‘ಯಜ್ಞದಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕ ಪರಿಣಾಮ ವಾಗುತ್ತದೆ’, ಎಂಬುದು ಎಲ್ಲರಿಗೂ ಗೊತ್ತಿದೆ ಮಹರ್ಷಿಗಳ ಆಜ್ಞೆಯಂತೆ ರಾಮನಾಥಿಯ (ಗೋವಾ) ಸನಾತನದ ಆಶ್ರಮದಲ್ಲಿ ೨೦೧೮ ರಿಂದ ಅನೇಕ ಯಜ್ಞಯಾಗಗಳನ್ನು ಮಾಡಲಾಯಿತು. ಈ ಯಜ್ಞಗಳ ಕುರಿತು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಬಹಳಷ್ಟು ಸಂಶೋಧನೆ ಮಾಡಿದೆ. ಈ ಸಂಶೋಧನೆಯಿಂದ ‘ಯಜ್ಞಯಾಗ ಮಾಡುವುದರಿಂದ ಯಜ್ಞಕುಂಡ, ಯಜ್ಞದ ಯಜಮಾನ ಮತ್ತು ಪುರೋಹಿತರು, ಯಜ್ಞದಲ್ಲಿನ ವಿವಿಧ ವಸ್ತುಗಳು, ಹಾಗೆಯೇ ಸುತ್ತಮುತ್ತಲಿನ ವಾತಾವರಣದ ಮೇಲೆ ತುಂಬಾ ಸಕಾರಾತ್ಮಕ ಪರಿಣಾಮ ಬೀರುತ್ತದೆ’, ಎಂಬುದು ಸಿದ್ಧವಾಯಿತು. ‘ರಾಮನಾಥಿ ಆಶ್ರಮದಲ್ಲಿ ಮಾಡಿದ ಯಜ್ಞಗಳ ಪರಿಣಾಮವು ಸಂಪೂರ್ಣ ಪೃಥ್ವಿಯಲ್ಲಿ ಮಾತ್ರವಲ್ಲ, ಸಪ್ತಲೋಕಗಳ ವರೆಗೆ ಆಗುತ್ತದೆ’, ಎಂದು ಮಹರ್ಷಿ ಗಳು ಮತ್ತು ಕೆಲವು ಸಂತರು ಹೇಳಿದ್ದಾರೆ. ಈ ಕುರಿತು ಸಂಶೋಧನೆ ಮಾಡಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಒಂದು ಹೊಸ ಪ್ರಯೋಗವನ್ನು ಮಾಡಿತು. ಈ ವೈಶಿಷ್ಟ್ಯಪೂರ್ಣ ಸಂಶೋಧನೆಯನ್ನು ಮುಂದೆ ಕೊಡುತ್ತಿದ್ದೇವೆ.

೧. ರಾಮನಾಥಿ ಆಶ್ರಮದಲ್ಲಿ ೨೩.೧.೨೦೨೨ ರಂದು ನಡೆದ ಗರುಡಯಾಗದ ಸಮಯದಲ್ಲಿ ಸನಾತನದ ದಿವಂಗತರಾಗಿರುವ ಇಬ್ಬರು ಸಾಧಕರ ಮತ್ತು ದೇಹತ್ಯಾಗ ಮಾಡಿದ ಇಬ್ಬರು ಸಂತರ ಛಾಯಾಚಿತ್ರಗಳನ್ನು ಸಂಶೋಧನೆಗಾಗಿ ಆಶ್ರಮದಲ್ಲಿನ ೩ ವಿವಿಧ ಸ್ಥಳಗಳಲ್ಲಿ ಇಟ್ಟಿದ್ದು

ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧನೆ ಮಾಡಿ ಅನೇಕ ಸಾಧಕರು ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುತ್ತಿದ್ದಾರೆ. ‘ಸನಾತನದ ಸಾಧಕರಿಗೆ ಮೃತ್ಯುವಿನ ನಂತರ ಮಹರ್ಲೋಕ ಮತ್ತು ಸನಾತನದ ದೇಹತ್ಯಾಗ ಮಾಡಿದ ಸಂತರಿಗೆ ಜನಲೋಕ, ತಪಲೋಕ ಮುಂತಾದ ಉಚ್ಚ ಲೋಕಗಳ ಪ್ರಾಪ್ತಿಯಾಗಿದೆ. ಹಾಗೆಯೇ ಅವರ ಮುಂದಿನ ಸಾಧನೆಯು ಆಯಾ ಲೋಕಗಳಲ್ಲಿ ಮುಂದುವರಿದಿದೆ’, ಎಂದು ಪರಾತ್ಪರ ಗುರು ಡಾ. ಆಠವಲೆಯವರು ವಿವಿಧ ಪ್ರಸಂಗಗಳಲ್ಲಿ ಹೇಳಿದ್ದಾರೆ. ಗರುಡಯಾಗದ ಸಮಯದಲ್ಲಿ ಸನಾತನದ ೨ ದಿವಂಗತ ಸಾಧಕರ ಮತ್ತು ದೇಹತ್ಯಾಗ ಮಾಡಿದ ೨ ಸಂತರ ಛಾಯಾಚಿತ್ರ ಗಳನ್ನು ಸಂಶೋಧನೆಗಾಗಿ ಆಶ್ರಮದಲ್ಲಿ ಮುಂದಿನ ಸ್ಥಳಗಳಲ್ಲಿ ಇಡಲಾಯಿತು.

