‘ಜೈಪುರ್ ಡೈಲಾಗ್ಸ್’ ಪರಿಷತ್ತಿನ ಎರಡನೇ ದಿನ
ಜೈಪುರ (ರಾಜಸ್ಥಾನ) – ಪಾಶ್ಚಿಮಾತ್ಯ ದೇಶಗಳಲ್ಲಿ ಖಲಿಸ್ತಾನ್ ಮತ್ತು ಇಸ್ಲಾಂ ಬಗ್ಗೆ ಚರ್ಚಿಸಲಾಗುತ್ತದೆ. ಸಮಾಜದ ಬಹುಸಂಖ್ಯಾತರಿಗೆ ಇದರ ಅರಿವಿಲ್ಲ; ಆದರೆ ನಮ್ಮ ಶತ್ರುವನ್ನು ನಾವು ಗುರುತಿಸಬೇಕು. ವಿಶ್ವ ಮಟ್ಟದಲ್ಲಿ ಭಾರತವನ್ನು ಹಿಂದಕ್ಕೆ ತಳ್ಳುವ ಸಂಚು ರೂಪಿಸಲಾಗಿದೆ.
3 ದಿನಗಳ ‘ದಿ ಜೈಪುರ ಡೈಲಾಗ್ಸ್’ ನ 9ನೇ ವಾರ್ಷಿಕ ಸಮ್ಮೇಳನದ ಎರಡನೇ ದಿನದಂದು ದೇಶ-ವಿದೇಶಗಳ ವಿಚಾರವಂತರು, ರಾಷ್ಟ್ರವಾದಿಗಳು ಮತ್ತು ಪ್ರಖ್ಯಾತ ವಕ್ತಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ‘ಜೈಪುರ ಡೈಲಾಗ್ಸ್’ನ ಅಧ್ಯಕ್ಷ ಸಂಜಯ ದೀಕ್ಷಿತ್ ಅವರು ವಿವಿಧ ಸೆಶನ್ಸ್‌ಗಳಲ್ಲಿ ಮಾತನಾಡಿ ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಈ ವರ್ಷದ ವಿಚಾರ ವಿನಿಮಯವನ್ನು ‘ರಿಕ್ಲೆಮಿಂಗ್ ಭಾರತ’ ಎಂಬ ವಿಷಯದ ಮೇಲೆ ಮಾಡಲಾಗುತ್ತಿದೆ.
‘ಇಸ್ಲಾಂ ಮತ್ತು ಖಲಿಸ್ತಾನ್’ ಕುರಿತು ವಿಚಾರ ಸಂಕಿರಣ
‘ಇಸ್ಲಾಂ ಮತ್ತು ಖಲಿಸ್ತಾನ’ ಕುರಿತ ವಿಚಾರ ಸಂಕಿರಣದಲ್ಲಿ ಸೇನೆಯ ಹಿನ್ನೆಲೆಯುಳ್ಳ ರಮಣಿಕ ಮಾನ ಅವರು ಮಾತನಾಡಿ, ಸನಾತನ-ಸಿಖ್ ಧರ್ಮವಾಗಿದ್ದು, ತಾರತಮ್ಯ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. 1984ರ ಸಿಖ್ ದಂಗೆಯೇ ಇದರ ಉದಾಹರಣೆಯಾಗಿದೆ. ಕಾಂಗ್ರೆಸ್ ನಾಯಕರು ವಿದೇಶಕ್ಕೆ ಹೋಗಿ ಪ್ರತ್ಯೇಕತಾವಾದಕ್ಕೆ ಉತ್ತೇಜನ ನೀಡುತ್ತಿದ್ದಾರೆ. 1947 ರ ವಿಭಜನೆಯು ಖಲಿಸ್ತಾನ ಹುಟ್ಟಿತು.
ಇದೇ ವಿಚಾರ ಸಂಕಿರಣದಲ್ಲಿ ನೀರಜ್ ಅತ್ರಿ, ಪಂಕಜ್ ಸಕ್ಸೇನಾ, ದೇವದತ್ತ ಮಾಂಝಿ, ಅವಿನಾಶ ಧರ್ಮಾಧಿಕಾರಿ ಮೊದಲಾದವರು ‘ಮುಸ್ಲಿಂ ಲೀಗ್’ನಲ್ಲಿ ವಿವಿಧ ರೀತಿಯ ಜಿಹಾದ್ ಮಾಡಿ ದೇಶ ವಿಭಜಿಸಿ ದುರ್ಬಲಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು. ಮತ್ತು ಸರಿಯಾದ ಸಮಯದಲ್ಲಿ ಶತ್ರುಗಳನ್ನು ಗುರುತಿಸಲು ಒತ್ತು ನೀಡಿದರು. ಈ ವೇಳೆ ‘ಹಿಂದುತ್ವದಲ್ಲಿನ ಹ್ಯಾಟ್ರಿಕ್’ ಪುಸ್ತಕವನ್ನೂ ಪ್ರಕಾಶಿಸಲಾಯಿತು.
