ವಿಶ್ವಕಲ್ಯಾಣಕ್ಕಾಗಿ ನಿರಂತರವಾಗಿ ಹೇಗೆ ಸವೆಯಬೇಕು ? ಇದರ ಸಾಕಾರ ಮೂರ್ತಿಯ ಉದಾಹರಣೆಯಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧. ಪ್ರೀತಿ

‘ಪ್ರೀತಿ’ಯು ಈಶ್ವರನ ಸ್ಥಾಯಿಭಾವವಾಗಿದೆ. ತಾಯಿ ಜಗದಂಬೆಯು ಕರುಣಾಮಯಿ ಯಾಗಿದ್ದಾಳೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಸಹ ಅದೇ ರೀತಿಯಿದ್ದಾರೆ. ಅವರ ಪ್ರೀತಿಯ ವ್ಯಾಪಕತೆಯು ಸಾಧಕರಿಗಷ್ಟೇ ಸೀಮಿತವಾಗಿರದೇ ‘ಸಂಪೂರ್ಣ ವಿಶ್ವಕ್ಕೆ ಪ್ರೇಮವನ್ನು ಹೇಗೆ ನೀಡಬಹುದು ?’ ಎಂಬ ವಿಚಾರ ಅವರಲ್ಲಿರುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೨. ಸಹಜತೆಯ ಸಾಕಾರ ಮೂರ್ತರೂಪ !

‘೨೪ ಗಂಟೆ ಅಧ್ಯಾತ್ಮವನ್ನು ಹೇಗೆ ಜೀವಿಸಬಹುದು ?’ ಎಂಬುದರ ಸಾಕಾರ ಉದಾಹರಣೆಯೆಂದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ! ಅವರು ಪ್ರತಿಯೊಂದು ವಿಷಯವನ್ನು ಅಧ್ಯಾತ್ಮೀಕರಣ ಮಾಡುತ್ತಾರೆ. ಪ್ರತಿಯೊಂದು ಕೃತಿಯನ್ನು ಶ್ರೀ ಗುರು ಅಥವಾ ಈಶ್ವರನೊಂದಿಗೆ ಜೋಡಿಸಿ ಅದರಿಂದ ಸಹಜಸುಲಭವಾದ ಅಧ್ಯಾತ್ಮವನ್ನು ಸಾಧಿಸುತ್ತಾರೆ. ಅವರ ಸಹಜ ಮಾತಿನಿಂದಲೂ ಜ್ಞಾನ ಮತ್ತು ಭಕ್ತಿಯ ಅಮೃತರಸ ಸ್ರವಿಸುತ್ತದೆ. ಶ್ರೀಗುರುಗಳ ಜ್ಞಾನಶಕ್ತಿಯು ಅವರ ಮಾಧ್ಯಮದಿಂದ ಕಾರ್ಯನಿರತವಾಗಿದೆ. ಅವರ ಅಮೃತವಾಣಿ ಆಲಿಸಿದ ಸಾಧಕರ ಸಾಧನೆಯ ದೃಷ್ಟಿಕೋನವು ದೃಢವಾಗುತ್ತದೆ. ಅವರ ಮಾತಿನಿಂದ ಸಾಧಕರ ಸಾಧನೆ ಮಾತ್ರವಲ್ಲದೇ, ಬದುಕಿನ ಮರ್ಮವೂ ತಿಳಿಯುತ್ತದೆ. ಹಾಗಾಗಿ ತಾವು ಕಠಿಣ ಎಂದು ತಿಳಿದಂತಹ ಅಧ್ಯಾತ್ಮ ಮತ್ತು ಸಾಧನೆಯು ಎಷ್ಟು ಸುಲಭವಾಗಿದೆ ಎಂದು ಸಾಧಕರಿಗೆ ಅವರಿಂದಾಗಿ ಅನಿಸತೊಡಗುತ್ತದೆ.

೩. ಶಾರೀರಿಕ ಯಾತನೆಗಳನ್ನು ಸಹಿಸಿಯೂ ವಿಶ್ವಕಲ್ಯಾಣಕ್ಕಾಗಿ ನಿರಂತರ ಪ್ರವಾಸ !

