ತೆರೆದ ಕಣ್ಣಿನ ನ್ಯಾಯ !

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರು ಅಕ್ಟೋಬರ್ ೧೭ ರಂದು ನ್ಯಾಯದೇವತೆಯ ಹೊಸ ಮೂರ್ತಿಯನ್ನು ಬಿಡುಗಡೆಗೊಳಿಸಿದರು. ಕಣ್ಣಿನ ಮೇಲಿನ ಕಪ್ಪು ಬಟ್ಟೆಯ ಪಟ್ಟಿಯಿಲ್ಲದಿರುವ ಭಾರತೀಯ ಸಂಸ್ಕೃತಿಗನುಸಾರ ಸೀರೆಯುಟ್ಟ, ಆಭರಣ ಧರಿಸಿರುವ, ಒಂದು ಕೈಯಲ್ಲಿ ತಕ್ಕಡಿ ಮತ್ತು ಇನ್ನೊಂದು ಕೈಯಲ್ಲಿ ಭಾರತದ ಸಂವಿಧಾನವಿರುವ ನ್ಯಾಯದೇವತೆಯ ಅಂದರೆ ‘ಲೇಡಿ ಜಸ್ಟೀಸ’ನ ಹೊಸ ಮೂರ್ತಿಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ ಪ್ರಚಲಿತವಾಗಿದ್ದ ನ್ಯಾಯದೇವತೆಯ ಮೂರ್ತಿಯು ರೋಮನ ಸಂಸ್ಕೃತಿಯದ್ದಾಗಿತ್ತು. ಅವಳು ಉದ್ದನೆಯ ಗೌನು ಧರಿಸಿದ್ದಳು, ಕಣ್ಣಿನ ಮೇಲೆ ಪಟ್ಟಿಯಿತ್ತು, ಒಂದು ಕೈಯಲ್ಲಿ ತಕ್ಕಡಿ ಮತ್ತು ಇನ್ನೊಂದು ಕೈಯಲ್ಲಿ ಖಡ್ಗ ಇತ್ತು. ಭಾರತದ ನ್ಯಾಯಾಲಯದಲ್ಲಿ ರೋಮನ ನ್ಯಾಯದೇವತೆಯ ಮೂರ್ತಿಯ ಬದಲಾಗಿ ಭಾರತೀಯ ನ್ಯಾಯದೇವತೆಯ ಮೂರ್ತಿ ಇರಬೇಕು ಎಂದು ‘ಬಾರ ಕೌನ್ಸಿಲ ಆಫ್ ಮಹಾರಾಷ್ಟ್ರ ಅಂಡ್ ಗೋವಾ’ನವರು ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಇವರಲ್ಲಿ ಕೋರಿದ್ದರು. ಆ ಸಮಯದಲ್ಲಿ ಅವರು ಭಾರತೀಯ ನ್ಯಾಯದೇವತೆಯ ಕಲ್ಪನೆಯ ಚಿತ್ರವನ್ನೂ ಹಸ್ತಾಂತರಿಸಿದ್ದರು.

