‘ದೇವರ ಬಗ್ಗೆ ಅನಿಸುವ ಆತ್ಮೀಯತೆ, ತನ್ನಿಂತಾನೇ ಆಗುವ ಭಾವ ಜಾಗೃತಿ, ಸತ್ಸಂಗದಿಂದ ಸಿಗುವ ಸಹಜ ಆನಂದ’, ಇವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರ ಒಡನಾಟದಲ್ಲಿ ಇತರರಿಗೆ ಅನುಭವಿಸಲು ಸಿಗುತ್ತದೆ ; ಇದು ಅವರ ಪರಿಚಿತ ಅಥವಾ ಅಪರಿಚಿತ ಹೀಗೆ ಎಲ್ಲರಿಗೂ ಸಿಗುತ್ತದೆ. ಶ್ರೀಚಿತ್‌ಶಕ್ತಿ(ಸೌ.) ಅಂಜಲಿ ಗಾಡಗೀಳ ಅವರಲ್ಲಿ ದೈವಿ ಚೈತನ್ಯ ಬಹಳವಿದೆ. ಅವರನ್ನು ನೋಡಿದೊಡನೆ ಅವರಲ್ಲಿರುವ ದೈವಿ ಚೈತನ್ಯದ ಆಕರ್ಷಣೆಯ ಶಕ್ತಿಯಿಂದ ಆ ವ್ಯಕ್ತಿ ಅವರೆಡೆಗೆ ತನ್ನಿಂತಾನೇ ಆಕರ್ಷಿತನಾಗಿ ಸ್ವತಃ ಸಾಧನೆಯನ್ನು ಮಾಡಲು ಪ್ರಾರಂಭಿಸುತ್ತಾನೆ. ಈ ಆಕರ್ಷಣೆಯ ಶಕ್ತಿಯಿಂದಾಗಿ, ಶ್ರೀಚಿತ್‌ಶಕ್ತಿಶಕ್ತಿ (ಸೌ.) ಗಾಡಗೀಳ ಅವರಿಗೆ ಎಲ್ಲರ ಪ್ರೀತಿ ಅನುಭವಿಸಲು ಸಿಗುತ್ತದೆ. ಅನೇಕ ಸಾಧಕರು ಮತ್ತು ಸಮಾಜದ ಜನರಿಗೆ ಅವರಲ್ಲಿರುವ ದೇವತ್ವದ ಅನುಭೂತಿ ಬರುತ್ತದೆ. ಇದರ ಕೆಲವು ಉದಾಹರಣೆಗಳನ್ನು ಮುಂದೆ ನೀಡಲಾಗಿದೆ.
೧. ಸಾಧಕ, ಹಾಗೆಯೇ ಪರಿಚಿತ ಮತ್ತು ಅಪರಿಚಿತ ಜನರಿಗೆ ಅವರ ವಿಷಯದಲ್ಲಿ ಇದೇ ರೀತಿಯ ಪ್ರೀತಿಯೆನಿಸುವುದು : ನಮ್ಮೆಲ್ಲ ಸಾಧಕರಿಗೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ವಿಷಯದಲ್ಲಿ ಇಂತಹುದೇ ಅನುಭವ ಬರುತ್ತದೆ. ಆಶ್ರಮದಲ್ಲಿರುವ ಹಳೆಯ ಸಾಧಕರು, ಅವರೊಂದಿಗೆ ಸೇವೆ ಸಲ್ಲಿಸಿದ ಸಾಧಕರು, ಹಾಗೆಯೇ ಅವರ ಸಮಾನ ವಯಸ್ಕ ಸಾಧಕರು ಇವರೆಲ್ಲರಿಗೂ ಅವರ ಬಗ್ಗೆ ತುಂಬಾ ಪ್ರೀತಿಯೆನಿಸುತ್ತದೆ, ಹಾಗೆಯೇ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಬಗ್ಗೆ ಆಶ್ರಮದಲ್ಲಿ ವಾಸಿಸುವವರು, ಪ್ರಸಾರದಲ್ಲಿರುವ ಸಾಧಕರು ಅವರ ಸಂಬಂಧಿಕರು ಅಥವಾ ಶಾಲೆ/ ಕಾಲೇಜುಗಳ ಸ್ನೇಹಿತೆಯರು, ಯಾರು ಯಾವುದಾದರೂ ಕಾರಣದಿಂದ ಭೇಟಿಯಾಗಿದ್ದರೂ ಅಷ್ಟು ಪ್ರೀತಿ ಮತ್ತು ಆತ್ಮೀಯತೆಯೆನಿಸುತ್ತದೆ. ಇವರೆಲ್ಲರಿಗೂ ಶ್ರೀಚಿತ್‌ಶಕ್ತಿ (ಸೌ.)