
ಕನ್ನಡ ಸಾಪ್ತಾಹಿಕ ‘ಸನಾತನ ಪ್ರಭಾತ’ ೨೫ ವರ್ಷಗಳನ್ನು ಪೂರೈಸಿ ೨೬ ಕ್ಕೆ ದಾಪುಗಾಲಿಡುತ್ತಿದೆ. ಒಂದು ನಿಯತಕಾಲಿಕೆಯು ಸಾಧಿಸಿದ ಈ ಯಶಸ್ವಿ ಸಾಧನೆಯನ್ನು ಒಂದು ಮೈಲಿಗಲ್ಲು ಎಂದು ಪರಿಗಣಿಸಬಹುದು; ಆದಾಗ್ಯೂ, ಸದ್ಯದ ಜಾಗತಿಕ ಪರಿಸ್ಥಿತಿಯನ್ನು ಗಮನಿಸಿದರೆ, ಈ ಸಾಧನೆಯನ್ನು ಹೆಚ್ಚು ವಿಶೇಷವಾಗಿ ನೋಡಬೇಕು. ಏಕೆಂದರೆ ಪ್ರಸ್ತುತ ‘ಆನ್‌ಲೈನ್’ ಯುಗವಾಗಿದೆ. ಒಂದು ಕಾಲದಲ್ಲಿ, ಮರುದಿನ ಪತ್ರಿಕೆಯಲ್ಲಿ ಬರುವವರೆಗೂ ಸುದ್ದಿಯ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರಲಿಲ್ಲ. ಎರಡು ದಶಕಗಳ ಹಿಂದೆ ಹಿಂತಿರುಗಿ ನೋಡಿದರೆ, ‘ಆಕಾಶವಾಣಿ’, ‘ದೂರದರ್ಶನ’ ಮತ್ತು ಬೆರಳೆಣಿಕೆಯಷ್ಟು ಕೆಲವು ಇತರ ಸುದ್ದಿ ವಾಹಿನಿಗಳನ್ನು ಹೊರತುಪಡಿಸಿದರೆ, ಸುದ್ದಿಗಳನ್ನು ತಿಳಿದುಕೊಳ್ಳಲು ಪತ್ರಿಕೆಗಳು ಮಾತ್ರ ಪ್ರಮುಖ ಅಥವಾ ಪ್ರಾಥಮಿಕ ಮಾಧ್ಯಮವಾಗಿದ್ದವು. ಆದರೆ ಇಂದು, ಯಾವುದೇ ಸಮಾಚಾರ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುವ ಮೊದಲು, ಅದು ‘ಎಕ್ಸ್’, ‘ಟೆಲಿಗ್ರಾಮ್’, ‘ಫೇಸ್‌ಬುಕ್’ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುತ್ತದೆ ಮತ್ತು ನಂತರ ಸುದ್ದಿಗಳ ಜಾಲ ತಾಣಗಳು ಮತ್ತು ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ತದನಂತರ ಕೆಲವು ನಿಮಿಷಗಳು/ಗಂಟೆಗಳ ಒಳಗೆ ಸುದ್ದಿವಾಹಿನಿಗಳ ಜಾಲತಾಣಗಳು ಮತ್ತು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ. ಅದರಲ್ಲಿ ‘ಸನಾತನ ಪ್ರಭಾತ’ ಅನ್ನು ಪರಿಗಣಿಸಿದರೆ, ‘ಹಿಂದೂ ರಾಷ್ಟ್ರ’ದ ದೈವಿಕ ಪರಿಕಲ್ಪನೆಯನ್ನು ಸಾಕಾರಗೊಳಿಸಲು ‘ಸನಾತನ ಪ್ರಭಾತ’ ಪ್ರಾರಂಭಿಸಿದ ಪ್ರಬೋಧನೆಯ ಕಾರ್ಯದ ಪ್ರಸಾರವನ್ನು ಸಹ ಅದೇ ನಿರ್ಧಾರದಿಂದ ‘ಆನ್‌ಲೈನ್’ನಲ್ಲಿ ಮಾಡುವುದು ಅತ್ಯಗತ್ಯವಾಗಿದೆ.
೧. ‘ಸನಾತನ ಪ್ರಭಾತ’ದ ಜಾಲತಾಣ www.SanatanPrabhat.org !
