
‘ಸಂತರು ಅಥವಾ ಗುರುಗಳು ಅಥವಾ ದೇವತೆಗಳ ಚಿತ್ರದಲ್ಲಿ ಅವರ ತಲೆಯ ಹಿಂದೆ ದೊಡ್ಡ ಪ್ರಭಾವಲಯವು ಕಾರ್ಯನಿರತ ವಾಗಿರುತ್ತದೆ, ಕೆಲವು ಚಿತ್ರಗಳಲ್ಲಿ ಸಂತರ ಅಥವಾ ಗುರುಗಳ ಅಥವಾ ದೇವತೆಗಳ ಸಂಪೂರ್ಣ ದೇಹದ ಸುತ್ತಲೂ ತೇಜಸ್ಸಿನ ಅಂಚು ಕಾಣಿಸುವುದನ್ನು ನಾವು ಅನೇಕಬಾರಿ ನೋಡಿರುತ್ತೇವೆ. ಇದೇ ರೀತಿ ಸಂತರ, ಗುರುಗಳ ಅಥವಾ ದೇವತೆಗಳ ಸುತ್ತಲಿರುವ ತೇಜೋಮಯ ಮತ್ತು ತೇಜದ ಅಂಚುಗಳ ಸಂದರ್ಭದಲ್ಲಿನ ಸೂಕ್ಷ್ಮ ಅಂಶಗಳನ್ನು ನಾವು ಈ ಲೇಖನದಿಂದ ತಿಳಿದುಕೊಳ್ಳೋಣ.
೧. ಪ್ರಭಾವಲಯವು ಶರೀರದ ಕೇವಲ ಹಿಂಬದಿಯಲ್ಲಿ ಇರುತ್ತದೆಯೋ ಅಥವಾ ಇಡೀ ದೇಹದ ಸುತ್ತಲೂ ಇರುತ್ತದೆಯೋ ?
೧ ಅ. ಸಾಮಾನ್ಯ ಜೀವದ ಸುತ್ತಲು ಪ್ರಭಾವಲಯ ಇರುವುದಿಲ್ಲ : ಸಾಮಾನ್ಯ ಜೀವದ ಮೇಲೆ ಮಾಯೆಯ ಆವರಣವಿರುವುದರಿಂದ ಅವನ ಸುತ್ತಲೂ ಪ್ರಕಾಶದ ಅಂಚು ಅಥವಾ ತಲೆಯ ಸುತ್ತಲೂ ತೇಜೋವಲಯ ಕಾಣಿಸುವುದಿಲ್ಲ. ತಾಮಸಿಕ ವ್ಯಕ್ತಿಯ ಸುತ್ತಲೂ ತಮೋಗುಣಿಯ ಗಾಢ ಕಪ್ಪು ಬಣ್ಣ, ರಜೋಗುಣಿ ವ್ಯಕ್ತಿಯ ಸುತ್ತಲೂ ರಜೋಗುಣಿಯ ಬೂದು ಬಣ್ಣ ಮತ್ತು ಸಾತ್ತ್ವಿಕ ವ್ಯಕ್ತಿಯ ಸುತ್ತಲೂ ಗುಲಾಬಿ ಬಣ್ಣದ ಅಂಚು ಸೂಕ್ಷ್ಮದಿಂದ ಕಾರ್ಯನಿರತವಾಗಿರುತ್ತದೆ.
೧ ಆ. ಆತ್ಮಜ್ಞಾನ ಪ್ರಕಟವಾದ ನಂತರ ಅದರಿಂದ ದೈವೀ ಪ್ರಕಾಶವು ಪ್ರಕ್ಷೇಪಿಸುವುದು : ಜೀವಕ್ಕೆ ಆತ್ಮಜ್ಞಾನವಾಗುವುದು ಎಂದರೆ, ಯಾವಾಗ ಜೀವ ಮತ್ತು ಶಿವನ ಮಿಲನದ ಪ್ರಕ್ರಿಯೆ ಆರಂಭವಾಗುತ್ತದೆಯೋ, ಆಗ ಜೀವದ ಮೇಲಿನ ಅಜ್ಞಾನರೂಪಿ ಮಾಯೆಯ ಆವರಣ ದೂರವಾಗಿ ಅವನ ಹೃದಯದಲ್ಲಿ ಆತ್ಮಜ್ಞಾನವು ಪ್ರಕಟವಾಗುತ್ತದೆ ಮತ್ತು ಅವನ ಹೃದಯದಲ್ಲಿನ ಆತ್ಮಜ್ಞಾನದ ದೈವೀ ಪ್ರಕಾಶವು ಅವನ ದೇಹದಿಂದ ಪ್ರಕ್ಷೇಪಿಸತೊಡಗುತ್ತದೆ.
