ವೈಚಾರಿಕ ಯುದ್ಧ ಹೋರಾಡಿ ಹಿಂದುಗಳ ಪುನರುತ್ಥಾನ ಸಾದ್ಯ ! – ಸದ್ಗುರು (ಡಾ.) ಚಾರುದತ್ತ ಪಿಂಗಳೆ

ದೆಹಲಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಯಿಂದ ‘ಕಥನಾತ್ಮಕ ಯುದ್ಧ ಮತ್ತು ಹಿಂದೂ ಪುನರುತ್ಥಾನ’ ಕಾರ್ಯಕ್ರಮದ ಆಯೋಜನೆ

ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡುವಾಗ ಎಡದಿಂದ ಸನಾತನ ಸಂಸ್ಥೆಯ ಧರ್ಮ ಪ್ರಚಾರಕ ಶ್ರೀ. ಅಭಯ ವರ್ತಕ, ಸದ್ಗುರು (ಡಾ.) ಚಾರುದತ್ತ ಪಿಂಗಳೆ ಮತ್ತು ಶ್ರೀ. ಉದಯ ಮಾಹುರಕರ

ನವದೆಹಲಿ – ಇಂದು ಹಿಂದೂ ಧರ್ಮದ ವಿರುದ್ಧ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತದೆ. ಈ ಅಪಪ್ರಚಾರ ಮುಖ್ಯವಾಗಿ ಭಾರತೀಯ ಜೀವನ ಶೈಲಿ, ಹಿಂದೂ ಸಂಸ್ಕೃತಿ, ವಿವಿಧ ಭಾಷೆ, ಹಿಂದೂ ವಿಧಿ, ಹಿಂದೂ ಹಬ್ಬ, ಉತ್ತರ ಭಾರತ-ದಕ್ಷಿಣ ಭಾರತ ಮುಂತಾದವುಗಳ ಸಂಬಂಧದಲ್ಲಿ ನಡೆಯುತ್ತದೆ. ಇಂತಹ ಅಪಾಯಕಾರಿ ಪ್ರಚಾರದಿಂದ ಇಂದು ಸೈನಿಕರ ಮೇಲೆ ಕಲ್ಲು ತೂರಾಟ ಮಾಡುವವರನ್ನು ‘ಅಮಾಯಕ ಯುವಕರು’ ಎಂದು ನೋಡಲಾಗುತ್ತದೆ. ಆದ್ದರಿಂದ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ಈದ ದಿನದಂದು ಕುರಿಯ ಬಲಿಯನ್ನು ವಿರೋಧಿಸುವುದಿಲ್ಲ; ಆದರೆ ಪ್ರಾಣಿಗಳ ಬಲಿ ನೀಡಲು ವಿರೋಧಿಸುತ್ತಾರೆ.

ದೀಪಾವಳಿಯಲ್ಲಿ ಪಟಾಕಿಗಳನ್ನು ಹಾರಿಸಿದರೆ ಮಾಲಿನ್ಯವಾಗುತ್ತದೆ; ಆದರೆ ಡಿಸೆಂಬರ್ ೨೫ ಮತ್ತು ಡಿಸೆಂಬರ್ ೩೧ ಕ್ಕೆ ಮಲಿನ್ಯವಾಗುವುದಿಲ್ಲ. ಇದರ ವಿರುದ್ಧ ವೈಚಾರಿಕ ಯುದ್ಧ ಹೋರಾಡಿ ಹಿಂದುಗಳ ಪುನರುತ್ಥಾನ ಸಾಧ್ಯವಾಗುತ್ತದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು ಇಲ್ಲಿ ಮಾರ್ಗದರ್ಶನ ಮಾಡಿದರು.

ದೆಹಲಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಕಥನಾತ್ಮಕ ಯುದ್ಧ ಮತ್ತು ಹಿಂದೂ ಪುನರುತ್ಥಾನ ‘ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿತ್ತು. ಈ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಅಕ್ಟೋಬರ್ ೧೯ ರಂದು ನಡೆದಿರುವ ಈ ಕಾರ್ಯಕ್ರಮದಲ್ಲಿ ೨೦ ಕ್ಕೂ ಹೆಚ್ಚಿನ ದೇಶಭಕ್ತ ವಿಚಾರವಂತರು ಸಕ್ರಿಯ ಸಹಭಾಗ ಹೊಂದಿದ್ದರು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿನ ಅಡಚಣೆಗಳು ದೂರಗೊಳಿಸುವುದಕ್ಕಾಗಿ ‘ವೈಚಾರಿಕ ಯುದ್ಧ ಹೋರಾಡಿ ಹಿಂದುಗಳ ಪುನರುತ್ಥಾನ ಸಾಧ್ಯವಿದೆ’, ಈ ಅಂಶಗಳ ಕುರಿತು ವಿಚಾರಮಂಥನ ನಡೆಯಿತು. ಈ ಕಾರ್ಯಕ್ರಮಕ್ಕೆ ಲೇಖಕ ಮತ್ತು ಉದ್ಯಮಿ ಶ್ರೀ. ಸಂಕ್ರಾಂತ ಸಾನು, ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀಧರ್ ಪೋತರಾಜು, ನ್ಯಾಯವಾದಿ ವಿನೀತ ಜಿಂದಾಲ್, ಶ್ರೀಮತಿ ನೀರಾ ಮಿಶ್ರಾ ಮುಂತಾದವರು ಉಪಸ್ಥಿತರಿದ್ದರು.

ಭಾರತ ಜಗತ್ತಿನಲ್ಲಿ ಮೊದಲು ‘ವಿಕೃತ ಸಾಮಗ್ರಿ ಮುಕ್ತ’ ದೇಶ ಆಗಬೇಕು ! – ಉದಯ ಮಾಹುರಕರ, ಭಾರತದ ಮಾಜಿ ಮಾಹಿತಿ ಆಯುಕ್ತರು

‘ಓಟಿಟಿಯ ಅಪಾಯ ಮತ್ತು ಹಿಂದೂ ಸಂಘಟನೆಗಳ ಜವಾಬ್ದಾರಿ’ ಈ ವಿಷಯದ ಕುರಿತು ಮಾರ್ಗದರ್ಶನ ನೀಡುವಾಗ ‘ಸೇವ್ ಕಲ್ಚರ್ ಸೇವ್ ಭಾರತ ಫೌಂಡೇಶನ್’ ನ ಸಂಸ್ಥಾಪಕ, ಲೇಖಕ, ಇತಿಹಾಸಕಾರ ಮತ್ತು ಭಾರತದ ಮಾಜಿ ಮಾಹಿತಿ ಆಯುಕ್ತ ಶ್ರೀ. ಉದಯ ಮಾಹುರಕರ ಇವರು, ಚಲನಚಿತ್ರ ಮತ್ತು ವೆಬ್ ಸೀರೀಸ್ (ಆನ್ಲೈನ್ ಪ್ರಸಾರ ಮಾಡುವ ವಿಡಿಯೋಗಳ ಧಾರಾವಾಹಿ) ಇದರ ಮಾಧ್ಯಮದಿಂದ ಹಿಂದೂ ದೇವತೆಗಳ ವಿಡಂಬನೆ ಮಾಡಲಾಗುತ್ತದೆ.

