
೨೫ ವರ್ಷಗಳ ಅಖಂಡ, ಸಾತ್ತ್ವಿಕ ಮತ್ತು ನಿಃಸ್ವಾರ್ಥ ಸೇವಾನಿರತರಾಗಿರುವ-ಗೋಮಾಂತಕ ಭೂಮಿಯಿಂದ ಪ್ರಾರಂಭವಾಗಿರುವ ಒಂದು ಜ್ಯೋತಿ ಇಂದು ಇಡೀ ಜಗತ್ತಿನಲ್ಲಿ ಪಸರಿಸಿ, ವಿಶ್ವದೀಪವೆಂದು ಪ್ರಜ್ವಲಿಸುತ್ತಿದೆ ಮತ್ತು ಅದರ ತೇಜದಲ್ಲಿ ಅಧ್ಯಾತ್ಮ, ಧರ್ಮ, ರಾಷ್ಟ್ರನಿಷ್ಠೆ ಮತ್ತು ಮೌಲ್ಯಾಧಾರಿತ ಸಮಾಜ ನಿರ್ಮಿತಿಯ ಸಂಕಲ್ಪವಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಲ್ಲಿ ಸನಾತನ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ಒಂದು ಆದರ್ಶ, ಧರ್ಮಾಭಿಮಾನಿ, ಸಂಸ್ಕಾರಯುತ ಪೀಳಿಗೆಯನ್ನು ರೂಪಿಸಲು ಟೊಂಕಕಟ್ಟಿ ನಿಂತಿದೆ. ಈ ರಜತ ಮಹೋತ್ಸವದ ವರ್ಷದಲ್ಲಿ ಸಂಸ್ಥೆಯು ತೆಗೆದುಕೊಂಡ ಮುಂದಿನ ಹೆಜ್ಜೆಯೆಂದರೆ ರಾಮರಾಜ್ಯ ಸ್ವರೂಪವಾಗಿರುವ ‘ಸನಾತನ ರಾಷ್ಟ್ರ’ ಸಾಕಾರಗೊಳಿಸುವ ಸಾಮೂಹಿಕ ಸಂಕಲ್ಪವಾಗಿದೆ. ಇಂದಿನ ಕಾಲದಲ್ಲಿ ಧರ್ಮ, ಸಂಸ್ಕೃತಿ ಮತ್ತು ಚಾರಿತ್ರ್ಯಗಳ ಮೇಲೆ ನಿರಂತರವಾಗಿ ಹಲ್ಲೆಗಳಾಗುತ್ತಿವೆ. ಅಲ್ಲಿ ಈ ಸಂಕಲ್ಪ ಕೇವಲ ಒಂದು ವಿಚಾರವಲ್ಲ, ಉದಾತ್ತ ರಾಷ್ಟ್ರನಿರ್ಮಾಣದ ಮಾರ್ಗದರ್ಶನವಾಗಿದೆ.
ಶಂಖನಾದವೆಂದರೆ ಶುಭಾರಂಭ, ವಿಜಯ ಮತ್ತು ಧೈರ್ಯದ ಸಂಕೇತವಾಗಿದೆ. ಆದ್ದರಿಂದ ಈ ರಾಷ್ಟ್ರಧರ್ಮದ ಜಾಗರಣೆ ಮಾಡಿ ಗೋವಾದ ಪವಿತ್ರ ಭೂಮಿಯಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಆಯೋಜಿಸಲಾಗಿದೆ. ಈ ಮಹೋತ್ಸವದ ಹಿಂದಿರುವ ಉದ್ದೇಶ, ಕಾರ್ಯ, ಪ್ರೇರಣೆ ಮತ್ತು ವ್ಯಾಪಕ ಉದ್ದೇಶವನ್ನು ತಿಳಿದುಕೊಳ್ಳಲು ನಾವು ‘ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕದ ಕೋಶಾಧ್ಯಕ್ಷೆ ಮತ್ತು ಖ್ಯಾತ ವಾರ್ತಾ ವರದಿಗಾರರಾದ
ಸೌ. ಮಂಜಿರಿ ಮರಾಠೆಯವರು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಇವರ ವಿಶೇಷ ಸಂದರ್ಶನವನ್ನು ತೆಗೆದು ಕೊಂಡರು. ಅದನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಪ್ರಶ್ನೆ : ಸನಾತನ ಸಂಸ್ಥೆಗೆ ೨೫ ವರ್ಷಗಳು ಪೂರ್ಣವಾಗಿವೆ. ಆ ವಿಷಯದಲ್ಲಿ ಏನು ಹೇಳುವಿರಿ ?