ಸಪ್ತರ್ಷಿಗಳು ಹೇಳುವುದೇನೆಂದರೆ, ‘ವಾಸ್ತವದಲ್ಲಿ ಇಂತಹ ಪ್ರವಾಸ ಕಠಿಣವಿರುತ್ತದೆ. ಆದರೆ ಕಾರ್ತಿಕ ಪುತ್ರಿಯು (ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ಕಾರ್ತಿಕಪುತ್ರಿ ಎಂದು ಸಂಬೋಧಿಸುತ್ತಾರೆ) ಸ್ತ್ರೀಯಾಗಿದ್ದರೂ ಈ ಪ್ರವಾಸವನ್ನು ಮಾಡುತ್ತಿದ್ದಾರೆ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಅನೇಕ ಶಾರೀರಿಕ ತೊಂದರೆಗಳಾಗುತ್ತವೆ. ಆ ಶಾರೀರಿಕ ಯಾತನೆಗಳನ್ನು ಭೋಗಿಸಿ ಅವರು ನಿರಂತರ ಮತ್ತು ದಣಿವರಿಯದೇ ದೈವೀ ಪ್ರವಾಸ ಮಾಡುತ್ತಿದ್ದಾರೆ.

ದೇಹಬುದ್ಧಿ ನಾಶವಾಗಿರುವ ಕಾರಣ ಅವರು ಎಲ್ಲ ಬಂಧನಗಳನ್ನು ದಾಟಿ ದೇಹಮಿತಿಯ ಆಚೆಗೆ ಹೋಗಿದ್ದಾರೆ. ಯಾವ ರೀತಿ ಒಬ್ಬ ತಾಯಿಯು ತನ್ನ ಎಲ್ಲ ದುಃಖ-ಕಷ್ಟಗಳನ್ನು ದೂರಸರಿಸಿ ತನ್ನ ಮಕ್ಕಳಿಗಾಗಿ ಸವೆಯುತ್ತಾಳೆಯೂ ಅದೇ ರೀತಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ತಮ್ಮ ವಿಶ್ವಕುಟುಂಬಕ್ಕಾಗಿ ಮತ್ತು ವಿಶ್ವಕುಟುಂಬದ ಎಲ್ಲ ಮಕ್ಕಳಿಗಾಗಿ ಹಗಲೂ ರಾತ್ರಿ ಸವೆಯುತ್ತಿದ್ದಾರೆ. ಹಾಗಾಗಿ ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಅವರು ‘ಶ್ರೀಚಿತ್‌ಶಕ್ತಿ’ ಹಾಗೂ ‘ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ’ ಎಂಬ ಹಂತದವರೆಗೆ ತಲುಪಿದ್ದಾರೆ

೪. ಮಹರ್ಷಿಗಳ ಆಜ್ಞಾಪಾಲನೆಯೇ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಜೀವನ !

ಪ್ರತಿಯೊಂದು ಕ್ಷಣ ವರ್ತಮಾನದಲ್ಲಿದ್ದು ಮಹರ್ಷಿಗಳ ಆಜ್ಞೆಗನುಸಾರ ಅವರು ವಿಶ್ವಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇದಕ್ಕೆ ಸರಿಸಾಟಿಯೇ ಇಲ್ಲ. ಸ್ಥೂಲದ ಕಾರ್ಯದ ಜೊತೆಗೆ ಸೂಕ್ಷ್ಮದ ಕಾರ್ಯದ ವಿಸ್ತಾರವೂ ವ್ಯಾಪಕವಾಗಿದೆ. ಅವರ ತ್ಯಾಗ ಮತ್ತು ಅವರ ಕಾರ್ಯಕ್ಕೆ ಯಾವುದೇ ಉಪಮೆ ನೀಡಲು ಸಾಧ್ಯವಿಲ್ಲ

೫. ಆಪತ್ಕಾಲ ಬರುವ ಮೊದಲೇ ದುರ್ಲಭ ವಸ್ತುಗಳ ಜತನ ಮಾಡುವ ಕಠಿಣ ಕಾರ್ಯಕ್ಕಾಗಿ ಭಗವಂತನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ಆರಿಸಿರುವುದು

