ಹಿಂದೂ ಯುವತಿಯರನ್ನು ಮೋಸಗೊಳಿಸಿ ಅವರೊಂದಿಗೆ ದೈಹಿಕ ಸಂಬಂಧ ಹೊಂದುವುದು ಹವ್ಯಾಸ ಅಶ್ರಫ್ನ ಆಘಾತಕಾರಿ ಹೇಳಿಕೆ
ಪಾಟಲಿಪುತ್ರ (ಬಿಹಾರ) – ಬಿಹಾರದ ಲಖಿಸರಾಯ್ನಲ್ಲಿ ಕಮಾಲ್ ಅಶ್ರಫ್ ಎಂಬಾತ ಹಿಂದೂ ಯುವತಿಯನ್ನು 14 ವರ್ಷಗಳ ಕಾಲ ಲೈಂಗಿಕವಾಗಿ ಶೋಷಿಸಿದ್ದಾನೆ. ಸಂತ್ರಸ್ತ ಯುವತಿ ದಾಖಲಿಸಿದ ದೂರಿನಲ್ಲಿ ಹಲವು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿವೆ. ಅದರ ಪ್ರಕಾರ, ‘ಹಿಂದೂ ಯುವತಿಯರನ್ನು ಮೋಸಗೊಳಿಸಿ ಅವರನ್ನು ಭೋಗದ ವಸ್ತುವಿನಂತೆ ಇಟ್ಟುಕೊಳ್ಳುವುದು ‘ಅವರ’ (ಮುಸಲ್ಮಾನರ) ಹವ್ಯಾಸ ಮತ್ತು ಅವರು ಹಿಂದೂ ಯುವತಿಯರನ್ನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಕಮಾಲ್ ಅಶ್ರಫ್ ಹೇಳಿದ್ದನು.’
1. 2012 ರಲ್ಲಿ ಸಂತ್ರಸ್ತೆ 16 ವರ್ಷದವಳಿದ್ದಾಗ, ರಾಜಸ್ಥಾನದ ಸುಮಿತ ಎಂದು ತನ್ನನ್ನು ಪರಿಚಯಿಸಿಕೊಂಡ ಅಶ್ರಫ್ ಆಕೆಗೆ ಆಮಿಷವೊಡ್ಡಿ ಅಪಹರಿಸಿದನು. ನಂತರ ಆತ ಆಕೆಯನ್ನು ಲೈಂಗಿಕವಾಗಿ ಶೋಷಿಸಿದನು.
2. ನಂತರ ಅಶ್ರಫ್ ಆಕೆಯನ್ನು ನ್ಯಾಯಾಲಯಕ್ಕೆ ಕರೆದೊಯ್ದು ‘ಮದುವೆಯಾಗಿದೆ’ ಎಂದು ಸುಳ್ಳು ಸಾಕ್ಷಿ ಹೇಳುವಂತೆ ಒತ್ತಾಯಿಸಿದನು; ಆದರೆ ಆತ ಎಂದಿಗೂ ಆಕೆಯನ್ನು ಮದುವೆಯಾಗಲಿಲ್ಲ. ಕೆಲವು ತಿಂಗಳುಗಳ ನಂತರ ಸಂತ್ರಸ್ತೆ ಗಂಡು ಮಗುವಿಗೆ ಜನ್ಮ ನೀಡಿದಳು. ನಂತರ ಅಶ್ರಫ್ ಆಕೆಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಲು ಪ್ರಾರಂಭಿಸಿದನು. ಆಗ ಸುಮಿತ್ ಅಶ್ರಫ್ ಎಂದು ಆಕೆಗೆ ತಿಳಿಯಿತು.
3. ಇಸ್ಲಾಂ ಧರ್ಮವನ್ನು ಸ್ವೀಕರಿಸದ ಹೊರತು ಆಕೆಯನ್ನು ಮದುವೆಯಾಗಲು ಅಶ್ರಫ್ ನಿರಾಕರಿಸಿದನು. ಆಕೆಯಲ್ಲಿದ್ದ ದೇವರ ವಿಗ್ರಹಗಳನ್ನು ಎಸೆದನು. ಆಕೆ ಮತಾಂತರಗೊಳ್ಳಲು ನಿರಾಕರಿಸಿದಾಗ, ಆಕೆಗೆ ಗೋಮಾಂಸ ತಿನ್ನಿಸಿ ಮತಾಂತರಗೊಳ್ಳುವಂತೆ ಒತ್ತಾಯಿಸಿದನು.
4. ನಂತರ ಅಶ್ರಫ್ ಮತ್ತೊಬ್ಬ ಮುಸಲ್ಮಾನನಾದ ಇಬ್ರಾಹಿಂ ಅಹ್ಮದ್ನೊಂದಿಗೆ ದೈಹಿಕ ಸಂಬಂಧ ಬೆಳೆಸಲು ಸಂತ್ರಸ್ತೆಯ ಮೇಲೆ ಒತ್ತಡ ಹೇರಿದನು. ಆಕೆ ನಿರಾಕರಿಸಿದಾಗ, ಅವರಿಬ್ಬರೂ ಆಕೆಗೆ ಥಳಿಸಿ ಆಕೆಯ ಗುಪ್ತಾಂಗಗಳಿಗೆ ಗಾಯ ಮಾಡಲು ಪ್ರಯತ್ನಿಸಿದರು.
5. ಇಬ್ರಾಹಿಂ ಅಹ್ಮದ್ ಸಂತ್ರಸ್ತೆಗೆ, ಒಂದು ವೇಳೆ ನನ್ನನೊಂದಿಗೆ ದೈಹಿಕ ಸಂಬಂಧ ಬೆಳೆಸಿದರೆ, ಅಶ್ರಫ್ ಆಕೆಯನ್ನು ಮದುವೆಯಾಗುತ್ತಾನೆ ಎಂದು ಹೇಳಿದ.
6. ನಂತರ ಸಂತ್ರಸ್ತ ಯುವತಿ ಸಂಬಂಧಿಕರ ಮನೆಗೆ ಓಡಿಹೋಗಿ ಪೊಲೀಸರಿಗೆ ದೂರು ನೀಡಿದಳು.
ಸಂಪಾದಕೀಯ ನಿಲುವುಅಶ್ರಫ್ನ ಹೇಳಿಕೆಯಿಂದ ಲವ್ ಜಿಹಾದ್ನ ನಿಜ ಸ್ವರೂಪ ಬಯಲಾಗಿದೆ. ‘ಪ್ರೀತಿಗೆ ಧರ್ಮವಿಲ್ಲ’ ಎನ್ನುವ ಜಾತ್ಯತೀತವಾದಿಗಳು ಹಿಂದೂ ಯುವತಿಯರ ಜೀವನವನ್ನು ನಾಶಪಡಿಸುವ ಲವ್ ಜಿಹಾದಿಗಳ ಬಗ್ಗೆ ಏನು ಹೇಳುತ್ತಾರೆ? |