ಉತ್ತರ : ಸನಾತನ ಸಂಸ್ಥೆಯ ಕಾರ್ಯಕ್ಕೆ ೨೫ ವರ್ಷಗಳು ಪೂರ್ಣವಾಗಿರುವುದು ನಮಗೆ ಅತ್ಯಂತ ಭಕ್ತಿಭಾವದಿಂದ ಕೂಡಿದ ಕ್ಷಣವಾಗಿದೆ. ೧೯೯೯ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪ್ರೇರಣೆಯಿಂದ ಪ್ರಾರಂಭವಾಗಿರುವ ಈ ಕಾರ್ಯವು ಇಂದು ಇಡೀ ಭಾರತದಾದ್ಯಂತ ಮತ್ತು ಭಾರತದಾಚೆಗೂ ವಿಸ್ತರಿಸಿದೆ.
ಈ ೨೫ ವರ್ಷಗಳಲ್ಲಿ ಸಂಸ್ಥೆಯು ಅಧ್ಯಾತ್ಮ, ಸಾಧನೆ, ಧರ್ಮಶಿಕ್ಷಣ, ರಾಷ್ಟ್ರರಕ್ಷಣೆ ಮತ್ತು ಹಿಂದೂಸಂಘಟನೆ ಈ ೫ ಪ್ರಮುಖ ಭಾಗಗಳಲ್ಲಿ ಅವಿರತವಾಗಿ ಕಾರ್ಯವನ್ನು ಮಾಡುತ್ತಿದೆ. ಸಾವಿರಾರು ಸಾಧಕರನ್ನು ರೂಪಿಸಿದೆ. ಲಕ್ಷಾಂತರ ಜನರು ಧರ್ಮಕ್ಕಾಗಿ ಸಂಘಟಿತರಾಗಿದ್ದಾರೆ. ಧರ್ಮಶಾಸ್ತ್ರ ಆಧಾರಿತ ಗ್ರಂಥಗಳ ನಿರ್ಮಿತಿ, ಧರ್ಮಪ್ರಸಾರ, ಹಾಗೆಯೇ ಹಿಂದೂಗಳಿಗೆ ಅವರ ಧರ್ಮದ ನಿಜವಾದ ಪರಿಚಯ ಮಾಡಿಕೊಡುವುದು, ಇವೆಲ್ಲ ಕಾರ್ಯಗಳು ಅತ್ಯಂತ ಶುದ್ಧ, ಸಾತ್ತ್ವಿಕ ಮತ್ತು ರಾಷ್ಟ್ರನಿಷ್ಠೆಯ ನಿಲುವಿನೊಂದಿಗೆ ಘಟಿಸಿದೆ. ಈ ರಜತ ಮಹೋತ್ಸವ ವರ್ಷದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಭವ್ಯ ಆಯೋಜನೆ ಮಾಡಲಾಗಿದೆ; ಏಕೆಂದರೆ ‘ಈಗ ಕೇವಲ ಜಾಗೃತಿಯಲ್ಲದೇ ರಚನಾತ್ಮಕ ಧರ್ಮಾಧಿಷ್ಠಿತ ರಾಷ್ಟ್ರನಿರ್ಮಾಣದ ಯುಗ ಪ್ರಾರಂಭವಾಗಬೇಕು’ ಎನ್ನುವ ಸಂಕಲ್ಪವಿದೆ. ಈ ೨೫ ವರ್ಷಗಳೆಂದರೆ ಕೇವಲ ಒಂದು ಕಾಲವಲ್ಲ, ಒಂದು ಆಧ್ಯಾತ್ಮಿಕ ಕ್ರಾಂತಿಯ ಅಡಿಪಾಯವಾಗಿದೆ ಮತ್ತು ಈಗ ಈ ಅಡಿಪಾಯದ ಮೇಲೆ ‘ರಾಮರಾಜ್ಯ’ವನ್ನು ಸ್ಥಾಪಿಸಬೇಕಾಗಿದೆ.
