100 ಕೋಟಿ ಡಾಲರ್ (8 ಸಾವಿರ 726 ಕೋಟಿ ರೂಪಾಯಿ) ಮೌಲ್ಯದ ಮದ್ದುಗುಂಡುಗಳ ಮೇಲೆ ಪರಿಣಾಮ
ವಾಷಿಂಗ್ಟನ್ (ಅಮೇರಿಕಾ) – ರಷ್ಯಾ ವಿರುದ್ಧ ಉಕ್ರೇನ್‌ಗೆ ಅಮೆರಿಕದಿಂದ ನೀಡಲಾಗುತ್ತಿದ್ದ ಸೇನಾ ನೆರವನ್ನು ಸ್ಥಗಿತಗೊಳಿಸುವ ಆದೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇತ್ತೀಚೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಟ್ರಂಪ್ ಅವರ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಟ್ರಂಪ್ ಅವರ ಈ ನಿರ್ಧಾರದಿಂದ 100 ಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಪೂರೈಕೆಗೆ ಅಡ್ಡಿಯಾಗಲಿದೆ.
1. “ವೈಟ್ ಹೌಸ್” (ಅಮೆರಿಕದ ಅಧ್ಯಕ್ಷರ ಕಚೇರಿ ಮತ್ತು ನಿವಾಸ) ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, ಝೆಲೆನ್ಸ್ಕಿ ಶಾಂತಿ ಬಯಸುತ್ತಾರೆ ಎಂದು ಟ್ರಂಪ್ ಖಚಿತಪಡಿಸಿಕೊಳ್ಳುವವರೆಗೂ ಈ ನೆರವು ಸ್ಥಗಿತಗೊಳ್ಳಲಿದೆ. ಉಕ್ರೇನ್‌ಗೆ ನಮ್ಮಿಂದ ಸಿಗುವ ನೆರವನ್ನು ಸ್ಥಗಿತಗೊಳಿಸಿದ ನಂತರ, ಆ ನಿರ್ಧಾರದ ಪರಿಣಾಮಗಳು ಮತ್ತು ರಷ್ಯಾ-ಉಕ್ರೇನ್ ಪರಿಸ್ಥಿತಿಯ ಮೇಲೆ ನಾವು ನಿಗಾ ಇರಿಸಿದ್ದೇವೆ, ಎಂದು ಹೇಳಿದ್ದಾರೆ.
2. ಝೆಲೆನ್ಸ್ಕಿ ಹೇಳುವಂತೆ, ಅವರಿಗೆ ಭದ್ರತೆಯ ಭರವಸೆ ಬೇಕು. ಈ ಹಿಂದೆ ಝೆಲೆನ್ಸ್ಕಿ ಅವರು ರಷ್ಯಾ ಮತ್ತು ಉಕ್ರೇನ್ ನಡುವಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಈ ಯುದ್ಧವು ಶೀಘ್ರದಲ್ಲೇ ಕೊನೆಗೊಳ್ಳುವಂತೆ ತೋರುತ್ತಿಲ್ಲ. ಎಂದು ಹೇಳಿದ್ದರು.
3. ಇದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಝೆಲೆನ್ಸ್ಕಿ ಅವರ ಈ ಹೇಳಿಕೆ ಸರಿಯಿಲ್ಲ, ನಾನು ಅದನ್ನು ಖಂಡಿಸುತ್ತೇನೆ ಎಂದಿದ್ದಾರೆ.
🚨 Trump Suspends Military Aid to Ukraine 🚨
This decision comes after a public clash between Trump and Ukrainian President Volodymyr Zelensky, with Trump pushing for a rapid end to the war. 💥#UkraineWar #RussiaUkraineWar
PC: @timesofindia pic.twitter.com/G8vOTXpr6V— Sanatan Prabhat (@SanatanPrabhat) March 4, 2025