ಉಕ್ರೇನ್‌ಗೆ ಆರ್ಥಿಕ ನೆರವು ನೀಡುವುದು, ಬೈಡೆನ್‌ನ ಮೂರ್ಖತನ! – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ – ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಹಣಕಾಸಿನ ನೆರವು ನೀಡಿದ ಬಗ್ಗೆ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ. ಉಕ್ರೇನ್ ಗೆ ರಷ್ಯಾ ವಿರುದ್ಧ ಹೋರಾಡುವುದಕ್ಕಾಗಿ 350 ಅಬ್ಜ ಡಾಲರ್ಸ್ (3 ಸಾವಿರದ 57 ಕೋಟಿ ರೂ.) ಕೊಟ್ಟಿರುವುದು ಬೈಡೆನ್ ಅವರ “ಮೂರ್ಖತನ” ವಾಗಿತ್ತು ಎಂದು ಟ್ರಂಪ್ ಹೇಳಿದರು. ಅದೇ ವೆಚ್ಚದಲ್ಲಿ ನಾವು ನಮ್ಮ (ಅಮೇರಿಕಾದ)ಸಂಪೂರ್ಣ ನೌಕಾಪಡೆಯನ್ನು ಪುನಃ ನಿರ್ಮಿಸಬಹುದಾಗಿತ್ತು. ಅಮೇರಿಕಾ ಮತ್ತು ಉಕ್ರೇನ್ ನಡುವೆ ಖನಿಜ ಒಪ್ಪಂದ ಆಗಬೇಕು ಎಂದು ನನಗೆ ಈಗ ಅನ್ನಿಸುತ್ತಿಲ್ಲ ಎಂದು ಟ್ರಂಪ್ ನೇರವಾಗಿ ಹೇಳಿಕೆ ನೀಡಿದ್ದಾರೆ.

ಯುರೋಪಿನ ಜನರು ನಮಗಿಂತ ಬುದ್ಧಿವಂತರು! – ಟ್ರಂಪ್

ಟ್ರಂಪ್ ಮುಂದೆ ಮಾತನಾಡಿ, “ಝೆಲೆನ್ಸ್ಕಿ ನಮ್ಮನ್ನು ಹೆಚ್ಚು ಪ್ರಶಂಸಿಸಬೇಕೆಂದು ನನಗೆ ಅನ್ನಿಸುತ್ತದೆ; ಏಕೆಂದರೆ ಉಕ್ರೇನ್ ನ ಪ್ರತೀ ಕಷ್ಟದ ಸಮಯದಲ್ಲಿಯೂ ಅಮೇರಿಕಾ ಜೊತೆ ನಿಂತಿದೆ. ನಾವುಉಕ್ರೇನ್ ಗೆ ಯುರೋಪ್‌ಗಿಂತ ಹೆಚ್ಚು ಸಹಾಯ ನೀಡಿದ್ದೇವೆ. ವಾಸ್ತವವಾಗಿ ಯುರೋಪ್ ಉಕ್ರೇನ್ ಗೆ ಹೆಚ್ಚು ಸಹಾಯ ನೀಡಬೇಕಿತ್ತು. ಯುರೋಪಿನ ಜನರು ಬೈಡೆನ್‌ಗಿಂತ ಬುದ್ಧಿವಂತರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಯುರೋಪ್ ಏನು ಕೊಟ್ಟಿತ್ತೋ ಅದೆಲ್ಲವೂ ವಾಪಸ್ಸು ಸಿಕ್ಕಿದೆ; ಏಕೆಂದರೆ ಅವರು ಮಾಡಿದ ಸಹಾಯ ಸಾಲದ ರೂಪದಲ್ಲಿತ್ತು. ಹಣ ಕೂಡ ಒಂದು ಮಹತ್ವದ ವಿಷಯವಾಗಿದೆ; ಆದರೆ ಸಾವು ಅಷ್ಟೇ ಮಹತ್ವದ್ದಾಗಿದೆ, ಮತ್ತು ಉಕ್ರೇನ್ ಪ್ರತೀ ವಾರ ತನ್ನ ಸಾವಿರಾರು ಸೈನಿಕರನ್ನು ಕಳೆದುಕೊಳ್ಳುತ್ತಿದೆ ಎಂದು ಟ್ರಂಪ್ ಹೇಳಿದರು.

ರಷ್ಯಾ-ಉಕ್ರೇನ್ ಒಪ್ಪಂದಕ್ಕೆ ಐರೋಪ್ಯ ರಾಷ್ಟ್ರಗಳ ಒಪ್ಪಿಗೆ ಅಗತ್ಯ! – ಟ್ರಂಪ್

ರಷ್ಯಾ ಮತ್ತು ಉಕ್ರೇನ್ ನಡುವೆ ಯಾವುದೇ ಒಪ್ಪಂದ ಆಗಬೇಕಾಗಿದ್ದರೂ ಯುರೋಪಿಯನ್ ರಾಷ್ಟ್ರಗಳು ಒಪ್ಪಿಗೆ ನೀಡಬೇಕಾಗುತ್ತದೆ ಎಂದು ಟ್ರಂಪ್ ಹೇಳಿದರು. ರಷ್ಯಾ ಒಪ್ಪಂದ ಮಾಡಿಕೊಳ್ಳಲು ಬಯಸಿದೆ. ಉಕ್ರೇನ್ ನ ಜನರೂ ಸಹ ಒಪ್ಪಂದವನ್ನು ಬಯಸುತ್ತಾರೆ ಎಂದು ಟ್ರಂಪ್ ಹೇಳಿದರು.