಷ್ಟಿಯಲ್ಲಿ ದೀಪಾವಳಿಯ ಪಟಾಕಿ ನಿಮಗೆ ಅಸಹನೀಯವೆನಿಸುತ್ತದೆ; ಆದರೆ ಕ್ರಿಸ್‌ಮಸ್‌ನ ಪಟಾಕಿ ಅಸಹನೀಯವೆನಿಸುವುದಿಲ್ಲ. ಇದು ಧರ್ಮಯುದ್ಧವನ್ನು ಪ್ರಚೋದಿಸುವುದಾಗಿರದೇ ಮತ್ತಿನ್ನೇನು ?
ಈ ಯೋಗ ನೇತೃತ್ವ ಗುಣ, ಧೈರ್ಯ, ಕಾರ್ಯತತ್ಪರತೆ, ಸಂಘಟನಾ ಕೌಶಲ್ಯ, ವ್ಯಾಪಕತೆ ಇತ್ಯಾದಿ ವೈಶಿಷ್ಟ್ಯಗಳನ್ನು ತೋರಿಸುತ್ತದೆ. ಭಾರತದಲ್ಲಿ ಕೆಲವು ದಶಕಗಳಿಂದ ಧರ್ಮನಿರಪೇಕ್ಷವಾದಿ, ಸಾಮ್ಯವಾದಿ, ಕ್ರೈಸ್ತ ಮಿಶನರಿ, ಮತಾಂಧ ಇಸ್ಲಾಮೀ ಗುಂಪು ಗಳು, ತಥಾಕಥಿತ ಬುದ್ಧಿಪ್ರಾಮಾಣ್ಯವಾದಿ ಇತ್ಯಾದಿ ರಾಷ್ಟ್ರ-ಧರ್ಮವಿರೋಧಿ ಶಕ್ತಿಗಳು ಭಾರತದಲ್ಲಿನ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ, ‘ಹಿಂದೂ ಧರ್ಮ ಭಾರತದ ಪ್ರಾಣವಾಗಿದೆ. ಹಿಂದೂ ಧರ್ಮ ನಾಶವಾದರೆ ರಾಷ್ಟ್ರವೂ ನಾಶವಾಗುವುದು’, ಎಂಬುದನ್ನು ಗಮನಿಸಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಭಾರತದಲ್ಲಿ ‘ಹಿಂದೂ ರಾಷ್ಟ್ರ’ ಸ್ಥಾಪನೆಯ ಸಂಕಲ್ಪ ಮಾಡಿದರು. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಪ್ರೇರಣೆಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂಗಳ ಸಂಘಟನೆ ಮಾಡಲಾಗುತ್ತಿದೆ. ಹಿಂದೂ ಧರ್ಮದ ಮೇಲಿನ ವಿವಿಧ ಆಘಾತಗಳು, ಉದಾ. ಬಲವಂತದ ಮತಾಂತರ, ವಿವಿಧ ರೀತಿಯ ಜಿಹಾದ್, ದೇವತೆಗಳ ವಿಡಂಬನೆ, ದೇವಸ್ಥಾನಗಳ ಸರಕಾರೀಕರಣ, ಗೋಹತ್ಯೆ ಇತ್ಯಾದಿಗಳ ವಿರುದ್ಧ ಕಾನೂನು ಪ್ರಕಾರ ಹೋರಾಟ ನಡೆಯುತ್ತಿದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಪ್ರೇರಣೆಯಿಂದ ಭಾರತದ ಹಿಂದುತ್ವನಿಷ್ಠರು ಒಗ್ಗಟ್ಟಾಗಿ ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾದರೆ ಹಿಂದೂ ಧರ್ಮದ ಉಚ್ಚತಮ ವೈಶ್ವಿಕ ಮೌಲ್ಯದ ರಕ್ಷಣೆಯಾಗಿ ಸಮಾಜದ ಸಂಪೂರ್ಣ ಉತ್ಕರ್ಷವಾಗುವುದು ಹಾಗೂ ಭಾರತವು ‘ವಿಶ್ವದ ಆಧ್ಯಾತ್ಮಿಕ ಗುರು’ ಆಗುವುದು !
೭. ಪ್ರಾರ್ಥನಾಸ್ಥಳಗಳ ಕಾನೂನಿನ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ಬಾಯಿ ಮುಚ್ಚಿ ಕುಳಿತುಕೊಂಡಿರುವುದು ಎಷ್ಟರ ಮಟ್ಟಿಗೆ ಯೋಗ್ಯವಾಗಿದೆ ?
