ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ ! – ಭಾಗ ೧೫

‘ಸಂಶೋಧನೆಯ ಪ್ರಕಾರ, ಖಿನ್ನತೆ ಮತ್ತು ನಿರಾಸಕ್ತಿಯನ್ನು ಹೋಗಲಾಡಿಸಲು ವ್ಯಾಯಾಮವು ಅತ್ಯಂತ ಪರಿಣಾಮಕಾರಿಯಾಗಿದೆ. ವ್ಯಾಯಾಮವು ಮನಸ್ಸಿನ ಸ್ಥಿತಿಯನ್ನು ಸುಧಾರಿಸುವ ಮತ್ತು ಭಾವನೆಗಳನ್ನು ನಿಯಂತ್ರಿಸುವ ಮೆದುಳಿನಲ್ಲಿರುವ ವಿವಿಧ ನ್ಯೂರೋ ಕೆಮಿಕಲ್‌ಗಳನ್ನು (ನರ ಮಂಡಲಕ್ಕೆ ಸಂಬಂಧಿಸಿದ ರಾಸಾಯನಿಕಗಳು) ಸ್ರವಿಸಲು (Secrete ಮಾಡಲು) ದೇಹವನ್ನು ಪ್ರೇರೇಪಿಸುತ್ತದೆ. ಉದಾಹರಣೆಗೆ, ‘ಸೆರೊಟೋನಿನ್’ ಈ ಎಲ್ಲಾ ಹಂತಗಳಲ್ಲಿನ ಯೋಗಕ್ಷೇಮದ (well being) ಭಾವನೆಗಳಿಗೆ ಸಂಬಂಧಿಸಿದೆ, ಆದರೆ ‘ಡೋಪಮೈನ್’ ಇದು ಬಹುಮಾನ (reward) ಮತ್ತು ಆನಂದಕ್ಕೆ ಸಂಬಂಧಿಸಿದೆ.’

ವ್ಯಾಯಾಮ ಮಾಡುವಾಗ ಈ ರಾಸಾಯನಿಕಗಳು ಸ್ರವಿಸುವುದರಿಂದ (secrete ಆಗುವುದರಿಂದ) ನಕಾರಾತ್ಮಕ ವಿಚಾರಗಳು ಮತ್ತು ಚಿಂತೆ ಕಡಿಮೆಯಾಗಿ ಉತ್ಸಾಹ, ಆನಂದ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಹಾಗೆಯೇ ನಿದ್ರೆಯು ಸರಿಯಾಗಿ ಆಗಲು ಸಹ ಸಹಾಯವಾಗುತ್ತದೆ. ವ್ಯಾಯಾಮದಿಂದ ಮನಸ್ಸಿನ ಮೇಲಾಗುವ ಇಂತಹ ಸರ್ವತೋಮುಖ ಸಕಾರಾತ್ಮಕ ಪರಿಣಾಮಗಳಿಂದಲೇ ಅದನ್ನು ಅತ್ಯುತ್ತಮ ‘ಯಾಂಟಿಡಿಪ್ರೆಸೆಂಟ್ (ಖಿನ್ನತೆಯನ್ನು ದೂರ ಮಾಡುವ ಸಂಜೀವಿನಿ)’, ಎಂದು ಕರೆಯಲಾಗಿದೆ.’
– ಶ್ರೀ. ನಿಮಿಷ ತ್ರಿಭುವನ ಮ್ಹಾತ್ರೆ, ಭೌತಿಕೋಪಚಾರ ತಜ್ಞರು (ಫಿಜಿಯೋಥೆರಪಿಸ್ಟ್), ಫೋಂಡಾ, ಗೋವಾ. (೮.೯.೨೦೨೪)
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ಪ್ರಾಣಾಯಾಮ ಯೋಗ್ಯ ಕೃತಿ ಮತ್ತು ಲಾಭ !
‘ಪಾರ್ಶ್ವವಾಯು’ ಕಾಯಿಲೆಯಲ್ಲಿ ವ್ಯಾಯಾಮದ ಲಾಭ ಆಗುತ್ತದೆಯೇ ?
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!