ಭಗತಸಿಂಗ್, ರಾಜಗುರು, ಸುಖದೇವ್‌ ಬಲಿದಾನದಿನ (ಮಾರ್ಚ್ ೨೩)

ಕೋಟಿ ಕೋಟಿ ನಮನಗಳು

ಲಾಲಾ ಲಾಜಪತರಾಯರನ್ನು ಲಾಠಿಯಿಂದ ಹೊಡೆದು ಅವರ ಮೃತ್ಯುವಿಗೆ ಕಾರಣನಾದ ಸ್ಯಾಂಡರ್ಸ್‌ನನ್ನು ಸರದಾರ್‌ ಭಗತಸಿಂಗ್, ರಾಜಗುರು ಮತ್ತು ಸುಖದೇವ್‌ ಇವರು ಹತ್ಯೆಗೈದರು. ಕ್ರಾಂತಿ ಕಾರ್ಯ ಹತ್ತಿಕ್ಕಲು ಪೊಲೀಸರಿಗೆ ವಿಶೇಷಾಧಿಕಾರವನ್ನು ನೀಡುವ ಕಾನೂನನ್ನು ವಿರೋಧಿಸಿ ಭಗತಸಿಂಗ್‌ ಇವರು ಕೇಂದ್ರ ವಿಧಾನಸಭೆಯಲ್ಲಿ ಬಾಂಬ್‌ ಎಸೆದರು. ಇದಕ್ಕಾಗಿ ಆಂಗ್ಲರು ನೀಡಿದ ಗಲ್ಲುಶಿಕ್ಷೆಯನ್ನು ಇವರೆಲ್ಲರೂ ಆನಂದದಿಂದ ಸ್ವೀಕರಿಸಿದರು.