ಕೊಲಂಬೊ (ಶ್ರೀಲಂಕಾ) – ಭಾರತದ ಆಕ್ಷೇಪಣೆಯ ನಂತರ ಶ್ರೀಲಂಕೆಯು ತನ್ನ ಟ್ರಿಂಕೋಮಾಲಿ ಬಂದರಿನ ಬಳಿ ಪಾಕಿಸ್ತಾನದ ನೌಕಾಪಡೆಯೊಂದಿಗೆ ನಡೆಸಲು ಉದ್ದೇಶಿಸಿದ್ದ ನೌಕಾ ಸಮರಾಭ್ಯಾಸವನ್ನು ರದ್ದುಗೊಳಿಸಿದೆ. ಈ ಸಮರಾಭ್ಯಾಸದ ಮಾಹಿತಿ ಪಡೆದ ನಂತರ ಭಾರತವು ಕೊಲಂಬೊದಲ್ಲಿರುವ ತನ್ನ ಹೈಕಮಿಷನ್ ಮೂಲಕ ಶ್ರೀಲಂಕಾ ಸರಕಾರದೊಂದಿಗೆ ಮಾತನಾಡಿ ಈ ಸಮರಾಭ್ಯಾಸವನ್ನು ರದ್ದುಗೊಳಿಸುವಂತೆ ತಿಳಿಸಿತು. ಭಾರತೀಯ ಅಧಿಕಾರಿಗಳು ಈ ಸಂಪೂರ್ಣ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.
1. ಭಾರತದ ಸಹಾಯದಿಂದ ತ್ರಿಂಕೋಮಾಲಿ ಬಂದರಿನ ಬಳಿ ವಿದ್ಯುತ ಸ್ಥಾವರವನ್ನು ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಂದರಿನ ಬಳಿ ಪಾಕಿಸ್ತಾನದ ನೌಕಾಪಡೆಯು ಸಮರಾಭ್ಯಾಸ ನಡೆಸುವುದಕ್ಕೆ ಭಾರತ ಆಕ್ಷೇಪಣೆ ವ್ಯಕ್ತಪಡಿಸಿತ್ತು. ನಂತರ ಪಾಕಿಸ್ತಾನವು ಸಮರಾಭ್ಯಾಸ ರದ್ದುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರೂ ಶ್ರೀಲಂಕೆಯು ಭಾರತದ ಒತ್ತಡಕ್ಕೆ ಮಣಿದು ಈ ತಾಲೀಮನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿತು.
2. ಶ್ರೀಲಂಕೆಯು ವಿದೇಶಿ ಸಂಶೋಧನಾ ಹಡಗುಗಳ ಆಗಮನದ ಮೇಲೆ ಒಂದು ವರ್ಷದವರೆಗೆ ನಿಷೇಧ ಹೇರಿದೆ. ಚೀನಾದ ಬೇಹುಗಾರಿಕೆ ಹಡಗುಗಳಿಂದಾಗಿ ಈ ನಿಷೇಧವನ್ನು ವಿಧಿಸಲಾಗಿತ್ತು.
After India's objection, Sri Lanka cancels joint naval drill with Pakistan!
Given the known hostility between India and Pakistan, how could Sri Lanka even consider such an exercise with Pakistan? Why didn’t Sri Lanka propose a joint drill with the Indian Navy instead — that is… pic.twitter.com/BieOw66WM5
— Sanatan Prabhat (@SanatanPrabhat) April 19, 2025
ಸಂಪಾದಕೀಯ ನಿಲುವು
|