೧ ಅ. ಆರಂಭ : ಮೇಲೆ ನಮೂದಿಸಿರುವಂತೆ, ‘ಸನಾತನ ಪ್ರಭಾತ’ ಸ್ಥಾಪನೆಯಾದಾಗಿನಿಂದ ಮೊದಲ ಕೆಲವು ವರ್ಷಗಳ ವರೆಗೆ, ಅದರ ಸುದ್ದಿಗಳನ್ನು ಆನ್ ಲೈನ್ ನಲ್ಲಿ ಪ್ರಸಾರ ಮಾಡಲು ‘ಬ್ಲಾಗ್’ ಅನ್ನು ಬಳಸಲಾಗುತ್ತಿತ್ತು. ‘ಸನಾತನ ಪ್ರಭಾತ’ದ ಜಾಲತಾಣ www.sanatanPrabhat.org ಇದು ಡಿಸೆಂಬರ್ ೨೦೧೬ ರಲ್ಲಿ ಶುಭಾರಂಭವಾಯಿತು. ‘ಸನಾತನ ಪ್ರಭಾತ’ ನಿಯತಕಾಲಿಕೆಗಳು ಮರಾಠಿ, ಹಿಂದಿ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಲಭ್ಯವಿದೆ, ಅದಕ್ಕನುಗುಣವಾಗಿ ಈ ನಾಲ್ಕು ಭಾಷೆಗಳಲ್ಲಿ ಜಾಲತಾಣವನ್ನು ಮೊದಲ ದಿನದಿಂದಲೇ ಪ್ರಾರಂಭಿಸಲಾಯಿತು. ಈ ಜಾಲತಾಣವು ಸುಮಾರು ಎಂಟುವರೆ ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ, ‘ಸನಾತನ ಪ್ರಭಾತ’ ಜಾಲತಾಣದ ಕಾರ್ಯವು ಅತಿ ವೇಗವಾಗಿ ವೃದ್ಧಿಸಿತು.
೧ ಆ. ಜಾಲತಾಣದ ವೈಶಿಷ್ಟ್ಯಗಳು : ‘ಸನಾತನ ಪ್ರಭಾತ’ ಜಾಲ ತಾಣದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳ ಜೊತೆಗೆ ಸ್ಥಳೀಯ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ, ‘ಸನಾತನ ಪ್ರಭಾತ’ದ ಸಂಪಾದಕೀಯ, ಪ್ರಸಿದ್ಧ ಬರಹಗಾರರ ಲೇಖನಗಳು ಇತ್ಯಾದಿಗಳನ್ನು ಸಹ ಪ್ರಕಟಿಸಲಾಗುತ್ತದೆ. ನಿಯತಕಾಲಿಕೆಯಲ್ಲಿ ಸ್ಥಳಾವಕಾಶದ ಮಿತಿ ಇದ್ದರೂ, ಜಾಲತಾಣದಲ್ಲಿ ಅಂತಹ ಯಾವುದೇ ಮಿತಿ ಇಲ್ಲ. ಹಾಗಾಗಿ ಸುದ್ದಿ, ಲೇಖನಗಳನ್ನು ಸಂಬಂಧಿತ ಫೋಟೊ, ಟ್ವೀಟ್ ಮತ್ತು ವೀಡಿಯೊಗಳೊಂದಿಗೆ ಪ್ರಕಟಿಸುವುದರಿಂದ ಓದುಗರಿಗೆ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
ಈ ಏಕಮೇವಾದ್ವಿತೀಯ ಜಾಲತಾಣದ ವಿಶೇಷತೆಯೆಂದರೆ ಇದರಲ್ಲಿ ಸೇವೆ ಸಲ್ಲಿಸುವವರೆಲ್ಲರೂ ಸಾಧಕರೇ ಆಗಿದ್ದು, ವಿವಿಧ ನಗರಗಳು, ರಾಜ್ಯಗಳು ಮತ್ತು ದೇಶಗಳಲ್ಲಿ ಹರಡಿದ್ದಾರೆ; ಆದರೆ ಅವರು ಈ ಸೇವೆಯನ್ನು ಪ್ರತಿದಿನ ತಳಮಳದಿಂದ ಮಾಡುತ್ತಾರೆ.
