ಮುಸಲ್ಮಾನರ ಒತ್ತಡಕ್ಕೆ ಮಣಿದು ಶಾಸಕ ಟಿ. ರಾಜಾಸಿಂಗ್ ಅವರ ಧರ್ಮಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರು !

  • ಭೋಪಾಲ (ಮಧ್ಯಪ್ರದೇಶ) ಇಲ್ಲಿನ ಘಟನೆ

  • ಜನಸಂದಣಿ ಮತ್ತು ಕಾಲ್ತುಳಿತದ ನೆಪವೊಡ್ಡಿ ಆದೇಶ ನೀಡಿದ ಪೊಲೀಸ್ ಆಡಳಿತ

  • ‘ಧರ್ಮರಕ್ಷಕ’ ಎಂಬ ಪ್ರಖರ ಹಿಂದುತ್ವನಿಷ್ಠ ಸಂಘಟನೆಯಿಂದ ಧರ್ಮಸಭೆಯ ಆಯೋಜನೆ

ಭೋಪಾಲ (ಮಧ್ಯಪ್ರದೇಶ) – ಇಲ್ಲಿ ಮೇ 31 ರಂದು ನಡೆಯಬೇಕಾಗಿದ್ದ ಧರ್ಮಸಭೆಯನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಭಾಗ್ಯನಗರದ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್ ಅವರ ಉಪನ್ಯಾಸವನ್ನು ಕೇಳುವ ಅವಕಾಶದಿಂದ ಸಾವಿರಾರು ಭೋಪಾಲ್ ನಿವಾಸಿಗಳು ವಂಚಿತರಾಗಲಿದ್ದಾರೆ. ಮಧ್ಯಪ್ರದೇಶದ ಹಿಂದುತ್ವನಿಷ್ಠ ಸಂಘಟನೆ ‘ಧರ್ಮರಕ್ಷಕ’ ಈ ಸಭೆಯನ್ನು ಆಯೋಜಿಸಿತ್ತು; ಆದರೆ ಭೋಪಾಲ್ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಸಭೆಗೆ ಅನುಮತಿ ನಿರಾಕರಿಸಿದ್ದಾರೆ. ಮುಸಲ್ಮಾನರ ಒತ್ತಡಕ್ಕೆ ಮಣಿದು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿ ‘ಸನಾತನ ಪ್ರಭಾತ’ಕ್ಕೆ ಲಭಿಸಿದೆ. ಪೊಲೀಸರ ಈ ಆದೇಶದ ವಿರುದ್ಧ ಆಯೋಜಕರು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರು; ಆದರೆ ನ್ಯಾಯಾಲಯವು ಜೂನ್ 1 ಕ್ಕೆ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದ್ದರಿಂದ ಸಭೆಯನ್ನು ರದ್ದುಗೊಳಿಸಬೇಕಾಗಿ ಬಂತು ಎಂದು ‘ಧರ್ಮರಕ್ಷಕ’ದ ಭೋಪಾಲ್ ಜಿಲ್ಲಾಧ್ಯಕ್ಷ ಶ್ರೀ. ವಿವೇಕ ಮೇಷಕರ್ ಅವರು ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದ್ದಾರೆ. ಈ ಕುರಿತು ಭೋಪಾಲ್ ಪೊಲೀಸ್ ಆಯುಕ್ತರು ಸಂಜಯ ಕುಮಾರ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ.

ಒಂದು ತಿಂಗಳ ಒಳಗಾಗಿ ನಾನು ಭೋಪಾಲ್ ನಲ್ಲಿ ಇದಕ್ಕಿಂತಲೂ ದೊಡ್ಡ ಸಭೆಯನ್ನು ನಡೆಸಿ ತೋರಿಸುವೆ! – ಶಾಸಕ ಟಿ. ರಾಜಾ ಸಿಂಗ್