೧ ಇ. ದೇಹದ ಸುತ್ತಲೂ ಕಾಣಿಸುವ ದೈವೀ ಪ್ರಕಾಶದ ಅಥವಾ ದೈವೀ ಶಕ್ತಿಯ ಎರಡು ಮುಖ್ಯ ಕಾರ್ಯಗಳು
೧ ಇ ೧. ದೇಹದ ಸುತ್ತಲು ರಕ್ಷಣಾಕವಚವನ್ನುಂಟು ಮಾಡುವುದು : ಈ ದೈವೀ ಪ್ರಕಾಶದ ಅಥವಾ ದೈವೀ ಶಕ್ತಿಯ ಎರಡು ಕಾರ್ಯ ಗಳಿರುತ್ತವೆ. ‘ದೇಹದ ಸುತ್ತಲು ರಕ್ಷಣಾಕವಚವನ್ನುಂಟು ಮಾಡಿ ಅವನ ರಕ್ಷಣೆಯನ್ನು ಮಾಡುವುದು’, ಇದು ಜ್ಞಾನಪ್ರಕಾಶದ ಮೊದಲನೇ ಕಾರ್ಯವಾಗಿರುತ್ತದೆ. ಆದ್ದರಿಂದ ಸಂತರ ಅಥವಾ ದಿವ್ಯಾತ್ಮರ ಸಂಪೂರ್ಣ ದೇಹದ ಸುತ್ತಲೂ ದೈವೀ ಪ್ರಕಾಶದ ಕೆಲವು ಸೆಂಟಿಮೀಟರ್‌ದಷ್ಟು ದಪ್ಪವಿರುವ ಅಂಚು ಕಾರ್ಯನಿರತವಾಗಿರುತ್ತದೆ.

೧ ಇ ೨. ಜೀವಗಳಿಗೆ ಸಾಧನೆಯ ಮಹತ್ವವನ್ನು ಹೇಳಿ ಅವರ ಜೀವನವನ್ನು ಉದ್ಧರಿಸಲು ತಲೆಯ ಸುತ್ತಲು ತೇಜೋವಲಯವು ಕಾರ್ಯನಿರತವಾಗಿರುವುದು : ‘ಜ್ಞಾನದ ಪ್ರಕಾಶವನ್ನು ಪ್ರಕ್ಷೇಪಿಸಿ ಎಲ್ಲಾ ಜೀವಗಳಿಗೆ ಸಾಧನೆಯ ಮಹತ್ವವನ್ನು ಹೇಳಿ ಅವರ ಜೀವನವನ್ನು ಉದ್ಧರಿಸುವುದು’, ಇದು ಈ ದೈವೀ ಜ್ಞಾನಪ್ರಕಾಶದ ಎರಡನೇ ಕಾರ್ಯವಾಗಿರುತ್ತದೆ. ಆದ್ದರಿಂದ ದೈವೀ ಪ್ರಕಾಶವು ತಲೆಯ ಸುತ್ತಲೂ ಪ್ರಭಾವಲಯದ ರೂಪದಲ್ಲಿ ಕಾರ್ಯನಿರತವಾಗುತ್ತದೆ.
೧ ಈ. ಇಚ್ಛೆ, ಕ್ರಿಯೆ ಮತ್ತು ಜ್ಞಾನ ಈ ಶಕ್ತಿಗಳ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು
೧ ಉ. ದೇಹದಲ್ಲಿನ ದೈವೀ ಶಕ್ತಿಯು ವಿವಿಧ ರೀತಿಯ ಶಕ್ತಿಗಳ ಬಲದಿಂದ ಕಾರ್ಯನಿರತವಾದ ನಂತರ ಸೂಕ್ಷ್ಮಸ್ತರದಲ್ಲಾಗುವ ಪರಿಣಾಮಗಳು : ದೇಹದಲ್ಲಿನ ದೈವೀ ಶಕ್ತಿಯು ಯಾವಾಗ ಇಚ್ಛೆ ಮತ್ತು ಕ್ರಿಯೆ ಈ ಶಕ್ತಿಗಳ ಬಲದಿಂದ ಕಾರ್ಯನಿರತವಾಗಿರುತ್ತದೆಯೋ, ಆಗ ಪುಣ್ಯಾತ್ಮರ ಅಥವಾ ದೇವತೆಗಳ ಸಂಪೂರ್ಣ ದೇಹದ ಸುತ್ತಲೂ ದಿವ್ಯ ತೇಜದ ಅಂಚು ಕಾರ್ಯನಿರತವಾಗಿರುತ್ತದೆ. ದೇಹದಲ್ಲಿನ ದೈವೀ ಶಕ್ತಿಯು ಯಾವಾಗ ಜ್ಞಾನಶಕ್ತಿಯ ಬಲದಿಂದ ಕಾರ್ಯನಿರತ ವಾಗುತ್ತದೆಯೋ, ಆಗ ಪುಣ್ಯಾತ್ಮರ ಅಥವಾ ದೇವತೆಗಳ ತಲೆಯ ಸುತ್ತಲೂ ತೇಜೋವಲಯ ಕಾರ್ಯನಿರತವಾಗುತ್ತದೆ.