೨. ‘ಯು ಟ್ಯೂಬ್’ ಮೂಲಕ ವ್ಯಾಪಕ ಮಟ್ಟದಲ್ಲಿ ಪ್ರಸಾರ
ಸದ್ಯಕ್ಕೆ ವಿಡಿಯೋ (ಧ್ವನಿ ರೆಕಾಡಿರ್ಂಗ್) ಇದು ವಿಚಾರಗಳನ್ನು ಪ್ರಸಾರ ಮಾಡುವ ಒಂದು ಪ್ರಭಾವಿ ಮತ್ತು ಜನರ ಗಮನವನ್ನು ಸೆಳೆಯುವ ಜನಪ್ರಿಯ ಮಾಧ್ಯಮವಾಗಿದೆ. ‘ಸನಾತನ ಪ್ರಭಾತ’ ಕಳೆದ ಕೆಲವು ವರ್ಷಗಳಿಂದ ವೀಡಿಯೊಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಹಿಂದೂಗಳ ಮೇಲಿನ ಅನ್ಯಾಯ ಮತ್ತು ದೌರ್ಜನ್ಯಗಳ ಬಗ್ಗೆ ಸುದ್ದಿಗಳನ್ನು ವೀಡಿಯೊಗಳ ಮೂಲಕ ‘ಸನಾತನ ಪ್ರಭಾತ’ ಜನರೆದುರಿಗೆ ಮಂಡಿಸಲು ಪ್ರಯತ್ನಿಸುತ್ತದೆ. ಇದರೊಂದಿಗೆ, ವಿವಿಧ ಸ್ಥಳಗಳಲ್ಲಿ ಹಿಂದೂ ಸಂಘಟನೆಗಳ ಪ್ರಯತ್ನಗಳು, ವಿವಿಧ ಪ್ರದೇಶಗಳಲ್ಲಿ ಹಿಂದೂ ಸಂಸ್ಕೃತಿಯ ಹೆಜ್ಜೆಗುರುತುಗಳು, ಹಿಂದುತ್ವ ರಕ್ಷಣೆಯ ಪ್ರಯತ್ನಗಳು, ವಿಶೇಷ ದಿನಗಳು, ಹಿಂದೂಗಳ ಸೈದ್ಧಾಂತಿಕ ಪ್ರಬೋಧನೆ ಇತ್ಯಾದಿಗಳ ವೀಡಿಯೊಗಳನ್ನು ‘ಸನಾತನ ಪ್ರಭಾತ’ದ ಅಧಿಕೃತ ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗಿದೆ.
೩. ಡೈಲಿ ಹಂಟ್
‘ಡೈಲಿ ಹಂಟ್’ ಇದು ಸದ್ಯ ಅತ್ಯಂತ ಜನಪ್ರಿಯ ಸುದ್ದಿ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದ್ದು, ‘ಯೂನಿಕಾರ್ನ್’ ಸಂಸ್ಥೆ (ಒಂದು ಹೊಸ ಸಂಸ್ಥೆಯ ಮೌಲ್ಯ ಕೆಲವೇ ವರ್ಷಗಳಲ್ಲಿ ೧ ಬಿಲಿಯನ ಡಾಲರ ಅಂದರೆ ೮೦೦ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗುವುದು) ಆಗಿರುವ ಈ ಅಪ್ಲಿಕೇಶನ್ ಅನ್ನು ೨೦ ಕೋಟಿಗಿಂತಲೂ ಹೆಚ್ಚು ಜನರು ಬಳಸುತ್ತಿದ್ದಾರೆ. ಈ ಅಪ್ಲಿಕೇಶನ್‌ನಲ್ಲಿ ೩ ಸಾವಿರಕ್ಕಿಂತ ಹೆಚ್ಚಿನ ಪ್ರಮುಖ ಪತ್ರಿಕೆಗಳು, ಸುದ್ದಿ ವಾಹಿನಿಗಳು, ಸುದ್ದಿ ಪೋರ್ಟಲ್‌ಗಳು (ಸುದ್ದಿ ಜಾಲತಾಣಗಳು) ಇತ್ಯಾದಿಗಳ ಖಾತೆಗಳಿದ್ದು ಓದುಗರಿಗೆ ಒಂದೇ ಸ್ಥಳದಲ್ಲಿ ಎಲ್ಲಾ ರೀತಿಯ ಸುದ್ದಿಗಳನ್ನು ಓದಲು ಸಿಗುತ್ತದೆ. ಈ ಅಪ್ಲಿಕೇಶನ್ ‘ಸನಾತನ ಪ್ರಭಾತ’ದ ಕನ್ನಡ, ಮರಾಠಿ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ೪ ಖಾತೆಗಳನ್ನು ಹೊಂದಿದ್ದು, ಇದರಿಂದ ಪ್ರತಿದಿನ ಸಾವಿರಾರು ಜನರವರೆಗೆ ‘ಸನಾತನ ಪ್ರಭಾತ’ದ ವಿಚಾರಗಳು ತಲುಪುತ್ತಿದೆ.
