21 ಅಕ್ಟೋಬರ್ : ಇಂದು ಪ.ಪೂ. ಕಾಣೆ ಮಹಾರಾಜ ಇವರ ಪುಣ್ಯತಿಥಿ
೧. ಧರ್ಮಸಂಸ್ಥಾಪನೆ
‘ಕೃಷ್ಣಂ ವಂದೇ ಜಗದ್ಗುರುಮ್ |’, ಎಂದು ಹೇಳುತ್ತಾರೆ; ಏಕೆಂದರೆ ಶ್ರೀಕೃಷ್ಣನು ತಾನು ಧರ್ಮದ ಮಿತಿಯನ್ನು ದಾಟುವುದಿಲ್ಲ ಎಂಬ ಧ್ಯೇಯವನ್ನಿಡಲಿಲ್ಲ. ಅಂದರೆ ಈ ಹೇಳಿಕೆಯು ಲೌಕಿಕ ದೃಷ್ಟಿಯಿಂದಿದೆ; ಹಾಗಾಗಿ ಸಂತ ಏಕನಾಥ ಮಹಾರಾಜರು ‘ಕೃಷ್ಣನು ಅಧರ್ಮದಿಂದ ಧರ್ಮವನ್ನು ಹೆಚ್ಚಿಸಿದನು’, ಎಂದು ಹೇಳಿದ್ದಾರೆ. ಹೆಚ್ಚಿಸಿದನು ಅಂದರೆ ಧರ್ಮಸಂಸ್ಥಾಪನೆ ಮಾಡಿದನು.
೨. ಶ್ರೀಕೃಷ್ಣನು ಯಾರನ್ನೂ ತ್ಯಜಿಸಲಿಲ್ಲ
ದ್ವಾಪರಯುಗದಲ್ಲಿ ಕೃಷ್ಣಾವತಾರವಿತ್ತು. ಇದರಲ್ಲಿ ಯುಗ ಮಹಿಮೆಯನ್ನೂ ಗಮನದಲ್ಲಿಡಬೇಕು. ರಾಮಾವತಾರದಲ್ಲಿ ಒಬ್ಬ ಸಾಮಾನ್ಯ ನಾಗರಿಕನ, ರಜಕನ(ಅಗಸನ) ಸಂದೇಹದಿಂದ ಶ್ರೀರಾಮನು ಸೀತೆಯನ್ನು ತ್ಯಾಗ ಮಾಡಿದನು. ರಾಮನು ಅವನಿಗೆ ಶಿಕ್ಷೆಯನ್ನು ವಿಧಿಸಬಹುದಾಗಿತ್ತು; ಆದರೆ ಅವನು ಹಾಗೆ ಮಾಡಲಿಲ್ಲ. ಶ್ರೀರಾಮನಂತೆ ಶ್ರೀಕೃಷ್ಣನು ಯಾರನ್ನೂ ತ್ಯಾಗ ಮಾಡಲಿಲ್ಲ. ಅವನ ಪರಮಭಕ್ತರಾದ ಗೋಪಿಯರ ಬಗ್ಗೆ ದುಷ್ಟರು ಅದೆಷ್ಟೋ ಬಾರಿ ಆತನನ್ನು ಕಳಂಕಿತಗೊಳಿಸಿದ್ದರು; ಆದರೆ ಅವನು ಯಾವುದೇ ಗೋಪಿಯನ್ನು ತ್ಯಾಗ ಮಾಡಲಿಲ್ಲ
೩. ಭಕ್ತನಿಗೆ ಕೊರತೆಯಾಗಬಾರದು ಎಂದು ಈಶ್ವರನು ಕಡಿಮೆತನವನ್ನು ತೆಗೆದುಕೊಳ್ಳುವುದು
ಸೀತಾ ಮತ್ತು ರಾಮ ಇವರಲ್ಲಿ ಅಲೌಕಿಕದೃಷ್ಟಿಯಲ್ಲಿ ಭಕ್ತ ಮತ್ತು ಈಶ್ವರನೆಂಬ ಸಂಬಂಧವಿದ್ದರೂ, ಲೌಕಿಕದೃಷ್ಟಿಯಲ್ಲಿ ಪತಿ-ಪತ್ನಿಯಾಗಿದ್ದರು. ಗೋಪಿಯರು ಮತ್ತು ಕೃಷ್ಣನ ನಡುವೆ ಆಂತರಿಕ ಶಿಷ್ಯರು ಮತ್ತು ಸದ್ಗುರು ಎಂಬ ಸಂಬಂಧವಿತ್ತು, ಎಂಬುದನ್ನು ಗಮನದಲ್ಲಿಡುವುದು ಆವಶ್ಯಕವಾಗಿದೆ. ಭಕ್ತನಿಗೆ ಕಡಿಮೆತನ ಬರಬಾರದೆಂದು ಈಶ್ವರನು ತನ್ನನ್ನು ಎಷ್ಟು ಅಲ್ಪತ್ವವನ್ನು ತೆಗೆದುಕೊಳ್ಳುತ್ತಿರುತ್ತಾನೆ, ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಭೀಷ್ಮನ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು ಅವನು ತನ್ನ ಪ್ರತಿಜ್ಞೆಯನ್ನು ಮುರಿದನು; ಏಕೆಂದರೆ ಭೀಷ್ಮನು ಕೃಷ್ಣನ ಪರಮ ಭಕ್ತನಾಗಿದ್ದನು. ಶ್ರೀಕೃಷ್ಣನು ಅರ್ಜುನನ ಸಾರಥಿ ಯಾದನು. ಧರ್ಮರಾಜನ ಯಜ್ಞದಲ್ಲಿ ಊಟದ ನಂತರದ ಎಂಜಲುಎಲೆಗಳನ್ನು ತೆಗೆದನು. ಸಂತ ಜನಾಬಾಯಿಗಾಗಿ ಬೆರಣಿಗಳನ್ನು ತಟ್ಟಿದನು. ಕಬೀರನ ಶಾಲು ನೇಯ್ದನು. ಇದರಿಂದ ಗುರುಪದವಿಯ ನಿಜವಾದ ಮಹತ್ವ ತಿಳಿದುಬರುತ್ತದೆ.’
– ಪ.ಪೂ. ಕಾಣೆ ಮಹಾರಾಜರು