೧ ಊ. ಪ್ರಭಾವಲಯವು ತಲೆಯ ತುಲನೆಯಲ್ಲಿ ದೇಹದ ಇತರ ಅವಯವಗಳ ಸುತ್ತಲೂ ಎಷ್ಟು ಪ್ರಮಾಣದಲ್ಲಿರುತ್ತದೆ ? : ಆಧ್ಯಾತ್ಮಿಕ ಮಟ್ಟಕ್ಕನುಸಾರ ಪ್ರಭಾವಲಯವು ತಲೆಯ ತುಲನೆಯಲ್ಲಿ ದೇಹದ ಇತರ ಅವಯವಗಳ ಸುತ್ತಲೂ ವಿವಿಧ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ, ಉದಾ. ಶೇ. ೭೦ ರಷ್ಟು ಮಟ್ಟಕ್ಕೆ ದೇಹದ ಸುತ್ತಲಿನ ಪ್ರಕಾಶದ ಅಂಚು ೨.೫ ರಿಂದ ೩ ಸೆಂ.ಮೀ. ಕಾರ್ಯನಿರತವಾಗಿದ್ದೂ ತಲೆಯ ಸುತ್ತಲೂ ಪ್ರಭಾವಲಯವು ೧ ಅಡಿಯಷ್ಟು ಕಾರ್ಯನಿರತವಾಗಿರುತ್ತದೆ.
೧ ಎ. ಪ್ರಭಾವಲಯದ ಬಣ್ಣಗಳಲ್ಲಿ ದೇಹದ ಅವಯವಗಳಂತೆ ಬದಲಾವಣೆಯಾಗುತ್ತದೆಯೇ ? : ಪ್ರಭಾವಲಯದ ಬಣ್ಣಗಳಲ್ಲಿ ದೇಹದ ಅವಯವಗಳಿಗನುಸಾರ ಬದಲಾವಣೆ ಆಗದೇ ಮಟ್ಟಕ್ಕನುಸಾರ ಬದಲಾವಣೆ ಆಗುತ್ತದೆ. ಇದನ್ನು ಕೆಳಗಿನ ಕೋಷ್ಟಕದಲ್ಲಿ ವಿವರವಾಗಿ ವಿವರಿಸಲಾಗಿದೆ.
ಟಿಪ್ಪಣಿ : ಮಟ್ಟ ಹೆಚ್ಚುತ್ತ ಹೋದಂತೆ, ಸಮಷ್ಟಿ ಸಾಧನೆಯಾಗುವ ಪ್ರಮಾಣವು ಹೆಚ್ಚುತ್ತ ಹೋಗುತ್ತದೆ. ಆದ್ದರಿಂದ ದೇಹದ ಸುತ್ತಲಿನ ರಕ್ಷಣಾಕವಚದಿಂದ ಪ್ರಕಾಶದ ಅಂಚು ಮತ್ತು ತಲೆಯ ಸುತ್ತಲಿನ ಪ್ರಭಾವಲಯದ ಅಗಲವು ಹೆಚ್ಚುತ್ತ ಹೋಗುತ್ತದೆ.
ಕೃತಜ್ಞತೆ
‘ಶ್ರೀ ಗುರುಗಳ ಕೃಪೆಯಿಂದಲೇ ವಿವಿಧ ಆಧ್ಯಾತ್ಮಿಕ ಮಟ್ಟದಲ್ಲಿ ಕಾರ್ಯನಿರತವಾಗಿರುವ ಪ್ರಭಾವಲಯದ ಮೇಲಿನ ಸೂಕ್ಷ್ಮ ಜ್ಞಾನವು ಲಭಿಸಿತು ಮತ್ತು ಅದರಿಂದ ಅಧ್ಯಾತ್ಮದ ಅನೇಕ ಸೂಕ್ಷ್ಮ ಅಂಶಗಳು ಕಲಿಯಲು ಸಿಕ್ಕಿದವು’, ಅದಕ್ಕಾಗಿ ಶ್ರೀ ಗುರುಗಳ ಚರಣಗಳಲ್ಲಿ ನನ್ನ ಕೋಟಿ ಕೋಟಿ ಕೃತಜ್ಞತೆಗಳು.’
– ಸುಶ್ರೀ (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೪, ವಯಸ್ಸು ೪೧ ವರ್ಷ), ಸನಾತನ ಆಶ್ರಮ, ರಾಮನಾಥಿ, ಗೋವಾ. (ಜ್ಞಾನ ದೊರಕಿದ ಸಮಯ ಮತ್ತು ಬೆರಳಚ್ಚು ಮಾಡಿದ ಸಮಯ ೧೬.೯.೨೦೨೪ ಮಧ್ಯಾಹ್ನ ೨.೫೦ ರಿಂದ ೩.೩೫)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.
|