೨. ಸನಾತನ ಸಂಸ್ಥೆಯು ಕಳೆದ ೨೫ ವರ್ಷಗಳಲ್ಲಿ ಸಮಾಜಕ್ಕಾಗಿ ನಿರ್ದಿಷ್ಟವಾಗಿ ಯಾವೆಲ್ಲ ಕಾರ್ಯಗಳನ್ನು ಮಾಡಿದೆ ? ಸಂಸ್ಥೆಯ ಕಾರ್ಯದ ವೈಶಿಷ್ಟ್ಯಗಳೇನು ?
ಉತ್ತರ : ಸನಾತನ ಸಂಸ್ಥೆಯು ಕಳೆದ ೨೫ ವರ್ಷಗಳಲ್ಲಿ ಸಮಾಜಕ್ಕಾಗಿ ಧರ್ಮ, ಅಧ್ಯಾತ್ಮ, ರಾಷ್ಟ್ರನಿಷ್ಠೆ ಮತ್ತು ನೈತಿಕತೆಯ ಆಧಾರದಲ್ಲಿ ಕಾರ್ಯಗಳನ್ನು ಮಾಡಿದೆ. ಈ ಕಾರ್ಯವನ್ನು ಕೇವಲ ಸಮಾಜಸೇವೆಯ ಚೌಕಟ್ಟಿನಲ್ಲಿ ಸೀಮಿತವಾಗಿರಿಸದೇ ಸಮಾಜ ಪರಿವರ್ತನೆಯ ದೃಷ್ಟಿಯಿಂದ ಮಾಡಿದೆ.
ಸಂಸ್ಥೆಯ ಕಾರ್ಯಗಳ ಪ್ರಮುಖ ವೈಶಿಷ್ಟ್ಯಗಳು :

ಅ. ಧರ್ಮಶಿಕ್ಷಣ ಮತ್ತು ಧರ್ಮಜಾಗೃತಿ : ಸನಾತನ ಸಂಸ್ಥೆಯು ಸಾವಿರಾರು ಜನರಿಗೆ ಹಿಂದೂ ಧರ್ಮದ ಶಾಸ್ತ್ರೀಯ ಮತ್ತು ತರ್ಕಬದ್ಧ ರೀತಿಯಲ್ಲಿ ತಿಳಿಸಿ ಹೇಳಿತು. ಮೌಢ್ಯ ನಿರ್ಮೂಲನೆಯ ಹೆಸರಿನಲ್ಲಿ ಧರ್ಮದ ಮೇಲೆ ಆಘಾತ ಮಾಡುವವರಿಗೆ ತರ್ಕಬದ್ಧವಾಗಿ ಉತ್ತರಗಳನ್ನು ನೀಡಿ ಹಿಂದೂ ಧರ್ಮದ ಶುದ್ಧ ಸ್ವರೂಪವನ್ನು ಜನರೆದುರಿಗೆ ತಂದಿತು.
ಆ. ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ : ‘ಧರ್ಮವೆಂದರೆ ಕೇವಲ ಪೂಜೆಯಲ್ಲ. ಬದಲಾಗಿ ಸಾಧನೆಯನ್ನು ಮಾಡಿ ಅಂತಃಕರಣವನ್ನು ಶುದ್ಧಗೊಳಿಸುವುದು’ ಇದನ್ನು ಕಲಿಸಿ, ಸಂಸ್ಥೆಯು ಸಾವಿರಾರು ಜನರಿಗೆ ನಾಮಜಪ, ಧ್ಯಾನ, ಆತ್ಮಚಿಂತನೆಯ ಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯ ಮಾರ್ಗವನ್ನು ತೋರಿಸಿತು.
