ಕೋಟಿ ಕೋಟಿ ನಮನಗಳು
ಚೈತ್ರ ಶುಕ್ಲ ತೃತೀಯಾ ೩೧.೩.೨೦೨೫
ಭಗವಾನ್ ವಿಷ್ಣುವು ಮತ್ಸ್ಯ ರೂಪ ತಾಳಿ ಶಂಖಾಸುರನನ್ನು ಕೊಂದನು. ಆ ಮತ್ಸ್ಯರೂಪಿ ವಿಷ್ಣುವಿನ ಜನ್ಮ ಚೈತ್ರ ಶುಕ್ಲ ಪ್ರತಿಪದೆಯಂದು ಆಯಿತು! ಶಂಖಾಸುರ ಎಂಬ ಬಲಿಷ್ಠ ರಾಕ್ಷಸ ಸಾಗರದಿಂದ ಹುಟ್ಟಿದನು ಮತ್ತು ಸದಾ ಸಾಗರದಲ್ಲಿಯೇ ವಾಸಿಸುತ್ತಿದ್ದನು. ಆ ರಾಕ್ಷಸ ಬಲವಂತವಾಗಿ ವೇದಗಳನ್ನು ಅಪಹರಿಸಿ ಸಾಗರದ ತಳದಲ್ಲಿ ಅಡಗಿಕೊಂಡನು. ಆಗ ದೇವತೆಗಳು ಮತ್ತು ಋಷಿಮುನಿಗಳು ಕ್ಷೀರಸಾಗರದಲ್ಲಿ ಯೋಗನಿದ್ರೆಯಲ್ಲಿ ಮಲಗಿದ್ದ ಭಗವಾನ್ ವಿಷ್ಣುವನ್ನು ಎಚ್ಚರಿಸಿ ಶಂಖಾಸುರನಿಗೆ ಪಾಠ ಕಲಿಸಲು ಹೇಳಿದರು. ಭಗವಾನ್ ವಿಷ್ಣುವು ಮತ್ಸ್ಯ ರೂಪವನ್ನು ಧರಿಸಿ ಶಂಖಾಸುರನ ಸ್ಥಳವನ್ನು ಪತ್ತೆ ಹಚ್ಚಿ ಅವನ ತಲೆಯನ್ನು ಕತ್ತರಿಸಲು ಮುಂದಾದನು. ಆಗ ಶಂಖಾಸುರನು “ಭಗವಂತ, ನಿಮ್ಮ ಕೈಯಿಂದ ನನಗೆ ಸಾವು ಬರಲೆಂದೇ ನಾನು ವೇದಗಳನ್ನು ಅಪಹರಿಸಿದೆನು. ನೀವು ನನ್ನನ್ನು ಕೊಲ್ಲಬೇಕು; ಆದರೆ ನನ್ನ ಒಂದು ಆಸೆ ಏನೆಂದರೆ, ನನ್ನ ಶವವನ್ನು ನೀವು ಯಾವಾಗಲೂ ನಿಮ್ಮ ಎಡಗೈಯಲ್ಲಿ ಹಿಡಿದುಕೊಳ್ಳಬೇಕು, ಮತ್ತು ನನ್ನ ಶವದ ಸ್ಪರ್ಶದ ನೀರಿನಿಂದ ಸ್ನಾನ ಮಾಡದೆ ನಿಮ್ಮ ಪೂಜೆ ಪೂರ್ಣವಾಗುವುದಿಲ್ಲ ಎಂದು ನನಗೆ ವರವನ್ನು ನೀಡಬೇಕು” ಎಂದನು. ಭಗವಾನ್ ವಿಷ್ಣುವು ‘ತಥಾಸ್ತು’ ಎಂದು ಹೇಳಿ ಶಂಖಾಸುರನನ್ನು ಕೊಂದನು. ಅಂದಿನಿಂದ ವಿಷ್ಣುವು ಶಂಖವನ್ನು ಕೈಯಲ್ಲಿ ಹಿಡಿದನು.
ಪ್ರಿಯಾಂಕಾ ವಾಣಿ (ಕೃಪೆ: ದೈನಿಕ ‘ಮಹಾರಾಷ್ಟ್ರ ಟೈಮ್ಸ್’) (ಕಥೆಗಳೊಂದಿಗೆ ಶಾಸ್ತ್ರವನ್ನು ಅರ್ಥಮಾಡಿಕೊಂಡು ಈ ಹಬ್ಬವನ್ನು ಭಕ್ತಿಯಿಂದ ಆಚರಿಸೋಣ.)