‘ಪ್ಲೇಸಸ್ ಆಫ್ ವರ್ಶಿಪ್ ಯಾಕ್ಟ್’ (ಪ್ರಾಥನಾಸ್ಥಳಗಳ ಕಾನೂನು) ೧೯೯೧ ರ ಈ ಕಾನೂನನ್ನು ೨೦೧೯ ರಲ್ಲಿ ಇನ್ನೂ ಕಠಿಣಗೊಳಿಸಿ ಸರ್ವೋಚ್ಚ ನ್ಯಾಯಾಲಯ ೧೫ ಆಗಸ್ಟ್ ೧೯೪೭ ರ ಹಿಂದಿನ ಸಾವಿರಾರು ವರ್ಷಗಳಷ್ಟು ಪ್ರಾಚೀನ ಮಂದಿರಗಳು ಬೆಳಕಿಗೆ ಬರುವ ಮಾರ್ಗವನ್ನು ಶಾಶ್ವತವಾಗಿ ಮುಚ್ಚಿದೆ, ಅಂದರೆ ಐತಿಹಾಸಿಕ ಅನ್ಯಾಯವನ್ನು ಎತ್ತಿಹಿಡಿಯುವ ಪರ್ಯಾಯವನ್ನೂ ಕಾನೂನನ್ನು ಪಾಲಿಸುವ ಹಿಂದೂಗಳಿಂದ ಕಿತ್ತುಕೊಳ್ಳಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಎಲ್ಲಿಯಾದರೂ ಕೇಳಿದ್ದೀರಾ ? ಇದಕ್ಕೆ ಹಿಂದೂಗಳು ವರ್ಷಾನುವರ್ಷ ಹೋರಾಡಿ ನ್ಯಾಯ ಗಳಿಸಿದ ರಾಮಮಂದಿರದ ಉದಾಹರಣೆಯೊಂದೇ ಸಾಕು; ಆದರೆ ಅವರ ಇನ್ನೂ ಬಾಕಿ ಉಳಿದಿರುವ ಪವಿತ್ರಸ್ಥಾನಗಳು ಕೂಡ ಕಬಳಿಸಲ್ಪಟ್ಟಂತಹವುಗಳೇ ಆಗಿವೆ, ಆದರೆ ಸರ್ವೋಚ್ಚ ನ್ಯಾಯಾಲಯ ಅದರ ವಿಷಯದಲ್ಲಿ ಬಾಯಿಗೆ ಬೀಗ ಜಡಿದು ಕುಳಿತುಕೊಂಡಿದೆ. ಹಿಂದೂಗಳ ಮೇಲಾಗುವ ಇಂತಹ ಅನ್ಯಾಯಗಳನ್ನು ನೋಡುತ್ತಾ ಕುಳಿತುಕೊಳ್ಳುವುದೆಂದರೆ ಇದು ಧರ್ಮಯುದ್ಧದ ಬೆಂಕಿಗೆ ಎಣ್ಣೆ ಸುರಿದಂತೆ ಆಗುವುದಿಲ್ಲವೇ ?
೮. ಸ್ತ್ರೀಯರಿಗೆ ಮಸೀದಿಯೊಳಗೆ ಪ್ರವೇಶ ಮಾಡಲು ಅನುಮತಿ ಇಲ್ಲದಿರುವಾಗ ಹಿಂದೂ ಮಂದಿರಗಳ ಪ್ರವೇಶದ ವಿಷಯದಲ್ಲಿ ಮೂಗು ತೂರಿಸುವುದೇಕೆ ?