ಇ. ಸಂಸ್ಕಾರಯುತ ಪೀಳಿಗೆಯ ನಿರ್ಮಿತಿ : ಇಂದು ಮಕ್ಕಳಲ್ಲಿ ಚಾರಿತ್ರ್ಯ, ನೈತಿಕತೆ, ಕೌಟುಂಬಿಕಮೌಲ್ಯಗಳು ಕಳೆದುಹೋಗಿವೆ. ಇಂತಹ ಸಮಯದಲ್ಲಿ ಸನಾತನ ಸಂಸ್ಥೆಯು ಬಾಲಸಂಸ್ಕಾರ ವರ್ಗ, ಧರ್ಮಶಿಕ್ಷಣ ವರ್ಗ, ಗ್ರಂಥಗಳು, ಕಿರುಚಿತ್ರಗಳ ಮಾಧ್ಯಮಗಳಿಂದ ಮಕ್ಕಳಲ್ಲಿ ಮತ್ತು ಯುವಕರಲ್ಲಿ ಹಿಂದುತ್ವ ಮತ್ತು ನೈತಿಕ ಮೌಲ್ಯಗಳ ಬೀಜಗಳನ್ನು ಬಿತ್ತಿದೆ.
ಈ. ಹಿಂದೂಜಾಗೃತಿ ಮತ್ತು ಸಂಘಟನೆ : ಸನಾತನ ಸಂಸ್ಥೆಯ ಮುಂದಾಳತ್ವದಲ್ಲಿ ಹಿಂದುತ್ವದ ಮತ್ತು ಧರ್ಮದ ಬಹುದೊಡ್ಡ ಕಾರ್ಯ ನಿರ್ಮಾಣವಾಗಿದೆ. ಅದರಿಂದ ಇಂದು ಧರ್ಮರಕ್ಷಣೆ, ರಾಷ್ಟ್ರರಕ್ಷಣೆ ಮತ್ತು ಸಮಾಜರಕ್ಷಣೆಗಾಗಿ ಕಾರ್ಯನಿರತವಾಗಿರುವ ಒಂದು ಜಾಗೃತ ಆಂದೋಲನವಾಗಿದೆ.
ಉ. ಶಾಸ್ತ್ರಾಧಾರಿತ ಗ್ರಂಥಗಳ ರಚನೆ : ಸನಾತನ ಸಂಸ್ಥೆಯಿಂದ ಧರ್ಮಶಾಸ್ತ್ರ, ಸಾಧನೆ, ಆಚಾರಧರ್ಮ, ಸಮಾಜಸಹಾಯ, ರಾಷ್ಟ್ರರಕ್ಷಣೆ, ಕಲೆ, ಆಯುರ್ವೇದ, ಆಪತ್ಕಾಲ ಇತ್ಯಾದಿ ವಿಷಯಗಳ ಬಗ್ಗೆ ಇಲ್ಲಿಯವರೆಗೆ ೩೬೬ ಗ್ರಂಥಗಳು ಪ್ರಕಾಶಿಸಿದೆ.
ಈ ಗ್ರಂಥಗಳು ಸಂಶೋಧನಾತ್ಮಕ, ಅನುಭವವನ್ನು ಆಧರಿಸಿರುವ ಮತ್ತು ಶಾಸ್ತ್ರಸಮ್ಮತವಾಗಿವೆ.
