ಭಾರತವು ವಿನಾಶದ ಜ್ವಾಲಾಮುಖಿಯ ಮೇಲೆ ಕುಳಿತಿದೆ !

ಸ್ವಾತಂತ್ರ್ಯಾನಂತರ ಮುಂದೊಂದು ದೇಶದ ರಾಜಕಾರಣಿಗಳು ಜನರ ರಕ್ತ ಕುಡಿಯುವರು ಮತ್ತು ಭಾರತವಾಸಿಗಳ ಶೋಕ ಮತ್ತು ಆಕ್ರೋಶಗಳಿಂದ ದೇಶದ ಆಕಾಶ ಥರಗುಟ್ಟುವುದೆಂದು ಈ ಕ್ರಾಂತಿಕಾರಿಗಳಿಗೆ ಕಲ್ಪನೆಯೂ ಇರಲಿಲ್ಲ. ಇಂದು ನಮ್ಮ ಭೂಮಿ ಮತ್ತು ಆಕಾಶ ಎಲ್ಲಿದೆ ? ಈಗ ಈ ಭೂಮಿ ಮತ್ತು ಆಕಾಶ ದರೋಡೆಕೋರರು ಹಾಗೂ ಬಂಡವಾಳಶಾಹಿಗಳಿಗೆ ಸೇರಿದೆ. ರಾಜಕಾರಣವು ಒಂದು ವೃತ್ತಿಯಾಗಿದೆ. ಇಲ್ಲಿ ಕುಟುಂಬಶಾಹಿಯ ಬಾವುಟ ಹಾರಾಡುತ್ತಿದೆ. ಕುಟುಂಬಶಾಹಿಯು ಪ್ರಜಾಪ್ರಭುತ್ವವನ್ನು ತುಳಿಯುತ್ತಿದೆ. ದೇಶಭಕ್ತರು, ನಿಷ್ಕಾಮ ಕರ್ಮಯೋಗಿಗಳು , ಜನರ ಸೇವಕರು, ಪ್ರಾಮಾಣಿಕರು ಮತ್ತು ನಿಷ್ಟಾವಂತರು ಮುಂತಾದ ಜನರಿಗೆ ರಾಜಕಾರಣದಲ್ಲಿ ಯಾವುದೇ ಮಹತ್ವವಿಲ್ಲ.’

(ಆರ್ಯ ನೀತಿ, ೧೦.೧೧.೨೦೦೯)