ಗಾಡಗೀಳ ಇವರು ಕೇವಲ ಒಮ್ಮೆ ಮಾತ್ರ ಭೇಟಿಯಾಗಿ ಹೋದರೂ ಅವರು ಸ್ವತಃ ಶ್ರೀಚಿತ್‌ಶಕ್ತಿ(ಸೌ.) ಗಾಡಗೀಳ ಅವರನ್ನು ಸಂಪರ್ಕಿಸಿ, ”ನಮಗೆ ನಿಮ್ಮ ಬಹಳ ನೆನಪಾಗುತ್ತಿದೆ. ನೀವು ನಮಗೆ ಸಾಧನೆಯಲ್ಲಿ ಏನು ಮಾರ್ಗದರ್ಶನ ನೀಡಿದ್ದೀರೋ, ಅದು ಎಷ್ಟು ಸಹಜವಾಗಿತ್ತು ಎಂದರೆ, ‘ಅಧ್ಯಾತ್ಮ ಎಷ್ಟು ಸುಂದರವಾಗಿದೆ!’, ಎನ್ನುವ ಅನುಭೂತಿ ನಮಗೆ ಬರುತ್ತಿದೆ. ನಮ್ಮನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿರಿ ಮತ್ತು ನಿಮ್ಮ ಕೃಪಾಶೀರ್ವಾದ ನಮ್ಮ ಮೇಲೆ ಸತತವಾಗಿರಲಿ.’’ ಎಂದು ಹೇಳುತ್ತಾರೆ. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
೧ ಅ. ಸಾಧಕನು ಶ್ರೀಚಿತ್‌ಶಕ್ತಿ(ಸೌ.) ಗಾಡಗೀಳ ಇವರ ಶಾಲೆಯ ಸ್ನೇಹಿತೆಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವಾಗ ಅವಳು ಅವರ ಬಗ್ಗೆ ವ್ಯಕ್ತಪಡಿಸುವುದು ಮತ್ತು ಆ ಸಮಯದಲ್ಲಿ ಅವಳ ಭಾವಜಾಗೃತಿಯಾಗುವುದು : ಒಮ್ಮೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಶಾಲೆಯ ಸ್ನೇಹಿತೆಯೊಂದಿಗೆ ಮೊಬೈಲ್‌ನಿಂದ ನನ್ನ ಮಾತುಕತೆಯಾಯಿತು. ಆ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಸೇವೆಯಲ್ಲಿ ನಿರತರಾಗಿದ್ದರು. ಆ ಅಕ್ಕನವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಸ್ನೇಹಿತೆ) ನನಗೆ ಹೇಳಿದರು, ”ಮೊನ್ನೆ ನನ್ನ ಮೊಬೈಲ್‌ಗೆ ಅಂಜಲಿಯ (ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ) ನಾಮಜಪದ ವಿಷಯದ ಒಂದು ಸಂದೇಶ ಬಂದಿತು. ಆಗ ನನಗೆ ಅವಳ ಬಹಳ ಆಧಾರವೆನಿಸಿತು ಮತ್ತು ನನ್ನ ಭಾವಜಾಗೃತಿಯಾಯಿತು. ಅವಳಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಅವಳು ದೇವರ ಬಹಳ ದೊಡ್ಡ ಕಾರ್ಯವನ್ನು ಮಾಡುತ್ತಿದ್ದಾಳೆ. ‘ಅವಳಂತಹ ಸ್ನೇಹಿತೆ ನಮಗೆ ದೊರಕಿದಳು’, ಇದು ನಮ್ಮ ಭಾಗ್ಯವೇ ಆಗಿದೆ. ಅವಳ ಬಿಡುವಿಲ್ಲದ ಕಾರ್ಯದ ಕಾರಣದಿಂದ ಅವಳಿಗೆ ಮಾತನಾಡಲು ಸಾಧ್ಯವಾಗದಿದ್ದರೂ, ಅಣ್ಣಾ, ನಿಮ್ಮೊಂದಿಗೆ ಮಾತನಾಡಿ ದೇವರು ನನಗೆ ಅಷ್ಟು ಆನಂದವನ್ನು ಕೊಡುತ್ತಿದ್ದಾನೆ’’ ಎಂದು ಹೇಳಿದರು. ಇದನ್ನು ಹೇಳುವಾಗಲೂ ಆ ಅಕ್ಕನವರಿಗೆ ಸತತವಾಗಿ ಭಾವಜಾಗೃತಿಯಾಗುತ್ತಿತ್ತು. ಆಶ್ಚರ್ಯವೆಂದರೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಈ ಸ್ನೇಹಿತೆಯನ್ನು ಕಳೆದ ೩೦ ವವರ್ಷಗಳಲ್ಲಿ ೨ ವರ್ಷಗಳ ಮೊದಲು ಕೇವಲ ಒಂದು ಬಾರಿ ಮಾತ್ರ ಭೇಟಿಯಾಗಿದ್ದರು.
೧ ಆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರನ್ನು ನೋಡುತ್ತಲೇ ಅವರೆಡೆಗೆ ಆಕರ್ಷಿತರಾಗಿ ತನಗೆ ಆಶೀರ್ವಾದ ನೀಡಲು ಪ್ರಾರ್ಥಿಸುವ ಪೆಟ್ರೋಲ ಬಂಕಿನ ನೌಕರ ! : ಒಮ್ಮೆ ನಾವು ಪ್ರವಾಸದ ಸಮಯದಲ್ಲಿ ತಮಿಳುನಾಡಿನ ಒಂದು ನಗರದಲ್ಲಿದ್ದೆವು. ಪ್ರವಾಸದಲ್ಲಿ ಒಂದು ಪೆಟ್ರೋಲ ಬಂಕ್‌ನಲ್ಲಿ ನಮ್ಮ ಚತುಷ್ಟಕ್ರ ವಾಹನವನ್ನು ಇಂಧನ ತುಂಬಿಸಲು ನಿಲ್ಲಿಸಲಾಗಿತ್ತು. ಆ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ವಾಹನದಿಂದ ಇಳಿದು ಕಾಲನ್ನು ಸಡಿಲಗೊಳಿಸಲು ಖಾಲಿ ಜಾಗದಲ್ಲಿ ಅಡ್ಡಾಡುತ್ತಿದ್ದರು. ಅಷ್ಟುರಲ್ಲಿ ಅಕಸ್ಮಿಕವಾಗಿ ಆ ಪೆಟ್ರೋಲ ಬಂಕಿನ ಒಬ್ಬ ನೌಕರನು ಅವರ ಬಳಿಗೆ ಧಾವಿಸುತ್ತ ಬಂದನು ಮತ್ತು ತಮಿಳು ಭಾಷೆಯಲ್ಲಿ ಅವರ ಕಡೆಗೆ ಕೈ ಮಾಡಿ ಮಾತನಾಡತೊಡಗಿದನು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರೊಂದಿಗೆ ಪ್ರವಾಸದಲ್ಲಿದ್ದ ಸಾಧಕ ಶ್ರೀ. ವಿನಾಯಕ ಶಾನಭಾಗ ಇವರು ನಮಗೆ ಅವನ ಮಾತನ್ನು ಮರಾಠಿಯಲ್ಲಿ ಭಾಷಾಂತರಿಸಿ ಹೇಳಿದರು. ಆ ನೌಕರನು ”ಅಣ್ಣಾ ‘ಈ ಮಾತಾಜಿ ಯಾರು’, ಎಂದು ನನಗೆ ತಿಳಿದಿಲ್ಲ; ಆದರೆ ಅವರನ್ನು ನೋಡಿ ನಾನು ಅವರೆಡೆಗೆ ತನ್ನಿಂತಾನೇ ಆಕರ್ಷಿತನಾಗಿದ್ದೇನೆ. ದಯವಿಟ್ಟು ಈ ಮಾತಾಜಿಯವರಿಗೆ, ಒಂದು ಬಾರಿ ಅವರ ಕೈಯನ್ನು ನನ್ನ ತಲೆಯ ಇಡುವಂತೆ ಹೇಳಿರಿ ನನ್ನ ಮುಂದಿನ ಸಂಪೂರ್ಣ ಜೀವನ ಚೆನ್ನಾಗಿರುವುದು. ನನ್ನ ಭವಿಷ್ಯವೇ ಬದಲಾಗುವುದು’, ಎಂದು ನನಗೆ ಒಳಗಿನಿಂದ ಅನಿಸುತ್ತಿದೆ’’ ಎಂದು ಹೇಳಿದನು. (ಹೊರಗೆ ಅನೇಕ ಸ್ಥಳಗಳಲ್ಲಿ ಜನರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರನ್ನು ಗೌರವದಿಂದ ‘ಮಾತಾಜಿ’, ಎಂದು ಸಂಬೋಧಿಸುತ್ತಾರೆ.)
೧ ಇ. ಸ್ವಚ್ಛತೆಯ ಕೆಲಸ ಮಾಡುವ ಓರ್ವ ಸ್ತ್ರೀ ತನ್ನ ಬುದ್ಧಿಮಾಂದ್ಯ ಮಗನನ್ನು ಕರೆದುಕೊಂಡು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಆಶೀರ್ವಾದವನ್ನು ಪಡೆಯಲು ಬರುವುದು : ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಒಂದು ಸ್ಥಳದಲ್ಲಿ ನಾವು ೨-೩ ದಿನ ವಾಸ್ತವ್ಯದಲ್ಲಿದ್ದೆವು. ಅಲ್ಲಿ ಸ್ವಚ್ಛತೆಯ ಕೆಲಸ ಮಾಡುವ ಓರ್ವ ಸ್ತ್ರೀಯು ಒಮ್ಮೆ ೧೪-೧೫ ವರ್ಷದ ತನ್ನ ಬುದ್ಧಿಮಾಂದ್ಯ ಮಗನನ್ನು ಕರೆದುಕೊಂಡು ಬಂದಿದ್ದಳು ಮತ್ತು ಪ್ರವಾಸದಲ್ಲಿದ್ದ ಸಾಧಕ ಶ್ರೀ. ವಿನಾಯಕ ಶಾನಭಾಗ ಇವರಿಗೆ ಕೈಜೋಡಿಸಿ ಕಳಕಳಿಯಿಂದ ತಮಿಳು ಭಾಷೆಯಲ್ಲಿ ಏನೋ ಹೇಳುತ್ತಿದ್ದಳು. ವಿನಾಯಕ ಅಣ್ಣನವರು ಆ ಹೆಂಗಸು ಹೇಳಿದ್ದನ್ನು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರಿಗೆ ಹೇಳಿದರು. ಆ ಹೆಂಗಸು ”ಮಾತಾಜಿ, ನನ್ನ ಮಗನು ಬುದ್ಧಿಮಾಂದ್ಯನಾಗಿದ್ದಾನೆ. ಇಂದು ನಾನು ಅವನನ್ನು ನಿಮ್ಮ ದರ್ಶನಕ್ಕಾಗಿ ಇಲ್ಲಿಗೆ ಕರೆತಂದಿದ್ದೇನೆ. ಈ ಜನ್ಮದಲ್ಲಿ ಅವನ ಕಾಯಿಲೆ ದೂರವಾಗುವುದು ಎಂದು ನನಗೆ ಭರವಸೆಯಿಲ್ಲ; ಆದರೆ ಒಬ್ಬ ತಾಯಿಯಾಗಿ ನಾನು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ, ‘‘ನೀವು ಅವನ ತಲೆಯ ಮೇಲೆ ಕೈಯಿಟ್ಟು ಅವನಿಗೆ ಆಶೀರ್ವಾದ ಮಾಡಿದರೆ, ಮುಂದಿನ ಜನ್ಮದಲ್ಲಿಯಾದರೂ ಅವನಿಗೆ ಖಂಡಿತವಾಗಿಯೂ ಒಳ್ಳೆಯ ಆಯುಷ್ಯ ಲಭಿಸುವುದು ಎಂದು ನನಗೆ ಶ್ರದ್ಧೆಯಿದೆ’’ ಎಂದು ಹೇಳಿದ್ದಳು. ಈ ಪ್ರಸಂಗಗಳಿಂದ ‘ಮಾಯೆಯ ಆಕರ್ಷಣೆ ಮತ್ತು ಅಧ್ಯಾತ್ಮದ ದೈವಿ ಆಕರ್ಷಣೆ ’ ಇದರಲ್ಲಿನ ವ್ಯತ್ಯಾಸ ಗಮನಕ್ಕೆ ಬರುತ್ತದೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರೊಂದಿಗೆ ಪ್ರವಾಸದಲ್ಲಿರುವ ಸಾಧಕ (ವರ್ಷ ೨೦೧೯)