Delhi Life Imprisonment For Raping Minor : ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದವನಿಗೆ ಜೀವಾವಧಿ ಶಿಕ್ಷೆ

  • 19 ಲಕ್ಷ 50 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶ

  • ಕೇವಲ 20 ದಿನಗಳಲ್ಲಿ ಪ್ರಕರಣ ಇತ್ಯರ್ಥ

ನವದೆಹಲಿ – ಅಪ್ರಾಪ್ತ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿ ಮಾಡಿದ ಪ್ರಕರಣದಲ್ಲಿ ದೆಹಲಿಯ ತೀಸ್ ಹಜಾರಿ ನ್ಯಾಯಾಲಯವು 45 ವರ್ಷದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆತನು ಜೀವಮಾನವಿಡೀ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಇದರೊಂದಿಗೆ ನ್ಯಾಯಾಲಯವು ಸಂತ್ರಸ್ತೆಗೆ 19 ಲಕ್ಷ 50 ಸಾವಿರ ರೂಪಾಯಿ ಪರಿಹಾರವನ್ನು ನೀಡಲು ಆದೇಶಿಸಿದೆ. ವಿಶೇಷವೆಂದರೆ ನ್ಯಾಯಾಲಯವು ಕೇವಲ 20 ದಿನಗಳಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.

ಆರೋಪಿಯು ಸಂತ್ರಸ್ತೆಯ ತಂದೆಯ ಪರಿಚಯದವನಾಗಿದ್ದನು ಮತ್ತು ಆಕೆ ಆತನನ್ನು ‘ಕಾಕಾ’ ಎಂದು ಕರೆಯುತ್ತಿದ್ದಳು. ನ್ಯಾಯಾಲಯವು, ಸಂತ್ರಸ್ತೆ ಸದರಿ ಆರೋಪಿಯಿಂದ ಬಹಳ ಮಾನಸಿಕ ವೇದನೆ ಮತ್ತು ತೊಂದರೆ ಅನುಭವಿಸಿರಬಹುದು ಮತ್ತು ಆಕೆ ಇನ್ನೂ ಆ ನೋವನ್ನು ಅನುಭವಿಸುತ್ತಿರಬಹುದು. ಆಕೆಯ ದುಃಖವನ್ನು ಹಣದಿಂದ ತುಂಬಲು ಸಾಧ್ಯವಿಲ್ಲದಿದ್ದರೂ, ಈ ಪರಿಹಾರವು ಆಕೆಗೆ ಅಧ್ಯಯನ ಮಾಡಲು ಅಥವಾ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ, ಇದರಿಂದ ಆಕೆ ಭವಿಷ್ಯದಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲಲು ಸಾಧ್ಯವಾಗುತ್ತದೆ.

ಸಂಪಾದಕೀಯ ನಿಲುವು

  • ನ್ಯಾಯಾಲಯಕ್ಕೆ 20 ದಿನಗಳಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಲು ಸಾಧ್ಯವಿದ್ದಾಗ, ಎಲ್ಲೆಡೆ ಹಾಗೆ ಏಕೆ ಮಾಡಲಾಗುವುದಿಲ್ಲ? ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸಿನಲ್ಲಿ ಉದ್ಭವಿಸುತ್ತದೆ!
  • ಲವ್ ಜಿಹಾದಿಗಳಿಗೆ ಇದೇ ರೀತಿ ತಕ್ಷಣ ಶಿಕ್ಷೆ ನೀಡಿದರೆ ಲವ್ ಜಿಹಾದ್ ಗೆ ಶಾಶ್ವತವಾಗಿ ಕಡಿವಾಣ ಬೀಳುತ್ತದೆ!