ದೈನಿಕ ‘ಸನಾತನ ಪ್ರಭಾತ’ದ ವರದಿಯ ಪರಿಣಾಮ !
![]() |
![]() |
| ಅಶುದ್ಧ ಮರಾಠಿ ಭಾಷೆಯ ಸೂಚನಾಫಲಕ | ಫಲಕವನ್ನು ತೆರವುಗೊಳಿಸಿತು ಮಂತ್ರಾಲಯದ ಅದೇ ಸ್ಥಳ |
ಮುಂಬಯಿ, ೨೭ ಮೇ (ವಾರ್ತೆ.) – ಮಂತ್ರಾಲಯಕ್ಕೆ ಬರುವ ಸಂದರ್ಶಕರಿಗಾಗಿ ಮಂತ್ರಾಲಯದ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದ್ದ ಸೂಚನಾಫಲಕದ ಮೇಲಿನ ಬರಹವು ಅಶುದ್ಧ ಮತ್ತು ಅರ್ಥವಾಗದಂತಿತ್ತು. ಈ ಕುರಿತು ದೈನಿಕ ‘ಸನಾತನ ಪ್ರಭಾತ’ದಲ್ಲಿ ೨೬ ಮೇ ೨೦೨೬ ರಂದು ‘ಮಂತ್ರಾಲಯದ ಪ್ರವೇಶದ್ವಾರದಲ್ಲಿಯೇ ಮರಾಠಿಯ ಅವಹೇಳನ !’, ‘ಸಂದರ್ಶಕರಿಗಾಗಿರುವ ಸೂಚನಾಫಲಕದಲ್ಲಿ ಮರಾಠಿಯ ಒಂದು ವಾಕ್ಯವೂ ಸರಿಯಿಲ್ಲ !’, ಎಂಬ ತಲೆಬರಹದ ವರದಿಯನ್ನು ಪ್ರಕಟಿಸಲಾಗಿತ್ತು. ಇದರ ನಂತರ ೨೭ ಮೇ ಯಂದು ಆಡಳಿತವು ಈ ಫಲಕವನ್ನು ತೆರವುಗೊಳಿಸಿದೆ. ಈ ವರದಿಯನ್ನು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಮರಾಠಿ ಭಾಷಾ ಸಚಿವ ಉದಯ ಸಾಮಂತ ಮತ್ತು ಮರಾಠಿ ಭಾಷಾ ವಿಭಾಗಕ್ಕೆ ಅವರ ‘ಎಕ್ಸ್’ ಖಾತೆಗಳಿಗೆ ಟ್ಯಾಗ್ ಮಾಡುವ ಮೂಲಕ ಗಮನಕ್ಕೆ ತರಲಾಗಿತ್ತು. ದೈನಿಕ ‘ಸನಾತನ ಪ್ರಭಾತ’ದಲ್ಲಿ ವರದಿ ಬಂದ ನಂತರ ಇತರ ವೃತ್ತಪತ್ರಿಕೆಗಳೂ ಈ ಸುದ್ದಿಯನ್ನು ಪ್ರಕಟಿಸಿದವು.
ಏನಂತ ಬರೆಯಲಾಗಿತ್ತು ಸೂಚನಾಫಲಕದಲ್ಲಿ ?
ಮಂತ್ರಾಲಯದ ‘ಗಾರ್ಡನ್ ಗೇಟ್’ ಪ್ರವೇಶದ್ವಾರದಲ್ಲಿ ‘ಮಂತ್ರಾಲಯ ಪ್ರವೇಶಕ್ಕಾಗಿ ೦೨.೦೦ ಗಂಟೆಯ ಸರತಿ ಸಾಲು ಇಲ್ಲಿಂದ ಶುರು’ ಎಂಬ ಸೂಚನೆ ಇರುವ ಫಲಕವನ್ನು ಅಳವಡಿಸಲಾಗಿತ್ತು. ಈ ಸೂಚನಾಫಲಕದಲ್ಲಿದ್ದ ಒಂದು ಪದವನ್ನೂ ಸಹ ಮರಾಠಿ ಭಾಷೆಯಲ್ಲಿ ಸರಿಯಾಗಿ ಬರೆಯಲಾಗಿರಲಿಲ್ಲ.


ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