ಸಭೆ ರದ್ದಾದ ಪ್ರಕಣಕ್ಕೆ ಸಂಬಂಧಿಸಿದಂತೆ ಶಾಸಕ ಟಿ. ರಾಜಾ ಸಿಂಗ್ ಅವರೊಂದಿಗೆ ‘ಸನಾತನ ಪ್ರಭಾತ’ದ ಪ್ರತಿನಿಧಿ ಮಾತನಾಡಿದರು. ಈ ವೇಳೆ ಅವರು, ಜಿಹಾದಿಗಳು ಕಳೆದ 10 ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ನನ್ನನ್ನು ವಿರೋಧಿಸುತ್ತಿದ್ದಾರೆ. ಅವರಿಗೆ ನಾನು ಭೋಪಾಲ್ ಗೆ ಬರುವುದು ಇಷ್ಟವಿಲ್ಲ. ಅವರು ಪೊಲೀಸರಿಗೂ ಮನವಿ ಸಲ್ಲಿಸಿದ್ದರು. ದುರದೃಷ್ಟವಶಾತ್, ಮಧ್ಯಪ್ರದೇಶ ಪೊಲೀಸರು ಜಿಹಾದಿಗಳ ಒತ್ತಡಕ್ಕೆ ಮಣಿದು ಸಭೆಗೆ ಅನುಮತಿ ನಿರಾಕರಿಸಿದ್ದಾರೆ. ಇದು ಅತ್ಯಂತ ಲಜ್ಜಾಸ್ಪದ ಸಂಗತಿಯಾಗಿದೆ. ಭೋಪಾಲ್ ನಗರವು ‘ಲವ್ ಜಿಹಾದ್’ನ ಕೇಂದ್ರವಾಗುತ್ತಾ ಸಾಗಿದೆ. ಪ್ರತಿ ವಾರ ಅಲ್ಲಿ ಹಿಂದೂ ಹೆಣ್ಣುಮಕ್ಕಳ ಮೇಲೆ ಬಲಾತ್ಕಾರಗಳು ನಡೆಯುತ್ತಿವೆ. ನಿಜ ಹೇಳಬೇಕೆಂದರೆ ಪೊಲೀಸರು ‘ಲವ್ ಜಿಹಾದಿ’ಗಳನ್ನು ಬಂಧಿಸಬೇಕು. ಮಧ್ಯಪ್ರದೇಶ ಸರಕಾರವು ‘ಲವ್ ಜಿಹಾದ್’ ವಿರುದ್ಧ ಇನ್ನಷ್ಟು ಕಠಿಣ ಕಾನೂನನ್ನು ಜಾರಿಗೆ ತರಬೇಕು. ಇದನ್ನು ಮಾಡುವುದನ್ನು ಬಿಟ್ಟು ಅವರು ಹಿಂದೂಗಳ ಸಭೆಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಭಗವಾ ಸರಕಾರವಿರುವಾಗ ಹಿಂದೂಗಳ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಜಿಹಾದಿಗಳಿಗೆ ಹೆದರಿ ಇಂತಹ ನಿರ್ಧಾರಗಳನ್ನು ತೆಗೆದುಕೊಂಡರೆ, ಹಿಂದೂಗಳ ಮನೋಬಲ ಕುಸಿಯುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಮೋಹನ ಯಾದವ್ ಅವರು ಆಲೋಚಿಸುವುದು ಅತ್ಯಗತ್ಯ ಎಂದು ನಾನು ಭಾವಿಸುತ್ತೇನೆ. ನಾನು ಮುಂದಿನ ಒಂದು ತಿಂಗಳೊಳಗೆ ಭೋಪಾಲ್ ನಲ್ಲಿ ಇದಕ್ಕಿಂತಲೂ ದೊಡ್ಡ ಸಭೆಯನ್ನು ನಡೆಸಿ ತೋರಿಸುತ್ತೇನೆ ಎಂದು ಹೇಳಿದರು.

ಶಾಸಕ ಟಿ. ರಾಜಾ ಸಿಂಗ್ ಅವರಿಗೆ ಮುಸಲ್ಮಾನರಿಂದ ಕೊಲೆ ಬೆದರಿಕೆ!

ಭೋಪಾಲ್ ನ ಮುಸಲ್ಮಾನರು ಶಾಸಕ ಟಿ. ರಾಜಾ ಸಿಂಗ್ ಅವರ ವಿರುದ್ಧ ಅತ್ಯಂತ ಕೀಳುಮಟ್ಟದ ಭಾಷೆಯಲ್ಲಿ ಟೀಕೆ ಮಾಡಿದ್ದಾರೆ. ಅಲ್ಲದೆ ಅವರನ್ನು ಕೊಲ್ಲುವುದಾಗಿಯೂ ಬೆದರಿಕೆಯನ್ನು ಹಾಕಿದ್ದಾರೆ. ಮಹಮ್ಮದ್ ಆಮಿರ್ ಖಾನ್ ಮತ್ತು ಅರಾಜ್ ಎಂಬ ಹೆಸರಿನ ವ್ಯಕ್ತಿಗಳು ಇನ್ ಸ್ಟಾಗ್ರಾಮ್ ನಲ್ಲಿ, ಒಂದು ವೇಳೆ ರಾಜಾ ಸಿಂಗ್ ಅವರು ಮುಸಲ್ಮಾನರ ವಿರುದ್ಧ ಹೇಳಿಕೆ ನೀಡಿದರೆ, ಅವರನ್ನು ಭೋಪಾಲ್ ನಿಂದ ಜೀವಂತವಾಗಿ ಮರಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ‘ಧರ್ಮರಕ್ಷಕ ಗ್ರಾಮೀಣ’ ಸಂಘಟನೆಯ ಸಂಯೋಜಕರಾದ ಶ್ರೀ. ಶಿಶುಪಾಲ ಠಾಕೂರ ಅವರು, ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಇಂತಹ ಜಿಹಾದಿಗಳನ್ನು ಗುರುತಿಸಿ ಅವರ ವಿರುದ್ಧ ಕಠೋರ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಹೇಳಿದರು.

ಘಟನಾವಳಿ ಹೀಗಿದೆ !

1. ‘ಧರ್ಮರಕ್ಷಕ’ ಎಂಬ ಪ್ರಖರ ಹಿಂದುತ್ವನಿಷ್ಠ ಸಂಘಟನೆಯು ಭೋಪಾಲನ ಗಾಂಧಿನಗರ ಭಾಗದ ಬಸ್ ನಿಲ್ದಾಣದ ಆವರಣದಲ್ಲಿ ಬಹಿರಂಗ ಧರ್ಮಸಭೆಯನ್ನು ಆಯೋಜಿಸಿತ್ತು. ಸಭೆಯನ್ನುದ್ದೇಶಿಸಿ ಶಾಸಕ ಟಿ. ರಾಜಾಸಿಂಗ್ ಭಾಷಣ ಮಾಡಬೇಕಿತ್ತು. ಸಭೆಯಲ್ಲಿ ಕನಿಷ್ಠ 5 ಸಾವಿರ ಹಿಂದೂಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಆಯೋಜಕರು ಅಂದಾಜಿಸಿದ್ದರು.

2. ಆದಾಗ್ಯೂ, ಭೋಪಾಲ್ ಪೊಲೀಸರು ಈ ವಿಷಯದಲ್ಲಿ ಅನುಮತಿ ನೀಡಲಿಲ್ಲ. ನಗರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲೇಖಿಸಿದ ಪೊಲೀಸರು, ‘ಟಿ. ರಾಜಾಸಿಂಗ್ ಅವರ ಸಭೆಗೆ ಅನುಮತಿ ನೀಡಲು ಸಾಧ್ಯವಿಲ್ಲ. ನೀವು ಬೇರೆ ವಕ್ತಾರರನ್ನು ಆಹ್ವಾನಿಸಿ’ ಎಂದು ಆಯೋಜಕರಿಗೆ ತಿಳಿಸಿದರು. ಆಯೋಜಕರು ಈ ಬಗ್ಗೆ ಲಿಖಿತ ಆದೇಶ ನೀಡುವಂತೆ ವಿನಂತಿಸಿದಾಗ, ಮೇ 26 ರ ರಾತ್ರಿ, ಅಂದರೆ ಸಭೆಗೆ 5 ದಿನಗಳ ಮೊದಲು, ಜನಸಂದಣಿಯ ಕ್ಷುಲ್ಲಕ ಲಿಖಿತ ನೆಪವೊಡ್ಡಿ ಸಭೆಗೆ ಅನುಮತಿಯನ್ನೇ ನಿರಾಕರಿಸಿದರು.

3. ಸಭೆಯ ಸ್ಥಳವು ಜನನಿಬಿಡ ಪ್ರದೇಶವಾಗಿದ್ದರಿಂದ ಇಲ್ಲಿ ಸಭೆ ನಡೆಸಿದರೆ ಜನಸಂದಣಿ ಮತ್ತು ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ಕಾರಣವನ್ನು ನೀಡಲಾಗಿತ್ತು.

4. ಸಭೆಗೆ ಕೇವಲ 4 ದಿನಗಳು ಬಾಕಿ ಉಳಿದಿದ್ದರಿಂದ, ಮೇ 27 ರಂದು ಈ ಆದೇಶದ ವಿರುದ್ಧ ಆಯೋಜಕರು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದ ಜಬಲ್ಪುರ ಪೀಠವು ಈ ವಿಷಯದಲ್ಲಿ ‘ಮಧ್ಯಪ್ರದೇಶ ಸರಕಾರದ ನಿಲುವನ್ನು ತಿಳಿಯದೆ ಅನುಮತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿ, ಮೇ 29 ರಂದು ನಡೆದ ವಿಚಾರಣೆಯ ವೇಳೆ ಮುಂದಿನ ವಿಚಾರಣೆಯ ದಿನಾಂಕವನ್ನು ಜೂನ್ 1 ಕ್ಕೆ ನಿಗದಿಪಡಿಸಿತು. ಈ ಸಮಯದಲ್ಲಿ ಮುಖ್ಯ ನ್ಯಾಯಾಧೀಶರ ಬಳಿಯೂ ವಿನಂತಿಸಿಕೊಳ್ಳಲಾಗಿತ್ತು. ಮೇ 31 ಸಭೆಯ ದಿನಾಂಕವಾಗಿದ್ದರಿಂದ ಸಭೆಯನ್ನು ರದ್ದುಗೊಳಿಸಬೇಕಾಯಿತು ಎಂದು ‘ಧರ್ಮರಕ್ಷಕ’ ಸಂಘಟನೆಯು ‘ಸನಾತನ ಪ್ರಭಾತ’ಕ್ಕೆ ತಿಳಿಸಿದೆ.

ಸಭೆ ರದ್ದಾಗಲು ಕಾರಣ

15-20 ದಿನಗಳ ಹಿಂದೆ ಭೋಪಾಲ್ ನಲ್ಲಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ-ಮುಸ್ಲಿಂ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಇದರ ಬೆನ್ನಲ್ಲೇ ‘ಜಮೀಯತ್-ಉಲೇಮಾ-ಎ-ಹಿಂದ್’ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಅರ್ಶದ್ ಮದನಿ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ‘ಭೋಪಾಲ್ ನಲ್ಲಿ ನಡೆಯಲಿರುವ ಟಿ. ರಾಜಾಸಿಂಗ್ ಅವರ ಸಭೆಯನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಸಂಘಟನೆಯ ಮಧ್ಯಪ್ರದೇಶ ಅಧ್ಯಕ್ಷ ಹಾಜಿ ಮಹಮ್ಮದ್ ಹಾರೂನ್ ಅವರೂ ಭೋಪಾಲ್ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ, ‘ಭೋಪಾಲ್ ನ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಬಾರದು ಎಂಬ ಕಾರಣ ನೀಡಿ ಸಭೆಗೆ ಅನುಮತಿ ನೀಡಬಾರದು’ ಎಂದು ಮನವಿ ಸಲ್ಲಿಸಿದ್ದರು.

ವಿಶೇಷವೆಂದರೆ, ‘ಜನಸಂದಣಿ ಮತ್ತು ಕಾಲ್ತುಳಿತದಂತಹ ಪರಿಸ್ಥಿತಿ’ ಎಂಬ ಕಾರಣ ನೀಡಿ ಯಾವ ಮೈದಾನದಲ್ಲಿ ಅನುಮತಿ ನಿರಾಕರಿಸಲಾಗಿದೆಯೋ, ಅದೇ ಮೈದಾನದಲ್ಲಿ ಈ ಹಿಂದೆ ಹಲವು ರಾಜಕೀಯ ಪಕ್ಷಗಳ ಸಭೆಗಳು ನಡೆದಿವೆ. ಆದಾಗ್ಯೂ, ಹಿಂದೂಗಳ ಈ ಸಭೆಗೆ ಅನುಮತಿ ನಿರಾಕರಿಸಿರುವುದರಿಂದ ಹಿಂದೂಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಧ್ಯಪ್ರದೇಶ ಪೊಲೀಸರಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಾಮರ್ಥ್ಯವಿಲ್ಲ! – ಧರ್ಮರಕ್ಷಕ

ಈ ಕುರಿತು ‘ಧರ್ಮರಕ್ಷಕ’ದ ಜಿಲ್ಲಾಧ್ಯಕ್ಷ ಶ್ರೀ. ವಿವೇಕ ಮೇಷಕರ್ ಅವರು ‘ಸನಾತನ ಪ್ರಭಾತ’ದ ಪ್ರತಿನಿಧಿಯೊಂದಿಗೆ ತಮ್ಮ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುತ್ತಾ, ಟಿ. ರಾಜಾಸಿಂಗ್ ಅವರು ತೆಲಂಗಾಣದಲ್ಲಿ ವಾಸಿಸುತ್ತಿದ್ದಾರೆ. ಅವರ ಭಾಷಣದಿಂದ ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಎಂದಿಗೂ ಹದಗೆಡುವುದಿಲ್ಲ. ಇದರರ್ಥ ತೆಲಂಗಾಣ ಪೊಲೀಸರು ಅಷ್ಟೊಂದು ಸಕ್ಷಮರಾಗಿದ್ದಾರೆ; ಆದರೆ ಮಧ್ಯಪ್ರದೇಶ ಪೊಲೀಸರು ಈ ವಿಷಯಗಳಿಗೆ ಹೆದರುತ್ತಾರೆ. ಇದರರ್ಥ ಮಧ್ಯಪ್ರದೇಶ ಪೊಲೀಸರಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಾಮರ್ಥ್ಯವಿಲ್ಲ ಎಂದೇ ಹೇಳಬೇಕಾಗುತ್ತದೆ ಎಂದರು.

ನ್ಯಾಯಾಲಯ ನಮಗೆ ಧರ್ಮಸಭೆ ನಡೆಸಲು ಯಾವ ದಿನಾಂಕವನ್ನು ನೀಡುತ್ತದೆಯೋ, ಆ ದಿನವೇ ನಾವು ಸಭೆ ನಡೆಸುತ್ತೇವೆ! – ‘ಧರ್ಮರಕ್ಷಕ’ದ ನ್ಯಾಯವಾದಿ ಅತುಲ್ ಜೇಸ್ವಾನಿ

ಈ ಪ್ರಕರಣದಲ್ಲಿ ‘ಧರ್ಮರಕ್ಷಕ’ ಪರವಾಗಿ ನ್ಯಾಯಾಲಯದಲ್ಲಿ ಹೋರಾಡುತ್ತಿರುವ ನ್ಯಾಯವಾದಿ ಅತುಲ್ ಜೇಸ್ವಾನಿ ಅವರೊಂದಿಗೆ ಮಾತನಾಡಿದಾಗ, ಪೊಲೀಸ್ ಕಾಯ್ದೆಯ (ಪೊಲೀಸ್ ಆಕ್ಟ್) ‘ವಿಧಿ 30 ಉಪವಿಧಿ 2’ ರ ಪ್ರಕಾರ ಪೊಲೀಸರು ಯಾವುದೇ ಕಾರ್ಯಕ್ರಮದ ಅನುಮತಿಯನ್ನು ನಿರಾಕರಿಸುವಂತಿಲ್ಲ. ನಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆಯಿದೆ. ಜೂನ್ 1 ರಂದು ನಡೆಯಲಿರುವ ವಿಚಾರಣೆಯ ವೇಳೆ ನ್ಯಾಯಾಲಯವು ನಮಗೆ ಸಭೆ ನಡೆಸಲು ಯಾವ ದಿನಾಂಕವನ್ನು ನೀಡುತ್ತದೆಯೋ, ಆ ದಿನವೇ ನಾವು ಸಭೆಯನ್ನು ನಡೆಸುತ್ತೇವೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕೇಂದ್ರ, ರಾಜ್ಯ ಮತ್ತು ಮಹಾನಗರ ಪಾಲಿಕೆ ಮೂರರಲ್ಲೂ ಭಾಜಪ ಅಧಿಕಾರದಲ್ಲಿರುವಾಗ ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಲ್ಲ !
  • ಹಿಂದೂಗಳೇ, ಆತ್ಮಾವಲೋಕನ ಮಾಡಿಕೊಳ್ಳಿ ! ಮುಸಲ್ಮಾನರ ಬೇಡಿಕೆಗಳ ಮುಂದೆ ಸರಕಾರ, ಆಡಳಿತ, ಪೊಲೀಸರು ಮಣಿಯುತ್ತಾರೆ. ಇದಕ್ಕೆ ಕಾರಣ ಅವರ ಒತ್ತಡ ಮತ್ತು ಗುಂಪುಗಾರಿಕೆಯ ಪ್ರವೃತ್ತಿ ! ಸರಕಾರವು ತಮ್ಮ ಮಾತನ್ನು ಕೇಳಲೇಬೇಕಾದಂತಹ ಒತ್ತಡವನ್ನು ಎಷ್ಟು ಹಿಂದೂ ಸಂಘಟನೆಗಳು ಒಟ್ಟಾಗಿ ಹೇರುತ್ತವೆ?
  • ಧಾರ್ಮಿಕ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯವನ್ನು ನೀಡುವ ಸಂವಿಧಾನದ ವಿಧಿ 19 ಎ, 19 ಬಿ, 25 ಮತ್ತು 26 ಅನ್ನು ಗಾಳಿಗೆ ತೂರಿ ಹಿಂದೂಗಳಿಗೆ ಅನ್ಯಾಯ ಎಸಗಿದ ಮಧ್ಯಪ್ರದೇಶ ಪೊಲೀಸರು !