✨Reclaiming भारत 🇮🇳 in our lifetimes with #TJDSummit2024!
Wow!
This is the dire need of our time. Otherwise, Bhagwan won’t forgive us.
🛕With aims to propagate the profound concepts बंटोगे तो कटोगे, #HinduResurgence, #HinduRaksha, #HinduEcosystem 🕉️…@JaipurDialogues has… pic.twitter.com/RwF29Z7nsM
— Sanatan Prabhat (@SanatanPrabhat) October 27, 2024
ರಾಷ್ಟ್ರವಾದಿ ಚಿತ್ರಗಳ ನಿರ್ಮಾಣದ ಅಗತ್ಯ ! : ‘ಬಾಲಿವುಡ್, OTT ಮತ್ತು ಸಾಮಾಜಿಕ ಮಾಧ್ಯಮ’ ಕುರಿತು ವಿಚಾರಗೋಷ್ಠಿಯ ಪ್ರಕ್ರಿಯೆಗಳು
‘ಬಾಲಿವುಡ್, ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ’ ಎಂಬ ವಿಚಾರ ಸಂಕಿರಣದಲ್ಲಿ ವೈಚಾರಿಕ ಯುದ್ಧದಿಂದ ದೇಶದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ನಾಶಪಡಿಸುವ ಮತ್ತು ದೇಶದ ವಿರುದ್ಧ ಕಥನಗಳನ್ನು ರಚಿಸುವ ಮೂಲಕ ಸನಾತನ ಧರ್ಮ ಮತ್ತು ಹಿಂದುತ್ವವನ್ನು ನಾಶಪಡಿಸುವ ಸವಾಲುಗಳನ್ನು ಚರ್ಚಿಸಲಾಯಿತು. ವಕ್ತಾರರು, ನಮಗೆ ರಾಷ್ಟ್ರವಾದಿ ಚಿತ್ರಗಳನ್ನು ನಿರ್ಮಿಸಬೇಕು ಮತ್ತು ಗೊಂದಲಮಯ ದೃಶ್ಯ ಚಿತ್ರಗಳನ್ನು ವಿರೋಧಿಸಬೇಕು ಎಂದು ಹೇಳಿದರು. ಈ ಸೆಶನ್ಸ್‌ನಲ್ಲಿ ಅಭಿಜಿತ ಜೋಗ್, ಅಂಬರ್ ಜೈದಿ, ಅಭಿಷೇಕ ತಿವಾರಿ, ಪಂಡಿತ ಸತೀಶ ಶರ್ಮಾ ಮತ್ತು ಪ್ರತೀಕ್ ಬೋರಾಡೆ ಮಾತನಾಡಿದರು.
ಸಾಮಾನ್ಯ ಮುಸ್ಲಿಮರಿಗೆ ಇಸ್ಲಾಂ ಬಗ್ಗೆ ಸ್ವಲ್ಪ ಜ್ಞಾನವಿದೆ ! : ‘ಪಾಕಿಸ್ತಾನ ಸಮಸ್ಯೆ’ ವಿಚಾರ ಸಂಕಿರಣದಲ್ಲಿ ಗಣ್ಯರ ಅಭಿಪ್ರಾಯ
‘ಪಾಕಿಸ್ತಾನದ ಸಮಸ್ಯೆ’ ಈ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಕರ್ನಲ್ ಅಜಯ ರೈನಾ, ತಿಲಕ್ ದಿವಸರ್ ಮತ್ತು ಸುಶಾಂತ ಸರಿನ್ ಅವರು ಭಾರತ-ಪಾಕಿಸ್ತಾನ ಸಂಬಂಧಗಳ ಬಗ್ಗೆ ಹಾಗೂ ಪಾಕಿಸ್ತಾನದ ದ್ವಿಮುಖ ನೀತಿ ಬಗ್ಗೆ ಚರ್ಚಿಸಿದರು. ಅವರು, 1947 ರಿಂದ ಪಾಕಿಸ್ತಾನವನ್ನು ಒಂದು ರಾಷ್ಟ್ರವಾಗಿ ಪರಿಗಣಿಸಲಾಗಿದೆ; ಆದರೆ ಅದು ದೇಶ ವಿರೋಧಿ ಚಟುವಟಿಕೆ ಮಾಡುತ್ತಿದೆ. ಭಾರತದ ದೇವಬಂದ್‌ನಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ; ಆದರೆ ಪಾಕಿಸ್ತಾನದ ದೇವಬಂದ್‌ನಲ್ಲಿ ಪದವಿ ಪಡೆದ ನಂತರ ಎಕೆ 47 ನೀಡಲಾಗುತ್ತದೆ. ಸಾಮಾನ್ಯ ಮುಸ್ಲಿಮರಲ್ಲಿ ಇಸ್ಲಾಂ ಧರ್ಮದ ಬಗ್ಗೆ ಬಹಳ ಕಡಿಮೆ ಜ್ಞಾನ ಇದೆ ಎಂದು ಹೇಳಿದರು.
ಚಲನಚಿತ್ರಗಳು, ಫ್ಯಾಷನ್ ಮತ್ತು ಆಹಾರದಲ್ಲಿ ಇಸ್ಲಾಂ ಮತ್ತು ಪಾಶ್ಚಿಮಾತ್ಯ ದೇಶಗಳ ಹಸ್ತಕ್ಷೇಪ ! : ‘ಭಾರತ್ ತೇರೆ ತುಕಡೇ ಹೊಂಗೆ’ ಈ ವಿಚಾರದ ಕುರಿತು ವಿಚಾರ ಸಂಕಿರಣದಲ್ಲಿ ಅಭಿಪ್ರಾಯ
‘ಭಾರತ್ ತೇರೆ ತುಕಡೆ ಹೊಂಗೆ’ ಎಂಬ ವಿಚಾರ ಸಂಕಿರಣದಲ್ಲಿ ಕರ್ನಲ್ ಆರ್.ಎಸ್.ಎನ್.ಸಿಂಗ್, ಬಾಬಾ ರಾಮದಾಸ ಮತ್ತು ಅಭಿಜಿತ ಚಾವ್ಡಾ ಅವರು ಭಾರತದಲ್ಲಿ ನಡೆಯುತ್ತಿರುವ ಕಾರ್ಯತಂತ್ರ, ರಾಜಕೀಯ, ವೈಚಾರಿಕ ಮತ್ತು ಸಂಸ್ಕೃತ ಚಟುವಟಿಕೆಗಳ ಕುರಿತು ಚರ್ಚಿಸಿದರು. ಅವರು, ಸನಾತನ ಧರ್ಮದ ಮೇಲೆ ಮುಸಲ್ಮಾನರಷ್ಟೇ ಅಲ್ಲ, ಪಾಶ್ಚಿಮಾತ್ಯ ದೇಶಗಳಿಂದಲೂ (ಕ್ರೈಸ್ತರೂ) ದಾಳಿ ನಡೆಯುತ್ತಿದೆ ಎಂದರು. ಈ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಕ್ರಮಣವನ್ನು ಮತಾಂತರದ ರೂಪದಲ್ಲಿ ಕಾಣುತ್ತಿದ್ದೇವೆ. ಚಲನಚಿತ್ರಗಳು, ಫ್ಯಾಷನ್ ಮತ್ತು ಆಹಾರದಲ್ಲಿ ಇಸ್ಲಾಂ ಮತ್ತು ಪಾಶ್ಚಿಮಾತ್ಯ ದೇಶಗಳು ಹೆಚ್ಚು ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ಅಪಾಯಕಾರಿ ಮತ್ತು ದೇಶವನ್ನು ವಿಭಜಿಸುವ ಪಿತೂರಿಯಾಗಿದೆ ಎಂದು ಹೇಳಿದರು.
📢 Jaipur Dialogues 2024: Experts Discuss National Security & Unity! ✊
Day 2 – October 26
✦ Khalistani separatism & Islamic radicalization
✦ Infiltration through education & media
✦ Need for strategic preparedness
Key takeaways:
✦ National unity is crucial
✦ Identify… pic.twitter.com/PWAYyY7sbZ
— Sanatan Prabhat (@SanatanPrabhat) October 27, 2024
ದೇಶದಲ್ಲಿ ಹಿಂದೂಗಳಿಗೆ ತೀರ್ಥಯಾತ್ರೆಗೆ ಸಬ್ಸಿಡಿ ಇಲ್ಲ; ಆದರೆ ಹಜ್ ಗೆ ಅನುದಾನ ! : ‘ಸನಾತನ ಧರ್ಮ ಮತ್ತು ಗೌತಮ ಬುದ್ಧ’ ಈ ವಿಷಯದ ಕುರಿತು ವಿಚಾರ ಸಂಕಿರಣ
‘ಸನಾತನ ಧರ್ಮ ಮತ್ತು ಗೌತಮ ಬುದ್ಧ’ ಈ ವಿಷಯದ ಕುರಿತ ಚರ್ಚೆಯ ಸಂದರ್ಭದಲ್ಲಿ, ಲೇಖಕ ಅಜಯ ಚುಂಗರು ಮತ್ತು ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಹಿಂದೂ ದೇವಾಲಯಗಳಲ್ಲಿ ಸರಕಾರದ ಹಸ್ತಕ್ಷೇಪದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ದೇವಾಲಯಗಳ ಭೂಮಿಯನ್ನು ವಕ್ಫ್ ಆಗಿ ಪರಿವರ್ತಿಸಲಾಗುತ್ತಿದೆ. ವಕ್ಫ್ ಬೋರ್ಡ್‌ನ ನೌಕರರನ್ನು ‘ಸರಕಾರಿ ಸೇವಕರು’ ಎಂದು ಕರೆಯಲಾಗುತ್ತದೆ. ಅವರಿಗೆ ಹಲವು ಸವಲತ್ತುಗಳನ್ನು ನೀಡಲಾಗಿದೆ, ಎಂದು ಅಜಯ ಚುಂಗರು ಹೇಳಿದರು. ವಕೀಲ ವಿಷ್ಣು ಶಂಕರ ಜೈನ್ ಇವರು ಮಾತನಾಡಿ, ಇತರ ದೇಶಗಳಲ್ಲಿ ಅಲ್ಪಸಂಖ್ಯಾತರು ಸಮಾನ ನಾಗರಿಕ ಹಕ್ಕುಗಳನ್ನು ನಂಬಿದರೆ, ಭಾರತದಲ್ಲಿ ಬಹುಸಂಖ್ಯಾತರು ಈ ಕಾನೂನನ್ನು ಮಾತ್ರ ಒತ್ತಾಯಿಸುತ್ತಿದ್ದಾರೆ. ದೇಶದಲ್ಲಿ ಹಿಂದೂಗಳಿಗೆ ತೀರ್ಥಯಾತ್ರೆಗೆ ಸಬ್ಸಿಡಿ ಇಲ್ಲ; ಆದರೆ ಹಜ್ ಗೆ ಸಬ್ಸಿಡಿ ನೀಡಲಾಗುತ್ತದೆ. ಬಹುಸಂಖ್ಯಾತ ಸಮಾಜಕ್ಕೆ ತಮ್ಮ ದೇವಾಲಯಗಳನ್ನು ಅವರೇ ನಿರ್ವಹಿಸಲು ನೀಡಬೇಕೆಂದು ಒತ್ತಾಯಿಸಬೇಕಾಗಿದೆ ಎಂದು ಹೇಳಿದರು.
ಕೊನೆಯ ದಿನದ ವಿಷಯ !ಅಕ್ಟೋಬರ್ 27 ರಂದು, ಅಂದರೆ ಕಾರ್ಯಕ್ರಮದ ಕೊನೆಯ ದಿನ, ‘ಆತ್ಮನಿರ್ಭರ ಭಾರತ ಭಾರತದ ಮುಂದಿರುವ ಸವಾಲುಗಳು’, ‘ಭೌಗೋಳಿಕ ರಾಜಕೀಯ ಮತ್ತು ಭಾರತ’, ‘2029 ರ ರಾಜಕೀಯ’ ಈ ವಿಷಯದ ಬಗ್ಗೆ ಕರ್ನಲ ಅಜಯ ರೈನಾ, ಮೇಜರ್ ಜನರಲ ರಾಜೀವ ನಾರಾಯಣ್, ನಾಸೀರ ಅಹ್ಮದ ಶೇಖ್, ಸಂಕ್ರಾಂತ ಸಾನು, ವಿಭೂತಿ ಝಾ ಸೇರಿದಂತೆ ಅನೇಕ ವಕ್ತಾರರು, ಲೇಖಕರು, ಚಿಂತಕರು ‘ಮಲ್ಟಿ ಡೊಮೈನ್ ಥ್ರೆಟ್’ (ವಿವಿಧ ಹಂತಗಳಲ್ಲಿ ಬೆದರಿಕೆಗಳು), ‘ಹಿಂದುತ್ವ Vs ಇಸ್ಲಾಂ’ ಇತ್ಯಾದಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. |