ಶಬರಿಮಲೈ ಮಂದಿರದ ನಿರ್ಣಯ ಕೂಡ ಹಿಂದೂಗಳ ಗಾಯಕ್ಕೆ ಬರೆ ಎಳೆಯುವ ಕೃತ್ಯವಾಗಿದೆ. ಹಿಂದೂಗಳಲ್ಲಿ ಅವರ ಧಾರ್ಮಿಕ ರೂಢಿಗನುಸಾರ ಕೆಲವು ಮಂದಿರಗಳಲ್ಲಿ ಪುರುಷರಿಗೆ ಹಾಗೂ ಕೆಲವು ಮಂದಿರಗಳಲ್ಲಿ ಸ್ತ್ರೀಯರಿಗೆ ನಿಬರ್ಂಧವಿರಬಹುದು; ಆದರೆ ಈ ವಿಶಿಷ್ಟ ಮಂದಿರದ ವಿಷಯದಲ್ಲಿ ಸಾಕಷ್ಟು ಕೋಲಾಹಲವೆಬ್ಬಿಸಲಾಯಿತು. ಮುಸಲ್ಮಾನ ಪಂಥದಲ್ಲಿ ಸ್ತ್ರೀಯರಿಗೆ ಮಸೀದಿಯೊಳಗೆ ಪ್ರವೇಶ ಮಾಡಲು, ಕುರಾನ್ ಓದಲು ಹಾಗೂ ಇನ್ನಿತರ ಅನೇಕ ವಿಷಯಗಳಿಗೆ ಅನುಮತಿಯಿಲ್ಲ, ಕ್ರೈಸ್ತ ಸ್ತ್ರೀಯರಿಗೂ ಅವರ ಪಂಥಕ್ಕನುಸಾರ ‘ಪ್ರೀಸ್ಟ್’ (ಧರ್ಮೋಪದೇಶಕ) ಆಗಲು ಅನುಮತಿಯಿಲ್ಲ. ಆದ್ದರಿಂದ ಈ ಇನ್ನಿತರ ಧರ್ಮದವರಿಗೆ ಬುದ್ಧಿಹೇಳುವ ಕಾರ್ಯ ನಿಮ್ಮಿಂದಾಗಬೇಕು, ಎನ್ನುವುದು ಸಾಮಾನ್ಯ ನಾಗರಿಕರ ಅಪೇಕ್ಷೆಯಾಗಿದೆ. ಇದು ಧರ್ಮಯುದ್ಧವನ್ನು ಪ್ರಚೋದಿಸದೇ ಇನ್ನೇನು ಮಾಡಬಹುದು ?
೯. ಪೌರತ್ವ ಸುಧಾರಣಾ ಕಾನೂನಿನ ವಿರುದ್ಧ ಆಂದೋಲನಕ್ಕೆ ಸಂಬಂಧಿಸಿದ ನಿಲುವು ಸೌಮ್ಯವಲ್ಲವೇ ?
ಶಾಹೀನಬಾಗ್ ಆಂದೋಲನ ಮಾಡಿ ‘ಸಿಈ’ಗೆ (ಪೌರತ್ವ ಸುಧಾರಣಾ ಕಾನೂನಿಗೆ) ವಿರೋಧಿಸುವ ಪ್ರಯತ್ನ ನಡೆದಾಗ ಆ ವಿಷಯದಲ್ಲಿಯೂ ಸರ್ವೋಚ್ಚ ನ್ಯಾಯಾಲಯದ ನಿಲುವು ಮೂಕ ಸಮ್ಮತಿ ಹಾಗೂ ಏಕಪಕ್ಷೀಯವಾಗಿತ್ತು. ಈ ಆಂದೋಲನದಿಂದ ಮಾಡಿದ ಗಲಭೆ, ರಸ್ತೆ ತಡೆ, ಹಿಂದೂ ಮತ್ತು ದೇಶ ವಿರೋಧಿ ಘೋಷಣೆ ನೀಡಿರುವುದು, ಇವು ಯಾವುದೂ ಈ ನ್ಯಾಯಾಲಯಕ್ಕೆ ಕಾಣಿಸಲಿಲ್ಲ. ಅವರು ಕಾನೂನು ಮತ್ತು ಅವ್ಯವಸ್ಥೆಯನ್ನು ಪೂರ್ಣ ಕಡೆಗಣಿಸಿ ಮಧ್ಯಸ್ಥಿಕೆಯ ಮಾರ್ಗವನ್ನು ಸೂಚಿಸಿದರು ಮತ್ತು ಅದು ತಿಂಗಳುಗಟ್ಟಲೆ ಉಲ್ಬಣಿಸುತ್ತಾ ಇರುವ ಹಾಗೆ ನೋಡಿಕೊಂಡರು. ಇದು ಧರ್ಮಯುದ್ಧವನ್ನು ಪ್ರಚೋದಿಸುವ ಕೃತ್ಯವಲ್ಲದೆ ಇನ್ನೇನು ?
– ಹರ್ಷದ ಸರಪೋತದಾರ, ಸನದಿ ಲೆಕ್ಕಪರಿಶೋಧಕರು, ಪುಣೆ.
ಸ್ವಂತ ಪಕ್ಷ ಸ್ಥಾಪಿಸಲು ಮುಂದಾದ ಭಾಜಪ ತಮಿಳುನಾಡಿನ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