|
ಇಸ್ಲಾಮಾಬಾದ್ (ಪಾಕಿಸ್ತಾನ) – ಜಿಹಾದಿ ಭಯೋತ್ಪಾದಕರ ಆದರ್ಶವಾಗಿರುವ ಮತ್ತು ಭಾರತದಿಂದ ಪರಾರಿ ಆಗಿರುವ ಝಾಕೀರ್ ನಾಯಕ್ ಕೆಲವು ವಾರ ಪಾಕಿಸ್ತಾನದ ಪ್ರವಾಸದಲ್ಲಿದ್ದನು. ಈ ಪ್ರವಾಸದಲ್ಲಿ ಅವನು ಕೆಲವು ಆಕ್ಷೇಪಾರ್ಹ ಹೇಳಿಕೆ ನೀಡಿರುವುದರಿಂದ ಅವನ ಮೇಲೆ ಟೀಕೆಗಳಾದವು. ಈಗ ಪಾಕಿಸ್ತಾನದ ‘ಸೀನೋಡ’ ಚರ್ಚ್ ನ ಅಧ್ಯಕ್ಷ ಬಿಷಪ್ (ಹಿರಿಯ ಪಾದ್ರಿ) ಡಾ. ಆಝಾದ ಮಾರ್ಷಲ್ ಇವರು ರಾಷ್ಟ್ರಪತಿ ಆಸಿಫ್ ಅಲಿ ಝರದಾರಿ ಇವರಿಗೆ ಪತ್ರ ಬರೆದು ಝಾಕಿರ್ ನಾಯಿಕ ಇವನಿಂದ ಕ್ರೈಸ್ತರ ಬಗ್ಗೆ ನೀಡಲಾದ ಹೇಳಿಕೆಯಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪಾಕಿಸ್ತಾನಿ ಮುಸಲ್ಮಾನರು ಕೂಡ ಝಾಕಿರನನ್ನು ವಿರೋಧಿಸಿದ್ದರು.
ಡಾ. ಆಝಾದ್ ಮಾರ್ಷಲ್ ಇವರು ಬರೆದ ಪತ್ರದಲ್ಲಿ,
೧. ಝಾಕೀರ್ ನಾಯಿಕ ಇವನ ಸಾರ್ವಜನಿಕ ಭಾಷಣದಿಂದ ನಮ್ಮ ಸಮುದಾಯಕ್ಕೆ ಬಹಳ ತೊಂದರೆ ಆಗಿದೆ; ಅವರು ಬಹಿರಂಗವಾಗಿ ನಮ್ಮ ವಿಶ್ವಾಸದ, ನಮ್ಮ ಪವಿತ್ರ ಗ್ರಂಥದ ಸತ್ಯತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಅವಮಾನಿಸುವ ಮತ್ತು ಪಾದ್ರಿಗಳನ್ನು ಕೀಳಾಗಿ ನೋಡುವ ಹೇಳಿಕೆಗಳು ನೀಡಿದ್ದಾರೆ. ಜಾಕಿರ್ ಇವನ ಹೇಳಿಕೆಯಿಂದ ಕೇವಲ ಧರ್ಮದ ಅವಮಾನ ಆಗಿದೆ ಎಂದಲ್ಲ, ಇದು ಎಲ್ಲಾ ಪಾಕಿಸ್ತಾನಿಗಳ ರಾಷ್ಟ್ರೀಯ ಗೌರವ ಕಡಿಮೆ ಮಾಡಿದೆ.
೨. ಝಾಕೀರ್ ನ ಟಿಪ್ಪಣಿಯ ಬಗ್ಗೆ ಸರಕಾರವು ವಿಶಾದ ವ್ಯಕ್ತಪಡಿಸಿ ಅನೌಪಚಾರಿಕ ಕ್ಷಮೆ ಯಾಚಿಸದಿದ್ದರಿಂದ ಕ್ರೈಸ್ತ ಸಮುದಾಯಕ್ಕೆ ಅರಿವಾದ ಅಸುರಕ್ಷತೆಯ ಭಾವನೆ ಇನ್ನಷ್ಟು ತೀವ್ರವಾಗಿದೆ. ಸರಕಾರ ಧಾರ್ಮಿಕ ಸೌಹಾರ್ದತೆ ಕಾಪಾಡುವ ಆಶ್ವಾಸನೆ ನೀಡುವುದು ತೋರಿಕೆಯಾಗಿದೆ. ಝಾಕಿರ್ ಹೇಳಿಕೆ ನೀಡಿರುವ ವೇದಿಕೆಯಲ್ಲಿ ನಮ್ಮ ಧರ್ಮಗುರುಗಳಿಗೆ ಮತ್ತು ವಿದ್ವಾನರಿಗೆ ಝಾಕಿರ್‍ನ ತಪ್ಪಾದ ಅಭಿಪ್ರಾಯ ಮತ್ತು ಮಾಹಿತಿಗೆ ಯೋಗ್ಯ ಪ್ರತಿಕ್ರಿಯೆ ನೀಡುವ ಅಥವಾ ಸುಧಾರಣೆ ಮಾಡುವ ಅವಕಾಶ ನೀಡಲಾಗಿಲ್ಲ.
೩. ಪಾಕಿಸ್ತಾನದ ನಾಗರಿಕನೆಂದು ಅಲ್ಪಸಂಖ್ಯಾತರಿಗೆ ಸಂವಿಧಾನ ಕಲಂ ೨೦ ರ ಅಂತರ್ಗತ ಮೂಲಭೂತ ಅಧಿಕಾರದ ಕೊರತೆ ಇದೆ. ಅದರಲ್ಲಿ ‘ಪ್ರತಿಯೊಬ್ಬ ನಾಗರಿಕನಿಗೆ ಸ್ವಂತ ಧರ್ಮ ಸ್ವೀಕರಿಸುವ, ಆಚರಣೆ ಮಾಡುವ ಮತ್ತು ಪ್ರಚಾರ ಮಾಡುವ ಅಧಿಕಾರವಿದೆ.’ ಎಂದು ಹೇಳಿದೆ.
ಡಾ. ಮಾರ್ಷಲ್ ಇವರು ರಾಷ್ಟ್ರಪತಿ ಝಾರದಾರಿ ಇವರಿಗೆ ಈ ಸಂವಿಧನಾತ್ಮಕ ಅಧಿಕಾರ ಶಾಶ್ವತ ಇರಿಸಲು ಮತ್ತು ಯಾವುದೇ ವ್ಯಕ್ತಿಯಿಂದಲೂ ಉಲ್ಲಂಘನೆ ಆಗುವುದಿಲ್ಲ, ಇದನ್ನು ದೃಢಪಡಿಸುವುದಕ್ಕಾಗಿ ಕಠಿಣ ಕ್ರಮ ಕೈಗೊಳ್ಳಲು ಕರೆ ನೀಡಿದರು.
ಸಂಪಾದಕೀಯ ನಿಲುವುಝಾಕೀರ್ ನಾಯಿಕ್ ನ ಮನಸ್ಸಿನಸ್ಥಿತಿ ಪಾಕಿಸ್ತಾನಿಗಳಿಗೂ ತಿಳಿದಿದೆ, ಇದು ಒಳ್ಳೆಯದೇ ಆಯಿತು. ಆದ್ದರಿಂದ ಝಾಕೀರ್ ನ ಮುಖವಾಡ ಕಳಚಿ ಬಿದ್ದಿತು. ಝಾಕೀರ್ ಜಗತ್ತಿನಲ್ಲಿ ಎಲ್ಲಿಗೆ ಹೋದರು ಕೂಡ, ಅವನಿಗೆ ಈಗ ಮುಸಲ್ಮಾನರು ಮಹತ್ವ ನೀಡುವುದಿಲ್ಲ ಮತ್ತು ಈಗ ಕ್ರೈಸ್ತ ರಾಷ್ಟ್ರಗಳು ಕೂಡ ವಿರೋಧಿಸುವರು ! |