ಅನೇಕ ಶತಕಗಳಿಂದ ಈ ಮೂರ್ತಿ ‘ಕಾನೂನು ಕುರುಡಾಗಿದೆ ಎನ್ನುವ ತತ್ತ್ವವನ್ನು ಪ್ರತಿನಿಧಿಸುತ್ತಿತ್ತು. ಈ ಹೆಸರಾಂತ ನ್ಯಾಯದೇವತೆಯ ಕಣ್ಣುಗಳ ಮೇಲೆ ಪಟ್ಟಿಯಿರುವ ಕಾರಣವೆಂದರೆ ನ್ಯಾಯಾಲಯದಲ್ಲಿ ಹುದ್ದೆ, ಪ್ರತಿಷ್ಠೆ, ಗೌರವ, ಸನ್ಮಾನ ಅಥವಾ ಯಾವುದೇ ಬಿರುದುಬಾವಲಿಗಳ ಅಧೀನರಾಗಿರದೇ ನಿಃಷ್ಪಕ್ಷಪಾತ ರೀತಿಯಲ್ಲಿ ನ್ಯಾಯ ಸಿಗಬೇಕು ಎಂದಾಗಿತ್ತು; ಆದರೆ ಪ್ರತ್ಯಕ್ಷದ  ಚಿತ್ರಣ ವಿಭಿನ್ನವಾಗಿದೆ. ನ್ಯಾಯದೇವತೆಯ ಕಣ್ಣಿನ ಮೇಲಿನ ಪಟ್ಟಿಯನ್ನು ಕುರುಡು ಕಾನೂನಿನ ಮುಂದೆ ಒಬ್ಬ ಸಾಮಾನ್ಯ ನಾಗರಿಕ ಸೋತು ಸುಣ್ಣವಾದರೂ ತಾನು ನಿರ್ದೋಷಿಯೆಂದು ಸಾಬೀತುಪಡಿಸುವಲ್ಲಿ ವಿಫಲವಾದರೆ ಅವನು ತಪ್ಪಿತಸ್ಥನಾಗುತ್ತಿದ್ದನು. ಅಪರಾಧಿಯು ತನ್ನ ರಕ್ಷಣೆಯ ಪುರಾವೆಗಳನ್ನು ಪ್ರಸ್ತುತಪಡಿಸಿ, ನಿರಪರಾಧಿಯೆಂದು ಬಿಡುಗಡೆಯಾಗುತ್ತಿದ್ದನು. ಇದು ಒಂದು ರೀತಿಯಲ್ಲಿ ಹತಾಶೆಯ ಸ್ಥಿತಿಯಾಗಿತ್ತು.  ಚಲನಚಿತ್ರ-ನಾಟಕಗಳು, ಕಥೆ-ಕಾದಂಬರಿಗಳು, ಸಾಹಿತ್ಯಗಳ ಮಾಧ್ಯಮದಿಂದ ಇದೇ ಸಮಾಜದ ಮೇಲೆ ಇಂದಿನವರೆಗೆ ಬಿಂಬಿಸಲ್ಪಡುತ್ತಿತ್ತು. ಆದಾಗ್ಯೂ ಈಗ ‘ಕಾನೂನು ಕುರುಡಲ್ಲ, ಅದು ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುತ್ತಿದೆ, ಎನ್ನುವ ಸಂದೇಶವನ್ನು ನೀಡಲು ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯದೇವತೆಯ ಹೊಸ ಮೂರ್ತಿಯನ್ನು ಎಲ್ಲರೆದುರಿಗೆ ಪ್ರಸ್ತುತಪಡಿಸಲಾಗಿದೆ.

ನ್ಯಾಯದೇವತೆಯ ಹೊಸ ಮೂರ್ತಿಯ ಕೈಯಲ್ಲಿನ ತಕ್ಕಡಿ ಹಾಗೆಯೇ ಇದೆ, ಅದು ಸಮತೋಲಿತ ನಿರ್ಧಾರವನ್ನು ಸೂಚಿಸುತ್ತದೆ. ಮೂರ್ತಿಯ ಖಡ್ಗವು ಹಿಂಸೆಯ ಸಂಕೇತವಾಗಿದ್ದರಿಂದ,  ಅದರ ಸ್ಥಾನದಲ್ಲಿ ಈಗ ಸಂವಿಧಾನವಿದೆ. ಅದರ ಮೂಲಕ ನ್ಯಾಯ ನೀಡಲಾಗುತ್ತದೆಯೆಂದು ಸೂಚಿಸುತ್ತದೆ. ಬ್ರಿಟಿಷರ ಕಾಲದ ವಸಾಹತುಶಾಹಿ ಮನಸ್ಥಿತಿಯನ್ನು ಹಿಂದೆ ಬಿಟ್ಟು ನವಭಾರತದತ್ತ ದಿಸೆಯಲ್ಲಿ ಇಟ್ಟ ಇದು ಮೊದಲ ಹೆಜ್ಜೆ ಎಂದು ಹೇಳಲಾಗುತ್ತದೆ. ಈ ಘಟನೆ ಭಾರತೀಯರಿಗೆ ಸ್ವಾಗತಾರ್ಹವಾಗಿದೆ; ಆದರೆ ಭಾರತಕ್ಕೆ ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾಗಿ ೭೭ ವರ್ಷಗಳ ಸುದೀರ್ಘ ಕಾಲಾವಧಿಯ ನಂತರ ಈಗ ನ್ಯಾಯದೇವತೆಯ ಮೂರ್ತಿಯ ಬದಲಾವಣೆಯಾಗಿರುವುದು ದೇಶಭಕ್ತ ಭಾರತೀಯರಿಗೆ ವಿಷಾದದ ಸಂಗತಿಯಾಗಿದೆ; ಆದಾಗ್ಯೂ ಹೇಗಾದರೂ ಆಗಲಿ. ಇದೂ ಕಡಿಮೆಯೇನಲ್ಲ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ನ್ಯಾಯದೇವತೆಯ ಹೊಸಮೂರ್ತಿಯ ಬಿಡುಗಡೆಯು ಸ್ವಾಗತಾರ್ಹ ಮತ್ತು ಭಾರತಕ್ಕೆ ಮಹತ್ವದ ಘಟನೆಯಾಗಿದೆ.

ಭಾರತೀಯ ನ್ಯಾಯಶಾಸ್ತ್ರದ ಪ್ರಕಾರ ನ್ಯಾಯದ ಅಪೇಕ್ಷೆ !

ಯಾವ ರೀತಿ ಭಾರತದ ನ್ಯಾಯದೇವತೆಯ ಮೂರ್ತಿಯನ್ನು ಬದಲಾಯಿಸಲಾಗಿದೆಯೋ, ಅದೇ ರೀತಿ ಈಗ ನ್ಯಾಯಾಲಯದಿಂದ ಜನರ ಆಶೆ-ಆಕಾಂಕ್ಷೆಗಳು ಹೆಚ್ಚಾಗಲಿವೆ. ನ್ಯಾಯದೇವತೆ ಭಾರತೀಯಳಾಗಿದ್ದಾಳೆ. ಈಗ ಭಾರತದಲ್ಲಿರುವ ಜನರಿಗೆ ಭಾರತದ ನ್ಯಾಯಶಾಸ್ತ್ರದಂತೆ ನ್ಯಾಯ ಸಿಗುವುದು ಎನ್ನುವ ಭರವಸೆ ಮೂಡಿದೆ. ಭಾರತದಲ್ಲಿ ಸದ್ಯಕ್ಕೆ ೫ ಕೋಟಿಗಿಂತ ಹೆಚ್ಚು ಪ್ರಕರಣಗಳು ಬಾಕಿ ಇವೆ. ಭಾರತದ ಜನಸಂಖ್ಯೆಗೆ ಹೋಲಿಸಿದರೆ ಶೇ. ೨೫ ರಷ್ಟು ಜನರಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿವೆ. ದೇಶದಲ್ಲಿ ನಡೆಯುತ್ತಿರುವ ಅಪರಾಧಗಳ ಸಂಖ್ಯೆಯನ್ನು ನೋಡಿದರೆ ಅದರಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಅನೇಕ ವರ್ಷಗಳ ಕಾಲ ನ್ಯಾಯಾಲಯದ ಹೊಸ್ತಿಲು ತುಳಿಯುವ (ಚಪ್ಪಲಿ ಸವೆಸುವ ?) ಜನರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಕೇಂದ್ರವು ಕೆಲವು ಹಳೆಯ ಕಾನೂನುಗಳಲ್ಲಿ ಬದಲಾವಣೆಯನ್ನು ಮಾಡಿದೆ; ಆದರೆ ಆದಾಗ್ಯೂ ನ್ಯಾಯದ ನಿರೀಕ್ಷಣೆಯಲ್ಲಿ ಸರತಿಸಾಲು ಹೆಚ್ಚುತ್ತಲೇ ಇದೆ. ಅದರಲ್ಲಿ ಈಗ ಭಾರತೀಯರ ಭೂಮಿಯನ್ನು ಕಬಳಿಸುವ ‘ವಕ್ಫ ಮಂಡಳಿ’ ತನ್ನ ಸ್ವೇಚ್ಛಾಚಾರದಿಂದ ಮಾಡಿರುವ ಪ್ರಕರಣಗಳಿಂದ ತುಂಬಿದೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಯದೇವತೆಯ ಮೂರ್ತಿಯನ್ನು ಬದಲಾಯಿಸುವುದಕ್ಕೆ ಮಾತ್ರ ಸೀಮಿತವಾಗದೇ  ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವ ತುರ್ತು ಆವಶ್ಯಕತೆ ನಿರ್ಮಾಣವಾಗಿದೆ; ಅದಕ್ಕಾಗಿ ಪ್ರಾಚೀನ ಭಾರತೀಯ ನ್ಯಾಯವ್ಯವಸ್ಥೆಯ ಮೂಲ ಗ್ರಂಥದ ಅಭ್ಯಾಸ ಮಾಡಬೇಕಾಗಿದೆ. ಭಾರತೀಯ ನ್ಯಾಯಶಾಸ್ತ್ರವು ಕಾನೂನಿನ ನಿಯಮಗಳನ್ನು ಆಧರಿಸಿತ್ತು. ಅಪರಾಧ ಮಾಡುವುದು ಅಧರ್ಮವಾಗಿದೆ. ಆದ್ದರಿಂದ ನ್ಯಾಯದ ಮೂಲಕ ಅಪರಾಧದ ಅಸ್ತಿತ್ವವನ್ನು ನಾಶಪಡಿಸಿ ಧರ್ಮದ ಸ್ಥಾಪನೆಯಾಗಬೇಕು. ಇದರಿಂದ ಪ್ರಾಚೀನ ಋಷಿಗಳು ನ್ಯಾಯದ ಸ್ಥಾಪನೆ ಮಾಡುವುದೇ ಧರ್ಮವೆಂದು ತಿಳಿದಿದ್ದರು. ಆದ್ದರಿಂದ ಪುರಾತನ ನ್ಯಾಯವ್ಯವಸ್ಥೆಯನ್ನು ಅಧ್ಯಯನ ಮಾಡಿ ಅದನ್ನು ಭಾರತದಲ್ಲಿ ಮರಳಿ ಸ್ಥಾಪಿಸಬೇಕು ನ್ಯಾಯದೇವತೆಯ ಮೂರ್ತಿಯಲ್ಲಿ ಆಗಿರುವ  ಬದಲಾವಣೆಯು ನ್ಯಾಯವ್ಯವಸ್ಥೆಯಲ್ಲಿನ ಬದಲಾವಣೆಯ ನಿರಂತರ ಪ್ರಗತಿಯ ಸಂಕೇತವಾಗಿದೆ. ನ್ಯಾಯವನ್ನು ಒದಗಿಸುವ ವ್ಯವಸ್ಥೆಯು ‘ಕರ್ಮಫಲಸಿದ್ಧಾಂತ’ವನ್ನು ಆಧರಿಸಿದ್ದರೆ ಮಾತ್ರ ನ್ಯಾಯವು ಧರ್ಮವಾಗಿದೆ. ನ್ಯಾಯ ಸಿಗಲು ಸಮಾಜವು ಸಾಧನೆ ಮಾಡುವುದು ಮತ್ತು ನ್ಯಾಯದಾನ ಮಾಡುವವರು ತಮ್ಮಲ್ಲಿ ನಿಜವಾದ ‘ತತ್ವನಿಷ್ಠೆ’ ಬರಲು ಸಾಧನೆ ಮಾಡುವುದು ಪ್ರಾಮುಖ್ಯವಾಗಿದೆ.

‘ಪಾರದರ್ಶಕ ನ್ಯಾಯ’ದ ಬಗ್ಗೆ ಹಿಂದೂಗಳ ನಂಬಿಕೆ

‘ಪಾರದರ್ಶಕ ನ್ಯಾಯ’ದ ಬಗ್ಗೆ ಭಾರತೀಯರಿಗೆ ಮೊದಲಿನಿಂದಲೂ ವಿಶ್ವಾಸವಿದೆ. ಆದ್ದರಿಂದ ಇಲ್ಲಿಯವರೆಗಿನ ಮೂಲ ಭಾರತೀಯರು ಅಂದರೆ ಹಿಂದೂಗಳು ಇಂದಿಗೂ ನ್ಯಾಯವ್ಯವಸ್ಥೆಯ ಮೇಲೆ ವಿಶ್ವಾಸವಿಟ್ಟಿದ್ದಾರೆ. ಆದ್ದರಿಂದಲೇ ಬಹುಸಂಖ್ಯಾತ ಹಿಂದೂಗಳು ತಮ್ಮ ಬಹುಮತದ ಬಲದಲ್ಲಿ, ಸಹಜವಾಗಿ ತಮ್ಮ ಸ್ಥಾನವನ್ನು ಪಡೆಯಲು ಸಾಧ್ಯವಿರುವಾಗಲೂ ತಮ್ಮ ಶ್ರದ್ಧಾಸ್ಥಾನವಾಗಿರುವ ರಾಮಮಂದಿರಕ್ಕಾಗಿ ನ್ಯಾಯಾಲಯದ ಮೂಲಕವೇ ಮುಂದೆ  ಸಾಗಿದ್ದಾರೆ. ಕಾಶಿ-ಮಥುರಾ ಈ ತೀರ್ಥಸ್ಥಳ ಗಳಿಗಾಗಿ  ಇಂದಿಗೂ, ಹಿಂದೂಗಳು ನ್ಯಾಯಾಲಯದಲ್ಲಿ ದೊಡ್ಡ ಹೋರಾಟವನ್ನು ಮಾಡುತ್ತಿದ್ದಾರೆ. ಆದ್ದರಿಂದಲೇ ಕಣ್ಣಿನ ಮೇಲಿರುವ ಬಟ್ಟೆಯನ್ನು ತೆಗೆದ ನ್ಯಾಯದೇವತೆಯಂತೆ ಈಗ ನ್ಯಾಯವೆಂದರೆ ಧರ್ಮವಾಗಿದ್ದು, ಯೋಗ್ಯ-ಅಯೋಗ್ಯದ ತೀರ್ಪನ್ನು ಪಾರದರ್ಶಕವಾಗಿ ನೀಡಲಾಗುವುದು ಎನ್ನುವುದು ಹಿಂದೂಗಳ ಅಪೇಕ್ಷೆಯಾಗಿದೆ.

ಈಗ ನ್ಯಾಯಾಲಯವು ಜನತೆಯ ತೆರಿಗೆಯ ಹಣವನ್ನು ದುಂದು ವೆಚ್ಚ ಮಾಡುವುದರ ಮೇಲೆ, ಹಿಂದೂಗಳ ಮಂದಿರಗಳ ಹಣವನ್ನು ಲೂಟಿ ಮಾಡುವುದರ ಮೇಲೆ, ಹಾಗೆಯೇ ಭ್ರಷ್ಟಾಚಾರಿಗಳ ಮೇಲೆ ‘ಕಣ್ಣಿಟ್ಟು’ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಇಂತಹ ಪ್ರಕರಣಗಳಲ್ಲಿ ಜನರಿಗೆ ಶೀಘ್ರವಾಗಿ ನ್ಯಾಯ ಸಿಕ್ಕಿದರೆ, ನಿಜವಾದ ಅರ್ಥದಿಂದ ಅವರಿಗೆ ನ್ಯಾಯ ಸಿಕ್ಕಿದೆಯೆಂದು ಸಮಾಧಾನವೆನಿಸಲಿದೆ.