೪. ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರ
ಅ. ‘ಎಕ್ಸ್’ (ಟ್ವಿಟರ್) : ಇಂದು, ಯಾವುದೇ ವಿಚಾರವನ್ನು ಹರಡಲು ‘ಎಕ್ಸ್’ ಅತ್ಯುತ್ತಮ ಮಾಧ್ಯಮವೆಂದು ಪರಿಗಣಿಸಲಾಗಿದೆ. ‘ಸನಾತನ ಪ್ರಭಾತ’ ಹಿಂದೂ ರಾಷ್ಟ್ರ ವಿಚಾರವನ್ನು ಪರಿಣಾಮಕಾರಿಯಾಗಿ ಮಂಡಿಸಲು ಇದನ್ನು ಪ್ರತಿದಿನ ಬಳಸುತ್ತದೆ. ಹಿಂದೂಗಳ ಮೇಲಿನ ಆಘಾತಕಾರಿ ಸುದ್ದಿಗಳು ಮತ್ತು ಲೇಖನಗಳನ್ನು ಈ ಮಾಧ್ಯಮದ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ, ಅನೇಕ ಸಂಘಟನೆಗಳು, ತಜ್ಞರ ಗುಂಪು, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ‘ಎಕ್ಸ್’ ಮೂಲಕ ‘ಸನಾತನ ಪ್ರಭಾತ’ದೊಂದಿಗೆ ಸಂಪರ್ಕದಲ್ಲಿದ್ದಾರೆ. ‘ಎಕ್ಸ್’ ನಲ್ಲಿ ‘ಸನಾತನ ಪ್ರಭಾತ’ ಮತ್ತು ‘ಸನಾತನ ಪ್ರಭಾತ ಕನ್ನಡ’ ಹೀಗೆ ಎರಡು ಖಾತೆಗಳಿವೆ.
ಆ. ಟೆಲಿಗ್ರಾಮ : ವಿದೇಶಗಳಲ್ಲಿ ಈ ಮಾಧ್ಯಮವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಇದನ್ನು ಸರಕಾರದ ನೀತಿಗಳನ್ನು ವಿವರಿಸಲು ಪ್ರಮುಖವಾಗಿ ಬಳಸಲಾಗುತ್ತದೆ. ‘ಸನಾತನ ಪ್ರಭಾತ’ ಕೂಡ ಟೆಲಿಗ್ರಾಮನಲ್ಲಿ ೪ ಭಾಷೆಗಳಲ್ಲಿ ೪ ಖಾತೆಗಳನ್ನು ಹೊಂದಿದ್ದು, ಅದರ ಮೂಲಕ ಪ್ರತಿದಿನ ಸುದ್ದಿಗಳನ್ನು ಆಯಾ ಭಾಷೆಯಲ್ಲಿ ಸುದ್ದಿ ಬುಲೆಟಿನ್ ಗಳನ್ನು ಪ್ರಸಾರ ಮಾಡಲಾಗುತ್ತದೆ.
ಇ. ವಾಟ್ಸ ಆಪ್ : ‘ವಾಟ್ಸ ಆಪ್ ಇಂದು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ’ ಎಂದು ಹೇಳಿದರೆ ಅದು ಅತಿಶಯೋಕ್ತಿಯಾಗುವುದಿಲ್ಲ. ಈ ಮಾಧ್ಯಮದ ಮೂಲಕ, ಪ್ರತಿದಿನ ಸನಾತನ ಪ್ರಭಾತದ ಬರಹಗಳನ್ನು ಲಕ್ಷಾಂತರ ಜನರಿಗೆ ತಲುಪಿಸಲಾಗುತ್ತದೆ.