೨. ನಿರೀಕ್ಷಣೆ ಮತ್ತು ಅವುಗಳ ವಿವೇಚನೆ
ಈ ಪ್ರಯೋಗದಲ್ಲಿನ ಸಾಧಕರ ಮತ್ತು ಸಂತರ ಛಾಯಾಚಿತ್ರಗಳನ್ನು ಯಾಗದ ಮೊದಲು ಮತ್ತು ಯಾಗದ ನಂತರ ‘ಯು.ಎ.ಎಸ್.’ ಉಪಕರಣದಿಂದ ನಿರೀಕ್ಷಣೆ ಮಾಡಲಾಯಿತು. ಅದನ್ನು ಮುಂದೆ ಕೊಡಲಾಗಿದೆ.

ಮೇಲಿನ ಕೋಷ್ಟಕದಿಂದ ಮುಂದಿನ ಅಂಶಗಳು ಗಮನಕ್ಕೆ ಬಂದಿತು.
೧. ಸಾಧಕ ಮತ್ತು ಸಂತರ ಛಾಯಾಚಿತ್ರಗಳಲ್ಲಿ ಯಾಗದ ಮೊದಲು ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ಪ್ರಕಾರದ ನಕಾರಾತ್ಮಕ ಊರ್ಜೆ ಮತ್ತು ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯೂ ಕಂಡುಬಂದಿತು.
೨. ಯಾಗದ ನಂತರ ಸಾಧಕರ ಮತ್ತು ಸಂತರ ಛಾಯಾಚಿತ್ರ ಗಳಲ್ಲಿನ ನಕಾರಾತ್ಮಕ ಉರ್ಜೆ ಇಲ್ಲವಾಗಿ ಅವರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣ ಬಹಳ ಹೆಚ್ಚಾಯಿತು.

೩. ನಿಷ್ಕರ್ಷ
ಪ್ರಯೋಗದಲ್ಲಿ ಇಟ್ಟಿರುವ ಸಾಧಕರ ಮತ್ತು ಸಂತರ ಛಾಯಾಚಿತ್ರ ಗಳ ಮೇಲೆ ಗರುಡಯಾಗದ ಚೈತನ್ಯದಿಂದ ತುಂಬಾ ಸಕಾರಾತ್ಮಕ ಪರಿಣಾಮವಾಯಿತು. ವಿಶೇಷವೆಂದರೆ ಈ ಛಾಯಾಚಿತ್ರಗಳನ್ನು ಆಶ್ರಮದಲ್ಲಿ ವಿವಿಧ ಸ್ಥಳಗಳಲ್ಲಿ ಇರಿಸಲಾಗಿದ್ದರೂ ಆ ಛಾಯಾಚಿತ್ರ ಗಳ ಮೇಲಾಗಿರುವ ಪರಿಣಾಮದ ಪ್ರವೃತ್ತಿ ಒಂದೇ ಆಗಿದೆ.
೪. ಸಾಧಕರ ಮತ್ತು ಸಂತರ ಛಾಯಾಚಿತ್ರಗಳ ಮೇಲೆ ಗರುಡಯಾಗದ ಚೈತನ್ಯದಿಂದಸಕಾರಾತ್ಮಕ ಪರಿಣಾಮವಾಗುವುದರ ಕಾರಣ

‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳೊಂದಿಗೆ ಸಂಬಂಧಿಸಿದ ಶಕ್ತಿಗಳು ಒಟ್ಟಿಗೆ ಇರುತ್ತವೆ’, ಈ ತತ್ತ್ವಕ್ಕನುಸಾರ ಸಾಧಕರ ಮತ್ತು ಸಂತರ ಛಾಯಾಚಿತ್ರಗಳಲ್ಲಿ ಅವರ ಸ್ಪಂದನಗಳಿವೆ. ‘ರಾಮನಾಥಿ ಆಶ್ರಮದಲ್ಲಿ ಮಾಡಿದ ಗರುಡಯಾಗದ ಪರಿಣಾಮವು ಸಪ್ತಲೋಕಗಳ ವರೆಗೆ ಆಗುತ್ತದೆ’, ಎಂದು ಮಹರ್ಷಿಗಳು ಹೇಳಿದ್ದಾರೆ. ರಾಮನಾಥಿ ಆಶ್ರಮದಲ್ಲಿ ನಡೆದ ಗರುಡಯಾಗದಿಂದ ಪ್ರಕ್ಷೇಪಿಸಿದ ಚೈತನ್ಯವನ್ನು ಸಪ್ತಲೋಕದಲ್ಲಿನ ಜೀವಗಳು ಸೂಕ್ಷ್ಮದಿಂದ ಪಡೆದರು. ಪ್ರಯೋಗದಲ್ಲಿನ ಸಾಧಕರ ಮತ್ತು ಸಂತರ ಛಾಯಾಚಿತ್ರಗಳ ಮೇಲೆ ಇದರ ಪರಿಣಾಮ
ವಾಯಿತು. ಆದ್ದರಿಂದ ಯಾಗದ ನಂತರ ಅವರ ಛಾಯಾಚಿತ್ರ ಗಳಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಗಿ ಅವರಲ್ಲಿನ ಸಕಾರಾತ್ಮಕ ಉರ್ಜೆಯಲ್ಲಿ ತುಂಬಾ ಹೆಚ್ಚಳವಾಯಿತು. ‘ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಈ ಹೊಸ ಸಂಶೋಧನೆಯನ್ನು ಮಾಡುವ ಅವಕಾಶವು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಸಾಧಕರಿಗೆ ದೊರಕಿತು’, ಅದಕ್ಕಾಗಿ ನಾವೆಲ್ಲ ಸಾಧಕರು ಪರಾತ್ಪರ ಗುರು ಡಾಕ್ಟರರ ಚರಣ ಗಳಲ್ಲಿ ಕೋಟಿ ಕೋಟಿ ಕೃತಜ್ಞರಾಗಿದ್ದೇವೆ.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೧.೨.೨೦೨೨) ವಿ-ಅಂಚೆ : [email protected]
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು