ಶೇ. ೫೩ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬೆಂಗಳೂರಿನ ಚಿ. ವೇದಾಂತ ಶ್ರವಣ ಕಲಬುರ್ಗಿ (ವಯಸ್ಸು ೩ ವರ್ಷಗಳು)

ಚಿ. ವೇದಾಂತ ಕಲಬುರ್ಗಿ

ಬೆಂಗಳೂರಿನ ಚಿ. ವೇದಾಂತ ಶ್ರವಣ ಕಲಬುರ್ಗಿ ಇವನ ಬಗ್ಗೆ ಅವನ ತಂದೆಯವರಿಗೆ ಅರಿವಾದ ಅವನ ಗುಣವೈಶಿಷ್ಟ್ಯಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ವ್ಯವಸ್ಥಿತ

೧. ’ಚಿ. ವೇದಾಂತನು ಸ್ವಚ್ಛ ಹಾಗೂ ಅಚ್ಚುಕಟ್ಟಾಗಿರಲು ಇಷ್ಟಪಡುತ್ತಾನೆ.

೨. ಉತ್ತಮ ಅವಲೋಕನ ಶಕ್ತಿ : ಯಾವುದೇ ವಿಷಯವನ್ನು ತಿಳಿಸಿ ಹೇಳಿದರೆ ಅದು ಅವನಿಗೆ ಚೆನ್ನಾಗಿ ಅರ್ಥವಾಗುತ್ತದೆ.

೩. ಧರ್ಮಾಚರಣೆ : ಅವನು ಪ್ರತಿದಿನ ಗುರುದೇವರ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ) ಛಾಯಾಚಿತ್ರಕ್ಕೆ ನಮಸ್ಕಾರ ಮಾಡುತ್ತಾನೆ. ಕೆಲವೊಮ್ಮೆ ನಾನು ವಿಭೂತಿಯನ್ನು ಹಚ್ಚಿಕೊಳ್ಳಲು ಮರೆತರೆ ಅವನು ನನಗೆ ನೆನಪಿಸುತ್ತಾನೆ ಅವನಿಗೆ ಹಣೆಯಲ್ಲಿ ವಿಭೂತಿ ಅಥವಾ ಕುಂಕುಮ ಹಚ್ಚಿಕೊಳ್ಳಲು ತುಂಬ ಇಷ್ಟವಾಗುತ್ತದೆ.

ಶ್ರೀ. ಶ್ರವಣ ಕಲಬುರ್ಗಿ

೪. ನಾಮಜಪ ಹಾಗೂ ಭಕ್ತಿಗೀತೆಯನ್ನು ಕೇಳಲು ಇಷ್ಟವಾಗುವುದು

ವೇದಾಂತನು ಜನಿಸಿದಾಗಿನಿಂದ ಅವನಿಗೆ ಪ್ರತಿದಿನ ನಾಮಜಪ ಅಥವಾ ಭಕ್ತಿಗೀತೆ ಕೇಳಲು ಇಷ್ಟವಾಗುತ್ತದೆ. ನಾವು ಪ್ರಯಾಣ ಮಾಡುತ್ತಿರುವಾಗ ಸಂಚಾರವಾಣಿಯಲ್ಲಿ ನಾಮಜಪದ ಆಡಿಯೋ ಹಾಕುತ್ತೇವೆ. ಆಗ ಅವನು ಏಕಾಗ್ರತೆಯಿಂದ ನಾಮ ಜಪವನ್ನು ಕೇಳುತ್ತಾನೆ. ಅವನಿಗೆ ಶ್ರೀಕೃಷ್ಣ, ಶ್ರೀರಾಮ ಮತ್ತು ದೇವಿ ಇವರ ಭಕ್ತಿಗೀತೆಗಳನ್ನು ಕೇಳಲು ಬಹಳ ಇಷ್ಟವಾಗುತ್ತದೆ. ಅವನು ಮಲಗುವಾಗ ಜಪ ಅಥವಾ ಭಕ್ತಿಗೀತೆಯ ಆಡಿಯೋವನ್ನು ಹಾಕಲು ಹೇಳುತ್ತಾನೆ.