ಈ. ಫೇಸಬುಕ್ ಮತ್ತು ಇನಸ್ಟಾಗ್ರಾಮ್ : ‘ಸನಾತನ ಪ್ರಭಾತ’ ವಿರುದ್ಧ ನಿರಾಧಾರವಾಗಿ ಆರೋಪಿಸುತ್ತಿರುವ ಕೆಲವು ಹಿಂದೂದ್ವೇಷಿ ಗುಂಪುಗಳಿಂದ ಮೂಲತಃ, ಕಮ್ಯುನಿಸ್ಟರ ಕೈಗೊಂಬೆಗಳಾದ ಫೇಸ್ಬುಕ್ ಮತ್ತು ಇನಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮಗಳು ‘ಸನಾತನ ಪ್ರಭಾತ’ದ ಧರ್ಮಪ್ರಸಾರಕ್ಕೆ ನಿಬರ್ಂಧ ಹೇರಿವೆ. ಈ ಎಡಪಂಥೀಯ ಪಾಶ್ಚಿಮಾತ್ಯರ ಷಡ್ಯಂತ್ರಕ್ಕೆ ಬಲಿಯಾದವರಲ್ಲಿ ‘ಸನಾತನ ಪ್ರಭಾತ’ವೂ ಸೇರಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ‘ಸನಾತನ ಪ್ರಭಾತ’ದ ಹಿಂದುತ್ವ ಮತ್ತು ದೇಶಭಕ್ತಿಯ ಕೆಲಸಕ್ಕೆ ಒಂದು ವಿಶಿಷ್ಟ್ಯವಾದ ಪಾವತಿಯಾಗಿದೆ ಎಂದು ಹೇಳಬಹುದಾಗಿದೆ.
ಉ. ಮರಾಠಿ, ಹಿಂದಿ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮೂಲಕ ಪ್ರಸಾರ : ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ವಿಚಾರವನ್ನು ಮಾಡಿದರೆ, ದಿನಪತ್ರಿಕೆಯು ಕೇವಲ ಮರಾಠಿ ಭಾಷೆಯಲ್ಲಿ ಮಾತ್ರ ಇದೆ. ಕನ್ನಡ ಭಾಷೆಯಲ್ಲಿ ಸಾಪ್ತಾಹಿಕವಿದೆ. ಹಿಂದಿ ಮತ್ತು ಆಂಗದಲ್ಲಿ ಪಾಕ್ಷಿಕವಿದೆ. ಆದಾಗ್ಯೂ, ಪ್ರತಿದಿನ ನಡೆಯುವ ಮಹತ್ವಪೂರ್ಣ ಆಗುಹೋಗುಗಳನ್ನು ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಜಾಲತಾಣದ ಮೂಲಕ ಪ್ರತಿದಿನ ಪ್ರಸಾರ ಮಾಡಲಾಗುತ್ತದೆ. ಇದರಿಂದಾಗಿ, ದಿನನಿತ್ಯದ ‘ಸನಾತನ ಪ್ರಭಾತ’ದಲ್ಲಿ ರಾಷ್ಟ್ರ ಮತ್ತು ಧರ್ಮದ ಕುರಿತಾದ ವಿಶಿಷ್ಟ ದೃಷ್ಟಿಕೋನಗಳು ವಿವಿಧ ಭಾಷೆಗಳಲ್ಲಿ ಪ್ರತಿದಿನ ದೇಶಾದ್ಯಂತ ಜನರನ್ನು ತಲುಪುತ್ತಿದೆ. ಈ ಏಕಮೇವಾದ್ವಿತೀಯ ಜಾಲತಾಣದ ವಿಶೇಷಯೆಂದರೆ ಇದರಲ್ಲಿ ಸೇವೆ ಸಲ್ಲಿಸುವವರೆಲ್ಲರೂ ಸಾಧಕರಾಗಿದ್ದು, ಅವರು ವಿವಿಧ ನಗರಗಳು, ರಾಜ್ಯಗಳು ಮತ್ತು ದೇಶಗಳಲ್ಲಿ ಹರಡಿದ್ದಾರೆ; ಆದರೆ ಅವರು ಈ ಸೇವೆಯನ್ನು ಪ್ರತಿದಿನ ತಳಮಳದಿಂದ ಮಾಡುತ್ತಾರೆ
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !
ಮಂತ್ರಾಲಯದ ಪ್ರವೇಶದ್ವಾರದಲ್ಲಿದ್ದ ಅಶುದ್ಧ ಭಾಷೆಯ ಫಲಕವನ್ನು ಆಡಳಿತವು ತೆರವುಗೊಳಿಸಿದೆ !
ಮಹಾರಾಷ್ಟ್ರದಲ್ಲಿ ಗಂಭೀರ ಅಪರಾಧಗಳ ಪ್ರಕರಣಗಳ ತೀರ್ಪಿನ ಸ್ಥಿತಿ ಚಿಂತಾಜನಕ!
ಮಹಾರಾಷ್ಟ್ರ : ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶೇ. ೨೫% ರಷ್ಟು ಸೀಟು ಮೀಸಲು; ಅನುದಾನ ನೀಡಲು ಸರಕಾರದ ನಿರಾಸಕ್ತಿ !
ಗೋವಾ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದು ದಿನದ ಪಾದಯಾತ್ರೆಯ ವಾರಿ !