ಹಿಂದೂ ರಾಷ್ಟ್ರ ಆಗುವದರಲ್ಲಿ ೨ ಪ್ರಮುಖ ಅಡಚಣೆಗಳು ಎಂದರೆ ಕಟ್ಟರ ಜಿಹಾದಿ ಮಾನಸಿಕತೆ ಮತ್ತು ಓಟಿಟಿ ಮಾಧ್ಯಮ (ಓಟಿಟಿ ಮೂಲಕ ದರ್ಶಕ ಚಲನಚಿತ್ರ, ವೆಬ್ ಸೀರೀಸ್ ಮುಂತಾದ ಮನೋರಂಜನಾತ್ಮಕ ಕಾರ್ಯಕ್ರಮ ನೋಡಬಹುದು.) ಭಾರತದಲ್ಲಿನ ಅನೇಕ ಸಮೀಕ್ಷೆಯಿಂದ, ಓಟಿಟಿ ದುಷ್ಪರಿಣಾಮದಿಂದ ಬಲಾತ್ಕಾರದ ಪ್ರಮಾಣ ಹೆಚ್ಚಾಗಿದೆ. ಅಶ್ಲೀಲತೆಯನ್ನು ಅಳವಡಿಸಿಕೊಂಡು ಭಾರತವನ್ನು ವ್ಯಾಭಿಚಾರಕ್ಕೆ ತಳ್ಳುತ್ತಿದ್ದಾರೆ ಎಂಬುದು ಕಂಡುಬಂದಿದೆ, ಇದು ಹಿಂದೂ ದ್ವೇಷಿಗಳ ಮೂಲ ಉದ್ದೇಶವಾಗಿದೆ. ಇದೆಲ್ಲವನ್ನು ತಡೆಯಲು ಭಾರತವು ಅಶ್ಲೀಲ ಜಾಲತಾಣಗಳನ್ನು ನಿಷೇಧಿಸಬೇಕು ಮತ್ತು ಭಾರತ ಇದು ಜಗತ್ತಿನಲ್ಲಿನ ವಿಕೃತ ಸಾಮಗ್ರಿಗಳಿಂದ ಮುಕ್ತ ದೇಶ ರೂಪಗೊಳ್ಳುವಲ್ಲಿ ಮೊದಲನೆಯದಾಗಬೇಕು. ಅಶ್ಲೀಲತೆ ಹಬ್ಬಿಸುವವರಿಗೆ ೧೦ ರಿಂದ ೨೦ ವರ್ಷಗಳ ಜೈಲು ಶಿಕ್ಷೆಯ ವ್ಯವಸ್ಥೆ ಇರಬೇಕು.

ಕಾನೂನು ನುಸುಳುವಿಕೆಗಾಗಿ ಇಲ್ಲ, ಭ್ರಷ್ಟಾಚಾರದ ವಿರುದ್ಧ ಆಗಬೇಕು ! – ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ. ಅಶ್ವಿನಿ ಉಪಾಧ್ಯಾಯ ಇವರು ಮಾತನಾಡಿ, ಭಾರತದ ಯಾವುದೇ ಸಮಸ್ಯೆ ಪರಿಹರಿಸುವುದು ಅಸಾಧ್ಯವಲ್ಲ; ಕಾರಣ ಅದು ಮಾನವ ನಿರ್ಮಿತ ಸಮಸ್ಯೆಗಳಾಗಿವೆ. ಭಾರತದಲ್ಲಿ ಅನೇಕ ಸುಳ್ಳು ಮೊಕದ್ದಮೆಗಳು ಸುಳ್ಳು ಸಾಕ್ಷಿಯಿಂದ ಘಟಿಸುತ್ತವೆ. ಸುಳ್ಳು ಮಾತನಾಡುವುದು ಇದು ಗಂಭೀರ ಅಪರಾಧ ಎಂದು ಘೋಷಿಸಬೇಕು. ಪ್ರತಿಯೊಂದು ಸಾಕ್ಷಿದಾರನಿಗಾಗಿ ನಾರ್ಕೋ ಮತ್ತು ಪೋಲಿಗ್ರಾಫಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಅನಿವಾರ್ಯಗೊಳಿಸಿದರೆ, ಸುಳ್ಳು ಮೊಕದ್ದಮೆ ಕಡಿಮೆ ಆಗುತ್ತದೆ. ಇತರ ದೇಶಗಳಲ್ಲಿ ಸುಳ್ಳು ದೂರಿಗಾಗಿ ಕೂಡ ಶಿಕ್ಷೆಯ ವ್ಯವಸ್ಥೆ ಇದೆ, ಆದರೆ ಭಾರತದಲ್ಲಿ ಹಾಗೆ ಇಲ್ಲ. ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಆವಶ್ಯಕತೆ ಇದೆ.

ಭಾರತದಲ್ಲಿ ಅಕ್ರಮ ಕೃತ್ಯಗಳಿಗೆ ಶಿಕ್ಷೆ ಇಲ್ಲ. ಪ್ರತಿದಿನ ೧೦ ಸಾವಿರ ಮತಂತರಗಳು ನಡೆಯುತ್ತದೆ. ಭಾರತದಲ್ಲಿ ಭ್ರಷ್ಟಾಚಾರದಿಂದ ಅಕ್ರಮ ನುಸುಳುಕೋರರು ಎಲ್ಲಾ ಅಗತ್ಯ ದಾಖಲೆಗಳು ಸಿದ್ಧಗೋಳ್ಳುತ್ತವೆ. ನುಸುಳುಕೋರರಿಗಲ್ಲ, ಬದಲಾಗಿ ಭ್ರಷ್ಟಾಚಾರಿಗಳ ವಿರುದ್ಧ ಕಾನೂನು ಜಾರಿ ಆಗಬೇಕು. ಮತಾಂತರದ ನಂತರ ಭಾರತೀಯ ಪೌರತ್ವ ರದ್ದು ಪಡಿಸುವ ಕಾನೂನು ರೂಪಿಸಬೇಕು. ಯಾರು ಕಾನೂನು ಪಾಲಿಸುವುದಿಲ್ಲ, ಯಾರು ವಂದೇ ಮಾತರಂ ಒಪ್ಪುವುದಿಲ್ಲ, ಭಾರತದ ಮೇಲೆ ವಿಶ್ವಾಸವಿಲ್ಲ, ಅವರ ಪೌರತ್ವ ರದ್ದು ಪಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಉಪಸ್ಥಿತ ಧರ್ಮಪ್ರೇಮಿ ವಿಚಾರವಂತರು ಮತ್ತು ಹಿಂದುತ್ವನಿಷ್ಠರು

ಯಾರು ನಮಗೆ ತಲೆತಗ್ಗಿಸುವಂತೆ ಮಾಡಿದರೋ ಅವರಿಗೆ ನಾವು ‘ಮಹಾತ್ಮ’ ಹೇಳುತ್ತೇವೆ ! – ಮಧು ಪೂರ್ಣಿಮಾ ಕಿಶ್ವರ್, ಪ್ರಸಿದ್ಧ ಶಿಕ್ಷಣ ತಜ್ಞ

ಪ್ರಸಿದ್ಧ ಶಿಕ್ಷಣ ತಜ್ಞ ಮತ್ತು ‘ಮಾನುಶಿ ‘ ದೈನಿಕದ ಸಂಪಾದಕಿ ಮಧು ಪೂರ್ಣಿಮಾ ಕಿಶ್ವರ್ ಇವರು ಮಾತನಾಡಿ, ಹಿಂದೂ ಸಮಾಜದ ವಿರುದ್ಧ ವೈಚಾರಿಕ ಯುದ್ಧ ಇದು ಬಹಳ ಹಿಂದಿನ ಪರಂಪರೆ ಆಗಿದೆ. ಬಂದುಕು ಮತ್ತು ಖಡ್ಗದ ಬಲದಿಂದ ಮತ್ತು ವೈಚಾರಿಕ ಯುದ್ಧದಿಂದ ಮತಾಂತರ ನಡೆದಿದೆ. ಹಿಂದೂಗಳ ರೂಢಿಯಲ್ಲಿನ ಕೆಟ್ಟ ವಿಷಯ ಬಹಿರಂಗ ಪಡಿಸಲಾಗುತ್ತದೆ ಮತ್ತು ಅದರ ಬಗ್ಗೆ ಬರೆಯಲಾಗುತ್ತದೆ; ಆದರೆ ಇತರ ಧರ್ಮದಲ್ಲಿನ ದುಷ್ಕೃತ್ಯಗಳ ಉಲ್ಲೇಖ ಎಲ್ಲಿಯೂ ಮಾಡಲಾಗುವುದಿಲ್ಲ. ಯಾರು ನಮ್ಮನ್ನು ತಲೆ ತಗ್ಗಿಸುವಂತೆ ಮಾಡಿದ್ದಾರೆ ಅವರಿಗೆ ನಾವು ‘ಮಹಾತ್ಮ’ ಎನ್ನುತ್ತೇವೆ. ಹಿಂದೂ ಪರಂಪರೆ ಮತ್ತು ಕುಟುಂಬ ವ್ಯವಸ್ಥೆಯನ್ನು ಒಡೆಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಯಾವ ದೇಶದಲ್ಲಿ ಬಲಾತ್ಕಾರದ ಕುರಿತು ಮಹಾಭಾರತ ನಡೆದಿತ್ತು, ಆ ದೇಶದಲ್ಲಿ ವ್ಯಭೀಚಾರ ಶಿಖರಕ್ಕೆರಿದೆ. ಇದು ಖಂಡಿತವಾಗಿಯೂ ಆತಂಕದ ವಿಷಯವಾಗಿದೆ. ಇಂದು ಹಿಂದುಗಳ ಹಿತದ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದು ಹೇಳಿದರು.