ಊ. ಧರ್ಮರಕ್ಷಣೆಗಾಗಿ ಸಕ್ರಿಯ ಕಾರ್ಯ : ಮಂದಿರ ರಕ್ಷಣೆ, ಗೋಮಾತೆ ರಕ್ಷಣೆ, ಧರ್ಮದ್ರೋಹಿ ಚಲನಚಿತ್ರಗಳು/ಮಾಲಿಕೆ ಗಳ ವಿರೋಧ, ಧರ್ಮದ್ರೋಹಿಗಳ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವುದು, ಇವೆಲ್ಲ ವಿಷಯಗಳಲ್ಲಿ ಸಂಸ್ಥೆ ಮತ್ತು ಅದರ ಸಾಧಕರು ಸತ್ಯಕ್ಕಾಗಿ ಸಂಘರ್ಷ ಮಾಡಿದ್ದಾರೆ.
ಏ. ರಾಜ್ಯ ಮತ್ತು ರಾಷ್ಟ್ರ ಹಿತದ ವೈಚಾರಿಕ ಚಳುವಳಿ : ‘ಸನಾತನ ರಾಷ್ಟ್ರ’ ಈ ಸಂಕಲ್ಪನೆ ಕೇವಲ ಕಲ್ಪನೆಯಲ್ಲ, ಬದಲಾಗಿ ರಾಷ್ಟ್ರಹಿತಕ್ಕಾಗಿ ಆವಶ್ಯಕವಾಗಿರುವ ಮೌಲ್ಯಾಧಾರಿತ ವ್ಯವಸ್ಥೆ ಯಾಗಿದೆ, ಇದಕ್ಕಾಗಿ ವೈಚಾರಿಕ ಮಟ್ಟದಲ್ಲಿ ವ್ಯಾಪಕ ಜಾಗೃತಿ ಯನ್ನು ಮೂಡಿಸಿದೆ.
ಏ. ಸಂಸ್ಥೆಯ ಕಾರ್ಯದ ಅದ್ವಿತೀಯ ವೈಶಿಷ್ಟ್ಯಗಳು : ಈ ಕಾರ್ಯ ಯಾವುದೇ ರಾಜಕೀಯ ಪಕ್ಷಗಳಿಂದ ಪ್ರತ್ಯೇಕವಾಗಿದೆ. ಯಾವುದೇ ಪ್ರಚಾರಕ್ಕೆ ಒಳಗಾಗದೇ ಅಥವಾ ಹಣದ ಲೋಭವಿಲ್ಲದೇ ಸಾತ್ತ್ವಿಕ, ಸೇವಾಭಾವದ ಕಾರ್ಯವಾಗಿದೆ. ‘ತನ್ನ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುತ್ತಾ, ಸಮಾಜದ ಉದ್ಧಾರ ಮಾಡು ವುದು’ ಇದೇ ಅದರ ಆತ್ಮವಾಗಿದೆ. ಈ ಕಾರ್ಯವು ಶಿಸ್ತುಬದ್ಧ, ಧರ್ಮಶಾಸ್ತ್ರ ಆಧಾರಿತ ಮತ್ತು ಸಂತರು ಹಾಗೂ ಈಶ್ವರನ ಪ್ರೇರೇಪಣೆಯಿಂದ ಮುಂದುವರಿದಿದೆ.
ಇಂದಿನ ವರೆಗೆ ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದ ಈ ಸಂಸ್ಥೆಗೆ ಇಂದು ೨೫ ವರ್ಷವಾಗಿದೆ, ಅಂದರೆ ರಾಮರಾಜ್ಯದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ‘ಸಾಧನೆ, ಸಂಸ್ಕಾರ ಮತ್ತು ಸತ್ಯದ ಬಲದ ಮೇಲೆ ನಿಂತಿರುವ ಧರ್ಮಸಂಸ್ಥಾಪನೆಯ ಪ್ರಯತ್ನ’ ಇದೇ ಸನಾತನದ ನೈಜ ಪರಿಚಯವಾಗಿದೆ.
– ಶ್ರೀ. ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ
ಸನಾತನ ರಾಷ್ಟ್ರದ ಆವಶ್ಯಕತೆ ಏನು ?