೫. ಸಾತ್ತ್ವಿಕತೆಯ ಸೆಳೆತ : ನಾವು ವೇದಾಂತನನ್ನು ಕರೆದುಕೊಂಡು ಸಮಾಜದ ಯಾವುದಾದರೂ ಕಾರ್ಯಕ್ರಮಕ್ಕೆ ಹೋದರೆ ಅಲ್ಲಿನ ರಜ-ತಮ ವಾತಾವರಣದಿಂದಾಗಿ ಅವನಿಗೆ ಕಿರಿಕಿರಿಯಾಗುತ್ತದೆ. ನಾವು ಅವನನ್ನು ದೇವಸ್ಥಾನದಂತಹ ಸಾತ್ತ್ವಿಕ ಸ್ಥಳಕ್ಕೆ ಕರೆದೊಯ್ದರೆ ಅದು ಅವನಿಗೆ ಇಷ್ಟವಾಗುತ್ತದೆ ಅವನು ದೇವರಿಗೆ ಅತ್ಯಂತ ಭಾವಪೂರ್ಣವಾಗಿ ನಮಸ್ಕಾರ ಮಾಡುತ್ತಾನೆ.

೬. ಸಂತರತ್ತ ಆಕರ್ಷಿತವಾಗುವುದು

ಒಮ್ಮೆ ನಾವು ರಾಮನಾಥಿಯಲ್ಲಿರುವ (ಗೋವಾ) ಸನಾತನ ಆಶ್ರಮಕ್ಕೆ ಹೋಗಿದ್ದೆವು. ಆಶ್ರಮದ ಪ್ರವೇಶದ್ವಾರದ ಹತ್ತಿರ ವೇದಾಂತನು ನನ್ನ ತಂಗಿಯ ಜೊತೆ ನಡೆಯುತ್ತಿದ್ದನು. ಆಗ ಅವನಿಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಕಾಣಿಸಿದರು. ಅವನು ನನ್ನ ತಂಗಿಯ ಕೈಯನ್ನು ಬಿಟ್ಟು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕೈಯನ್ನು ಹಿಡಿದುಕೊಂಡು ಮಾತನಾಡುತ್ತಾ ನಡೆಯಲಾರಂಭಿಸಿದನು. ಸಾಮಾನ್ಯವಾಗಿ ಅವನು ಕುಟುಂಬದವರನ್ನು ಬಿಟ್ಟು ಬೇರೆ ಯಾರ ಹತ್ತಿರ ಹೋಗುವುದಿಲ್ಲ.

– ಶ್ರೀ. ಶ್ರವಣ ಕಲಬುರ್ಗಿ (ಚಿ. ವೇದಾಂತನ ತಂದೆ), ಬೆಂಗಳೂರು (೨೮.೫.೨೦೨೪)

 ಉಚ್ಚ ಲೋಕದಿಂದ ಪೃಥ್ವಿಯಲ್ಲಿ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರವನ್ನು (ಸನಾತನ ಧರ್ಮ ರಾಜ್ಯ) ನಡೆಸುವ ಪೀಳಿಗೆ  ! ಚಿ. ವೇದಾಂತ ಶ್ರವಣ ಕಲಬುರ್ಗಿ ಇವನು ಈ ಪೀಳಿಗೆಯಲ್ಲೊಬ್ಬನು.

ಇದರೊಂದಿಗೆ ಬಾಲಸಾಧಕರಲ್ಲಿರುವ ವಿವಿಧ ದೈವೀ ಗುಣಗಳನ್ನು ಸಹಜವಾಗಿ ತೆರೆದಿಡುವ ಚಲನಚಿತ್ರಗಳನ್ನು (ವಿಡೀಯೊಗಳನ್ನು) ತಾವು ಅಂತರಜಾಲದಲ್ಲಿ ’ಯೂಟ್ಯೂಬ್ನ goo.gl/06MJck ಈ ಲಿಂಕ್‌ನಲ್ಲಿ ಸಹ ನೋಡಬಹುದು.