ಸ್ವಾಮೀ ವಿವೇಕಾನಂದರ ವಿಚಾರ

ಭಾರತವೇ, ಸೀತೆ, ಸಾವಿತ್ರಿ ಹಾಗೂ ದಮಯಂತಿ ಇವರೇ ನಿನ್ನ ಸ್ತ್ರೀಯರ ಆದರ್ಶರಾಗಿದ್ದಾರೆ ಎಂಬುದನ್ನು ಮರೆಯಬೇಡ, ನಿನ್ನ ಉಪಾಸ್ಯದೇವತೆಯು ಸರ್ವತ್ಯಾಗಿ ಉಮಾನಾಥ ಶಂಕರ ಎಂಬುದನ್ನು ನೀನು ಮರೆಯಬೇಡ. ನಿನ್ನ ವಿವಾಹ, ನಿನ್ನ ಧನ ಹಾಗೂ ನಿನ್ನ ಜೀವನವು ಇಂದ್ರೀಯ ಸುಖಕ್ಕಾಗಿ, ಕೇವಲ ನಿನ್ನ ವೈಯಕ್ತಿಕ ಸುಖಕ್ಕಾಗಿ ಇಲ್ಲ ಎಂಬುದನ್ನು ಮರೆಯಬೇಡ. ಮರೆಯಬೇಡ ನೀನು ಮಾತೆಗಾಗಿ ಬಲಿಯೆಂದು ಜನ್ಮಕ್ಕೆ ಬಂದಿರುವೆ, ಮರೆಯಬೇಡ ನಿನ್ನ ಸಮಾಜವೆಂದರೆ ಆ ವಿರಾಟ ಮಹಾಮಾಯೆಯ ಕೇವಲ ಛಾಯೆಯಾಗಿದೆ. ಮರೆಯಬೇಡ ದಲಿತ, ಅಜ್ಞಾನಿ, ಬಡವ, ಅನಕ್ಷರಸ್ತ ಇವರೆಲ್ಲ ನಿನ್ನ ಸಹೋದರರೇ ಆಗಿದ್ದಾರೆ ಹಾಗೂ ನಿನ್ನದೇ ರಕ್ತಮಾಂಸದವರಾಗಿದ್ದಾರೆ. ಹೇ ವೀರನೇ, ಧೈರ್ಯ ಕಳೆದು ಕೊಳ್ಳಬೇಡ ನೀನು ಭಾರತದ ನಿವಾಸಿಯಾಗಿದ್ದ ಬಗ್ಗೆ ಹೆಮ್ಮೆ ಇರಲಿ ಹಾಗೂ ಅಭಿಮಾನದಿಂದ ತುಂಬಿ ಹೇಳು, ನಾನು ಭಾರತೀಯನಾಗಿದ್ದೇನೆ. ಪ್ರತಿಯೊಬ್ಬ ಭಾರತೀಯನು ನನ್ನ ಬಂಧು ವಾಗಿದ್ದಾರೆ, ಅಲ್ಲದೇ ಜಗತ್ತಿಗೆ ಅರ್ಭಟಿಸಿ ಹೇಳಿ ‘ಅಜ್ಞ (ತಿಳಿಯದ) ಭಾರತವಾಸಿ, ಬಡ ಭಾರತವಾಸಿ, ದುಃಖಿ ಭಾರತವಾಸಿ, ಬ್ರಾಹ್ಮಣ ಭಾರತವಾಸಿ ಹಾಗೂ ಬೇರೆ ಎಲ್ಲಾ ಭಾರತವಾಸಿಗಳು ಎಲ್ಲರೂ ನನ್ನ ಬಾಂಧವರಾಗಿದ್ದಾರೆ. ನೀನು ಟೊಂಕ ಕಟ್ಟಿಕೊಂಡು ಗರ್ವದಿಂದ ಗರ್ಜಿಸು, ಪ್ರತಿಯೊಬ್ಬ ಭಾರತವಾಸಿ ನನ್ನ ಸಹೋದರನಾಗಿದ್ದಾನೆ. ಪ್ರತಿಯೊಬ್ಬ ಭಾರತೀಯನು ನನ್ನ ಪ್ರಾಣವಾಗಿದ್ದಾನೆ, ಭಾರತದ ದೇವಿದೇವತೆಗಳು ನನ್ನ ಈಶ್ವರನಾಗಿ ದ್ದಾರೆ, ಭಾರತೀಯ ಸಮಾಜ ಇದು ನನ್ನ ಬಾಲ್ಯದ ತೊಟ್ಟಿಲು, ನನ್ನ ತಾರುಣ್ಯದ ಉದ್ಯಾನ, ನನ್ನ ವೃದ್ಧಾಪ್ಯದ ವಾರಾಣಸಿಯಾಗಿದೆ.
ಸಹೋದರನೇ ! ದೊಡ್ಡ ಸ್ವರದಲ್ಲಿ ಹೇಳು “ಭಾರತದ ಮಣ್ಣು ನನ್ನ ಸ್ವರ್ಗವಾಗಿದೆ, ಭಾರತದ ಕಲ್ಯಾಣದಲ್ಲಿ ನನ್ನ ಕಲ್ಯಾಣವಿದೆ. ಹಗಲುರಾತ್ರಿ ಇದನ್ನೇ ಪ್ರಾರ್ಥಿಸು, ಹೇ ಗೌರೀನಾಥ, ಹೇ ಜಗದಂಬೆ, ನನಗೆ ಮನುಷ್ಯತ್ವ ನೀಡು. ಮಾತೇ, ನನ್ನ ದೌರ್ಬಲ್ಯ, ಭಯವನ್ನು ದೂರ ಮಾಡು. ನನ್ನನ್ನು ಮನುಷ್ಯನಾಗಿ ಮಾಡು.
(ಸೌಜನ್ಯ : ಸ್ವಾಮೀ ವಿವೇಕಾನಂದರು ಹೇಳುತ್ತಾರೆ, ರಾಮಕೃಷ್ಣ ಮಠ, ನಾಗಪುರ.)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !