ರಾಷ್ಟ್ರ-ಧರ್ಮ ರಕ್ಷಣೆಯೊಂದಿಗೆ ಅನುಭೂತಿ ನೀಡುವ ಸನಾತನ ಪ್ರಭಾತದ ಅದ್ವಿತೀಯತೆ

ಸನಾತನ ಪ್ರಭಾತದಿಂದ ಕಲಿಯಲು ಸಿಗುತ್ತಿರುವುದರಿಂದ ಸನಾತನ ಪ್ರಭಾತಕ್ಕೆ ಕೋಟಿ ಕೋಟಿ ವಂದನೆಗಳು !

೧. ಚಿಕ್ಕ ಚೌಕಟ್ಟಿನಿಂದಲೂ ಭಾವಜಾಗೃತಿಗಾಗಿ ಪ್ರೇರಣೆ ಸಿಗುವುದು

ಸಾಪ್ತಾಹಿಕ ಸನಾತನ ಪ್ರಭಾತದಲ್ಲಿನ ಜಾಹೀರಾತುಗಳನ್ನು ನೋಡುವಾಗ ಯಾವುದೇ ಚಿಕ್ಕ ಅಥವಾ ದೊಡ್ಡ ಜಾಹೀರಾತು ಇದ್ದರೂ, ಜಾಗ ಇರುವಲ್ಲಿ ಜಾಹೀರಾತುದಾರರ ಹೆಸರೊಂದಿಗೆ ಅಷ್ಟೇ ಜಾಗದಲ್ಲಿ ಕೆಲವು ಸಂತರ ವಚನಗಳು, ಸಾಧನೆಯ ಬಗ್ಗೆ ಮಾಹಿತಿ, ಹಬ್ಬದ ಮಹತ್ವ, ಧರ್ಮಾಚರಣೆ ಇಂತಹ ಅಧ್ಯಾತ್ಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಇರುತ್ತದೆ. ಅವುಗಳನ್ನು ಓದಿದಾಗ ಒಂದು ರೀತಿಯ ಆನಂದ ಸಿಗುತ್ತದೆ ಮತ್ತು ಕಲಿಯಲು ಸಿಗುತ್ತದೆ. ಇದರಿಂದ ಗಮನಕ್ಕೆ ಬರುವುದೇನೆಂದರೆ, ಆ ಜಾಹೀರಾತಿಯಲ್ಲಿನ ಚೌಕಟ್ಟಿನಲ್ಲಿಯೂ ಆದಷ್ಟು ಸಾಧನೆಯ ಮಾರ್ಗವನ್ನು ತೋರಿಸುತ್ತ ದೇವರ ಬಗ್ಗೆ, ಗುರುಗಳ ಬಗ್ಗೆ ಭಕ್ತಿಯನ್ನು ಹೆಚ್ಚಿಸಲು ಸುವಚನಗಳನ್ನು ಕೊಡುವುದರಿಂದ ವಾಚಕರ ಭಾವಜಾಗೃತಿಯಾಗುತ್ತದೆ.