ಸದ್ಯದ ಜಾತ್ಯತೀತ ವ್ಯವಸ್ಥೆಯಲ್ಲಿ ಗೋವು, ಗಂಗಾ, ಭಗವದ್ಗೀತೆ, ತುಳಸಿ, ಮಠ- ಮಂದಿರಗಳು ಮತ್ತು ಸನಾತನದ ಗೌರವದ ಮೇಲೆ ನಿರಂತರವಾಗಿ ಪ್ರಹಾರವಾಗುತ್ತಿದೆ. ಆಧುನಿಕತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸನಾತನ ಶ್ರದ್ಧಾಸ್ಥಾನಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಹಿಂದೂಗಳ ಧಾರ್ಮಿಕ ಪರಂಪರೆ, ಆಚಾರ ಮತ್ತು ಅಂಧಶ್ರದ್ಧೆಯ ‘ಲೇಬಲ್’ ಹಚ್ಚಲಾಗುತ್ತಿದೆ. ವೈದಿಕ ವಿಜ್ಞಾನಕ್ಕೆ ‘ನಕಲಿ ವಿಜ್ಞಾನ’ ಎಂದು ಟೀಕಿಸಲಾಗುತ್ತಿದೆ. ಇಂದು ಧರ್ಮದ ಮೇಲಿನ ಆಘಾತಗಳ ವಿರುದ್ಧ ಜಾಗೃತರಾಗಿ ಧರ್ಮರಕ್ಷಣೆಯ ಆಂದೋಲನಗಳು ಆಗುತ್ತಿದ್ದರೂ, ಹಿಂದುತ್ವದ ಮೇಲೆ ಆಗುತ್ತಿರುವ ಆಘಾತಗಳು ಸಂಪೂರ್ಣವಾಗಿ ನಿಂತಿಲ್ಲ. ‘ಪ್ಲೇಸಸ್ ಆಫ್ ವರ್ಶಿಪ್ ಆಕ್ಟ’ ನಂತರ (ಪ್ರಾರ್ಥನಾಸ್ಥಳಗಳ ಕಾಯಿದೆಗನುಸಾರ) ಕರಾಳ ಕಾಯಿದೆಗಳಿಂದ ವಿದೇಶಿ ದಾಳಿಕೋರರು ಧ್ವಂಸಗೊಳಿಸಿರುವ ದೇವಸ್ಥಾನಗಳ ಪುನರ್ ನಿರ್ಮಾಣದ ಮಾರ್ಗಗಳನ್ನು ತಡೆಹಿಡಿಯಲಾಗಿದೆ. ಇತ್ತೀಚೆಗೆ ಸುಧಾರಿತ ವಕ್ಫ ಕಾನೂನು ಜಾರಿಯಾಗಿದೆ. ಇದರಿಂದ ವಕ್ಫ್ ಮಂಡಳಿಯ ಮನಸ್ಸಿಗೆ ತೋಚಿದಂತೆ ಮಾಡುವ ಚಟುವಟಿಕೆಗೆ ಅಲ್ಪ ಪ್ರಮಾಣದಲ್ಲಿ ತಡೆಯುಂಟಾಗಿದ್ದರೂ, ಈ ಕಾನೂನು ಪ್ರತ್ಯಕ್ಷದಲ್ಲಿ ಜಾರಿಗೊಂಡು ಮತಾಂಧರಿಂದ ಅನಧಿಕೃತವಾಗಿ ಕಬಳಿಸಲ್ಪಟ್ಟಿರುವ ಭೂಮಿಗಳು ಯಾವಾಗ ಬಿಡುಗಡೆಯಾಗುವುದು ಎಂದು ಮುಂಬರುವ ಕಾಲವೇ ಹೇಳಲಿದೆ. ಇಂದು ನುಸುಳುಕೋರರ ಗಂಭೀರ ಸಂಕಟಗಳಿಂದ ಅನೇಕ ಪ್ರದೇಶಗಳು ಭಾರತದಿಂದ ಪ್ರತ್ಯೇಕಗೊಳ್ಳುವ ಮಾರ್ಗದಲ್ಲಿವೆ. ವರ್ತಮಾನ ವ್ಯವಸ್ಥೆಯಲ್ಲಿ ಧರ್ಮ ಮತ್ತು ರಾಷ್ಟ್ರಗಳ ಮೇಲಿನ ಪ್ರಹಾರವನ್ನು ಸಮರ್ಥವಾಗಿ ಎದುರಿಸದೇ ಇರುವುದರಿಂದ ಸನಾತನ ರಾಷ್ಟ್ರದ ಆವಶ್ಯಕತೆಯಿದೆ. |
