ಔರಂಗಜೇಬ್‌ನ ಗೋರಿಯನ್ನು ಬುಲ್ಡೋಜರ್ ನಿಂದ ಧ್ವಂಸಗೊಳಿಸಿ ! – ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ

ಭಾಗ್ಯನಗರ (ತೆಲಂಗಾಣ) ಇಲ್ಲಿಯ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರಿಂದ ಮಹಾರಾಷ್ಟ್ರ ಸರಕಾರಕ್ಕೆ ಆಗ್ರಹ

ಭಾಗ್ಯನಗರ (ತೆಲಂಗಾಣ) – ಮಹಾರಾಷ್ಟ್ರ ಸರಕಾರವು ಛತ್ರಪತಿ ಸಂಭಾಜಿನಗರ ಇಲ್ಲಿಯ ಮೊದಲ ಬಾದಶಹಾ ಔರಂಗಜೇಬನ ಗೋರಿಯ ಮೇಲೆ ಬುಲ್ಡೋಜರ್ ನಡೆಸಬೇಕು’, ಎಂದು ಭಾಗ್ಯನಗರ (ತೆಲಂಗಾಣ)ದ ಭಾಜಪದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜ ಸಿಂಹ ಇವರು ಆಗ್ರಹಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ವಿಡಿಯೋದ ಮೂಲಕ ಈ ಬೇಡಿಕೆ ಸಲ್ಲಿಸಿದ್ದಾರೆ.

ಔರಂಗಜೇಬನ ಪೀಳಿಗೆಗೆ ಪಾಠ ಕಲಿಸುವುದಕ್ಕಾಗಿ ಮಾವಳೆ(ಸೈನಿಕರು) ಸಿದ್ಧವಾಗಿದ್ದಾರೆ !

ಶಾಸಕ ಟಿ. ರಾಜಸಿಂಹ ಇವರು, ಛಾವಾ ಚಲನಚಿತ್ರದಲ್ಲಿ ತೋರಿಸಲಾಗಿರುವ ಛತ್ರಪತಿ ಸಂಭಾಜಿ ಮಹಾರಾಜರ ಮೇಲಿನ ಔರಂಗಜೇಬದಿಂದ ನಡೆಸಿರುವ ದೌರ್ಜನ್ಯ ನೋಡಿ ಹಿಂದುಗಳ ರಕ್ತ ಕುದಿಯುತ್ತಿದೆ. ಮಹಾರಾಷ್ಟ್ರದಲ್ಲಿನ ಜನರಿಗೆ ದೌರ್ಜನ್ಯ ತಿಳಿದಿತ್ತು; ಆದರೆ ಚಲನಚಿತ್ರದ ಮೂಲಕ ನಮ್ಮಂತಹ ಭಾರತೀಯರಿಗೂ ಅದರ ಮಾಹಿತಿ ಆಯಿತು. ಚಲನಚಿತ್ರದಲ್ಲಿ ಕೇವಲ ಕೆಲವು ಪ್ರಮಾಣದಲ್ಲಿಯೇ ದೌರ್ಜನ್ಯ ತೋರಿಸಲಾಗಿದೆ, ಅದು ಕೂಡ ಸಹಿಸಲು ಆಗುತ್ತಿಲ್ಲ. ಇದರಿಂದ ಛತ್ರಪತಿ ಸಂಭಾಜಿ ಮಹಾರಾಜರಿಗೆ ಕಿರುಕುಳ ನೀಡಿರುವ, ಅವರನ್ನು ತುಂಡು ತುಂಡು ಮಾಡಿರುವ ಔರಂಗಜೇಬನ ಗೋರಿ ಮಹಾರಾಷ್ಟ್ರದ ನೆಲದಲ್ಲಿ ಇರಬಾರದು. ಔರಂಗಜೇಬನ ಹೆಸರು ಮಹಾರಾಷ್ಟ್ರದ ನೆಲದಿಂದ ಅಳಿಸಿ ಹಾಕಬೇಕು. ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಇದಕ್ಕಾಗಿ ಆಗ್ರಹಿಸುತ್ತೇನೆ. ಔರಂಗಜೇಬನ ಗೋರಿ ಧ್ವಂಸಗೊಳಿಸಿ. ನೀವೇನು ಯೋಚನೆ ಮಾಡಬೇಡಿ ಔರಂಗಜೇಬನ ಗೋರಿ ಕಾಪಾಡಲು ಬರುವ ಅವರ ಪೀಳಿಗೆ ಎದ್ದು ನಿಲ್ಲುವುದು. ಅವರಿಗೆ ಪಾಠ ಕಲಿಸುವುದಕ್ಕಾಗಿ ಮಹಾರಾಷ್ಟ್ರದಲ್ಲಿನ ಮಾವಳೆಗಳು ಸಿದ್ದರಿದ್ದಾರೆ.

ಸಂಪಾದಕೀಯ ನಿಲುವು

ಹಿಂದುಗಳ ಪ್ರಾರ್ಥನಾ ಸ್ಥಳಗಳನ್ನು ಮತ್ತೊಮ್ಮೆ ಪಡೆಯುವುದರ ಜೊತೆಗೆ ಆಕ್ರಮಕರ ಪ್ರತೀಕಗಳನ್ನು ನಾಶಗೊಳಿಸುವುದು ಆವಶ್ಯಕವಾಗಿದೆ. ಗೌರವಶಾಲಿ ಇತಿಹಾಸದ ಸ್ಮರಣೆ ಮಾಡಿಯೇ ಉಜ್ವಲ ಭವಿಷ್ಯ ರೂಪಿಸಬಹುದು. ಟಿ. ರಾಜಸಿಂಹ ಇವರು ಮಾಡಿರುವ ಬೇಡಿಕೆ ಸ್ವಾಗತಾರ್ಹವಾಗಿದೆ ಇದಕ್ಕೆ ಆರಂಭ ಆಗಬೇಕು, ಎಂದು ರಾಷ್ಟ್ರಪ್ರೇಮಿ ಸಮಾಜದ ಭಾವನೆ ಆಗಿದೆ.