ಸೌ. ಸುಜಾತಾ ರೇಣಕೆ

೨. ಮನಸ್ಸು ಅಂತರ್ಮುಖವಾಗುವುದು 

ಸಾಪ್ತಾಹಿಕ ಸನಾತನ ಪ್ರಭಾತವನ್ನು ಕೈಯಲ್ಲಿ ಹಿಡಿದ ತಕ್ಷಣ ಅದರಲ್ಲಿನ ಸುಂದರ ಅಕ್ಷರಗಳು, ಸಾತ್ತ್ವಿಕ ವಿಚಾರ, ಸಕಾರಾತ್ಮಕತೆ ಇವುಗಳನ್ನೆಲ್ಲ ನೋಡಿ ಮನಸ್ಸು ಅಂತರ್ಮಖವಾಗುತ್ತದೆ. ಓದುತ್ತಲೇ ಇರಬೇಕು ಎನಿಸುತ್ತದೆ. ಇದುವರೆಗೂ ಎಲ್ಲಿಯೂ ಓದಲು ಸಿಗದಿರುವ ಹೊಸ ವಿಷಯಗಳು, ಸಾಧನೆಯಲ್ಲಿನ ವಿಷಯಗಳು, ರಾಷ್ಟ್ರ-ಧರ್ಮದ ಬಗ್ಗೆ, ಸಾಧನೆ ಮಾಡಲು ಪ್ರಾರಂಭಿಸಿದ ನಂತರ ಸಾಧಕರಿಗೆ ಬಂದ ಅನುಭೂತಿಗಳನ್ನು ಓದಲು ಸಿಗುತ್ತಿರುವುದರಿಂದ ಕೃತಜ್ಞತೆಯ ಹೊರತು ಬೇರೆ ಶಬ್ದವೇ ಇಲ್ಲ, ಎಂದೆನಿಸುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕೃಪೆಯಿಂದ ಇಂತಹ ಅಮೂಲ್ಯ ಸನಾತನ ಪ್ರಭಾತವನ್ನು ಓದಲು, ಕಲಿಯಲು ಸಿಗುತ್ತಿರುವುದರಿಂದ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು.

ಸನಾತನ ಪ್ರಭಾತಕ್ಕೆ ಕೋಟಿ ಕೋಟಿ ವಂದನೆಗಳು !

– ಸೌ. ಸುಜಾತಾ ಅಶೋಕ ರೇಣಕೆ, ಫೊಂಡಾ, ಗೋವಾ. (೧೬.೧.೨೦೨೫)

‘ಸನಾತನ ಪ್ರಭಾತ’ದಲ್ಲಿ ಕಂಡುಬರುವ  ಕೆಲವು ಅದ್ವಿತೀಯ ವೈಶಿಷ್ಟ್ಯಗಳು !

ಕಾಲಕ್ಕನುಸಾರ ಯೋಗ್ಯ (ಸರಿಯಾಗಿ) ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ನೀಡುವ ಏಕೈಕ ಆಧ್ಯಾತ್ಮಿಕ ಪತ್ರಿಕೆ !

ಹಿಂದೂಗಳಿಗೆ ಸಾಮಾಜಿಕ ಮತ್ತು ರಾಷ್ಟ್ರದ ಸಮಸ್ಯೆಗಳಿಗೆ ಸರಿಯಾದ ದೃಷ್ಟಿಕೋನವನ್ನು ನೀಡುವುದು !

ಯಾವುದೇ ಘಟನೆಗೆ ಸಂಬಂಧಿಸಿದಂತೆ ಸಂಪಾದಕೀಯ ಟಿಪ್ಪಣಿಗಳ ಮೂಲಕ ಯೋಗ್ಯ ದಿಕ್ಕು ತೋರಿಸುವುದು !

ಧಾರ್ಮಿಕ ಘಟನೆಗಳ ಸಂದಿಗ್ಧತೆಯಲ್ಲಿ (ಅಡಚಣೆಯ ಪ್ರಸಂಗದಲ್ಲಿ) ಯೋಗ್ಯ ಧರ್ಮಶಾಸ್ತ್ರವನ್ನು ಹೇಳುವುದು !

ಧರ್ಮಶಾಸ್ತ್ರವನ್ನು ವೈಜ್ಞಾನಿಕ ಸಂಶೋಧನೆಯ ಸಾಕ್ಷ್ಯಗಳೊಂದಿಗೆ ಪ್ರಸ್ತುತಪಡಿಸುವುದು !

‘ಹಬ್ಬ-ವ್ರತಗಳು ಧರ್ಮಶಾಸ್ತ್ರದ ಪ್ರಕಾರ ಹೇಗೆ ಆಚರಿಸಬೇಕು ?’ ಎಂಬುದನ್ನು ಹೇಳುವುದು !

ಅನಾವಶ್ಯಕ ರಾಜಕೀಯ ಸುದ್ದಿಗಳನ್ನು ತಪ್ಪಿಸಿ ಕೇವಲ ಸಮಾಜಹಿತ ಸುದ್ದಿ ನೀಡುವುದು!

ಹಿಂದುತ್ವನಿಷ್ಠರ ಕಾರ್ಯವನ್ನು ಪ್ರೋತ್ಸಾಹಿಸುವ ಹಕ್ಕಿನ ವ್ಯಾಸಪೀಠ !