ಉತ್ತರ : ಯಾವ ಸಮಯದಲ್ಲಿ ಭಾರತದ ಗುರುತನ್ನು ಅಳಿಸಿ ಹಾಕಲು ಪ್ರಯತ್ನಿಸ ಲಾಗಿದೆಯೋ, ಆಯಾ ಸಮಯ ದಲ್ಲಿ ಧರ್ಮ ತೇಜಸ್ವಿ ಪುರುಷರು ಸನಾತನ ಧರ್ಮರಕ್ಷಣೆಯ ಶಿವಧನಸ್ಸು ಎತ್ತಿ ಹಿಡಿದಿದ್ದಾರೆ. ಇದು ಇತಿಹಾಸವಾಗಿದೆ. ಸದ್ಯದ ಕಾಲದಲ್ಲಿ ಅಂದರೆ ಇಂದಿನ ಕೆಲವು ವರ್ಷಗಳ ಕಾಲಖಂಡವಲ್ಲ, ಬದಲು ಕಳೆದ ಕೆಲವು ಶತಕಗಳಿಂದ ಪುನಃ ಸನಾತನ ಧರ್ಮದ ಗುರುತನ್ನು ಅಳಿಸಿಹಾಕುವ ಪ್ರಯತ್ನಗಳು ಧರ್ಮದ್ವೇಷಿ ಗಳಿಂದ ನಡೆಯುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಈ ಸಂಚು ಮುಂದುವರಿದಿದೆ. ‘ಭಾರತವನ್ನು ಮುಗಿಸುವುದಿದ್ದರೆ, ಮೊದಲು ಸನಾತನ ಹಿಂದೂ ಧರ್ಮದ ಮೇಲೆ ಆಘಾತ ಮಾಡಬೇಕು’, ಈ ‘ಟೂಲಕಿಟ್’ ಉಪಯೋಗಿಸಿ ಇಂದು ‘ಬ್ರೇಕಿಂಗ ಇಂಡಿಯಾ ಫೋರ್ಸಸ್’ (ದೇಶವನ್ನು ತುಂಡು ತುಂಡಾಗಿ ಮಾಡಲು ನೋಡುವ ಗುಂಪು) ಸಕ್ರಿಯವಾಗಿದೆ. ಅದಕ್ಕಾಗಿ ಲವ್ ಜಿಹಾದ್, ಲ್ಯಾಂಡ್(ಭೂಮಿ) ಜಿಹಾದ್, ಮತಾಂತರ, ಹಿಂದುತ್ವನಿಷ್ಠ ಮುಖಂಡರ ಹತ್ಯೆ, ಗಲಭೆಗಳು ಈ ಮಾಧ್ಯಮಗಳನ್ನು ಉಪಯೋಗಿಸಲಾಗುತ್ತಿದೆ. ಈ ಪ್ರಹಾರವನ್ನು ತಡೆದು ಧರ್ಮಕ್ಕೆ ಮರುವೈಭವ ವನ್ನು ದೊರಕಿಸಿ ಕೊಡಲು ಸನಾತನ ರಾಷ್ಟ್ರದ ಆವಶ್ಯಕತೆಯಿದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಒಂದು ವರ್ಷದ ನಂತರ ಸಿಲಿಗುಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ! : FIR Against Mamata Banerjee