ಸತ್ಯಯುಗದಲ್ಲಿ ಮಹಾಪ್ರಳಯದ ಸಮಯದಲ್ಲಿ ಭಗವಾನ ಶ್ರೀವಿಷ್ಣುವು ‘ಮತ್ಸ್ಯಾವತಾರ’ ತಾಳಿ ಸಪ್ತರ್ಷಿಗಳ ಮಾಧ್ಯಮದಿಂದ ಸಮಸ್ತ ಸೃಷ್ಟಿಯ ಪ್ರತಿಯೊಂದು ಘಟಕದ ಬೀಜಗಳನ್ನು ಒಟ್ಟುಗೂಡಿಸಿ ಅವುಗಳನ್ನು ಸಂರಕ್ಷಿಸಿಟ್ಟಿದ್ದರು. ಈಗ ಈ ಕಲಿಯುಗದಲ್ಲಿ ಶ್ರೀವಿಷ್ಣುವಿನ ‘ಜಯಂತಾವತಾರ’ವು ನಡೆಯುತ್ತಿದೆ. ಈ ಸಮಯದಲ್ಲಿಯೂ ಆಪತ್ಕಾಲಕ್ಕಿಂತ ಮೊದಲು ಸಪ್ತರ್ಷಿಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ದೈವೀ ಪ್ರವಾಸವನ್ನು ಮಾಡಲು ಹೇಳಿ ದೇಶವಿದೇಶಗಳಲ್ಲಿರುವ ಅನೇಕ ತೀರ್ಥಕ್ಷೇತ್ರಗಳಲ್ಲಿರುವ ದುರ್ಲಭ ವಸ್ತುಗಳ ಜೋಪಾಸನೆ ಮಾಡುತ್ತಿದ್ದಾರೆ. ಈ ವಿಶಾಲ ಕಾರ್ಯಕ್ಕಾಗಿ ಶ್ರೀವಿಷ್ಣುವಿನ ಚೈತನ್ಯಶಕ್ತಿಯು ಸಮರ್ಥವಿರುವುದರಿಂದ ಭಗವಂತನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ಆರಿಸಿದ್ದಾನೆ. ಅವರಂತೆ ಕಾರ್ಯವನ್ನು ಯಾರೂ ಮಾಡಲಾರರು. ಹಾಗಾಗಿಯೇ ಸಪ್ತರ್ಷಿಗಳು ಅವರನ್ನು ‘ಶ್ರೀದೇವಿ’ ಎಂದು ಹೇಳಿ ಗೌರವಿಸಿದ್ದರೆ ಇದರಲ್ಲಿ ಹೊಸತೇನಿದೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ೫೪ ನೆಯ ಹುಟ್ಟುಹಬ್ಬದ ನಿಮಿತ್ತ ಅವರಲ್ಲಿರುವ ಅವತಾರೀ ದೇವಿತತ್ತ್ವಕ್ಕೆ ನಮ್ಮೆಲ್ಲರಿಂದ ಕೋಟಿ ಕೋಟಿ ಕೃತಜ್ಞತಾಪೂರ್ವಕ ವಂದನೆಗಳು !’

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರಲ್ಲಿರುವ ದಿವ್ಯತ್ವವನ್ನು ಅನುಭವಿಸುವಾಗ ಎಲ್ಲಿ ದಿವ್ಯತ್ವದ ಅನುಭೂತಿ ಬರುತ್ತದೆಯೋ ಅಲ್ಲಿ ನನ್ನ ಕರಗಳೆರಡೂ ಜೋಡಿಸಲ್ಪಡುತ್ತವೆ ಎನ್ನಬೇಕಾಗುತ್ತದೆ.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರಲ್ಲಿ ಕಾರ್ಯನಿರತವಿರುವ ಅವತಾರೀ ತತ್ತ್ವದಿಂದ ಎಲ್ಲೆಡೆಗಳಲ್ಲಿರುವ ಸಾಧಕರಿಗೆ ನಿರಂತರ ಲಾಭವಾಗಲಿ, ಎಂದು ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಪ್ರಾರ್ಥನೆ !

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೨೦.೧೧.೨೦೨೪)